- Home
- Entertainment
- TV Talk
- Amruthadhaare Serial: ವೀಕ್ಷಕರ ಊಹೆಗೂ ಮೀರಿದ ಟ್ವಿಸ್ಟ್ ಕೊಟ್ಟ ಭೂಮಿ-ಮಲ್ಲಿ! ಅಷ್ಟಕ್ಕೂ ಯಾರ್ ರಕ್ತ ಹೇಳಿ?
Amruthadhaare Serial: ವೀಕ್ಷಕರ ಊಹೆಗೂ ಮೀರಿದ ಟ್ವಿಸ್ಟ್ ಕೊಟ್ಟ ಭೂಮಿ-ಮಲ್ಲಿ! ಅಷ್ಟಕ್ಕೂ ಯಾರ್ ರಕ್ತ ಹೇಳಿ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ವಿದೇಶಕ್ಕೆ ಹೊರಟಿದ್ದಾನೆ. ಅವನನ್ನು ಏರ್‌ಪೋರ್ಟ್‌ವರೆಗೂ ಬಿಟ್ಟು ಬರೋಕೆ ಭೂಮಿಕಾ ತನ್ನ ಮಗು ಜೊತೆ ಹೊರಟಿದ್ದಳು. ಅಲ್ಲಿ ಅವಳ ದಾರಿ ತಪ್ಪಿಸಿ ಕೊಲೆ ಮಾಡೋದು ಜಯದೇವ್, ಶಕುಂತಲಾ ಪ್ಲ್ಯಾನ್ ಆಗಿತ್ತು.

ಪದೇ ಪದೇ ಕಿಡ್ನ್ಯಾಪ್ ಮಾಡಿಸೋ ಎಪಿಸೋಡ್ ತೋರಸ್ತೀರಾ ಅಂತ ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದರು. ಕಿಡ್ನ್ಯಾಪ್, ಕೊಲೆ ಬಿಟ್ಟು ಏನಾದರೂ ತೋರಿಸಿ ಅಂತ ಮನವಿ ಮಾಡಿದ್ದರು. ಈಗ ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಜಯದೇವ್, ಶಕುಂತಲಾ ಪ್ಲ್ಯಾನ್‌ನಂತೆ ಭೂಮಿಕಾ ತನ್ನ ಮಗುವಿನ ಜೊತೆ ಕಾರ್‌ನಲ್ಲಿ ಹೊರಟಿದ್ದಾಳೆ. ಅವಳ ಕಾರ್‌ಗೆ ಪಾರ್ಥನೇ ಡ್ರೈವರ್. ಪಾರ್ಥನನ್ನು ರೌಡಿಗಳು ಹೊಡೆದಾಗ ಭೂಮಿಕಾ ಮಗನನ್ನು ಕರೆದುಕೊಂಡು ಕಾಡಿನಲ್ಲಿ ಓಡಿದ್ದಾಳೆ. ಅಲ್ಲಿಗೆ ಪೊಲೀಸರು ಕೂಡ ಬಂದಿದ್ದಾರೆ.
ಇನ್ನೊಂದು ಕಡೆ ಮಲ್ಲಿ ಕೂಡ ಬಂದೇ ಬಿಟ್ಟಳು. ಮಲ್ಲಿ, ಭೂಮಿಕಾ ಇಬ್ಬರೂ ಸೇರಿಕೊಂಡು ಜಯದೇವ್ ಎರಡನೇ ಪತ್ನಿ ದಿಯಾಳನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅಲ್ಲಿ ಅವರಿಬ್ಬರು ಕುಹಕ ನಗೆ ಬೀರಿದ್ದಾರೆ. ಇನ್ನೊಂದು ಕಡೆ ನನ್ನ ಮಗು ಎಲ್ಲಿ ಅಂತ ಹುಡುಕಿ ಎಂದು ಭೂಮಿ ಕೂಡ ಪೊಲೀಸರಿಗೆ ಹೇಳಿದ್ದಾಳೆ. ನಿಜಕ್ಕೂ ಭೂಮಿ ಮಗ ಕಳೆದುಹೋಗಿದ್ದು ನಿಜಾನಾ? ಅಥವಾ ಆ ಮಗುವನ್ನು ಮಲ್ಲಿಯೇ ಕರೆದುಕೊಂಡು ಹೋಗಿದ್ದಾಳಾ ಎಂದು ಕಾದು ನೋಡಬೇಕಿದೆ.
ದಿಯಾಳನ್ನು ಕಿಡ್ನ್ಯಾಪ್ ಮಾಡಿದ ಬಳಿಕ ಭೂಮಿ ವ್ಯಂಗ್ಯ ನಗೆ ಬೀರಿದ್ದು ನೋಡಿದರೆ, ಆ ಮಗು ಕಿಡ್ನ್ಯಾಪ್ ಆಗಿರೋದು ಡೌಟ್ ಎನ್ನಬಹುದು. ಈ ಬಾರಿ ಜಯದೇವ್‌ನನ್ನು ಟ್ರ್ಯಾಪ್ ಮಾಡಲು ಭೂಮಿ ದೊಡ್ಡ ಪ್ಲ್ಯಾನ್ ಮಾಡಿದ್ದಾಳೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಏನಾಗಲಿವೆ ಎಂದು ಕಾದು ನೋಡಬೇಕಿದೆ.
ಜಯದೇವ್ ನಿಜವಾದ ಗುಣ ಏನು ಎಂದು ಈ ಬಾರಿ ಗೌತಮ್ ಮುಂದೆ ಭೂಮಿ ಸಾಕ್ಷಿ ಸಮೇತ ಹೇಳಲೂಬಹುದು. ಒಟ್ಟಿನಲ್ಲಿ ಜಯದೇವ್, ಶಕುಂತಲಾಗೆ ಈ ಬಾರಿ ದೊಡ್ಡ ಏಟು ಬೀಳಲಿದೆ. ಬಹು ದಿನಗಳಿಂದ ವೀಕ್ಷಕರು ಈ ರೀತಿ ಎಪಿಸೋಡ್‌ಗೋಸ್ಕರ ಕಾಯುತ್ತಲಿದ್ದರು.