MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಕರ್ನಾಟಕದ ಮೋಸ್ಟ್ ಹಾಂಟೆಡ್ ತಾಣಗಳಿವು… ಪ್ರವಾಸ ಮಾಡೋ ಸಾಹಸ ಬೇಡವೇ ಬೇಡ

ಕರ್ನಾಟಕದ ಮೋಸ್ಟ್ ಹಾಂಟೆಡ್ ತಾಣಗಳಿವು… ಪ್ರವಾಸ ಮಾಡೋ ಸಾಹಸ ಬೇಡವೇ ಬೇಡ

ಕರ್ನಾಟಕದ ತುಂಬಾನೆ ಭಯಾನಕವಾದ ಐದು ತಾಣಗಳ ಲಿಸ್ಟ್ ಇಲ್ಲಿವೆ. ಈ ತಾಣಗಳಿಗೆ ನೀವು ಹೋಗುವ ಪ್ಲ್ಯಾನ್ ಮಾಡುವ ಮುನ್ನ ಇದನ್ನೊಮ್ಮೆ ಓದಿ… ಯಾಕಂದ್ರೆ ಇಲ್ಲಿ ಹೋದ್ರೆ, ಅಪಾಯವಂತೂ ಖಂಡಿತಾ.  

2 Min read
Pavna Das
Published : Jan 20 2025, 12:26 PM IST| Updated : Jan 20 2025, 12:30 PM IST
Share this Photo Gallery
  • FB
  • TW
  • Linkdin
  • Whatsapp
17

ಕರ್ನಾಟಕದಲ್ಲಿ ಹಲವಾರು ತಾಣಗಳು ಮೋಸ್ಟ್ ಹಾಂಟೆಡ್  (most haunted places) ಅಂದ್ರೆ ಭಯಾನಕ ತಾಣಗಳ ಲಿಸ್ಟ್ ಗೆ ಸೇರಿವೆ. ಅವುಗಳನ್ನು ಪ್ರಮುಖ ಐದು ಸ್ಥಳಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ನಿಮಗೆ ಭೂತ ಪ್ರೇತದ ಎದುರಿಸುವ ಧೈರ್ಯ ಇದ್ರೆ ಮಾತ್ರ ಈ ತಾಣಗಳನ್ನು ನೋಡಬಹುದು. ಇಲ್ಲಾ ಅಂದ್ರೆ ಅತ್ತ ಕಡೆ ಕಾಲು ಇಡೋದಕ್ಕೂ ಧರಿಯ ಮಾಡ್ಬೇಡಿ. 
 

27

ಟೆರ್ರಾ ವೆರಾ ಮಾನ್ಶನ್  (Terra Vera Mansion)
ಉಡುಪಿಯ ಟೆರ್ರಾ ವೆರಾ ಮಾನ್ಶನ್ ರಹಸ್ಯ ಮತ್ತು ಭಯ ಹೆಚ್ಚಿಸುವ ತಾಣವಾಗಿದೆ. ಬಹಳ ಹಿಂದೆ ಅಲ್ಲಿ ನಡೆದ ದುರಂತ ಘಟನೆಗಳಿಂದಾಗಿ ಅಲ್ಲಿ ದೆವ್ವಗಳು ಓಡಾಡುತ್ತಿವೆ ಎನ್ನುವ ನಂಬಿಕೆ ಇದೆ. ಅನೇಕ ಜನರು ಈ ಪ್ರದೇಶದ ಸುತ್ತಲೂ ನಡೆಯುವಾಗ ವಿಚಿತ್ರ ಅನುಭವವನ್ನು ಪಡೆದ ಉದಾಹರಣೆಗಳೂ ಕೂಡ ಇವೆ ಮತ್ತು ಕೆಲವರು ಇಲ್ಲಿ ನೆರಳಿನ ರೀತಿಯ ಆಕೃತಿಗಳನ್ನು ನೋಡಿದ್ದಾಗಿ ಹೇಳಿಕೊಳ್ಳುತ್ತಾರೆ. ಕೆಲವೊಮ್ಮೆ ಈ ತಾಣದಲ್ಲಿ ದಿಢೀರ್ ಆಗಿ ತಾಪಮಾನದಲ್ಲಿ ಇಳಿಕೆ ಮಾಡುತ್ತದೆ, ಕೆಲವೊಮ್ಮೆ ವಿಚಿತ್ರ ಶಬ್ಧಗಳು ಸಹ ಕೇಳಿ ಬರುತ್ತವೆ. ಹಲವಾರು ವರ್ಷಗಳಿಂದ ಇಲ್ಲಿ ದೆವ್ವ ಇರೋದಾಗಿ ಕೇಳಿ ಬಂದಿದೆ. 

37

ಕಲ್ಪಲ್ಲಿ ಸ್ಮಶಾನ (Kalpalli Cemetery)
ಕಲ್ಪಲ್ಲಿ ಸ್ಮಶಾನ ಕೂಡ ಮೋಸ್ಟ್ ಹಾಂಟೆಡ್ ತಾಣಗಳ ಲಿಸ್ಟ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಯಾಕಂದ್ರೆ ಈ ಸ್ಮಶಾನದ ಮೂಲಕ ಹಾದುಹೋಗುವ ಜನರು ಹೆಚ್ಚಾಗಿ ಸಮಾಧಿಗಳ ಸುತ್ತಲೂ ತಿರುಗಾಡುವ ಮನುಷ್ಯನಂತೆ ಕಾಣುವ ಭಯಾನಕ ಜೀವಿಯನ್ನು ನೋಡಿದ್ದಾರೆ. ಕೆಲವೊಮ್ಮೆ ಜನರಿಗೆ ತಮ್ಮ ಬೆನ್ನ ಹಿಂದೆ ಯಾರೋ ಇದ್ದಾರೆ ಎನ್ನುವ ಭಯ ಕೂಡ ಆವರಿಸಿದ್ದೂ ಇದೆ. 

47

ರಾಷ್ಟ್ರೀಯ ಹೆದ್ದಾರಿ 4 (National Highway 4)
ಈ ಹೆದ್ದಾರಿಯ ಕುರಿತು ಹಲವಾರು ಕಥೆಗಳಿವೆ, ರಾತ್ರಿಯಲ್ಲಿ ಹೆಚ್ಚಾಗಿ ಈ ದಾರಿಯಲ್ಲಿ ಹಲವು ಭಯಾನಕ ಘಟನೆಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸುಂದರವಾಗಿ ಕಾಣುವ ಮಹಿಳೆ ಲಿಫ್ಟ್ ಕೇಳಿಕೊಂಡು ವಾಹನ ನಿಲ್ಲಿಸುತ್ತಾಳೆ. ಚಾಲಕರು ವಾಹನಗಳನ್ನು ನಿಲ್ಲಿಸಿದಾಗ ಮಹಿಳೆ ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗುತ್ತಾಳೆ. ಆದರೆ ಇದು ಇಲ್ಲಿಗೆ ಕೊನೆಗೊಳ್ಳುವುದಿಲ್ಲ, ಚಾಲಕರು ಮತ್ತೆ ಚಾಲನೆ ಮಾಡುವುದನ್ನು ಮುಂದುವರಿಸಿದಾಗ ಮಹಿಳೆ ಮತ್ತೆ ಕಾಣಿಸಿಕೊಂಡು ಉನ್ಮಾದದಿಂದ ನಗಲು ಪ್ರಾರಂಭಿಸುತ್ತಾಳೆ. ಈ ಸ್ಥಳವು ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಭಯಾನಕ ತಾಣ. ಇಲ್ಲಿದೆ ನೀವು ರಾತ್ರಿ ಹೊತ್ತು ಸಂಚಾರ ಮಾಡದೇ ಇರೋದೆ ಬೆಸ್ಟ್. 

57

ಹೊಸಕೋಟೆ ದಾರಿ (Hoskote Route)
ಇದು ಖಂಡಿತವಾಗಿಯೂ ಕರ್ನಾಟಕದ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಈ ಮಾರ್ಗವು ಒಂಟಿ ರಸ್ತೆಯಾಗಿದ್ದು, ಹಲವು ಭಯಾನಕ ಘಟನೆಗಳಿಗೆ ಸಾಕ್ಷಿಯಾಗಿದೆ. ಒಮ್ಮೆ ಆಟೋರಿಕ್ಷಾ ಚಾಲಕರೊಬ್ಬರು ವೃದ್ಧೆಯೊಬ್ಬರು ಲಿಫ್ಟ್ ಕೇಳೋದನ್ನು ಗಮನಿಸಿ,  ಚಾಲಕ ಅವಳ ಬಳಿ ನಿಲ್ಲಿಸಿ ಅವಳಿಗೆ ಲಿಫ್ಟ್ ನೀಡಿದನು. ಆದರೆ ಮಹಿಳೆ ಚಾಲಕನನ್ನು ಹೊರ ಬರಲು ಹೇಳಿ, ತನಗೆ ಗಾಯವಾಗಿದೆ ರಿಕ್ಷಾ ಹತ್ತೋದಕ್ಕೆ ಸಾಧ್ಯ ಆಗ್ತಿಲ್ಲ, ನೀನೆ ಹೊರ ಬಂದು ನನ್ನನ್ನು ಹತ್ತಿಸು ಎಂದು, ವಿಚಿತ್ರವಾಗಿ ನಕ್ಕಿದ್ದಾಳೆ, ಆವಾಗಲೇ ಡ್ರೈವರ್ ಗೆ ಆಕೆಯ ಮೇಲೆ ಸಂಶಯ ಮೂಡಿ, ಹೊರ ಬರಲು ಭಯಪಟ್ಟು ರಿಕ್ಷಾವನ್ನು ತೆಗೆದುಕೊಂಡು ಹೋಗಿದ್ದಾರೆ. ಆತನ ರಿಕ್ಷಾದಲ್ಲಿ ದೇವರ ಫೋಟೊಗಳು ಇದ್ದುದರಿಂದ ಆ ದೆವ್ವಕ್ಕೆ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ಅನುಭವ ಹಲವು ಜನರಿಗೆ ಆಗಿದೆ. 

67

ವಿಕ್ಟೋರಿಯಾ ಆಸ್ಪತ್ರೆ (Victoria Hospital)
ಈ ಆಸ್ಪತ್ರೆ ಖಂಡಿತವಾಗಿಯೂ ನೀವು ನಿಮ್ಮ ಚಿಕಿತ್ಸೆಯನ್ನು ಪಡೆಯಲು ಭಯ ಪಡಬಹುದು. ಯಾಕಂದ್ರೆ ಆಸ್ಪತ್ರೆಯ ಆವರಣದಲ್ಲಿರುವ ಮರವೊಂದರಲ್ಲಿ ಬಿಳಿ ಅಸ್ವಾಭಾವಿಕ ಆಕೃತಿಯನ್ನು ಗಮನಿಸಿರುವುದಾಗಿ ಅನೇಕ ಜನರು ಹೇಳಿಕೊಂಡಿದ್ದಾರೆ. ಹೆಚ್ಚು ಆಸಕ್ತಿದಾಯಕ ವಿಷಯವೆಂದರೆ ಭೂತವು ಜನರಿಗೆ ಇಲ್ಲಿಅವರೆಗೂ ಯಾವುದೇ ರೀತಿಯಲ್ಲಿ ಉಪಟಳ ಕೊಟ್ಟಿಲ್ಲ, ಆದರೆ ಅಲ್ಲಿ ಇಟ್ಟಂತಹ ಆಹಾರದ ಪ್ಯಾಕೆಟ್ ಗಳು ಕಾಣೆಯಾಗಿರುವ ಅದೆಷ್ಟೋ ಉದಾಹರಣೆಗಳಿವೆ

77

ಸಾಟ್ ಕಬರ್  (Saat Khabar)
ಬಿಜಾಪುರದಲ್ಲಿ ಅರವತ್ತು ಸಮಾಧಿಗಳು ಎಂದು ಕರೆಯಲ್ಪಡುವ ಹಳೆಯ ಸ್ಮಶಾನವಿದೆ, ಮತ್ತು ಅಲ್ಲಿ ದೆವ್ವಗಳಿವೆ ಎಂದು ನಂಬಲಾಗಿದೆ. ಬಾವಿಯಿಂದ ಬರುವ ವಿಚಿತ್ರ ಗೆಜ್ಜೆ ಶಬ್ಧಗಳು ಅಥವಾ ಪಿಸುಮಾತುಗಳನ್ನು ಜನರು ಕೇಳಿದ್ದಾರೆ ಮತ್ತು ಕೆಲವರು ಸಮಾಧಿಗಳ ಬಳಿ ಹೊಳೆಯುವ ದೀಪಗಳನ್ನು ನೋಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಸ್ಥಳವು ತಂಪಾಗಿರುತ್ತದೆ, ಮತ್ತು ಅಹಿತಕರವಾದ ಗಾಳಿಯಿಂದ ತುಂಬಿರುತ್ತೆ. ಇಲ್ಲಿ ಸಮಾಧಿ ಮಾಡಿದವರ ಆತ್ಮಗಳು ಎಂದಿಗೂ ಮೋಕ್ಷ ಪಡೆದಿಲ್ಲ, ಅವರು ಇಂದಿಗೂ ಆತ್ಮಗಳಾಗಿ ಸುಳಿದಾಡುತ್ತಿದ್ದಾರೆ ಎನ್ನುವ ನಂಬಿಕೆ ಇದೆ. 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved