- Home
- Entertainment
- TV Talk
- Shwetha Prasad: ವರ್ಷಗಳ ನಂತ್ರ ಕಿರುತೆರೆಗೆ ಶ್ವೇತಾ ಪ್ರಸಾದ್ ಕಂ ಬ್ಯಾಕ್… ಈ ಬಾರಿ ಅತಿಥಿ ಪಾತ್ರ ಅಲ್ಲ!
Shwetha Prasad: ವರ್ಷಗಳ ನಂತ್ರ ಕಿರುತೆರೆಗೆ ಶ್ವೇತಾ ಪ್ರಸಾದ್ ಕಂ ಬ್ಯಾಕ್… ಈ ಬಾರಿ ಅತಿಥಿ ಪಾತ್ರ ಅಲ್ಲ!
Shwetha R Prasad: ರಾಧಾ ರಮಣ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದ ನಟಿ ಶ್ವೇತಾ ಪ್ರಸಾದ್, ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಫುಲ್ ಟೈಮ್ ನಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಬಾರಿ ಅತಿಥಿ ಪಾತ್ರ, ನಾಯಕಿಯಾಗಿ ಅಲ್ಲ.

ಶ್ವೇತಾ ಆರ್ ಪ್ರಸಾದ್
ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಶ್ವೇತಾ ಆರ್ ಪ್ರಸಾದ್ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ಹೌದು, ‘ಮತ್ತೆ ಕಿರುತೆರೆಗೆ ’ ಮತ್ತು ‘ಶ್ರೀರಸ್ತು ಶುಭಮಸ್ತು’ ಸೀರಿಯಲ್ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಶ್ವೇತಾ ಶೀಘ್ರದಲ್ಲಿ ಸೀರಿಯಲ್ ಒಂದರಲ್ಲಿ ನಟಿಸುತ್ತಿದ್ದಾರೆ.
ಈ ಬಾರಿ ಅತಿಥಿ ಪಾತ್ರ ಅಲ್ಲ
‘ರಾಧಾ ರಮಣ’ ಮತ್ತು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ನಟಿ ಶ್ವೇತಾ ನಂತರ ಸೀರಿಯಲ್ ನಟನೆಯಿಂದ ದೂರ ಉಳಿದಿದ್ದರು. ಬಳಿಕ ಅಂತರಪಟ, ಅಮೃತಧಾರೆ ಧಾರಾವಾಹಿಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆದ್ರೆ ಈ ಬಾರಿ ಅತಿಥಿ ಪಾತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ಇದೆ.
ಮತ್ತೆ ನಾಯಕಿಯಾಗಿ ಎಂಟ್ರಿ ಕೊಡ್ತಾರ ಶ್ವೇತಾ?
ನಾಯಕಿಯಾಗಿ ಜನಮನ ಗೆದ್ದು, ಇಂದಿಗೂ ಕೂಡ ರಾಧಾ ಮಿಸ್ ಆಗಿ ಜನಪ್ರಿಯತೆ ಪಡೆದಿರುವ ಶ್ವೇತಾ ಪ್ರಸಾದ್ ಈ ಬಾರಿಯೂ ನಾಯಕಿಯಾಗಿಯೇ ಎಂಟ್ರಿ ಕೊಡ್ತಾರ ಎನ್ನುವ ಪ್ರಶ್ನೆ ಜನರು ಕೇಳುತ್ತಿದ್ದು, ಆದರೆ, ಈ ಬಾರಿ ಫಾರ್ ಎ ಚೇಂಜ್ ಎನ್ನುವಂತೆ ಶ್ವೇತಾ ನಾಯಕಿಯಾಗಿ ಅಲ್ಲದೇ ಬೇರೆ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ವಿಲನ್ ಆಗ್ತಾರ ಶ್ವೇತಾ?
ಇನ್ನು ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಪ್ರಕಾರ ಹಾಗೂ ಜನರ ಕಾಮೆಂಟ್ ಪ್ರಕಾರ ಈ ಬಾರಿ ಶ್ವೇತಾ ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಶುರುವಾಗಲಿರುವ ಧಾರಾವಾಹಿಯೊಂದರಲ್ಲಿ ಶ್ವೇತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದು ನಾಯಕಿ ಅಲ್ಲ, ಆದರೆ ವಿಲನ್ ಎನ್ನಲಾಗುತ್ತಿದೆ.
ಜಗಧಾತ್ರಿ ಧಾರಾವಾಹಿಯಲ್ಲಿ ನಟಿಸ್ತಾರ?
ಇನ್ನು ವೈರಲ್ ಆಗುತ್ತಿರುವ ಸುದ್ದಿಗಳ ಪ್ರಕಾರ ಶೀಘ್ರದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ‘ಜಗಧಾತ್ರಿ’ ಧಾರಾವಾಹಿಯಲ್ಲಿ ಶ್ವೇತಾ ಪ್ರಸಾದ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಎಷ್ಟು ನಿಜಾ ಎನ್ನುವ ಸರಿಯಾದ ಮಾಹಿತಿ ಇಲ್ಲ. ಅಂದಹಾಗೆ ಜಗಧಾತ್ರಿ ಧಾರಾವಾಹಿಯ ಪ್ರೊಮೋ ರಿಲೀಸ್ ಆಗಿತ್ತು, ಅದರಲ್ಲಿ ನಾಯಕ-ನಾಯಕಿ ಬಗ್ಗೆ ಕೂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸುತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾಗಳಲ್ಲಿ ಶ್ವೇತಾ ಪ್ರಸಾದ್
ನಟಿ ಶ್ವೇತಾ ಪ್ರಸಾದ್ ಕನ್ನಡ ಸೀರಿಯಲ್ ಗಳಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಪದವಿ ಪೂರ್ವ, ಕಾಟೇರಾ, ಬಂದೂಕ್, ಸಿನಿಮಾಗಳಲ್ಲಿ ಶ್ವೇತಾ ಪ್ರಸಾದ್ ನಟಿಸಿದ್ದು, ಇದೀಗ ಬಿಡುಗಡೆಯಾಗಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 3 ಸಿನಿಮಾದಲ್ಲೂ ಶ್ವೇತಾ ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

