ನಿಗೂಢ ನಿಧಿವನ…. ಇಂದಿಗೂ ಇಲ್ಲಿ ನಡೆಯುತ್ತೆ ಕೃಷ್ಣ - ರಾಧೆಯರ ರಾಸಲೀಲೆ
ರಾಧಾ ರಾಣಿ ಮತ್ತು ಶ್ರೀಕೃಷ್ಣನ ಪ್ರೀತಿಯನ್ನು ತಿಳಿಯದವರು ಯಾರಿದ್ದಾರೆ ಹೇಳಿ. ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಈ ಜಗತ್ತಿನಲ್ಲಿ ಪವಿತ್ರವಾದ ಪ್ರೀತಿ ಎಂದಾಗ ಕೇಳಿ ಬರುವ ಪ್ರಮುಖ ಹೆಸರೇ ಕೃಷ್ಣ ಮತ್ತು ರಾಧೆಯ ಪ್ರೀತಿ. ಆದರೆ, ನಾರದರ ಶಾಪದಿಂದಾಗಿ, ರಾಧಾ ರಾಣಿ ಮತ್ತು ಭಗವಾನ್ ಕೃಷ್ಣನು ದೂರವಾದರು, ಒಬ್ಬರನ್ನೊಬ್ಬರು ಮದುವೆಯಾಗಲು ಸಾಧ್ಯವಾಗಲಿಲ್ಲ. ಆದರೂ ಇಂದಿಗೂ ಸಹ ಅವರಿಬ್ಬರ ಪ್ರೀತಿ, ಪ್ರತಿ ಪ್ರೇಮಿಗಳಿಗೂ ಸ್ಪೂರ್ತಿಯಾಗಿದೆ. ಈ ಭೂಮಿ ಇರುವವರೆಗೆ ರಾಧ ಕೃಷ್ಣರ ಪ್ರೀತಿ ಇಲ್ಲಿ ಸದಾ ಅಮರವಾಗಿರಲಿದೆ.
ಸನಾತನ ಧಾರ್ಮಿಕ ಗ್ರಂಥಗಳಲ್ಲಿ ನಾಲ್ಕು ಯುಗಗಳನ್ನು ವಿವರಿಸಲಾಗಿದೆ. ಇವು ಕ್ರಮವಾಗಿ ಸತ್ಯಯುಗ, ತ್ರೇತಾಯುಗ, ದ್ವಾಪರಯಗ ಮತ್ತು ಕಲಿಯುಗ. ದ್ವಾಪರಯುಗದಲ್ಲಿ, ಭಗವಾನ್ ಶ್ರೀಹರಿ ವಿಷ್ಣುವು ಮಾನವ ರೂಪದಲ್ಲಿ ಕೃಷ್ಣನಾಗಿ ಜನಿಸಿದನು. ಕೃಷ್ಣ ಹುಟ್ಟು, ಬಾಲ್ಯ ಎಲ್ಲವೂ ರೋಚಕ ಕತೆಗಳಾಗಿವೆ. ಇವುಗಳ ಬಗ್ಗೆ ನೀವೂ ಕೇಳಿರಬಹುದು.
ವಿಷ್ಣು ಭಗವಾನ್ ಕೃಷ್ಣನಾಗಿ ಮಥುರಾದಲ್ಲಿ ಜನಿಸಿದನು. ಪ್ರಸ್ತುತ, ಈ ಪವಿತ್ರ ಸ್ಥಳವು ಉತ್ತರ ಪ್ರದೇಶದಲ್ಲಿದೆ. ಅದೇ ಸಮಯದಲ್ಲಿ, ಲಕ್ಷ್ಮಿ ದೇವಿಯು ಭಗವಾನ್ ನಾರಾಯಣನೊಂದಿಗೆ ವಾಸಿಸಲು ರಾಧೆಯ ರೂಪದಲ್ಲಿ ಭೂಮಿಯ ಮೇಲೆ ಜನ್ಮಿಸಿದಳು ಎಂದು ಹೇಳಾಲಾಗುತ್ತೆ. ಅವರು ಬರ್ಸಾನದಲ್ಲಿ ಜನಿಸಿದರು. ಆದರೂ ಇಂದಿಗೂ, ಅವರ ಜನ್ಮಸ್ಥಳದ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ.
ರಾಧಾ ರಾಣಿ ಮತ್ತು ಶ್ರೀಕೃಷ್ಣನ ಒಬ್ಬರನ್ನೊರು ಬಹಳವಾಗಿ ಪ್ರೀತಿಸುತ್ತಿದ್ದರು. ಅವರಿಬ್ಬರ ಪ್ರೀತಿ ಅಮರವಾದುದು, ಅಂತಹ ಪ್ರೀತಿ ಬೇರೆಲ್ಲೂ ಕಾಣ ಸಿಗದು ಎನ್ನಲಾಗುತ್ತೆ. ಆದರೆ, ನಾರದರ ಶಾಪದಿಂದಾಗಿ, ರಾಧಾ ರಾಣಿ ಮತ್ತು ಭಗವಾನ್ ಕೃಷ್ಣನು ಜೊತೆಯಾಗಿ ಬಾಳಲು ಮತ್ತು ಮದುವೆಯಾಗಲು ಸಾಧ್ಯವಾಗಲಿಲ್ಲ. ನಂತರ, ರಾಧಾ ರಾಣಿಗೆ ವಯಸ್ಸಾದಾಗ, ಕೃಷ್ಣನು ಅರಮನೆಯಲ್ಲಿ ವಾಸಿಸುತ್ತಿದ್ದನು. ಆದರೆ ಕೃಷ್ಣನಿಗೆ ರಾಧಾಳಿಂದ ದೂರವಾದ ವಿರಹ ವೇದನೆ ಎಂದಿಗೂ ಕಾಡುತ್ತಿದ್ದು ಎನ್ನಲಾಗಿದೆ.
ಅಂತಿಮ ಸಮಯದಲ್ಲಿ ರಾಧಾ ರಾಣಿ ಹತ್ತಿರದ ವನದಲ್ಲಿ ವಾಸಿಸಲು ಪ್ರಾರಂಭಿಸಿದಳು ಮತ್ತು ಭಗವಾನ್ ಕೃಷ್ಣನ ಕೊಳಲಿನ ಸುಮಧುರ ರಾಗವನ್ನು ಕೇಳಿ ಪಂಚತತ್ವದಲ್ಲಿ ವಿಲೀನಗೊಂಡಳು ಎಂದು ಹೇಳಲಾಗುತ್ತದೆ. ಈ ಹಿಂದೆ, ಬಾಲ್ಯದಲ್ಲಿಯೂ, ರಾಧಾ ಶ್ರೀ ಕೃಷ್ಣನ ಕೊಳಲಿನ ರಾಗಕ್ಕೆ ಓಡುತ್ತಿದ್ದಳು. ಹುಣ್ಣಿಮೆಯ ದಿನಗಳಲ್ಲಿ ರಾಧಾ ಕೃಷ್ಣರು ರಾಸ ಲೀಲೆ ಆಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆ ಸುಂದರ ಕ್ಷಣಗಳು ಇಂದಿಗೂ ನಡೆಯುತ್ತವೆ ಎಂದು ಜನರು ನಂಬುತ್ತಾರೆ. ಈಗಲೂ ಸಹ, ಭಗವಾನ್ ಕೃಷ್ಣ ಮತ್ತು ರಾಧಾ ಬರ್ಸಾನದಲ್ಲಿರುವ ನಿಧಿವನದಲ್ಲಿ ರಾಸಲೀಲೆಗೆ ಪ್ರತಿದಿನ ಹಾಜರಾಗುತ್ತಾರೆ ಎಂದು ಅಲ್ಲಿನ ಜನರು ನಂಬುತ್ತಾರೆ.
ಈ ರಹಸ್ಯವನ್ನು ಇಂದಿಗೂ ಸಹ ಬಹಿರಂಗಪಡಿಸಲು ಸಾಧ್ಯವಾಗಲೇ ಇಲ್ಲ, ಆದರೆ ಅದು ನಿಜ ಎನ್ನಲಾಗುತ್ತೆ. ತಜ್ಞರ ಪ್ರಕಾರ, ರಾಧಾ ಮತ್ತು ಭಗವಾನ್ ಕೃಷ್ಣ ಪ್ರತಿದಿನ ಸಂಜೆ 7 ಗಂಟೆಯ ನಂತರ ನಿಧಿವನಕ್ಕೆ ಬರುತ್ತಾರೆ. ನಂತರ ರಾತ್ರಿಯಿಡೀ ನಿಧಿವನದಲ್ಲಿ ಇದ್ದು, ರಾಸಲೀಲೆಯನ್ನಾಡುತ್ತಾ, ಮರು ದಿನ ಅಂತರ್ಮುಖಿಯಾಗುತ್ತಾರೆ ಎನ್ನಲಾಗುತ್ತೆ. ನಿಧಿವನದಲ್ಲಿರುವ ಎಲ್ಲಾ ಮರಗಳು ಗೋಪಿಕೆಯರಾಗಿ ಶ್ರೀ ಕೃಷ್ಣ ಮತ್ತು ರಾಧೆಯ ರಾಸಲೀಲೆಯಲ್ಲಿ ನೃತ್ಯವಾಡುತ್ತಾರೆ, ಎಲ್ಲ ಮುಗಿದ ಬಳಿಕ ಮತ್ತೆ ಮರಗಳ ರೂಪ ತಾಳುತ್ತಾರೆ ಎನ್ನಲಾಗಿದೆ.
ಇದರ ಸತ್ಯಾಸತ್ಯತೆಯು ಪುರೋಹಿತರು ಮಾಡುವಂತಹ ಕಾರ್ಯಗಳ ಮೂಲಕ ತಿಳಿದು ಬರುತ್ತೆ. ಸಂಜೆ, ನಿಧಿವನದ ಪುರೋಹಿತರು ಕಾಡಿನ ಮಧ್ಯದಲ್ಲಿರುವ ಮಂದಿರದಲ್ಲಿ ಹಾಸಿಗೆಯನ್ನು ಹಾಕಿ, ಆಹಾರಗಳ ಜೊತೆ ಬಟ್ಟೆ ಮತ್ತು ಪಾನ್ ಸಹ ಇಡುತ್ತಾರೆ. ಸಂಜೆ ೭ ಗಂಟೆಗೆ ನಿಧಿವನವನ್ನು ಮುಚ್ಚಲಾಗುತ್ತದೆ. ನಂತರ ಅಲ್ಲಿಗೆ ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ಮರುದಿನ ಬೆಳಿಗ್ಗೆ ನಿಧಿವನದ ದ್ವಾರವನ್ನು ತೆರೆಯಲಾಗುತ್ತದೆ. ಆ ಸಮಯದಲ್ಲಿ ಆಹಾರ ಪದಾರ್ಥಗಳು ಇರುವುದಿಲ್ಲ. ಅಷ್ಟೇ ಅಲ್ಲ, ಹಾಸಿಗೆಯ ಮೇಲೆ ಯಾರೋ ಮಲಗಿರುವಂತೆ ಹಾಸಿಗೆ ಚದುರಿ ಹೋಗಿರುವುದು ಇಂದಿಗೂ ನಾವು ಕಾಣಬಲ್ಲೆವು ಎನ್ನುತ್ತಾರೆ ಜನ.
ಯಾರಾದರೂ ಈ ರಹಸ್ಯವನ್ನು ಭೇದಿಸಲು ತಡರಾತ್ರಿ ನಿಧಿವನದಲ್ಲಿ ಉಳಿಯಲು ಪ್ರಯತ್ನಿಸಿದರೆ, ಆ ವ್ಯಕ್ತಿಯು ಸಾಯುತ್ತಾನೆ, ಒಂದು ವೇಳೆ ಆತ ಬದುಕುಳಿದರೆ, ವ್ಯಕ್ತಿಯು ಕುರುಡನಾಗುತ್ತಾನೆ ಅಥವಾ ಮೂಕನಾಗುತ್ತಾನೆ ಎಂದು ಸಹ ಜನರು ನಿಧಿವನದ ಬಗ್ಗೆ ಹೇಳುತ್ತಾರೆ. ಇದಕ್ಕಾಗಿ, ನಿಧಿವನವನ್ನು ಸಂಜೆ 7 ಗಂಟೆಗೆ ಮುಚ್ಚಲಾಗುತ್ತದೆ. ನಿಮಗೆ ಅವಕಾಶ ಸಿಕ್ಕಾಗ, ಒಮ್ಮೆ ನಿಧಿವನಕ್ಕೆ ಹೋಗಿ. ಶ್ರೀಕೃಷ್ಣ - ರಾಧೆಯ ಪ್ರೀತಿಯ ಜಾಗವನ್ನು ಕಂಡ ಅನುಭವ ನಿಮಗೆ ಸಿಗುವುದು.