MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • Hindu Temples in India: ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹಿಂದೂ ಮಂದಿರಗಳಿವೆ? ಕರ್ನಾಟಕದಲ್ಲಿ ಎಷ್ಟಿದೆ?

Hindu Temples in India: ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹಿಂದೂ ಮಂದಿರಗಳಿವೆ? ಕರ್ನಾಟಕದಲ್ಲಿ ಎಷ್ಟಿದೆ?

ಭಾರತದ ರಾಜ್ಯಗಳಲ್ಲಿ ಎಷ್ಟು ಹಿಂದೂ ದೇವಾಲಯಗಳಿವೆ ಎಂಬ ಅಂಕಿಅಂಶಗಳ ಬಗ್ಗೆ ನಿಮಗೆ ಗೊತ್ತಿದ್ಯಾ? ಇಲ್ಲಿದೆ ಆ ಕುರಿತು ಸಂಪೂರ್ಣ ಮಾಹಿತಿ.

2 Min read
Pavna Das
Published : Jun 07 2025, 07:47 PM IST
Share this Photo Gallery
  • FB
  • TW
  • Linkdin
  • Whatsapp
111
Image Credit : Google

ಭಾರತವು ದೇಗುಲಗಳ ತವರೂರು, ಇಲ್ಲಿ ಸಾಕಷ್ಟು ದೇವಾಲಯಗಳು ಇವೆ. ಭಾರತದಲ್ಲಿ ಯಾವ ರಾಜ್ಯಗಳಲ್ಲಿ ಎಷ್ಟು ದೇವಾಲಯಗಳಿವೆ. ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳಿವೆ (Hindu Temples) ಇಲ್ಲಿದೆ ಮಾಹಿತಿ.

211
Image Credit : Getty

ಬಿಹಾರದಲ್ಲಿ 29748 ಹಿಂದೂ ದೇವಾಲಯಗಳಿವೆ. ಸಂಕಟ ಮೋಚನ ಹನುಮಾನ್ ಮಂದಿರ, ಮುಂಡೇಶ್ವರಿ ದೇಗುಲ, ವಿಷ್ಣುಪಾದ ದೇವಾಲಯ, ತಾಯಿ ಶೀತಲ ದೇಗುಲ, ಮಹಾವೀರ ದೇಗುಲ ಸೇರಿ ಹಲವು ದೇಗುಲಗಳು ಇಲ್ಲಿವೆ.

Related Articles

Related image1
Tirumala Timmappa Temple: ಈ ಹೊಸ ರೂಲ್ಸ್‌ ಫಾಲೋ ಮಾಡಿದ್ರೆ ಮಾತ್ರ ತಿರುಪತಿ ತಿಮ್ಮಪ್ಪನ ದರ್ಶನ ಸಿಗೋದು!
Related image2
Karni Mata Temple: 30,000ಕ್ಕೂ ಹೆಚ್ಚು ಇಲಿಗಳಿರುವ ಈ ಮಂದಿರ ರಹಸ್ಯವೇನು?
311
Image Credit : stockPhoto

ಒಡಿಶಾದಲ್ಲಿ 30,877 ದೇವಾಲಯಗಳಿವೆ. ಪುರಿ ಜಗನ್ನಾಥ ದೇವಸ್ಥಾನ, ಕೋಣರ್ಕ್ ಸೂರ್ಯ ದೇವಾಲಯ, ಬ್ರಹ್ಮೇಶ್ವರ ದೇವಾಲಯ, ಮುಕ್ತೇಶ್ವರ ದೇವಾಲಯ, ಲಿಂಗರಾಜ್ ದೇವಾಲಯ ಇಲ್ಲಿವ ಪ್ರಮುಖ ದೇವಾಲಯಗಳಾಗಿವೆ.

411
Image Credit : Social Media

ಉತ್ತರ ಪ್ರದೇಶದಲ್ಲಿ ಈ ಸಂಖ್ಯೆ 37,518 ದೇವಾಲಯಗಳಿವೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ, ಅಯೋಧ್ಯೆಯ ರಾಮಜನ್ಮಭೂಮಿ (Ayodhya Ramajanma Bhoomi) ದೇವಾಲಯ, ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯ, ವೃಂದಾವನದ ಬಂಕೆ ಬಿಹಾರಿ ದೇವಾಲಯ ಈ ರಾಜ್ಯದ ಪ್ರಮುಖ ದೇಗುಲಗಳು. ಇನ್ನು ಹಲವು ಜನಪ್ರಿಯ ದೇಗುಲಗಳು ಉತ್ತರ ಪ್ರದೇಶದಲ್ಲಿವೆ.

511
Image Credit : Asianet News

ರಾಜಸ್ಥಾನದಲ್ಲಿ 39,352 ಹಿಂದೂ ದೇವಾಲಯಗಳಿವೆ. ಉದಯಪುರದ ಎಕ್ಲಿಂಗ್ಜಿ ದೇವಾಲಯ, ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯ, ದೇಶ್ನೋಕ್‌ನಲ್ಲಿರುವ ಕರ್ಣಿ ಮಾತಾ ದೇವಾಲಯ (Karni Mata Temple) ಮತ್ತು ಜೈಪುರದ ಬಿರ್ಲಾ ಮಂದಿರ. ಕರೌಲಿಯಲ್ಲಿರುವ ಮೆಹಂದಿಪುರ ಬಾಲಾಜಿ ದೇವಾಲಯ, ಜೈಪುರದ ಗಲ್ತಾಜಿ ದೇವಾಲಯ ಮತ್ತು ಜಗತ್‌ನಲ್ಲಿರುವ ಅಂಬಿಕಾ ಮಾತಾ ದೇವಾಲಯಗಳು ಇತರ ಪ್ರಮುಖ ದೇವಾಲಯಗಳಾಗಿವೆ.

611
Image Credit : our own

ಆಂಧ್ರಪ್ರದೇಶದಲ್ಲಿ 47,152 ಹಿಂದೂ ದೇವಾಲಯಗಳಿವೆ. ತಿರುಪತಿಯ ತಿರುಮಲ ವೆಂಕಟೇಶ್ವರ (Tirupati Tirumala Temple) ದೇವಸ್ಥಾನ, ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನ, ವಿಜಯವಾಡದ ಕನಕ ದುರ್ಗ ದೇವಸ್ಥಾನ, ಅಹೋಬಿಲಂ ದೇವಸ್ಥಾನ, ಮತ್ತು ಶ್ರೀಕಾಳಹಸ್ತಿ ದೇವಸ್ಥಾನ. ಸಿಂಹಾಚಲಂ ದೇವಸ್ಥಾನ, ಭದ್ರಾಚಲಂ ದೇವಸ್ಥಾನ, ಲೇಪಾಕ್ಷಿ ದೇಗುಲಗಳು ಪ್ರಮುಖವಾಗಿವೆ.

711
Image Credit : ANI

ಸೋಮನಾಥ ದೇವಾಲಯ, ದ್ವಾರಕಾಧೀಶ್ ದೇವಾಲಯ, ಅಂಬಾಜಿ ದೇವಾಲಯ, ಮೊಧೇರಾ ಸೂರ್ಯ ದೇವಾಲಯ, ಮತ್ತು ಅಕ್ಷರಧಾಮ ದೇವಾಲಯ ಸೇರಿ ಗುಜರಾತ್‌ನಲ್ಲಿ 49,995 ಹಿಂದೂ ದೇವಾಲಯಗಳಿವೆ.

811
Image Credit : Asianet News

ಪಶ್ಚಿಮ ಬಂಗಾಳದಲ್ಲಿ 53,857 ದೇವಾಲಯಗಳಿವೆ. ಮದನ್ ಮೋಹನ್ ದೇವಸ್ಥಾನ, ಜಲಪೇಶ್ ದೇವಸ್ಥಾನ, ತಾರಾಪೀಠ ದೇವಸ್ಥಾನ, ಕಿರೀಟೇಶ್ವರಿ ದೇವಸ್ಥಾನ, ಬಿಷ್ಣುಪುರ ಟೆರಾಕೋಟಾ ದೇವಸ್ಥಾನಗಳು, ಮಾಯಾಪುರ ಚಂದ್ರೋದಯ ಮಂದಿರ, ನಬ ಕೈಲಾಸ ಮಂದಿರ, ಠಾಕೂರ್ಬರಿ ಮತುವ ಧಾಮ್, ತಾರಕೇಶ್ವರ ದೇವಸ್ಥಾನ, ಹಂಗಸೇಶ್ವರಿ ದೇವಸ್ಥಾನ, ಬರ್ಗಭೀಮ ದೇವಸ್ಥಾನ, ಬೇಲೂರು ಮಠ, ಕಾಳಿಘಾಟ್ ದೇವಸ್ಥಾನ ಇಲ್ಲಿನ ಪ್ರಮುಖ ದೇವಾಲಯಗಳಿವೆ.

911
Image Credit : Getty

ಕರ್ನಾಟಕದಲ್ಲಿರುವ ಹಿಂದೂ ದೇವಾಲಯಗಳ ಸಂಖ್ಯೆ 61,232. ವಿರೂಪಾಕ್ಷ ದೇವಸ್ಥಾನ (ಹಂಪಿ), ಚೆನ್ನಕೇಶವ ದೇವಸ್ಥಾನ (ಬೇಲೂರು), ಹೊಯ್ಸಳೇಶ್ವರ ದೇವಸ್ಥಾನ (ಹಳೇಬೀಡು), ಮತ್ತು ಮುರುಡೇಶ್ವರ ದೇವಸ್ಥಾನ (ಮುರುಡೇಶ್ವರ). ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಶೃಂಗೇರಿ ಶಾರದಾಂಬಾ ದೇವಸ್ಥಾನ, ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ (Kukke Subramanya), ಕದ್ರಿ ಮಂಜುನಾಥ ದೇವಾಲಯ ಇತರ ಗಮನಾರ್ಹ ದೇವಾಲಯಗಳಾಗಿವೆ.

1011
Image Credit : wikipedia

ಮಹಾರಾಷ್ಟ್ರದಲ್ಲಿ 77,283 ದೇವಾಲಯಗಳಿವೆ. ಶಿರಡಿ ಸಾಯಿ ಬಾಬ ದೇವಸ್ಥಾನ, ಗಣಪತಿಪುಲೆ, ಶನಿ ಸಿಂಗ್ನಾಪುರ್, ತ್ರಿಯಂಬಕೇಶ್ವರ ದೇವಾಲಯ, ಭೀಮಶಂಕರ ದೇವಾಲಯ, ಸಿದ್ದಿ ವಿನಾಯಕ ದೇವಾಲಯ, ಹರಿಹರೇಶ್ವರ ದೇವಾಲಯ, ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯ, ಗೃಶ್ನೇಶ್ವರ ಜ್ಯೋತಿರ್ಲಿಂಗ ಇಲ್ಲಿನ ಪ್ರಮುಖ ದೇಗುಲಗಳು

1111
Image Credit : stockPhoto

ತಮಿಳುನಾಡಿನಲ್ಲಿ ಅತಿ ಹೆಚ್ಚು ಹಿಂದೂ ದೇವಾಲಯಗಳಿವೆ. ಇಲ್ಲಿ ಸುಮಾರು 78,154 ದೇಗುಲಗಳಿಗೆ. ಮಧುರೆ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಮಹಾಬಲಿಪುರಂ, ತಂಜಾವೂರಿನ ಬೃಹದೀಶ್ವರ ದೇವಸ್ಥಾನ ಮತ್ತು ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನ ಸೇರಿ ಅದೆಷ್ಟೋ ಐತಿಹಾಸಿಕ ಪ್ರಸಿದ್ಧ ಪಡೆದಿರುವ ದೇವಾಲಯಗಳಿವೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ದೇವಸ್ಥಾನ
ಭಾರತ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved