- Home
- Entertainment
- TV Talk
- Amruthadhaare Serial: ಮಲ್ಲಿ, ಸುನೀಲ್ ಪಾತ್ರ ಮುಗಿದೋಯ್ತಾ? ಅಧಿಕೃತ ಮಾಹಿತಿ ಕೊಟ್ಟ ನಟ ಯಶವಂತ್
Amruthadhaare Serial: ಮಲ್ಲಿ, ಸುನೀಲ್ ಪಾತ್ರ ಮುಗಿದೋಯ್ತಾ? ಅಧಿಕೃತ ಮಾಹಿತಿ ಕೊಟ್ಟ ನಟ ಯಶವಂತ್
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಮಿಂಚು ನಿಜಕ್ಕೂ ಯಾರ ಮಗಳು ಎನ್ನುವ ಪ್ರಶ್ನೆ ಸುತ್ತವೇ ಇಷ್ಟುದಿನ ಎಪಿಸೋಡ್ ಪ್ರಸಾರ ಆಗುತ್ತಿತ್ತು. ಮಲ್ಲಿ, ಸುನೀಲ್ ಪಾತ್ರದ ಕಥೆ ಏನು ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟ ಯಶವಂತ್ ಉತ್ತರ ಕೊಟ್ಟಿದ್ದಾರೆ.

ಮಲ್ಲಿ, ಸುನಿಲ್ ಏನಂದ್ರು?
ಗೌತಮ್ ದಿವಾನ್ ಮಲ ಸಹೋದರ ಜೆಡಿಯ ಮೊದಲ ಪತ್ನಿ ಮಲ್ಲಿ, ಸುನೀಲ್ ಎನ್ನುವವನ ಜೊತೆ ಮದುವೆ ಆಗುತ್ತಾಳೆ. ಹೀಗಿದ್ದರೂ ಅವಳು ಭೂಮಿ ಜೊತೆಗೆ ಇರುತ್ತಾಳೆ. ಸದ್ಯ ಕೆಲ ಎಪಿಸೋಡ್‌ಗಳಿಂದ ಮಲ್ಲಿ, ಸುನೀಲ್ ಪತ್ತೆಯೇ ಇಲ್ಲ.
ಧಾರಾವಾಹಿಯನ್ನು ಬಿಟ್ಟಿದ್ದಾರಾ?
ಹಾಗಾದರೆ ನಟ ಯಶವಂತ್ ಅವರು 'ಅಮೃತಧಾರೆ' ಧಾರಾವಾಹಿಯನ್ನು ಬಿಟ್ಟಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಧಾರಾವಾಹಿಯನ್ನು ಬಿಟ್ಟಿಲ್ಲ
ಯಶವಂತ್ ಅವರು ಧಾರಾವಾಹಿಯನ್ನು ಬಿಟ್ಟಿಲ್ಲ. ಈಗಲೂ ಕೂಡ ಅಮೃತಧಾರೆ ಸೀರಿಯಲ್‌ನಲ್ಲಿ ಮುಂದುವರಿಯುತ್ತಿದ್ದಾರೆ. ಈ ವಿಷಯವನ್ನು ಅವರು ಅಧಿಕೃತಪಡಿಸಿದ್ದಾರೆ.
ಯಾಕೆ ಸುನೀಲ್ ಕಾಣ್ತಿಲ್ಲ?
ಸದ್ಯಕ್ಕೆ ಧಾರಾವಾಹಿಯಲ್ಲಿ 'ಮಿಂಚು' ಪಾತ್ರದ ಸುತ್ತ ಕಥೆ ನಡೆಯುತ್ತಿರುವುದರಿಂದ ಇವರ ಪಾತ್ರದ ಭಾಗಗಳು ಕಡಿಮೆ ಇವೆ. ಈ ಧಾರಾವಾಹಿಯ ಕಥೆಯ ಪ್ರಕಾರ ಅವರ ಪಾತ್ರ (ಸುನಿಲ್) ಯುಪಿಎಸ್ಇ (UPSC) ಪರೀಕ್ಷೆಯ ತಯಾರಿಗಾಗಿ ದೆಹಲಿಗೆ ಹೋಗಿದೆ. ಅವರು ಆದಷ್ಟು ಬೇಗ ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ, ಹಾಗಾಗಿ ಪ್ರೇಕ್ಷಕರು ಯಾವುದೇ ಯೋಚನೆ ಮಾಡುವ ಅಗತ್ಯವಿಲ್ಲ ಎಂದು ಅವರೇ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

