ನಾಲ್ಕು ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು- ಕರ್ನಾಟಕದ ಈ ಭಾಗಕ್ಕೂ ಬರಲಿದೆ ಟ್ರೈನ್
ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳನ್ನು ಸಂಪರ್ಕಿಸುವ ನಾಲ್ಕು ಹೊಸ ವಂದೇ ಭಾರತ್ ರೈಲುಗಳು ಪುಣೆಯಿಂದ ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ. ಈ ರೈಲುಗಳು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.
ನಾಲ್ಕು ವಂದೇ ಭಾರತ್ ರೈಲುಗಳು ಮಹಾರಾಷ್ಟ್ರದ ಪುಣೆಯ ನಗರದಿಂದ ಸಂಚರಿಸಲಿವೆ. ಈ ಮೂಲಕ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಗುಜರಾತ್ ರಾಜ್ಯದ ಪ್ರಮುಖ ನಗರಗಳನ್ನು ಸಂಪರ್ಕಿಸಲಿವೆ. ಈ ನಾಲ್ಕು ಟ್ರೈನ್‌ಗಳು ಅಂತರರಾಜ್ಯ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಸದ್ಯ ಎರಡು ವಂದೇ ಭಾರತ್ ರೈಲುಗಳು ಮಹಾರಾಷ್ಟ್ರದ ಪುಣೆ ಟು ಕೋಲ್ಹಾಪುರ ಮತ್ತು ಹುಬ್ಬಳ್ಳಿ ಟು ಮುಂಬೈ ಸಂಚರಿಸತ್ತಿವೆ. ಸೋಲಾಪುರ ಮತ್ತು ಪುಣೆ ಮಾರ್ಗವಾಗಿ ಸಂಚರಿಸಲಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ 4 ರೈಲುಗಳು
1.ಪುಣೆ ಟು ಶೇಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್
2.ಪುಣೆ ಟು ವಡೋದರಾ ವಂದೇ ಭಾರತ್ ಎಕ್ಸ್‌ಪ್ರೆಸ್
3.ಪುಣೆ ಟು ಸಿಕಂದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್
4.ಪುಣೆ ಟು ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್
Vande Bharath
ಪುಣೆ-ಕೋಲ್ಹಾಪುರ ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಾರಕ್ಕೆ ಮೂರು ದಿನ ಸಂಚರಿಸುತ್ತಿದೆ. ಬುಧವಾರ, ಶುಕ್ರವಾರ ಮತ್ತು ಭಾನುವಾರ ಮೂರು ದಿನ ರೈಲು ಸಂಚರಿಸುತ್ತಿದ್ದು, ಎಸಿ ಚೇರ್ ಕಾರ್ ಆಸನದ ಟಿಕೆಟ್ ದರ 560 ರೂ. ಮತ್ತು Executive AC Chair Car ಟಿಕೆಟ್ ದರ 1,135 ರೂಪಾಯಿ ಇದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿಶೇಷತೆ ಏನಂದ್ರೆ ದೂರ ಪ್ರಯಾಣವನ್ನು ಕಡಿಮೆ ಅವಧಿಯಲ್ಲಿ ಪ್ರಯಾಣಿಸುತ್ತದೆ. ಸಮಯ ಉಳಿತಾಯ, ರೈಲಿನ ವಿನ್ಯಾಸ ಮತ್ತು ಅಲ್ಲಿ ನೀಡಲಾಗುವ ಆಹಾರದಿಂದ ವಂದೇ ಭಾರತ್ ರೈಲುಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ.
ಪುಣೆಯಿಂದ ಶೇಗಾಂವ್, ಸಿಕಂದರಾಬಾದ್, ವಡೋದರಾ ಮತ್ತು ಬೆಳಗಾವಿಯಂತಹ ವಿವಿಧ ಭಾಗಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ವರದಿಯಾಗಿದ್ದು, ಯಾವಾಗಿನಿಂದ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ಪುಣೆ ಮತ್ತು ಹುಬ್ಬಳ್ಳಿ ನಡುವಿನ ಅಂತರವನ್ನು ಕ್ರಮಿಸಲು ಕೇವಲ 8 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳು ಈ ದೂರವನ್ನು ಕ್ರಮಿಸಲು 12-13 ಗಂಟೆಗಳನ್ನು ತೆಗೆದುಕೊಳ್ಳುತ್ತವೆ.