ಭಾರತದ ಈ ದೇಗುಲಗಳಲ್ಲಿ ಬೇಡಿಕೊಂಡ್ರೆ ನಿಮ್ಮೆಲ್ಲಾ ಬೇಡಿಕೆಗಳು ಈಡೇರುತ್ತೆ
ಭಾರತ ದೇಗುಲಗಳ (temples of India) ಬೀಡು, ಇಲ್ಲಿ ಲಕ್ಷಾಂತರ ದೇಗುಲಗಳಿವೆ. ಕೆಲವು ದೇಗುಲಗಳು ಪ್ರಾಚೀನ ಕಾಲದಲ್ಲಿ ನಿರ್ಮಿತವಾದರೆ, ಕೆಲವು ಇತ್ತೀಚಿಗೆ ನಿರ್ಮಾಣವಾಗಿವೆ. ಇಲ್ಲಿರುವ ಕೆಲವೊಂದು ದೇಗುಲಗಳು ತುಂಬಾನೆ ಕಾರ್ಣಿಕವಾಗಿವೆ. ಭಾರತದ ಈ ಅದ್ಭುತ ಮತ್ತು ನಿಗೂಢ ದೇವಾಲಯಗಳಲ್ಲಿ, ದರ್ಶನ ಪಡೆದರೆ ನಿಮ್ಮ ಎಲ್ಲಾ ಬೇಡಿಕೆಗಳು ಈಡೇರುತ್ತದೆ. ಮನೋಕಾಮನೆಗಳು ಈಡೇರುತ್ತವೆ.
ಪ್ರಪಂಚದಾದ್ಯಂತ ಅನೇಕ ರಹಸ್ಯಮಯ ಮತ್ತು ನಿಗೂಢ ಸ್ಥಳಗಳಿವೆ, ಅವು ತಮ್ಮ ವಿಶಿಷ್ಟ ಶಕ್ತಿಗಳಿಂದ ಜನರನ್ನು ಅಚ್ಚರಿಗೊಳಿಸುತ್ತವೆ. ಅಂತಹ ಕೆಲವು ದೇವಾಲಯಗಳು ಭಾರತದಲ್ಲಿವೆ, ಒಬ್ಬ ವ್ಯಕ್ತಿಯು ಮನೋಕಾಮನೆಗಳೊಂದಿಗೆ ಈ ದೇಗುಲಕ್ಕೆ ಬಂದರೆ ಅವರ ಪ್ರತಿಯೊಂದು ಆಸೆಯೂ ಇಲ್ಲಿ ಈಡೇರುತ್ತದೆ ಎಂದು ಹೇಳಲಾಗುತ್ತದೆ. ನೀವು ಕೂಡ ಧಾರ್ಮಿಕ ಪ್ರವಾಸಕ್ಕೆ (religious travel) ಹೋಗುವ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಪ್ರತಿಯೊಂದು ಬೇಡಿಕೆಗೆ ತತಾಸ್ತು ಎನ್ನುವ ದೇವಾಲಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ….
ಕಾಶಿ ವಿಶ್ವನಾಥ ದೇವಾಲಯ:
ಕಾಶಿಯಲ್ಲಿರುವ ವಿಶ್ವನಾಥ (Kashi Vishwanath) ದೇವಾಲಯವು ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕಾಶಿಯನ್ನು ಶಿವನ ನೆಚ್ಚಿನ ನಗರ ಎನ್ನಲಾಗುತ್ತೆ, ಈ ಕಾರಣದಿಂದಾಗಿ ಇದು ಶಿವ ಭಕ್ತರಿಗೆ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಈ ದೇಗುಲದಲ್ಲಿ ದರ್ಶನ ಪಡೆದರೆ ಭಕ್ತನ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎನ್ನಲಾಗುತ್ತೆ.
ಕೇದಾರನಾಥ ದೇವಾಲಯ:
ಕೇದಾರನಾಥ (Kedarnath) ದೇವಾಲಯವು ಹಿಮಾಲಯ ಪರ್ವತಗಳ ಮೇಲೆ ನೆಲೆಗೊಂಡಿದೆ. ಶಿವನ ಈ ದೇವಾಲಯವು ಹಿಂದೂ ಧರ್ಮದ ಪವಿತ್ರ ನಾಲ್ಕು ಧಾಮಗಳಲ್ಲಿ ಒಂದಾಗಿದೆ. ಶಿವನ ಈ ದೇವಾಲಯದಲ್ಲಿ ದರ್ಶನ ಪಡೆಯುವ ಮೂಲಕ, ಭಕ್ತನ ಪ್ರತಿಯೊಂದು ಆಸೆಯೂ ಈಡೇರುತ್ತದೆ.
ಶಿರಡಿ ಸಾಯಿಬಾಬಾ ದೇವಾಲಯ:
ಸಾಯಿಬಾಬಾ ಒಬ್ಬ ಪ್ರವಾದಿಯಾಗಿದ್ದು, ಹಿಂದೂ ಮತ್ತು ಮುಸ್ಲಿಂ ಭಕ್ತರು ಅವರನ್ನು ಬಹಳ ಗೌರವದಿಂದ ಪೂಜಿಸುತ್ತಿದ್ದರು. ಆದ್ದರಿಂದಲೇ ಶಿರಡಿ (Shirdi) ಈ ಎರಡು ಸಮುದಾಯಗಳ ಪೋಷಣೆಯನ್ನು ಅನುಭವಿಸುವ ವಿಶಿಷ್ಟ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಮನೋಕಾಮನೆಗಳೆಲ್ಲಾ ಪೂರ್ತಿಯಾಗುತ್ತೆ ಎನ್ನಲಾಗುತ್ತೆ.
ಸಿದ್ಧಿ ವಿನಾಯಕ ದೇವಾಲಯ:
ಕನಸಿನ ನಗರ ಮುಂಬೈನಲ್ಲಿ ನೆಲೆಸಿರುವ ಈ ದೇವಾಲಯವು(Siddhivinayaka temple) ಗಣೇಶನಿಗೆ ಸಮರ್ಪಿತವಾಗಿದೆ. ಈ ದೇವಾಲಯದಲ್ಲಿ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಬಂದು ದರ್ಶನ ಪಡೆಯುವುದನ್ನು ನೋಡಬಹುದು. ಈ ದೇವಾಲಯವು ಪ್ರತಿಯೊಬ್ಬ ಭಕ್ತನ ಬಯಕೆಯನ್ನು ಪೂರೈಸುತ್ತದೆ ಎಂದು ತಿಳಿದುಬಂದಿದೆ.
ತಿರುಪತಿ ಬಾಲಾಜಿ ದೇವಾಲಯ:
ಭಗವಾನ್ ವೆಂಕಟೇಶ್ವರನು ವಿಷ್ಣುವಿನ ಎರಡನೇ ಅವತಾರವಾಗಿದ್ದು, ತಿರುಪತಿಗೆ (Tirupati Balaji) ಬರುವ ಪ್ರತಿಯೊಬ್ಬ ವ್ಯಕ್ತಿಯ ಬಯಕೆಗಳನ್ನು ಪೂರೈಸುತ್ತಾನೆ. ಈ ದೇವಾಲಯವನ್ನು 9 ನೇ ಶತಮಾನದಿಂದ ಭಾರತದಲ್ಲಿ ನಿರ್ಮಿಸಲಾಗಿದೆ. ಇಷ್ಟಾರ್ಥ ನೆರವೇರಿದ ನಂತರ ಅನೇಕ ಭಕ್ತರು ಈ ದೇವಾಲಯದಲ್ಲಿ ಕೂದಲನ್ನು ಅರ್ಪಿಸುತ್ತಾರೆ.
ವೈಷ್ಣೋ ದೇವಿ ದೇವಾಲಯ:
ಹುಲಿಯ ಮೇಲೆ ಕುಳಿತಿರುವ ವೈಷ್ಣೋದೇವಿ (Vaishnodevi) ಶಕ್ತಿಯ ಒಂದು ರೂಪವಾಗಿದೆ. ಪವಿತ್ರ ಮತ್ತು ಯೋಗ್ಯರು ಮಾತ್ರ ಗುಹೆಗಳ ಮೂಲಕ ಈ ಪ್ರಯಾಣ ಪೂರ್ಣಗೊಳಿಸಬಹುದು ಮತ್ತು ಮಾತಾ ರಾಣಿಯ ದರ್ಶನವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಇಲ್ಲಿಗೆ ಬರುವ ಮೂಲಕವೂ ಭಕ್ತನ ಪ್ರತಿಯೊಂದು ಆಸೆಯೂ ಈಡೇರುತ್ತದೆ.
ವೀಸಾ ಟೆಂಪಲ್, ಚಿಲ್ಕೂರ್ ಬಾಲಾಜಿ:
ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ, ಆದರೆ ವೀಸಾ ಸರಿಯಾಗಿ ಸಿಗದೇ ಇದ್ದರೆ, ಅಂತಹ ಸಂದರ್ಭದಲ್ಲಿ ನೀವು ಚಿಲ್ಕೂರ್ ನಲ್ಲಿರುವ ವೀಸಾ ಟೆಂಪಲ್ (Visa temple) ಅಂದರೆ ಬಾಲಾಜಿ ದೇಗುಲಕ್ಕೆ ಭೇಟಿ ನೀಡಬಹುದು. ಇಲ್ಲಿ ಬಂದು ಬೇಡಿಕೊಂಡರೆ ಬೇಗನೆ ವಿದೇಶಕ್ಕೆ ಹೋಗುವ ಚಾನ್ಸ್ ಸಿಗುತ್ತದೆ ಎಂದು ಹೇಳಲಾಗುತ್ತೆ.