Amruthadhaare Kannada Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಮುದ್ದಿನ ಪತ್ನಿ ಭೂಮಿಕಾಗೆ ಗೌತಮ್‌ ದಿವಾನ್‌ ಹುಚ್ಚಿ ಪಟ್ಟ ಕಟ್ಟಿದ್ದಾನೆ. ಇದನ್ನು ನೋಡಿ ವೀಕ್ಷಕರಿಗೆ ಆಕ್ರೋಶ ಶುರುವಾಗಿದೆ. 

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಫಾರಿನ್‌ ಟ್ರಿಪ್‌ಗೆ ಹೋಗೋದು ಭೂಮಿಕಾಗೆ ಇಷ್ಟವೇ ಇರಲಿಲ್ಲ. ಗಂಡ ಹೋಗುವಾಗಲೂ ಸಿಕ್ಕಾಪಟ್ಟೆ ಕಷ್ಟಪಟ್ಟು ಕಳಿಸಿಕೊಟ್ಟಿದ್ದಳು. ಈಗ ಗೌತಮ್‌ ದಿವಾನ್‌ ಕಾರ್‌ವೊಳಗಡೆ ಕೂತು ಪಾಸ್‌ಪೋರ್ಟ್‌ ಹುಡುಕಿದ್ದಾನೆ, ಅಲ್ಲಿ ಏನೂ ಸಿಕ್ಕಿಲ್ಲ. ಭೂಮಿಕಾಳೇ ಬ್ಯಾಗ್‌ ಪ್ಯಾಕ್‌ ಮಾಡಿದ್ದು, ಅವಳೇ ಬೇಕು ಅಂತ ಹೀಗೆ ಮಾಡಿದ್ದಾಳೆ ಎಂದು ಸಿಟ್ಟಾಗಿದ್ದಾನೆ.

ನಾನು ವಿದೇಶಕ್ಕೆ ಹೋಗೋದು ನಿಮಗೆ ಇಷ್ಟ ಇರಲಿಲ್ಲ. ಹೀಗಾಗಿ ನೀವು ಪಾಸ್‌ಪೋರ್ಟ್‌ ಎತ್ತಿಟ್ಟಿದ್ದೀರಿ? ನಿಮಗೆ ಹುಚ್ಚು ಹಿಡಿದಿದೆ. ಯಾಕೆ ಹೀಗೆ ಮಾಡಿದ್ರಿ ಎಂದು ಅವನು ಪತ್ನಿಗೆ ಬೈದಿದ್ದಾನೆ. ಆಗ ಭೂಮಿಕಾ, “ನಾನು ಬ್ಯಾಕ್‌ ಪ್ಯಾಕ್‌ ಮಾಡಿದ್ದೀನಿ, ಬ್ಯಾಗ್‌ವೊಳಗಡೆ ಪಾಸ್‌ಪೋರ್ಟ್‌ ಇಟ್ಟಿದ್ದೇನೆ. ನಾನು ಹುಚ್ಚಿಯೇ, ನಾನು ಪಾಸ್‌ಪೋರ್ಟ್‌ ಇಟ್ಟಿದ್ದು ಸತ್ಯ. ಇದನ್ನು ನಂಬೋದಿದ್ರೆ ನಂಬಿ, ನಂಬಿಲ್ಲ ಅಂದ್ರೆ ಬಿಡಿ” ಎಂದು ಹೇಳಿದ್ದಾಳೆ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳ ಶುರು ಮಾಡಿದ್ದಾರೆ.

ಭೂಮಿಕಾಗೆ ಮಗನನ್ನು ಕಂಡರೆ ತುಂಬ ಇಷ್ಟ. ಅವನಿಗೆ ಸ್ವಲ್ಪ ಏನಾದರೂ ಆದರೆ ಅವಳು ಸಹಿಸೋದಿಲ್ಲ. ಇನ್ನೊಂದು ಕಡೆ ವೈದ್ಯರು ಕೂಡ ಗೌತಮ್‌ಗೆ “ಭೂಮಿಕಾ ತುಂಬ ಸೂಕ್ಷ್ಮ ಮನಸ್ಥಿತಿ ಹೊಂದಿದ್ದಾರೆ, ಅವರಿಗೆ ಶಾಕಿಂಗ್‌ ವಿಷಯ ಹೇಳಬೇಡಿ, ಇದರಿಂದ ಅವರ ಪ್ರಾಣಕ್ಕೆ ಅಪಾಯ ಆಗುವುದು” ಎಂದು ಎಚ್ಚರಿಕೆ ಕೊಟ್ಟಿದ್ದರಿ. ಈ ಮಾತನ್ನು ತಲೆಯಲ್ಲಿಟ್ಟುಕೊಂಡೋ ಏನೋ ಈಗ ಪತ್ನಿಗೆ ತಲೆ ಸರಿ ಇಲ್ಲ ಎಂದು ಗೌತಮ್‌ ನಂಬಿಕೊಂಡು ಬರಬಹುದು. ಶಕುಂತಲಾಳೇ ಪಾಸ್‌ಪೋರ್ಟ್‌ ಕದಿಯೋ ಕೆಲಸ ಮಾಡಿರೋದು, ಗಂಡ-ಹೆಂಡತಿ ಮಧ್ಯೆ ದೊಡ್ಡ ಬೆಂಕಿ ಬಿದ್ದಿದೆ. ಇದರಲ್ಲಿ ಚಳಿ ಕಾಯಿಸಿಕೊಳ್ತೀನಿ ಎಂದು ಅವಳು ಹೇಳಿದ್ದಾಳೆ.

ಈ ಎಪಿಸೋಡ್‌ ಪ್ರೋಮೋ ನೋಡಿ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

  • ಹೇ ಡೈರೆಕ್ಟರ್ ನಿಜವಾಗಲೂ ತಲೆ ಕೆಟ್ಟಿರೋದು ಭೂಮಿಕಾಗೆ ಅಥವಾ ಗೌತಮ್ ದಿವಾನ್ ಅವರಿಗೆ ಅಲ್ಲಾ ನಿಮಗೆ. ಗಂಡ ಹೆಂಡತಿ ಇಬ್ಬರನ್ನು ದೂರ ಮಾಡೋ ಮುನ್ಸೂಚನೆ ಸಿಗ್ತಾ ಇದೆಯಲ್ಲಾ. ದೇವ್ರೇ ಈ ಸೀರಿಯಲ್‌ನ್ನು ನೋಡೋ ಜನರನ್ನ ನೀನೇ ಕಾಪಾಡಬೇಕು.
  • ಭೂಮಿಕಾ ಅಂತೂ ನಿಂಗೆ ಹುಚ್ಚಿ ಪಟ್ಟ ಕಟ್ಟುತ್ತಾರೆ
  • ಇದೆಲ್ಲ ನಾಟಕ ಅಂತ ಅನಿಸಲ್ಲ?
  • ಅಷ್ಟು ಆಳವಾದ ಪ್ರೀತಿ ಎಲ್ಲಿ ಹೋಯಿತು ನಿರ್ದೇಶಕರೇ?
  • ಭೂಮಿಕಾ ಮಾಡಿದ್ದು ಸರಿ ಇದೆ, ಆ ಮಲತಾಯಿಯನ್ನು ನಂಬಿ ಕೆಟ್ಟ ಮಗ ದಡ್ಡ ಅವನು... ಎಲ್ಲ ತಪ್ಪನ್ನು ಹೆಂಡತಿ ಮೇಲೆ ಹಾಕಿದರೆ ಇದೇ ಆಗೋದು. ಆ ಶಕುಂತಲಳನ್ನು ಇಟ್ಕೊಂಡು ಆಟ ಆಡಿಸುತ್ತಾ ಇರೋದು ಸಾಕು. ಆ ಭಾಗ್ಯಮ್ಮಗೂ ಅವಕಾಶ ಕೊಡಿ. ಕರ್ಣ ಸೀರಿಯಲ್ ನೋಡಿ ಕಲಿಯರಿ….
  • ಶಕುಂತಲಾ ದೇವಿಗೆ ಏನು ಕೆಲಸ ಇಲ್ಲ ಅಂತ ಕಾಣಿಸ್ತು, ಬರೀ ಬೆಂಕಿನೆ, ಸ್ಥಾನ ಇಲ್ಲ ಬಿಡಿ
  • ಅದೇನು ಸ್ಕೂಲ್ ಮಕ್ಕಳ ಹಾಲ್ ಟಿಕೆಟ್, ಮಿಸ್ ಆಗೋಕೆ, ಅಷ್ಟ್ ದೊಡ್ಡ ಬಿಸ್ನೆಸ್ ಮ್ಯಾನ್ ಅಷ್ಟು ಗೊತ್ತಾಗಲ್ವಾ ಪಾಸ್ ಪೋರ್ಟ್ ಸರಿಯಾಗಿ ಇಟ್ಕೋಳೋಕೆ
  • ನಿಮ್ಮನೇಲಿ ಸಿಸಿ ಕ್ಯಾಮರಾ ಇರಲ್ವಾ?
  • ಶಾಕುಂತಲಾಳನ್ನು ಜೈಲಿಗೆ ಕಳಿಸಿ, ಮುಗ್ಸಿ ಬೇಗ
  • ಗೌತಮ್‌ನಂಥ ದಡ್ಡ ಬಿಸಿನೆಸ್ ಮ್ಯಾನ್ ಇರ್ತಾರಾ? ಬಾಣಂತಿ ಮನಸ್ಸು ಎಷ್ಟು ಸೂಕ್ಷ್ಮವಾಗಿ ಇರುತ್ತೆ ಅನ್ನೋ ಅಂದಾಜು ಇಲ್ಲದೆ ಹುಚ್ಚಿ ಅನ್ನುವುದು ಸರಿಯಲ್ಲ, ಇಷ್ಟೆನ ಗೌತಮ್‌ಗೆ ಭೂಮಿಕಾ ಮೇಲಿರೋ ಪ್ರೀತಿ?