ವೈಷ್ಟೋದೇವಿಯಿಂದ… ತಿರುವನಂತಪುರದವರೆಗೂ ನೀವು ನೋಡಲೇಬೇಕು ಈ ದೇಗುಲಗಳನ್ನು
ಭಾರತವು ಪ್ರಪಂಚದಾದ್ಯಂತ ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ. ನೀವು ಭಾರತೀಯ ಸಂಸ್ಕೃತಿಯನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ದೇವಾಲಯಗಳಿಗೆ ಭೇಟಿ ನೀಡುವುದು. ಹೌದು, ನೀವು ಭಾರತದ ಮೂಲೆ ಮೂಲೆಯನ್ನು ಸಂಚರಿಸಿದರೆ ಪ್ರತಿಯೊಂದು ಮೂಲೆಯಲ್ಲೂ ನೀವು ಸುಂದರ, ಸುಪ್ರಸಿದ್ಧ ದೇಗುಲಗಳನ್ನು ಕಾಣಬಹುದು. ಪ್ರವಾಸವನ್ನು ಸ್ಮರಣೀಯವಾಗಿಸಲು ಬಯಸಿದರೆ ನೀವು ಭೇಟಿ ನೀಡಬಹುದಾದ ಕೆಲವು ಪ್ರಸಿದ್ಧ ಧಾರ್ಮಿಕ ತಾಣಗಳ ಬಗ್ಗೆ ತಿಳಿಯಿರಿ…
ಭಾರತವು ದೇವಾಲಯಗಳ ನಾಡು, ಅನೇಕ ಪ್ರಾಚೀನ ಮತ್ತು ಪ್ರಸಿದ್ಧ ಧಾರ್ಮಿಕ ತಾಣಗಳನ್ನು (religious places) ಹೊಂದಿದೆ. ಭಾರತದ ದೇವಾಲಯಗಳು ಶ್ರೀಮಂತ ಇತಿಹಾಸ ಮತ್ತು ಅತ್ಯುತ್ತಮ ವಾಸ್ತುಶಿಲ್ಪದೊಂದಿಗೆ ಪ್ರಪಂಚದಾದ್ಯಂತದ ಅನೇಕ ಜನರನ್ನು ಆಕರ್ಷಿಸುತ್ತವೆ. ಪದ್ಮನಾಭಸ್ವಾಮಿ ದೇವಾಲಯ ಮತ್ತು ತಿರುಪತಿ ದೇವಸ್ಥಾನದಿಂದ ಹಿಡಿದು ಜಗನ್ನಾಥ ದೇವಾಲಯ ಮತ್ತು ಕೇದಾರನಾಥ ದೇವಾಲಯದವರೆಗೆ, ದೇಶದಲ್ಲಿ ಜನಪ್ರಿಯ ದೇಗುಲಗಳು ಹಲವಾರಿದೆ. ದೇಶದಲ್ಲಿ ನೀವು ಭೇಟಿ ನೀಡಲೇಬೇಕಾದ ಅಪ್ರತಿಮ ದೇವಾಲಯಗಳ ಪಟ್ಟಿ ಇಲ್ಲಿದೆ.
ಕಾಶಿ ವಿಶ್ವನಾಥ ದೇವಾಲಯ, ಉತ್ತರ ಪ್ರದೇಶ: ಈ ದೇವಾಲಯವು ವಾರಣಾಸಿಯ ಹಳೆಯ ಬೀದಿಗಳ ಬಳಿ ಇದೆ. ಹಿಂದೂ ಸಮುದಾಯಕ್ಕೆ ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಕಾಶಿ ವಿಶ್ವನಾಥನಲ್ಲಿ ಯಾರು ತಮ್ಮ ಕೊನೆಯ ಉಸಿರನ್ನು ಉಸಿರಾಡುತ್ತಾರೋ ಅವರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಎಂದು ಜನ ನಂಬುತ್ತಾರೆ. ಈ ಪ್ರಾಚೀನ ದೇವಾಲಯವು ಪವಿತ್ರ ಗಂಗೆಗೆ ಹತ್ತಿರದಲ್ಲಿದೆ ಮತ್ತು ಭಾರತದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯವಾಗಿದೆ!
ಜಗನ್ನಾಥ ದೇವಾಲಯ, ಒಡಿಶಾ: ಈ ದೇವಾಲಯವು ಒಡಿಶಾದ ಪುರಿಯಲ್ಲಿದೆ, ಜಗನ್ನಾಥ ದೇವಾಲಯವು ಅನೇಕ ಕಾರಣಗಳಿಗಾಗಿ ವಿಶ್ವವಿಖ್ಯಾತವಾಗಿದೆ, ಮತ್ತು ರಥಯಾತ್ರೆ ಉತ್ಸವದ ವಾರ್ಷಿಕ ಭವ್ಯ ಆಚರಣೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಾರೆ. ಈ ಉತ್ಸವವು ಭಗವಾನ್ ಜಗನ್ನಾಥ ಮತ್ತು ಅವನ ಒಡಹುಟ್ಟಿದವರನ್ನು ಒಳಗೊಂಡಿರುತ್ತದೆ, ಮತ್ತು ಭವ್ಯ ಉತ್ಸವಗಳಿಗೆ ಸಾಕ್ಷಿಯಾಗಲು ಪ್ರಪಂಚದಾದ್ಯಂತದ ಭಕ್ತರು ಸೇರುತ್ತಾರೆ!
ಸಿದ್ಧಿವಿನಾಯಕ ದೇವಾಲಯ, ಮುಂಬೈ: ಈ ದೇವಾಲಯವು ಗಣೇಶನಿಗೆ ಸಮರ್ಪಿತವಾಗಿದೆ ಮತ್ತು ಇದು ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ದೇಶಾದ್ಯಂತದ ಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿಗಳು (bollywood celebrety) ಮತ್ತು ಉದ್ಯಮಿಗಳು ಭೇಟಿ ನೀಡುವ ದೇಗುಲವಾಗಿದೆ. ಅಷ್ಟೇ ಅಲ್ಲ ಇದು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ವೈಷ್ಣೋದೇವಿ ದೇವಾಲಯ, ಕತ್ರಾ: ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಈ ದೇವಾಲಯವನ್ನು ಹಿಂದೂ ಸಮುದಾಯದಲ್ಲಿ ಅತ್ಯಂತ ಪವಿತ್ರ ದೇವಾಲಯವೆಂದು ಪರಿಗಣಿಸಲಾಗಿದೆ. ದೇವಾಲಯದ ಚಾರಣವು ಜಮ್ಮುವಿನ ಕತ್ರಾದಲ್ಲಿ ಪ್ರಾರಂಭವಾಗುತ್ತದೆ ಮತ್ತು ಕಣಿವೆಯ ಕೆಲವು ಅದ್ಭುತ ದೃಶ್ಯಗಳನ್ನು ನೀಡುತ್ತದೆ. ಪ್ರತಿ ವರ್ಷ, ಲಕ್ಷಾಂತರ ಭಕ್ತರು ವೈಷ್ಣೋದೇವಿಯ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಾರೆ.
ಸೋಮನಾಥ ದೇವಾಲಯ, ಸೋಮನಾಥ: ಸೋಮನಾಥವು ದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇದು ಗುಜರಾತ್ ನ ಸೌರಾಷ್ಟ್ರದಲ್ಲಿರುವ ವಾಸ್ತುಶಿಲ್ಪದ ಅದ್ಭುತ ಕೆತ್ತನೆ ಹೊಂದಿದ ದೇಗುಲವಾಗಿದೆ. ಚಂದ್ರ ದೇವರಿಗೆ ಸಮರ್ಪಿತವಾದ ಈ ದೇವಾಲಯವು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ ಎನ್ನಲಾಗಿದ್ದು, ನಾಶವಾಗಿದ್ದ ಈ ದೇಗುಲ ಮತ್ತೆ ಮರುನಿರ್ಮಾಣಗೊಂಡಿದೆ! ಇದು ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ.
ಕೇದಾರನಾಥ ದೇವಾಲಯ, ರುದ್ರಪ್ರಯಾಗ: ಉತ್ತರಾಖಂಡದ ಕೇದಾರನಾಥ ಪಟ್ಟಣದಲ್ಲಿ 3583 ಮೀ ದೂರದಲ್ಲಿರುವ ಇದು ಭಾರತದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಪವಿತ್ರ ಚಾರ್ಧಾಮ್ ಯಾತ್ರೆಯ ಒಂದು ಭಾಗವಾಗಿದೆ ಮತ್ತು ಏಪ್ರಿಲ್ ನಿಂದ ನವೆಂಬರ್ ವರೆಗೆ ತೆರೆದಿರುತ್ತದೆ. ಹಿಂದೂ ಶ್ರಾವಣ ಮಾಸದಲ್ಲಿ ದೇವಾಲಯದಲ್ಲಿ ಅನೇಕ ಭಕ್ತರು ಬಂದು ದರ್ಶನ ಪಡೆಯುತ್ತಾರೆ.
ಪದ್ಮನಾಭಸ್ವಾಮಿ ದೇವಾಲಯ, ಕೇರಳ: ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಾಲಯವು ಭೇಟಿ ನೀಡಲೇಬೇಕಾದ ಧಾರ್ಮಿಕ ತಾಣವಾಗಿದೆ. ಇದು ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾಗಿದೆ! ದೇವಾಲಯದ ನಿಧಿಯು ವಜ್ರದ ಆಭರಣಗಳು ಮತ್ತು ಚಿನ್ನದ ಪ್ರತಿಮೆಗಳನ್ನು ಒಳಗೊಂಡಿದೆ ಎನ್ನಲಾಗುತ್ತೆ. ಮತ್ತು ಇಲ್ಲಿ 20 ಬಿಲಿಯನ್ ಡಾಲರ್ ಗಳಿಗೂ ಹೆಚ್ಚು ಸಂಪತ್ತು ಇದೆ ಎನ್ನಲಾಗಿದೆ.