MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಗೌತಮ್​ನನ್ನು ಹೀರೋ ಮಾಡೋ ಭರದಲ್ಲಿ ಎಡವಟ್ಟಾಗೋಯ್ತು! ಕಮಿಷನರ್​ಗೆ ಅಧಿಕಾರ?

Amruthadhaare: ಗೌತಮ್​ನನ್ನು ಹೀರೋ ಮಾಡೋ ಭರದಲ್ಲಿ ಎಡವಟ್ಟಾಗೋಯ್ತು! ಕಮಿಷನರ್​ಗೆ ಅಧಿಕಾರ?

ಗೌತಮ್ ಮತ್ತು ಭೂಮಿಕಾ ಒಂದಾಗುವ ನಿರೀಕ್ಷೆ ಹುಸಿಯಾಗಿದೆ. ಎಂಎಲ್​ಎಯಿಂದಾದ ತೊಂದರೆಯಿಂದಾಗಿ ಭೂಮಿಕಾ ಬೆಂಗಳೂರಿಗೆ ತೆರಳಿದ್ದಾಳೆ. ಈ ಮಧ್ಯೆ, ಕಮಿಷನರ್​ಗೆ ಎಂಎಲ್​ಎಯನ್ನು ತೆಗೆದುಹಾಕುವ ಅಧಿಕಾರವಿದೆ ಎಂದು ತೋರಿಸಿದ್ದಕ್ಕೆ ಸೀರಿಯಲ್ ಟ್ರೋಲ್ ಆಗುತ್ತಿದೆ.

2 Min read
Suchethana D
Published : Oct 02 2025, 02:20 PM IST
Share this Photo Gallery
  • FB
  • TW
  • Linkdin
  • Whatsapp
16
ಮತ್ತೊಂದು ತಿರುವಿನಲ್ಲಿ ಅಮೃತಧಾರೆ
Image Credit : zee5

ಮತ್ತೊಂದು ತಿರುವಿನಲ್ಲಿ ಅಮೃತಧಾರೆ

ಅಮೃತಧಾರೆ (Amruthadhaare) ಸೀರಿಯಲ್​ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಭೂಮಿಕಾಳನ್ನು ಐದು ವರ್ಷ ಹುಡುಕಿ ಹುಡುಕಿ ಕೊನೆಗೂ ಗೌತಮ್​ಗೆ ಭೂಮಿಕಾ ಸಿಕ್ಕಿದ್ದಳು. ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಅಂದುಕೊಳ್ಳಲಾಗಿತ್ತು. ಭೂಮಿಕಾ, ಗೌತಮ್​ ಮೇಲೆ ಕೋಪ ಮಾಡಿಕೊಂಡಿದ್ದರೂ, ಆಕೆ ಕೋಪ ತಣಿಸಿಕೊಂಡು ಮತ್ತೆ ಗೌತಮ್​ ಬಳಿ ಹೋಗುತ್ತಾಳೆ ಎನ್ನುವ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಅಪ್ಪ-ಮಗ ಕೂಡ ಒಂದಾಗಿದ್ದರು. ಆದರೆ ಇದೀಗ ಮತ್ತೆ ಎಲ್ಲರೂ ದೂರ ದೂರ!

26
ಒಂದಾಗೋ ಹೊತ್ತಲ್ಲಿ ಮನೆ ಬದಲು
Image Credit : Instagram

ಒಂದಾಗೋ ಹೊತ್ತಲ್ಲಿ ಮನೆ ಬದಲು

ಟೀಚರ್​ ಭೂಮಿಕಾ ತನ್ನ ಮಗನಿಗೆ ಬುದ್ಧಿ ಹೇಳಿದಳು ಎನ್ನುವ ಕಾರಣಕ್ಕೆ ಎಂಎಲ್​ಎ, ಆಕೆಯ ಮಗ ಆಕಾಶ್​​ನನ್ನು ಕಿಡ್​ನ್ಯಾಪ್​ ಮಾಡಿಸಿದ್ದ. ಆದರೆ ಕೊನೆಗೆ ಗೌತಮ್​ಗೆ ವಿಷಯ ತಿಳಿದು ರೌಡಿಗಳ ಜೊತೆ ಹೊಡೆದಾಡಿ ಆಕಾಶ್​ನನ್ನು ಬಿಡಿಸಿಕೊಂಡು ಬಂದಿದ್ದ. ಇದು ಭೂಮಿಕಾಗೆ ತಿಳಿದು, ಗೌತಮ್​ ಮೇಲೆ ಪ್ರೀತಿ ಹುಟ್ಟುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ರೌಡಿಗಳು ಭೂಮಿಕಾ ಮನೆಗೆ ಬಂದು ತೊಂದರೆ ಕೊಟ್ಟಿದ್ದರಿಂದ ಅವಳು ಮನೆಯನ್ನೇ ಬಿಟ್ಟು ಹೋಗಿಬಿಟ್ಟಿದ್ದಾಳೆ.

Related Articles

Related image1
Bigg Bossನಲ್ಲಿ ಚೋಟುದ್ದ ಚಡ್ಡಿ ಹಾಕ್ಕೋಬೇಕ್ರಿ- ನಂಗೆಲ್ಲಿ ಬರ್ತೈತ್ರಿ? ಈ ಡ್ರೆಸ್​ ಹೆಂಗೈತ್ರಿ? ಮಲ್ಲಮ್ಮನ ಮಾತು ಕೇಳಿ
Related image2
Bigg Boss 12ಕ್ಕೆ ಡಾ.ಬ್ರೋ ಹೋಗದ ಕಾರಣ ಕೊನೆಗೂ ರಿವೀಲ್! ಗಗನ್​ ಹೇಳಿದ್ದೇನು ಕೇಳಿ
36
ಬೆಂಗಳೂರು ಸೇರಿದ ಭೂಮಿಕಾ
Image Credit : Instagram

ಬೆಂಗಳೂರು ಸೇರಿದ ಭೂಮಿಕಾ

ಮತ್ತೆ ಬೆಂಗಳೂರು ಸೇರಿದ್ದಾಳೆ. ಅಲ್ಲಿ ಅವಳಿಗೆ ಹೆಡ್​ಮಿಸ್​ ಪೋಸ್ಟ್​ ಸಿಕ್ಕಿದೆ. ಆದರೆ ಅದೇ ಇನ್ನೊಂದೆಡೆ, ಗೌತಮ್​ ಎಂಎಲ್​ಎಗೆ ಬುದ್ಧಿ ಕಲಿಸುವ ಪಣ ತೊಟ್ಟಿದ್ದಾನೆ. ನಾನು MLA ಎನ್ನುವ ಅಹಂನಲ್ಲಿ ಗೌತಮ್​ ಮೇಲೆ ರೇಗಿದ್ದ ಆತ. ಕಮಿಷನರ್​ಗೆ ಕಾಲ್​ ಮಾಡಿ ನಿನಗೆ ಗತಿ ಕಾಣಿಸ್ತೇನೆ ಎಂದ ಎಂಎಲ್​ಎ.

46
ಕಮಿಷನರ್​ಗೆ ಪವರ್​ ಕೊಟ್ಟೋರು ಯಾರು?
Image Credit : Instagram

ಕಮಿಷನರ್​ಗೆ ಪವರ್​ ಕೊಟ್ಟೋರು ಯಾರು?

ಆದರೆ ಗೌತಮ್​ ತಾನೇ ಖುದ್ದು ಕಮಿಷನರ್​ಗೆ ಕಾಲ್​ ಮಾಡಿ ತಾನು ಗೌತಮ್​ ದಿವಾನ್​ ಮಾತನಾಡುವುದು ಎಂದು ಹೇಳಿದಾಗ ಕಮಿಷನರ್​ ಎಂಎಲ್​ಎಗೆ ಆವಾಜ್​ ಹಾಕಿ, ನಿನ್ನನ್ನು ಎಂಎಲ್​ಎ ಪೋಸ್ಟ್​ನಿಂದ ಕಿತ್ತು ಹಾಕಿದ್ದೇನೆ. ನಾಳೆನೇ ಬಂದು ರಿಸೈನ್ ಮಾಡು ಎನ್ನುತ್ತಾರೆ. ಆದರೆ ಇದು ನೋಡಲು ಚೆನ್ನಾಗಿದೆ. ಆದರೆ ಎಂಎಲ್​ಎ ಅನ್ನು ಪೋಸ್ಟ್​ನಿಂದ ಕಿತ್ತು ಹಾಕಲು ಕಮಿಷನರ್​ಗೆ ಅಧಿಕಾರ ಇದ್ಯಾ? ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

56
ಸೀರಿಯಲ್​ನಲ್ಲಿ ಎಡವಟ್ಟು?
Image Credit : Instagram

ಸೀರಿಯಲ್​ನಲ್ಲಿ ಎಡವಟ್ಟು?

ಗೌತಮ್​ನನ್ನು ಹೀರೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ನಿರ್ದೇಶಕರು ಎನ್ನುತ್ತಿದ್ದಾರೆ ನೆಟ್ಟಿಗರು. ಕಾನೂನಿನ ಪ್ರಕಾರ ಎಂಎಲ್​ಎ ಮೇಲೆ ಕ್ರಮ ಜರುಗಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ ಇಲ್ಲಿ ಕಮಿಷನರ್​ಗೆ ಅಧಿಕಾರ ಕೊಟ್ಟವರು ಯಾರು? ಗೌತಮ್​ನನ್ನು ಹೀರೋ ಮಾಡಿದ್ದು ಸರಿಯೇ, ಆದರೆ ಈ ಎಡವಟ್ಟು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

66
ಚ್ಯೂಯಿಂಗ್​ ಗಮ್​ನಂತೆ ಸಾಗತ್ತಾ ಸೀರಿಯಲ್​?
Image Credit : zee5

ಚ್ಯೂಯಿಂಗ್​ ಗಮ್​ನಂತೆ ಸಾಗತ್ತಾ ಸೀರಿಯಲ್​?

ಒಟ್ಟಿನಲ್ಲಿ, ಇದೊಂದು ಸೀರಿಯಲ್​ ಅಷ್ಟೆ. ಸೀರಿಯಲ್​ನಲ್ಲಿ ಏನು ಬೇಕಾದ್ರೂ ನಡೆಯುತ್ತೆ ಎಂದು ಕೆಲವರು ಹೇಳಿದ್ರೆ, ಅದು ನಿಜ. ಆದರೆ ಇಂಥ ಎಡವಟ್ಟು ಮಾಡಬಾರದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇನ್ನು ಸೀರಿಯಲ್​ ಕಥೆಗೆ ಬರೋದಾದ್ರೆ ಇನ್ನು ಚ್ಯೂಯಿಂಗ್​ ಗಮ್​ನಂತೆ ಅಮೃತಧಾರೆ ಎಳೆಯುತ್ತಿರುವುದು ಯಾಕೋ ವೀಕ್ಷಕರಿಗೆ ಬೇಸರ ತರಿಸುವಂತಿದೆ. ಭೂಮಿಕಾಳದ್ದು ಅತಿಯಾಯ್ತು ಎಂದು ಹೇಳುತ್ತಿದ್ದಾರೆ. ಇಬ್ಬರೂ ಒಂದಾಗಿ ಶಕುಂತಲಾ, ಜೈದೇವ್​ಗೆ ಬುದ್ಧಿ ಕಲಿಸ್ತಾರೆ ಎಂದುಕೊಂಡ್ರೆ ಮತ್ತೆ ಮನೆ ಚೇಂಜ್​ ಮಾಡಿದ್ದಾಳೆ ಅವಳು. ಇನ್ನೆಷ್ಟು ವರ್ಷ ಹುಡುಕಬೇಕೋ ಗೌತಮ್​ ಎನ್ನುತ್ತಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved