- Home
- Entertainment
- TV Talk
- Amruthadhaare Serial: ಮಲ್ಲಿ ಲೈಫ್‌ಗೆ ಹೊಸ ಹುಡುಗ; ತನ್ನ ಶವದ ಪೆಟ್ಟಿಗೆ ತಾನೇ ಮೊಳೆ ಹೊಡ್ಕೊಂಡ ಜಯದೇವ್!
Amruthadhaare Serial: ಮಲ್ಲಿ ಲೈಫ್‌ಗೆ ಹೊಸ ಹುಡುಗ; ತನ್ನ ಶವದ ಪೆಟ್ಟಿಗೆ ತಾನೇ ಮೊಳೆ ಹೊಡ್ಕೊಂಡ ಜಯದೇವ್!
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬಳಿ ಅಷ್ಟು ಆಸ್ತಿ ಪಡೆದುಕೊಂಡ ಜಯದೇವ್, ಈಗ ಮಲ್ಲಿ ಖುಷಿ ಹಾಳು ಮಾಡಲು ರೆಡಿಯಾಗಿದ್ದಾನೆ. ಆದರೆ ಅವನು ಮಾಡೋಕೆ ಹೊರಟಿರೋದು ಒಂದು, ಆಗ್ತಿರೋದು ಒಂದು.

ಮಲ್ಲಿ ನೋವಿನಲ್ಲೇ ಜೀವನ ಕಳೆಯಬೇಕು
ಮಲ್ಲಿ ದುಃಖದಲ್ಲಿಯೇ ಜೀವನ ಕಳೆಯಬೇಕು, ನಿತ್ಯವೂ ನರಳುತ್ತಿರಬೇಕು ಎಂದು ಜಯದೇವ್ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಡಿವೋರ್ಸ್ ಕೊಡಲು ರೆಡಿಯಿಲ್ಲ. ಮಲ್ಲಿ ಇನ್ನೊಬ್ಬ ಹುಡುಗನನ್ನು ಮದುವೆಯಾದರೆ ಆರಾಮಾಗಿ ಇರ್ತಾಳೆ, ಅವಳು ಮದುವೆ ಆಗಬಾರದು ಎಂದು ಅವನು ಲೆಕ್ಕ ಹಾಕಿದ್ದಾನೆ.
ಆ ಹುಡುಗ ಮಲ್ಲಿಗಿಂತ ಚಿಕ್ಕವನು
ಈಗ ತನ್ನ ಪಿಎಗೆ ಮಲ್ಲಿಯನ್ನು ಲವ್ ಮಾಡು, ನೀನು ಇಲ್ಲದೆ ಅವಳು ಬದುಕೋದಿಲ್ಲ ಎನಿಸಬೇಕು ಎನ್ನೋ ಥರ ನಟಿಸು, ಇಂಪ್ರೆಸ್ ಮಾಡು ಎಂದು ಹೇಳಿದ್ದಾನೆ. ಆದರೆ ಆ ಹುಡುಗನಿಗೆ ಮೊದಲೇ ಮಲ್ಲಿ ಮೇಲೆ ಲವ್ ಆಗಿದೆ. ಅಂದಹಾಗೆ ಅವನು ಮಲ್ಲಿಗಿಂತ ಚಿಕ್ಕವನು.
ಮಲ್ಲಿಯನ್ನು ಮೊದಲೇ ಲವ್ ಮಾಡ್ತಿದ್ದನು
ಮಲ್ಲಿಯನ್ನು ಅವನು ಮೊದಲೇ ಲವ್ ಮಾಡುತ್ತಿದ್ದನು. ಈಗ ಜಯದೇವ್ ಕೂಡ ಫೇಕ್ ಆಗಿ ಲವ್ ಮಾಡೋಕೆ ಹೇಳಿದ್ದಾನೆ. ಒಟ್ಟಿನಲ್ಲಿ ಆ ಪಿಎಗೆ ಬಾಯಿಗೆ ಲಡ್ಡು ಬಂದು ಬಿದ್ದ ಹಾಗೆ ಆಗಿದೆ. ಮುಂದೆ ಏನಾಗುವುದು?
ಆ ಪಿಎ ಯಾರು?
ಮಲ್ಲಿ ಹಾಗೂ ಆ ಪಿಎ ಲವ್‌ನಲ್ಲಿ ಬೀಳುತ್ತಾರಾ? ಆ ಪಿಎಯಿಂದ ಮಲ್ಲಿಗೆ ಸಮಸ್ಯೆ ಆಗಲಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಅಂದಹಾಗೆ ಏಕಾಏಕಿ ಜಯದೇವ್ ಮನೆಯೊಳಗಡೆ ಹೊಕ್ಕಿರುವ ಆ ಪಿಎ ನಿಜಕ್ಕೂ ಯಾರು? ನಿಜಕ್ಕೂ ಅವನು ಜಯದೇವ್ ಅಭಿಮಾನಿಯಾ ಎಂಬ ಪ್ರಶ್ನೆ ಎದ್ದಿದೆ. ಹಾಗಾದರೆ ಮುಂದೆ ಏನಾಗುವುದು?
ಜಯದೇವ್‌ಗೆ ದಿಯಾ ಮೋಸ ಮಾಡಿದ್ರೆ?
ಮಲ್ಲಿ ಜೀವನಕ್ಕೆ ಹೊಸ ವ್ಯಕ್ತಿ ಎಂಟ್ರಿ ಆಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ಜಯದೇವ್ ಎರಡನೇ ಪತ್ನಿ ದಿಯಾಗೆ ಅವನ ಮೇಲ್ ಲವ್ ಇಲ್ಲ. ದಿಯಾಗೆ ಜಯದೇವ್ ಆಸ್ತಿ ಮೇಲೆ ಕಣ್ಣಿದೆ, ಆದಷ್ಟು ಬೇಗ ಅವನ ಆಸ್ತಿಯನ್ನು ಹೊಡೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ದಿಯಾ ಬಣ್ಣ ಬಯಲಾದಮೇಲೆ ಜಯದೇವ್, ಮಲ್ಲಿ ಹಿಂದೆ ಹೋಗುತ್ತಾನಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

