ಚುಮು ಚುಮು ಚಳಿಯಲ್ಲಿ, ಮಂಜಿನಡಿಯಲ್ಲಿ, ನಿಮಗೆ ಗೊತ್ತಿರದ ಇಟಲಿಯ ಟುರಿನ್ ಇದು!
ನೀವು ವಿದೇಶ ಪ್ರವಾಸ ಮಾಡಲು ಇಷ್ಟಪಡೋರು ಆಗಿದ್ದು, ಪ್ರತಿ ಬಾರಿ ಹೊಸ ಹೊಸ ತಾಣಗಳನ್ನು ಅನ್ವೇಷಣೆ ಮಾಡುವವರಾಗಿದ್ರೆ ಈ ಬಾರಿ ಟುರಿನ್ ಗೆ ಭೇಟಿ ನೀಡಿ. ಟುರಿನ್ ಎಂಬ ಮಾಂತ್ರಿಕ ತಾಣ ಚಳಿಗಾಲದಲ್ಲಿ ಒಂದು ಅದ್ಭುತ ಮಾಯಾ ಲೋಕವನ್ನೇ ಸೃಷ್ಟಿಸುತ್ತೆ. ಈ ತಾಣದ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ…
PHOTO COURTESY: Anirudh Bharadwaj
ಟುರಿನ್ (turin), ಇಟಲಿಯ ಶ್ರೀಮಂತ ಇತಿಹಾಸ (rich history), ಸುಂದರವಾದ ವಾಸ್ತುಶಿಲ್ಪ ಮತ್ತು ರುಚಿ ರುಚಿಯಾದ ಆಹಾರಕ್ಕೆ ಹೆಸರುವಾಸಿಯಾದ ಸುಂದರವಾದ ಮಾಂತ್ರಿಕ ಶಕ್ತಿಯುಳ್ಳ ನಗರ. ಟುರಿನ್ ಬಗ್ಗೆ ಹೇಳಬೇಕಾದ ವಿಷಯಗಳು ಹಲವಿವೆ. ಇಲ್ಲಿನ ಜನರ ಲವ್ ಲೈಫ್, ಸಂಸ್ಕೃತಿ, ಸುಂದರ ತಾಣಗಳು, ಹಿಮಚ್ಚಾಧಿತ ಪ್ರದೇಶಗಳು ಕಣ್ಣಿಗೆ ಹಬ್ಬ ನೀಡುತ್ತೆ.
ಮೊದಲನೆಯದಾಗಿ, ಟುರಿನ್ ನಲ್ಲಿನ ಡೇಟಿಂಗ್ ಸಂಸ್ಕೃತಿ ಇತರೆ ಇಟಾಲಿಯನ್ ನಗರಗಳಿಗೆ ಹೋಲುತ್ತದೆ. ಇಟಲಿಯನ್ನರು ಯಾವಾಗಲೂ ತಮ್ಮ ರೊಮ್ಯಾಂಟಿಕ್ ಲವ್ ಲೈಫ್ (romantic love life), ಸಂಸ್ಕೃತಿಗೆ ಹೆಸರು ವಾಸಿ ಅಲ್ವಾ? ಟುರಿನ್ ಇದಕ್ಕೆ ಹೊರತಾಗಿಲ್ಲ. ಹೊಸ ಹೊಸ ಜನರನ್ನು ಭೇಟಿಯಾಗಲು ಮತ್ತು ರೊಮ್ಯಾಂಟಿಕ್ ರಿಲೇಶನ್ ಶಿಪ್ ಗೆ ಸಂಗಾತಿಯನ್ನು ಅನ್ವೇಷಿಸಲು ನೀವು ಇಲ್ಲಿ ಸಾಕಷ್ಟು ಅವಕಾಶ ಪಡೆಯಬಹುದು..
ಟುರಿನ್ ಎಂಬ ಮಾಯಾನಗರಿಯಲ್ಲಿ ಅನೇಕ ರೊಮ್ಯಾಂಟಿಕ್ ಸ್ಥಳಗಳಿವೆ (romantic places), ಅಲ್ಲಿ ಕಪಲ್ಸ್ ಯಾವ ಅಂಜಿಕೆಯೂ ಇಲ್ಲ ಜೊತೆಯಾಗಿ ಕ್ವಾಲಿಟಿ ಸಮಯ ಕಳೆಯಬಹುದು. ಉದಾಹರಣೆಗೆ, ಪಿಯಾಝಾ ಸ್ಯಾನ್ ಕಾರ್ಲೊ ಅನೇಕ ಕೆಫೆಗಳು ಮತ್ತು ರೆಸ್ಟೋರೆಂಟ್ ಗಳನ್ನು ಹೊಂದಿರುವ ಸುಂದರವಾದ ಸ್ಕ್ವೇರ್ ಗಳಿವೆ. ಇವು ರೊಮ್ಯಾಂಟಿಕ್ ಈವ್ನಿಂಗ್ ಡೇಟಿಂಗ್ ಗೆ ಹೇಳಿ ಮಾಡಿಸಿದ ಸ್ಥಳ. ಪಾರ್ಕೊ ಡೆಲ್ ವ್ಯಾಲೆಂಟಿನೊದಂತಹ ನಗರದ ಅನೇಕ ಉದ್ಯಾನವನಗಳು ಜೋಡಿ ಹಕ್ಕಿಗಳಿಗೆ ಒಟ್ಟಿಗೆ ಸಮಯ ಕಳೆಯಲು ಜನಪ್ರಿಯ ಸ್ಥಳಗಳಾಗಿವೆ.
ಟುರಿನ್ ನ ಲವ್ ಲೈಫ್ ನ ಮತ್ತೊಂದು ಅಂಶವೆಂದರೆ ಅದರ ರೋಮಾಂಚಕ ನೈಟ್ ಲೈಫ್ (night life of turin) ದೃಶ್ಯ. ನಗರದಲ್ಲಿ ಅನೇಕ ಬಾರ್ಸ್ ಮತ್ತು ಕ್ಲಬ್ ಗಳಿವೆ, ಅವು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯ. ನೀವು ನಿಮ್ಮ ಸಂಗಾತಿ ಜೊತೆಗೆ ವೈನ್ ಸಿಪ್ ಮಾಡುವ ರಾತ್ರಿ ಕಳೆಯುವ ಯೋಚನೆ ಮಾಡಿದ್ರೆ ಇಲ್ಲಿ ನೀವು ಅಂತಹ ಸಾಕಷ್ಟು ತಾಣಗಳನ್ನು ಕಾಣಬಹುದು.
ಒಟ್ಟಾರೆಯಾಗಿ, ಟುರಿನ್ ನ ಪ್ರೇಮ ಜೀವನವು ಶ್ರೀಮಂತ ಮತ್ತು ವೈವಿಧ್ಯಮಯ (rich and diverse) . ನೀವು ಸ್ಥಳೀಯರಾಗಿರಲಿ ಅಥವಾ ಪ್ರವಾಸಿಗರೂ ಆಗಿರಲಿ, ಈ ಸುಂದರವಾದ ಇಟಾಲಿಯನ್ ನಗರದಲ್ಲಿ ಜೋಡಿ ಹುಡುಕೋದೇನೂ ಕಷ್ಟದ ಕೆಲಸ ಅಲ್ಲ. ಈ ತಾಣಕ್ಕೆ ನೀವು ಚಳಿಗಾಲದಲ್ಲಿ ಭೇಟಿ ನೀಡಿದರೆ ಅದರ ಮಜಾನೆ ಬೇರೆಯಾಗಿರುತ್ತೆ.
ಟುರಿನ್ ಇಟಲಿಯ ಮೊದಲ ರಾಜಧಾನಿಯಾಗಿತ್ತು ( first capital of Italy) : ರಾಜಧಾನಿಯನ್ನು ಫ್ಲಾರೆನ್ಸ್ ಗೆ ಮತ್ತು ನಂತರ ರೋಮ್ ಗೆ ಸ್ಥಳಾಂತರಿಸುವ ಮೊದಲು 1861 ರಲ್ಲಿ ಟುರಿನ್ ಏಕೀಕೃತ ಇಟಲಿಯ ಮೊದಲ ರಾಜಧಾನಿಯಾಗಿತ್ತು.
ಇದು ಪವಿತ್ರ ಕವಚದ (Holy Shroud) ನೆಲೆಯಾಗಿದೆ:
ಯೇಸು ಶಿಲುಬೆಗೇರಿದ ನಂತರ ಅವರ ದೇಹವನ್ನು ಸುತ್ತಲೂ ಬಳಸಲಾಗಿದೆ ಎಂದು ಅನೇಕರು ನಂಬಿರುವ ಪವಿತ್ರ ಕವರ್, ಟುರಿನ್ ನ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ನ ಕ್ಯಾಥೆಡ್ರಲ್ ನಲ್ಲಿದೆ. ಇದನ್ನು ಬಹಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ.
ಚಾಕಲೇಟ್ ಪ್ರಿಯರಿಗೆ ಬೆಸ್ಟ್:
ಟುರಿನ್ ಚಾಕೊಲೇಟ್ ತಯಾರಿಕೆಯ (chocolate making) ದೀರ್ಘ ಇತಿಹಾಸವನ್ನು ಹೊಂದಿದೆ, ಮತ್ತು ಜನಪ್ರಿಯ ಹ್ಯಾಝೆಲ್ನಟ್ ಚಾಕೊಲೇಟ್ ಸ್ಪ್ರೆಡ್ (hazelnut chocolate spread) ತಯಾರಾದದ್ದು ಇಲ್ಲಿಯೆ. ನಗರವು ಅನೇಕ ಐತಿಹಾಸಿಕ ಚಾಕೊಲೇಟ್ ಅಂಗಡಿಗಳು ಮತ್ತು ಕಾರ್ಖಾನೆಗಳಿಗೆ ನೆಲೆಯಾಗಿದೆ. ಇದರಲ್ಲಿ ಕೆಫೆ ಅಲ್ ಬೈಸೆರಿನ್ ಕೂಡ ಸೇರಿದೆ, ಇದು 1763 ರಿಂದ ತನ್ನ ಪ್ರಸಿದ್ಧ ಹಾಟ್ ಚಾಕೊಲೇಟ್ ಅನ್ನು ನೀಡುತ್ತಿದೆ.
ಚಳಿಗಾಲದ ಒಲಿಂಪಿಕ್ಸ್ ಗೆ ಆತಿಥ್ಯ:
ಟುರಿನ್ 2006 ರ ಚಳಿಗಾಲದ ಒಲಿಂಪಿಕ್ಸ್ ಗೆ (Winter Olympics) ಆತಿಥ್ಯ ವಹಿಸಿತು, ಇದು ನಗರಕ್ಕೆ ಗಮನಾರ್ಹ ಹೂಡಿಕೆ ಮತ್ತು ಅಭಿವೃದ್ಧಿಯನ್ನು ತರಲು ಸಹಾಯವಾಯಿತು. ಒಲಿಂಪಿಕ್ ಕ್ರೀಡಾಂಗಣ ಮತ್ತು ಪಲವೇಲಾ ಅಖಾಡ ಸೇರಿ ಅನೇಕ ಒಲಿಂಪಿಕ್ ಸ್ಥಳಗಳು ಇಂದಿಗೂ ಬಳಕೆಯಲ್ಲಿವೆ.
ಈಜಿಪ್ಟಿನ ಕಲಾಕೃತಿಗಳ ಅತಿದೊಡ್ಡ ಸಂಗ್ರಹ ಇಲ್ಲಿದೆ:
ಟುರಿನ್ ನ ಈಜಿಪ್ಟ್ ವಸ್ತುಸಂಗ್ರಹಾಲಯವು ಇಟಲಿಯಲ್ಲಿ ಈಜಿಪ್ಟ್ ಕಲಾಕೃತಿಗಳ (Egyptian artifacts) ಅತಿದೊಡ್ಡ ಸಂಗ್ರಹಕ್ಕೆ ನೆಲೆಯಾಗಿದೆ ಮತ್ತು ವಿಶ್ವದ ಅತ್ಯಂತ ವ್ಯಾಪಕವಾದ ಸಂಗ್ರಹಗಳಲ್ಲಿ ಒಂದಾಗಿದೆ. ಇದು ಪ್ರಾಚೀನ ಈಜಿಪ್ಟ್ ನ ಮಮ್ಮಿಗಳು, ಪ್ರತಿಮೆಗಳು ಮತ್ತು ಇತರ ಕಲಾಕೃತಿಗಳನ್ನು ಒಳಗೊಂಡಿದೆ.
ಪೋಟೋ ಕ್ರೆಡಿಟ್: ಅನಿರುದ್ಧ ಭಾರದ್ವಾಜ್