ಕೇವಲ ಒಂದು 'Digital Pass' ಖರೀದಿಸಿ ಕಾಶಿಯ ಸುಂದರ ಸ್ಥಳಗಳನ್ನು ನೋಡಿ
ಡಿಜಿಟಲ್ ಪಾಸ್ ಸೇವೆಯು ವಾರಣಾಸಿಯಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ, ಇದರಲ್ಲಿ ನೀವು ಒಂದೇ ಪಾಸ್ ಮೂಲಕ ಕಾಶಿಯ ಎಂಟು ಸ್ಥಳಗಳನ್ನು ಸುತ್ತಾಡಲು ಸಾಧ್ಯವಾಗುತ್ತದೆ. ನೀವು ಬನಾರಸ್ ಅಥವಾ ಕಾಶಿಗೆ ಹೋಗಲು ಯೋಜಿಸುತ್ತಿದ್ದರೆ, ಈ ಡಿಜಿಟಲ್ ಪಾಸ್ ಬಗ್ಗೆ ತಿಳಿದುಕೊಳ್ಳಿ. ಇದರಿಂದ ನೀವು ಸುಲಭವಾಗಿ ಕಾಶಿಯ ದರ್ಶನ ಮಾಡಬಹುದು. ಇಲ್ಲಿದೆ ಈ ಡಿಜಿಟಲ್ ಟಿಕೆಟ್ ಬಗ್ಗೆ ಹೆಚ್ಚಿನ ಮಾಹಿತಿ.
ಕೆಲವು ಸ್ಥಳಗಳಿಗೆ ಹೋಗಲು, ಮೊದಲು ಪ್ಲ್ಯಾನಿಂಗ್ ಮಾಡೋ ಅಗತ್ಯವಿದೆ, ಜೊತೆಗೆ ಯಾವ ಸಾರಿಗೆಯಲ್ಲಿ ಹೋಗಬೇಕು, ಮೊದಲು ಟಿಕೆಟ್ ಗಳನ್ನು ಕಾಯ್ದಿರಿಸಬೇಕು, ಇವೆಲ್ಲವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆದರೆ ಕೆಲವು ಸಮಸ್ಯೆಯಿಂದಾಗಿ ಟಿಕೆಟ್ ಮಾಡೋದು ಕಷ್ಟವಾಗುತ್ತೆ. ಆದರೆ ಈಗ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ, ಏಕೆಂದರೆ ಪ್ರಯಾಣಿಕರು ಈಗ ಡಿಜಿಟಲ್ ಟಿಕೆಟ್ ಬುಕ್ ಮಾಡಬಹುದು. ಹೌದು, ಕೇವಲ ಡಿಜಿಟಲ್ ಟಿಕೆಟ್ ಮೂಲಕ, ನೀವು ಒಂದಲ್ಲ, 8 ಸ್ಥಳಗಳಲ್ಲಿ ಸುತ್ತಾಡಬಹುದು. ಈ ಟಿಕೆಟ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಒಂದೇ ಡಿಜಿ ಟಿಕೆಟ್ ನಲ್ಲಿ ಕಾಶಿ ದರ್ಶನ :
ಡಿಜಿಟಲ್ ಪಾಸ್ ಸಹಾಯದಿಂದ ನೀವು ಈ 8 ಸ್ಥಳಗಳಲ್ಲಿ ಸುತ್ತಾಡಬಹುದಾದ ಕೆಲವು ಸ್ಥಳಗಳು ಈ ಕೆಳಗಿನಂತಿವೆ :
ಕಾಶಿ ವಿಶ್ವನಾಥ ದೇವಾಲಯ
ನಮೋ ಘಟೋ
ಧಮೇಖಾ ಸ್ತೂಪ
ಸಾರನಾಥ ಲೈಟ್ ಆಂಡ್ ಸೌಂಡ್ ಶೋ (Saranath light and sound show)
ದೀನ್ ದಯಾಳ್ ಉಪಾಧ್ಯಾಯ ಟ್ರೇಡ್ ಫೆಸಿಲಿಟೇಷನ್ ಸೆಂಟರ್ ಮ್ಯೂಸಿಯಂ
ರಾಮನಗರ ಕೋಟೆ
ಗಂಗಾ ಕ್ರೂಸ್
ಮೈದಾಜಿನ್, ಬೆನಿಯಾಬಾಗ್, ಗೊಡೋವಾಲಿಯಾ ಪಾರ್ಕಿಂಗ್ ಸ್ಥಳಗಳು
ಇದರಲ್ಲಿ ಟಿಕೆಟ್ ಹೇಗಿರುತ್ತದೆ?
ಇದು ಪ್ರವಾಸೋದ್ಯಮದಲ್ಲಿ ಭಾರತದ ಮೊದಲ ಡಿಜಿಟಲ್ ಸೌಲಭ್ಯವಾಗಿದೆ, ಇದರಲ್ಲಿ ಜನರು ಪಿಎಫ್ ಸಿಂಗಲ್ ಡಿಜಿಟಲ್ ಟಿಕೆಟ್ಗಳ (single digit ticket) ವೆಚ್ಚದಲ್ಲಿ ಅನೇಕ ಸ್ಥಳಗಳಿಗೆ ಹೋಗಲು ಸಾಧ್ಯವಾಗುತ್ತೆ. ಪ್ರವಾಸಿಗರು ತಮ್ಮ ಪ್ಯಾಕೇಜ್ ಕಸ್ಟಮೈಸ್ ಮಾಡಬಹುದು ಮತ್ತು ಅದರ ಮೇಲೆ ರಿಯಾಯಿತಿ ಸಹ ಪಡೆಯಬಹುದು. ಟಿಕೆಟ್ ಕ್ಯೂಆರ್ ಕೋಡ್ ರೂಪದಲ್ಲಿ ಲಭ್ಯವಾಗುತ್ತೆ, ನಂತರ ರೆಸ್ಟೋರೆಂಟ್ಗಳು, ರೈಲ್ವೆಯಂತಹ ಇತರ ಸೇವೆಗಳನ್ನು ಸಹ ಅದಕ್ಕೆ ಸೇರಿಸಲಾಗುತ್ತದೆ. ಟೆಸ್ಟ್ ಮಾಡಿದ ನಂತರ, ಈ ಸಿಂಗಲ್ ಟಿಕೆಟ್ ವಿಶ್ವದಾದ್ಯಂತದ ಪ್ರವಾಸಿಗರಿಗೆ ಲಭ್ಯವಾಗುತ್ತದೆ.
ವಾರಣಾಸಿಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು
ವಾರಣಾಸಿಯು ಭೇಟಿ ನೀಡಲು ಬಹಳ ಸುಂದರವಾದ ಸ್ಥಳವಾಗಿದೆ. ಗಂಗಾ ನದಿಯ ಸಮೀಪದಲ್ಲಿರುವ ಇಲ್ಲಿನ ಘಟ್ಟಗಳು ವಿಭಿನ್ನ ಅನುಭವ ನೀಡುತ್ತವೆ. ಇಲ್ಲಿ ಸೂರ್ಯಾಸ್ತದ ಸೌಂದರ್ಯ ಹೃದಯವನ್ನು ಸ್ಪರ್ಶಿಸುತ್ತದೆ. ನೀವು ಕಾಶಿಗೆ ಭೇಟಿ ನೀಡಲು ಹೊರಟರೆ, ಖಂಡಿತವಾಗಿಯೂ ಗಂಗಾ ನದಿ, ದಶಾಶ್ವಮೇಧ ಘಾಟ್, ಅಸ್ಸಿ ಘಾಟ್, ಮಣಿಕರ್ಣಿಕಾ ಘಾಟ್, ಧಮೆಕ್ ಸ್ತೂಪ, ಶ್ರೀ ಕಾಶಿ ವಿಶ್ವನಾಥ ದೇವಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ರುಚಿಕಾ ಆರ್ಟ್ ಗ್ಯಾಲರಿ, ಶ್ರೀ ದುರ್ಗಾ ದೇವಾಲಯ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ.
ವಾರಣಾಸಿಯನ್ನು ತಲುಪುವುದು ಹೇಗೆ?
ವಿಮಾನದ ಮೂಲಕ: ವಾರಣಾಸಿ ವಿಮಾನ ನಿಲ್ದಾಣವು (Varanasi Airport) ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಕನೆಕ್ಟ್ ಆಗುತ್ತೆ. ವಾರಾಣಸಿಯ ವಾಯುಮಾರ್ಗದ ಮೂಲಕ ನೀವು ನಿಮ್ಮ ನಗರಕ್ಕೆ ಸುಲಭವಾಗಿ ತಲುಪಬಹುದು. ದೆಹಲಿಯಿಂದ ವಾರಣಾಸಿಗೆ ವಿಮಾನಗಳು ಲಭ್ಯವಿದ್ದರೆ, ನೀವು ಮುಂಬೈನಿಂದ ವಾರಣಾಸಿ ಮತ್ತು ಇತರ ನಗರಗಳಿಂದ ಕಾಶಿಗೆ ವಿಮಾನ ಪ್ರಯಾಣ ಮಾಡಬಹುದು.
ರೈಲಿನ ಮೂಲಕ - ಈ ನಗರವು ಉತ್ತಮ ರೈಲ್ವೇ ಸಂಪರ್ಕ ಹೊಂದಿದೆ, ಆದ್ದರಿಂದ ನೀವು ಸುಲಭವಾಗಿ ವಾರಣಾಸಿ ತಲುಪಬಹುದು. ಈ ನಗರವು ಮುಖ್ಯವಾಗಿ ಎರಡು ಪ್ರಮುಖ ರೈಲು ನಿಲ್ದಾಣಗಳನ್ನು ಹೊಂದಿದ್ದು, ಇದನ್ನು ದೇಶದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಸಂಪರ್ಕಿಸುತ್ತದೆ. ವಾರಣಾಸಿ ರೈಲ್ವೆ ನಿಲ್ದಾಣ (Varanasi Railway Station) ಮತ್ತು ಕಾಶಿ ರೈಲು ನಿಲ್ದಾಣ ಎರಡು ಪ್ರಮುಖ ರೈಲು ನಿಲ್ದಾಣಗಳಾಗಿವೆ, ಅವುಗಳ ಸಹಾಯದಿಂದ ಪ್ರತಿಯೊಬ್ಬರೂ ಇಲ್ಲಿಗೆ ಸುಲಭವಾಗಿ ತಲುಪಬಹುದು.
ರಸ್ತೆ ಮೂಲಕ- ಉತ್ತರ ಪ್ರದೇಶದಲ್ಲಿ ಸಾಕಷ್ಟು ರಾಜ್ಯ ಬಸ್ಸುಗಳು ಮತ್ತು ಖಾಸಗಿ ಬಸ್ ಸೇವೆಗಳು (private bus service) ಲಭ್ಯವಿದೆ. ಅವುಗಳನ್ನು ಬಳಸುವ ಮೂಲಕ ಪ್ರತಿಯೊಬ್ಬರೂ ನಗರವನ್ನು ಸುಲಭವಾಗಿ ಮತ್ತು ಕಡಿಮೆ ಬೆಲೆಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಅಲ್ಲದೇ ಬಸ್ ಗಳ ಮೂಲಕವೇ ನೀವು ಹಲವು ತಾಣಗಳನ್ನು ನೋಡಬಹುದು.