MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಮೊದಲ ಬಾರಿಗೆ ಲೇಹ್-ಲಡಾಖ್ ಟ್ರಿಪ್ ಮಾಡ್ತೀದಿರಾ? ಹಾಗಿದ್ರೆ ಇಲ್ಲಿ ಕೇಳಿ

ಮೊದಲ ಬಾರಿಗೆ ಲೇಹ್-ಲಡಾಖ್ ಟ್ರಿಪ್ ಮಾಡ್ತೀದಿರಾ? ಹಾಗಿದ್ರೆ ಇಲ್ಲಿ ಕೇಳಿ

ಲೇಹ್ ಲಡಾಖ್ ರೋಡ್ ಟ್ರಿಪ್ (Leh Ladakh road trip) ಅಂದ್ರೇನೆ ಏನೋ ರೋಮಾಂಚನವಾಗುತ್ತೆ. ಸುಂದರವಾದ ರಸ್ತೆಗಳು, ಇಕ್ಕೆಲಗಳಲ್ಲಿ ಹಿಮಚ್ಚಾಧಿತ ಬೆಟ್ಟಗಳು, ಬೈಕ್ ನಲ್ಲಿ ರೋಡ್ ಟ್ರಿಪ್, ವಾವ್… ಎಂತಹ ಸುಂದರ ಕಲ್ಪನೆಗಳು ಅಲ್ವಾ? ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಒಂದು ಬಾರಿಯಾದರೂ ಲೇಹ್ - ಲಡಾಕ್ ಟ್ರಿಪ್ (Leh Ladakh trip) ಮಾಡಲು ಬಯಸುತ್ತಾರೆ. ನೀವು ಲೇಹ್ - ಲಡಾಕ್ ಟ್ರಿಪ್ ಮಾಡಲು ಬಯಸಿದ್ದೀರಾ? ಹಾಗಿದ್ರೆ ಇದನ್ನ ನೀವು ಓದಲೇ ಬೇಕು.

2 Min read
Suvarna News
Published : Jun 06 2022, 07:02 PM IST
Share this Photo Gallery
  • FB
  • TW
  • Linkdin
  • Whatsapp
110

ದೇಶದ ವಿವಿಧ ಪ್ರದೇಶಗಳು ಬಿಸಿಲಿನಿಂದ ಸುಡುತ್ತಿದೆ. ಹಲವೆಡೆ ತಾಪಮಾನವು 40 ಕ್ಕಿಂತ ಹೆಚ್ಚಾಗಿರುತ್ತೆ. ಈ ಬಾರಿ ಜೂನ್ ತಿಂಗಳು ಕೂಡ ಇದೇ ರೀತಿ ಸೂರ್ಯನ ಕೋಪ ಮುಂದುವರೆಯುತ್ತೆ ಎನ್ನಲಾಗುತ್ತೆ. ಹೀಗಿರುವಾಗ ಹೆಚ್ಚಿನ ಜನರು, ಟ್ರಾವೆಲರ್ ಗಳು ಮೌಂಟೇನ್ ಕಡೆ ಟ್ರಾವೆಲ್ ಮಾಡ್ತಾರೆ. ಎತ್ತರ ಎತ್ತರವಾದ ಹಸಿರು ಸಿರಿಗಳ ಪರ್ವತಗಳು ಸುಂದರವಾಗಿದ್ದು, ಮಾಲಿನ್ಯ ಮುಕ್ತವಾಗಿರುತ್ತೆ. ಅಲ್ಲಿಗೆ ಟ್ರಾವೆಲ್ ಮಾಡೋದು ಎಂದರೆ ಸಂಪೂರ್ಣ ರಿಲ್ಯಾಕ್ಸ್ ನೀಡುತ್ತದೆ. ಇಂತಹ ಸುಂದರವಾದ ಸ್ಥಳಗಳಲ್ಲಿ ಲೇಹ್-ಲಡಾಖ್ ಕೂಡ ಒಂದು, ಇದು ಇತ್ತೀಚಿನ ದಿನಗಳಲ್ಲಿ ರಜಾದಿನಗಳಲ್ಲಿ ಬೈಕ್ ರೈಡಿಂಗ್ (bike riding) ಮಾಡ್ಕೊಂಡು ಹೋಗೋದು ಒಂದು ಕ್ರೇಜ್ ಆಗಿದೆ.

210

ಲಡಾಖ್ ಬಹಳ ಸುಂದರವಾದ ಪ್ರವಾಸಿ ತಾಣವಾಗಿದೆ (tourist place), ಆದರೆ ಅದರ ಎತ್ತರದ ಮತ್ತು ತಂಪಾದ ಭೂಪ್ರದೇಶದಿಂದಾಗಿ, ಮೊದಲ ಬಾರಿಗೆ ಇಲ್ಲಿಗೆ ಹೋಗೋರಿಗೆ ಅನೇಕ ವಿಷಯಗಳು ತಿಳಿದಿರೋದಿಲ್ಲ. ನೀವು ಈ ವಿಷಯಗಳನ್ನು ಮುಂಚಿತವಾಗಿ ತಿಳಿದಿದ್ದರೆ, ನಿಮ್ಮ ಪ್ರಯಾಣವು ಸುಲಭ ಮತ್ತು ಸುರಕ್ಷಿತವಾಗಿರುತ್ತೆ. ನೀಲಾಕಾಶ, ವಿಶಾಲವಾದ ಪರ್ವತಗಳು ಮತ್ತು ಸರೋವರದ ಸ್ಪಷ್ಟ ನೀಲಿ ನೀರು ಇವೆಲ್ಲವೂ ನೀವು ಲಡಾಖ್ನಲ್ಲಿ ಮಾತ್ರ ನೋಡಬಹುದಾದ ಅದ್ಭುತಗಳಾಗಿವೆ. ಲಡಾಖ್ ಪ್ರವಾಸಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನಾವು ಇಲ್ಲಿ ಹೇಳ್ತೀವಿ ಕೇಳಿ…

310

ನೀವು ಮೊದಲ ಬಾರಿಗೆ ಲಡಾಖ್ ಗೆ ಹೋಗುತ್ತಿದ್ದರೆ, ಬಂದ ತಕ್ಷಣ ವಾಯುವಿಹಾರಕ್ಕೆ ಹೋಗಬೇಡಿ. ಎತ್ತರದ ಪ್ರದೇಶದಿಂದಾಗಿ, ಅನೇಕ ಬಾರಿ ಜನರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ತೀವ್ರವಾದ ಅನಾರೋಗ್ಯ ಕಾಡುತ್ತದೆ. ಆದ್ದರಿಂದ ದೇಹ ಪರಿಸರಕ್ಕೆ ಹೊಂದಿಕೊಳ್ಳಲು ಎರಡು ದಿನಗಳ ವಿಶ್ರಾಂತಿಯನ್ನು ತೆಗೆದುಕೊಂಡು ನಂತರವೇ ಹೊರಗೆ ಹೋಗಿ. ಈ ಸಮಸ್ಯೆಯು ಎತ್ತರದ ಪ್ರದೇಶಗಳಿಗೆ ಹೋಗುವುದರಿಂದ ಉಂಟಾಗುತ್ತದೆ, ಆದ್ದರಿಂದ ಇಲ್ಲಿ ನೀವು ಕೆಮಿಸ್ಟ್ ನಿಂದ ಆಮ್ಲಜನಕ ಸಿಲಿಂಡರ್ ಪಡೆದುಕೊಂಡು ಹೋಗಬಹುದು, ಅದಕ್ಕೆ ಸುಮಾರು 500 ರೂಪಾಯಿ ಆಗಿರುತ್ತೆ.

410

ಲಡಾಖ್ನ ಹವಾಮಾನವು ನಿಮಿಷಗಳಲ್ಲಿ ಬದಲಾಗುತ್ತೆ. ನೀವು ಒಂದು ಕ್ಷಣ ಬೆಚ್ಚಗಾಗುತ್ತೀರಿ, ಮತ್ತೊಂದು ಕ್ಷಣದಲ್ಲಿ ತಂಪಾದ ಗಾಳಿ ಬೀಸುತ್ತದೆ. ಹೆಚ್ಚಿನ ಜನರು ಈ ರೀತಿಯ ಶೀತ ಹವಾಮಾನಕ್ಕೆ ಒಗ್ಗಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನೀವು ಪ್ರವಾಸದಲ್ಲಿ ಅನಾರೋಗ್ಯಕ್ಕೆ ಒಳಗಾಗದಂತೆ ಜಾಗರೂಕರಾಗಿರಿ. ನಿಮ್ಮ ದೇಹವು ಶೀತ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಮಾಡಲು ಒಂದು ದಿನ ಲೇಹ್ ನಲ್ಲಿಯೇ ಇರಿ. ಇದು ನಿಮ್ಮ ದೇಹವು ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.

510

ನೀವು ಮೊದಲ ಬಾರಿಗೆ ಲಡಾಖ್ ಗೆ ಬಂದಿದ್ದರೆ, ತುಕ್ಪಾ ಮತ್ತು ಬಾರ್ಲಿಯಿಂದ ತಯಾರಿಸಿದ ಬಿಯರ್ ಚಾಂಗ್ನಂತಹ ಸ್ಥಳೀಯ ಆಹಾರವನ್ನು ಕುಡಿಯುವುದನ್ನು ತಪ್ಪಿಸಿ. ಹೊಸ ರೆಸಿಪಿಗಳನ್ನು ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ ನಿಮಗೆ ಸ್ಟಮಕ್ ಅಪ್ಸೆಟ್ ಆಗಬಹುದು. ಆದುದರಿಂದ ನಿಧಾನವಾಗಿ ಅವುಗಳನ್ನು ಸೇವಿಸಿದರೆ ಉತ್ತಮ. 

610

ಆಹಾರ ಮತ್ತು ಹೋಟೆಲ್ಗಳ ಹೊರತಾಗಿ, ಲಡಾಖ್ನಲ್ಲಿ ಸುತ್ತಾಡಲು ಸಾಕಷ್ಟು ಹಣ ಖರ್ಚಾಗುತ್ತದೆ, ನೀವು ಹಣವನ್ನು ಉಳಿಸಲು ಬಯಸಿದರೆ, ನೀವು ಶೇರ್ ಟ್ಯಾಕ್ಸಿಯನ್ನು (share taxi) ಮಾಡಬಹುದು. ಆದರೆ ಈ ಟ್ಯಾಕ್ಸಿಗಳು ಹೆಚ್ಚು ದೂರವನ್ನು ಕ್ರಮಿಸುವುದಿಲ್ಲ ಆದರೆ ಸುತ್ತಾಡಲು ಅತ್ಯುತ್ತಮವಾಗಿವೆ. ಜೊತೆಗೆ ಹಣ ಸಹ ಉಳಿಯುತ್ತೆ.

710

ಲಡಾಖ್ ನಲ್ಲಿರುವಾಗ ಇಡೀ ದೇಹವನ್ನು ಮುಚ್ಚುವಂತಹ ಬಟ್ಟೆಗಳನ್ನು ಧರಿಸಿ. ಬರಿ ಪಾದಗಳು, ಭುಜಗಳು ಅಥವಾ ಇತರ ದೇಹದ ಭಾಗಗಳನ್ನು ಅನಾವಶ್ಯಕವಾಗಿ ತೆರೆದಿಡಬೇಡಿ, ಸಂಪೂರ್ಣವಾಗಿ ದೇಹವನ್ನು ಮುಚ್ಚಿ. ಅರ್ಧ ಬಟ್ಟೆಗಳನ್ನು ಧರಿಸುವುದನ್ನು ಇಲ್ಲಿನ ಸ್ಥಳೀಯರು ಅದನ್ನು ಕೆಟ್ಟದ್ದೆಂದು ಪರಿಗಣಿಸುತ್ತಾರೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳಲ್ಲಿ ಇದನ್ನು ಮಾಡುವುದನ್ನು ತಪ್ಪಿಸಿ.
 

810

ಲಡಾಖ್ ಟ್ರಾವೆಲ್ ಮಾಡುವಾಗ ನೀವು ಮರೆಯಲೇಬಾರದಾದ ಪ್ರಮುಖ ವಿಷಯವೆಂದರೆ ಬೆಚ್ಚಗಿನ ಬಟ್ಟೆಗಳು (warm cloths). ಅವುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಲು ಮರೆಯಬೇಡಿ. ದಪ್ಪ ಜಾಕೆಟ್ ಜೊತೆಗೆ, ಅನೇಕ ಲೇಯರ್ ಬಟ್ಟೆಗಳು ಚಳಿಯನ್ನು ತಪ್ಪಿಸುವಲ್ಲಿ ಹೆಚ್ಚು ಪರಿಣಾಮಕಾರಿ, ಆದ್ದರಿಂದ ಸಾಧ್ಯವಾದರೆ, ಲೇಯರಿಂಗ್ ಗಾಗಿ ಅನೇಕ ಬಟ್ಟೆಗಳನ್ನು ಇರಿಸಿ.
 

910

ಸಾರ್ವಜನಿಕ ಸ್ಥಳ ಮತ್ತು ಕ್ಯಾಬ್ ಒಳಗೆ ಧೂಮಪಾನ ಮಾಡುವಂತಿಲ್ಲ ಅನ್ನೋದನ್ನು ನೆನಪಿನಲ್ಲಿಟ್ಟುಕೊಂಡರೆ ಉತ್ತಮ. ನೀವು ಎಲ್ಲೆಲ್ಲೋ ಸ್ಮೋಕ್ ಮಾಡುವುದನ್ನು ತಪ್ಪಿಸಿದರೆ ಉತ್ತಮ, ಇಲ್ಲದಿದ್ದರೆ ಚಾಲಕ ಸಹ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. 

1010

ಲಡಾಖ್ ಪ್ಲಾಸ್ಟಿಕ್ ವಲಯವನ್ನು ಹೊಂದಿಲ್ಲ. ಆದ್ದರಿಂದ, ಇಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀವು ಲಡಾಖ್ನ ದೂರದ ಪ್ರದೇಶದಲ್ಲಿ ತಿರುಗಾಡಲು ಹೊರಟರೂ, ಪರಿಸರದ ಬಗ್ಗೆ ಕಾಳಜಿ ವಹಿಸಿ ಮತ್ತು ಅನಗತ್ಯ ಕಸವನ್ನು ಎಸೆಯುವ ಬದಲು, ಅದನ್ನು ಕಸದ ಬುಟ್ಟಿಯಲ್ಲಿ ಮಾತ್ರ ಎಸೆಯಿರಿ. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved