- Home
- Entertainment
- TV Talk
- 20ರ ಸಂಭ್ರಮದಲ್ಲಿ Anchor Anushree: ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ? ಅಭಿಮಾನಿಗಳ ಕಣ್ಣೀರು
20ರ ಸಂಭ್ರಮದಲ್ಲಿ Anchor Anushree: ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ? ಅಭಿಮಾನಿಗಳ ಕಣ್ಣೀರು
ಆ್ಯಂಕರಿಂಗ್ ಕ್ಷೇತ್ರದಲ್ಲಿ 20 ವರ್ಷ ಪೂರೈಸಿದ ಅನುಶ್ರೀ ಅವರ ಈ ಪಯಣವನ್ನು ಜೀ ಕನ್ನಡ ವೇದಿಕೆ ಸಂಭ್ರಮಿಸಿದೆ. ಈ ವೇಳೆ ತಮ್ಮ ಕಷ್ಟದ ದಿನಗಳನ್ನು ನೆನೆದು ಭಾವುಕರಾದ ಅನುಶ್ರೀ, ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ, ತಕ್ಷಣವೇ ಮತ್ತೆ ಕೆಲಸಕ್ಕೆ ಹಾಜರಾಗುವ ಮೂಲಕ ವೃತ್ತಿಪರತೆ ಮೆರೆದಿದ್ದಾರೆ.

ಆ್ಯಂಕರಿಂಗ್ ಅಂದರೆ
ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್ ಅನುಶ್ರೀ (Anchor Anushree). ಆ್ಯಂಕರಿಂಗ್ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್ ಮಾಡುವಲ್ಲಿ ಆ್ಯಂಕರ್ಸ್ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್ಗಳಿಗೆ.
20 ವರ್ಷಗಳ ಸಂಭ್ರಮ
ಮೊನ್ನೆಯಷ್ಟೇ ಅರ್ಥಾತ್ ಇದೇ ಜನವರಿ 25ರಂದು ಅನುಶ್ರೀ ಅವರು 38ನೇ ವರ್ಷಕ್ಕೆ ಕಾಲಿಟ್ಟರು. ಆದರೆ, 18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಇದನ್ನು ಜೀ ಕನ್ನಡ ವೇದಿಕೆ ಸೆಲಬ್ರೇಟ್ ಮಾಡಿದೆ. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಭಾವುಕರಾದರು. ವೇದಿಕೆಯ ಮೇಲೆಯೇ ಕಣ್ಣೀರಾದರು. ಯಾವುದೇ ಕ್ಷೇತ್ರದ ಸೆಲೆಬ್ರಿಟಿಯ ಹಿನ್ನೆಲೆ, ಬಾಲ್ಯ ತೆಗೆದುಕೊಂಡಾಗ, ಅದರಲ್ಲಿ ನೋವಿನ ಹಾದಿಗಳೇ ತುಂಬಿರುತ್ತದೆ. ಅದೇ ರೀತಿ ಅನುಶ್ರೀ ಅವರೂ ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತರು.
ದಾಂಪತ್ಯ ಜೀವನ
ಕೊನೆಗೆ, ಜೀ ಕನ್ನಡ ತಮ್ಮನ್ನು ಈ ಮಟ್ಟದಲ್ಲಿ ಬೆಳೆಸಿರುವುದಕ್ಕೆ ಅವರು ವಾಹಿನಿಗೆ ಧನ್ಯವಾದ ಸಲ್ಲಿಸಿದರು. ಅಷ್ಟಕ್ಕೂ ಅನುಶ್ರೀ ಅವರನ್ನು ಜೀ ಕನ್ನಡದ ಮನೆಮಗಳು ಎಂದೇ ಹೇಳಲಾಗುತ್ತದೆ. ಆ್ಯಂಕರ್ ಅನುಶ್ರೀ (Anchor Anushree) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ದಿನಗಳಾಗಿವೆ. ಕೊಡಗು ಮೂಲದ ರೋಷನ್ ಜೊತೆ ಕಳೆದ ಆಗಸ್ಟ್ 28ರಂದು ಹಣೆಮಣೆ ಏರಿದ್ದಾರೆ. ಅನುಶ್ರೀ ಮದುವೆ ಯಾವಾಗ ಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರೂ ಈ ಬಗ್ಗೆ ಸಾಕಷ್ಟು ರಹಸ್ಯವಾಗಿಯೇ ಇಟ್ಟಿದ್ದ ನಟಿ, ಕೊನೆಗೂ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಭಾರಿ ಡಿಮಾಂಡ್
ಅಷ್ಟಕ್ಕೂ ಆ್ಯಂಕರ್ ಅನುಶ್ರೀ (Anchor Anushree) ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್ ಇರುವುದು ಗೊತ್ತೇ ಇದೆ. ಜೀ ಟಿವಿ, ಕಲರ್ಸ್ ಕನ್ನಡ ಸೇರಿದಂತೆ ಕೆಲವು ಚಾನೆಲ್ಗಳಲ್ಲಿ ಇವರು ಆ್ಯಂಕರಿಂಗ್ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.
ಮರುದಿನವೇ ಹಾಜರ್
ಅಷ್ಟಕ್ಕೂ, ಆ್ಯಂಕರ್ ಅನುಶ್ರೀ ಅವರು ಇದಾಗಲೇ ಆ್ಯಂಕರಿಂಗ್ ಮಾಡ್ತಿರೋ ರಿಯಾಲಿಟಿ ಷೋಗಳ ಗತಿಯೇನು ಎನ್ನುವ ಚಿಂತೆ ಅಭಿಮಾನಿಗಳಿಗೆ ಇದ್ದೇ ಇತ್ತು. ರಿಯಾಲಿಟಿ ಷೋಗಳಲ್ಲಿ ಇವರು ಮದುವೆಯ ಬಳಿಕ ಹನಿಮೂನ್, ಅದೂ ಇದೂ ಎಂದು ಕೆಲವು ದಿನಗಳ ಮಟ್ಟಿಗೆ ಬಿಡುವು ತೆಗೆದುಕೊಳ್ಳಬಹುದು ಎಂದು ಊಹಿಸಲಾಗಿತ್ತು. ಈ ಬಗ್ಗೆ ಮದುವೆಯ ದಿನವೇ ಕೆಲವರು ಈ ಪ್ರಶ್ನೆಯನ್ನು ಅನುಶ್ರೀ ಮುಂದೆ ಇಟ್ಟಿದ್ದರು. ಆಗ ಅವರು, ಶಾಕಿಂಗ್ ಉತ್ತರ ಕೊಟ್ಟಿದ್ದರು. ನಾಡಿದ್ದುಯಿಂದಲೇ ಮತ್ತೆ ಕೆಲಸ ಶುರು ಮಾಡುತ್ತೇನೆ ಎಂದಿದ್ದರು.
ಗುಡ್ನ್ಯೂಸ್ ಬಗ್ಗೆ ಅಭಿಮಾನಿಗಳ ಚಿಂತೆ
ಇದನ್ನು ಕೇಳಿ ಹಲವರು ಇಷ್ಟು ಬೇಗ ಯಾಕಮ್ಮಾ, ಮದುವೆಯಾದ ಮೇಲೆ ಕೆಲವು ದಿನ ಎಂಜಾಯ್ ಮಾಡಿ, ಕೆಲಸವೆಲ್ಲಾ ಇದದ್ದೇ ಎಂದಿದ್ದರೂ, ಕೆಲಸದ ಮೇಲೆ ಬದ್ಧತೆ ತೋರಿಸಿದ್ದ ಅನುಶ್ರೀ ತಮ್ಮ ಮಾತಿನಂತೆ ಕೂಡಲೇ ಮತ್ತೆ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಷ್ಟು ದಿನ ಮದುವೆಯ ಗುಡ್ನ್ಯೂಸ್ ಕೇಳ್ತಿರೋರಿಗೆ ಈಗ ಅನುಶ್ರೀ ಅಮ್ಮನಾಗ್ತಿರೋದು ಯಾವಾಗ ಎನ್ನುವ ಚಿಂತೆ ಶುರುವಾಗಿದೆ. ಬೇಗ ಆ ಗುಡ್ನ್ಯೂಸ್ ಕೂಡ ಕೊಡಿ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
