ಸೆಪ್ಟೆಂಬರ್‌ನಲ್ಲಿ ಲಡಾಖ್ ಪ್ರವಾಸಕ್ಕೆ ಹೋಗ್ಲೇ ಬೇಕು!
ನಾವು ಟ್ರಾವೆಲ್ ಪ್ಲ್ಯಾನ್ ಮಾಡಿದಾಗಲೆಲ್ಲಾ, ಯಾವ ಸೀಸನ್‌ನಲ್ಲಿ ಎಲ್ಲಿಗೆ ಹೋಗಬೇಕೆಂದು ಖಂಡಿತವಾಗಿಯೂ ಪರಿಶೀಲಿಸುತ್ತೇವೆ. ಅಂದರೆ, ಎಲ್ಲಾ ಪ್ರದೇಶಗಳಿಗೆ ತೆರಳಲು ಒಂದು ಸೀಸನ್ ಇದೆ. ಆದರೆ ನೀವು ಲಡಾಖ್‌ಗೆ ಆಫ್-ಸೀಸನ್‌ನಲ್ಲಿ ಏಕೆ ಹೋಗಬೇಕು ಎಂದು ನಾವು ನಿಮಗೆ ಹೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಲಡಾಖ್ ಪ್ರವಾಸ ಮಾಡುವ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಇಲ್ಲಿದೆ ಹೋಗುವ ಸೀಸನ್ ಈಗ ಕೊನೆಗೊಳ್ಳುತ್ತಿದೆ, ಯಾಕಂದ್ರೆ ಈಗ ಚಳಿಗಾಲ ಕೊನೆಯಾಗಿದೆ. ಆದರೆ ನೀವು ಇನ್ನೂ ಇಲ್ಲಿಗೆ ಹೋಗಲು ಪ್ಲ್ಯಾನ್ ಮಾಡಬಹುದು ಎಂದು ನಾವು ಹೇಳ್ತೀವಿ. ಸೆಪ್ಟೆಂಬರ್ ಲಡಾಖ್ ಗೆ ಹೋಗಲು ಆಫ್ ಸೀಸನ್ ಆಗಿದೆ. ಈ ಟೈಮ್ ನಲ್ಲಿ ಲಡಾಖ್ ಪ್ರವಾಸ ಯಾಕೆ ಮಾಡಬೇಕು ನೋಡೋಣ.
ಆಹ್ಲಾದಕರ ಹವಾಮಾನ
ಸೆಪ್ಟೆಂಬರ್ ತಿಂಗಳು ಶೀತಗಾಳಿಯಿಂದ ಕೂಡಿರೋದಿಲ್ಲ.ಆದರೂ ಈ ತಿಂಗಳಲ್ಲಿ ಸಹ, ನೀವು ಸ್ವಲ್ಪ ಶೀತ ಗಾಳಿಯನ್ನು ಎಂಜಾಯ್(Enjoy) ಮಾಡಬಹುದು, ಅಂದರೆ ನೀವು ಸುಲಭವಾಗಿ ಈ ಚಳಿಯನ್ನು ಸಹಿಸಿಕೊಳ್ಳಲು ಸಾಧ್ಯ. ಸುಂದರ ಅನುಭವ ಸಹ ಪಡೆಯಬಹುದು.
ಪ್ರವಾಸಿಗರು ಇರೋದಿಲ್ಲ
ಸೆಪ್ಟೆಂಬರ್ ತಿಂಗಳ ಹೊತ್ತಿಗೆ, ಲಡಾಖ್‌ನಲ್ಲಿ ಪ್ರವಾಸಿಗರ ಪ್ರವಾಹವು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿನ ಸುಂದರ ಪ್ರದೇಶಗಳು ಕಿಕ್ಕಿರಿದು ತುಂಬಿರುವುದಿಲ್ಲ ಮತ್ತು ಇಲ್ಲಿನ ಕೆಫೆಗಳು, ರೆಸ್ಟೋರೆಂಟ್ ಗಳು(Restaurant) ಮತ್ತು ಹೋಟೆಲ್ ಗಳು ಸಹ ತೆರೆದಿರುತ್ತವೆ.
ಪ್ರತಿ ಕ್ಷಣಗಳನ್ನು ಎಂಜಾಯ್ ಮಾಡಿ
ಈ ತಿಂಗಳಲ್ಲಿ ಕಡಿಮೆ ಜನರು(People) ಇರುವುದರಿಂದ, ನೀವು ಎಲ್ಲಿಗೂ ಹೋಗಲು ಆತುರಪಡಬೇಕಾಗಿಲ್ಲ. ಎಲ್ಲೆಡೆ ಸ್ಥಳಗಳನ್ನು ಸಂಪೂರ್ಣವಾಗಿ ನೋಡಿ, ಮನಸೋ ಇಚ್ಚೆ ಸುತ್ತಾಡುತ್ತಾ, ಪ್ರತಿ ನಿಮಿಷವನ್ನು ಸಹ ಎಂಜಾಯ್ ಮಾಡಬಹುದು.
ಹ್ಯಾಂಗ್ ಔಟ್(Hang out) ಮಾಡಲು ಬೆಸ್ಟ್ ವೆದರ್
ಸೆಪ್ಟೆಂಬರ್ ತಿಂಗಳಲ್ಲಿ, ತುಂಬಾ ಚಳಿ ಇರೋದಿಲ್ಲ ಮತ್ತು ನೀವು ಆರಾಮವಾಗಿ ಹೊರಗೆ ತಿರುಗಾಡಬಹುದು. ಈ ಸಮಯದಲ್ಲಿ, ಮಳೆಯ ಸಾಧ್ಯತೆಗಳು ಸಹ ತುಂಬಾ ಕಡಿಮೆ, ಬಿಸಿಲು ಇರುತ್ತದೆ, ಅದನ್ನು ನೀವು ಸಾಕಷ್ಟು ಎಂಜಾಯ್ ಮಾಡಬಹುದು.
ರಿಯಾಯಿತಿ ದರದಲ್ಲಿ ಟಿಕೇಟ್(Ticket)
ಏಕೆಂದರೆ ಈ ಸಮಯವು ಆಫ್-ಸೀಸನ್‌ನಲ್ಲಿ ಬರುವುದರಿಂದ, ನೀವು ವಿಮಾನ ಟಿಕೆಟ್ ಗಳು ಮತ್ತು ಹೋಟೆಲ್ ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡಿ.
ಚೀಪ್ ಆಗಿರುವ ಬಾಡಿಗೆ ಕಾರುಗಳು(Car)
ಸೆಪ್ಟೆಂಬರ್ ಈ ಸಮಯದಲ್ಲಿ ಪ್ರಯಾಣಿಕರು ತುಂಬಾ ಕಡಿಮೆ ಇರುತ್ತಾರೆ, ಆದ್ದರಿಂದ ಕಾರಿನ ಬಾಡಿಗೆಯೂ ಕಡಿಮೆಯಾಗುತ್ತದೆ. ಸುತ್ತಾಡಲು ನೀವು ಆರಾಮವಾಗಿ ಕಾರನ್ನು ತೆಗೆದುಕೊಳ್ಳಬಹುದು. ಹಾಗೂ ಎಲ್ಲಾ ಸ್ಥಳಗಳನ್ನು ನೋಡಿಕೊಂಡು ಬರಬಹುದು.
ಟ್ರಾಫಿಕ್ ಜಾಮ್(Traffic Jam) ಟೆನ್ಷನ್ ಇಲ್ಲ
ನೀವು ಎಂದಾದರೂ ಪೀಕ್ ಸೀಸನ್ ನಲ್ಲಿ ಲಡಾಖ್ ಗೆ ಹೋಗಿದ್ದರೆ, ಎಲ್ಲೆಡೆ ಯಾವ ರೀತಿಯಾಗಿ ಟ್ರಾಫಿಕ್ ಜಾಮ್ ಇರಬಹುದು ಅನ್ನೋದು ನಿಮಗೆ ಗೊತ್ತೆ ಇದೆ. ಆದಾಗ್ಯೂ, ಸೆಪ್ಟೆಂಬರ್ ನಲ್ಲಿ ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ. ಹಾಗಾಗಿ ಲಡಾಖ್ ನಲ್ಲಿ ಆರಾಮವಾಗಿ ಎಂಜಾಯ್ ಮಾಡಬಹುದು.
ಲಡಾಖ್ ನ ಸುಗ್ಗಿ ಉತ್ಸವ
ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ 15 ರವರೆಗೆ ಲಡಾಖ್‌ನಲ್ಲಿ ಸುಗ್ಗಿ ಹಬ್ಬವನ್ನು(Festival) ಆಚರಿಸಲಾಗುತ್ತದೆ. ಈ ವರ್ಣರಂಜಿತ ಸಾಂಸ್ಕೃತಿಕ ಉತ್ಸವವನ್ನು ನೋಡಲು ನೀವು ಹೋಗಬೇಕು. ಇದು ನಿಮಗೆ ಹೊಸ ಅನುಭವ, ಸಂಸ್ಕೃತಿಯ ಪರಿಚಯ ನೀಡೋದು ಖಚಿತ.
ರಾತ್ರಿಯಲ್ಲಿ ಗಂಟೆಗಟ್ಟಲೆ ನೀಲ ಆಕಾಶದಲ್ಲಿ(Blue sky) ಹೊಳೆಯುವ ನಕ್ಷತ್ರಗಳನ್ನು ವೀಕ್ಷಿಸಬಹುದು. ಸೆಪ್ಟೆಂಬರ್ ತಿಂಗಳಲ್ಲಿ ಶುಭ್ರ ಆಕಾಶದಿಂದಾಗಿ, ಲಡಾಖ್‌ನಲ್ಲಿ ನೀವು ಗಂಟೆಗಟ್ಟಲೆ ನಕ್ಷತ್ರಗಳನ್ನು ನೋಡಬಹುದು. ರಾತ್ರಿಯಲ್ಲಿ ಈ ಸಮಯದಲ್ಲಿ ಸಹಿಸಲಾಗದಷ್ಟು ಚಳಿ ಇರೋದಿಲ್ಲ, ಸೋ ಸ್ಕೈ ವ್ಯೂ ಮಾಡ್ತಾ ಸಖತ್ತಾಗಿ ಎಂಜಾಯ್ ಮಾಡಬಹುದು.
ಕ್ಯಾಂಪಿಂಗ್(Camping) ಎಂಜಾಯ್ ಮಾಡಿ
ನೀವು ಎಲ್ಲೆಡೆ ಸೌಂದರ್ಯ ಮತ್ತು ಶಾಂತಿ ಎಂಜಾಯ್ ಮಾಡಲು ಬಯಸಿದರೆ, ಕ್ಯಾಂಪಿಂಗ್ ಮಾಡಿ ಎಂಜಾಯ್ ಮಾಡಿ. ಇಲ್ಲಿ ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬವನ್ನು ಕರೆದೊಯ್ಯಬಹುದು, ಸಖತ್ತಾಗಿ ಎಂಜಾಯ್ ಮಾಡಬಹುದು.