'ಇಲ್ಲಿಗೆ ಒಮ್ಮೆ ಭೇಟಿ ಕೊಡಿ' ಸ್ವರ್ಗದಂತಹ ಜಾಗಕ್ಕೆ ಪ್ರಧಾನಿ ಮೋದಿ ಕರೆ
ನವದೆಹಲಿ/ ಜಮ್ಮು ಮತ್ತು ಕಾಶ್ಮೀರ (ಮಾ. 24) ಪ್ರಧಾನಿ ನರೇಂದ್ರ ಮೋದಿ ಶುಭ ಸಮಾಚಾರವೊಂದನ್ನು ತಿಳಿಸಿದ್ದಾರೆ. ಜತೆಗೆ ಜಮ್ಮು ಕಾಶ್ಮೀರದ ತುಲಿಪ್ ಉದ್ಯಾನನವನದ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ತುಲಿಪ್ ಉದ್ಯಾನಕ್ಕೆ ಭೇಟಿ ನೀಡಲೇಬೇಕು.
ಜಮ್ಮು ಕಾಶ್ಮೀರದ ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಈ ಉದ್ಯಾನವನ ಇದೆ.
ಜಮ್ಮು ಕಾಶ್ಮೀರದ ಜನ ನಿಮಗೆ ನೀಡುವ ಆತಿಥ್ಯ ಅನುಭವಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಉದ್ಯಾನದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಉದ್ಯಾನಕ್ಕೆ ಭೇಟಿ ನೀಡುವುದರ ಜತೆಗೆ ತುಲಿಪ್ ಹಬ್ಬದಲ್ಲಿ ಭಾಗವಹಿಸಬೇಕು ಎಂದಿದ್ದಾರೆ.
ಗುರುವಾರ, ಮಾ. 25 ರಂದು ಈ ಉದ್ಯಾನ ನಾಗರಿಕರ, ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ.
64 ಜಾತಿಯ 15 ಲಕ್ಷ ಹೂಗಳು ಅರಳಿ ನಿಂತಿದ್ದು ಸುಂದರ ಲೋಕದಲ್ಲಿಯೇ ಇದ್ದೇವೆ ಎಂದು ಭಾಸವಾಗುತ್ತದೆ. ಸುಪ್ರಸಿದ್ಧ ದಾಲ್ ಸರೋವರನ್ನು ಕಣ್ಣು ತುಂಬಿಕೊಳ್ಳಬಹುದಾಗಿದ್ದು ಮೂವತ್ತು ಹೆಕ್ಟೇರ್ ಪ್ರದೇಶದಲ್ಲಿ ಉದ್ಯಾನ ಇದೆ.
2007 ರಲ್ಲಿ ಗಾರ್ಡ್ನ್ ತೆರೆದುಕೊಂಡಿತು. ಇದಾದ ಮೇಲೆ ಒಂದೊಂದೆ ಕೆಲಸಗಳು ನಡೆದುದ್ದು ಪ್ರವಾಸಿಗರ ಅಸಲಿ ಸ್ವರ್ಗಕ್ಕೆ ನೀವು ಹೋಗಿ ಬನ್ನಿ