Naked City: ಇಲ್ಲಿ 14% ಹೆಚ್ಚು ಜನರು ಬಟ್ಟೆ ಇಲ್ಲದೇ ನಗ್ನರಾಗಿ ಓಡಾಡಲು ಇಷ್ತಪಡ್ತಾರಂತೆ!
ಮಾನ, ಮರ್ಯಾದೆ ಎಲ್ಲವನ್ನೂ ಮುಚ್ಚಲು ನಾವು ಬಟ್ಟೆ ಧರಿಸುತ್ತೇವೆ. ಆದ್ರೆ ಆದಿ ಮಾನವಾರು ಹೀಗೆ ಇರಲಿಲ್ಲವಂತೆ, ಅಲ್ಲೊಂದು, ಇಲ್ಲೊಂದು ಸಣ್ಣ ಬಟ್ಟೆಯೋ, ಅಥವಾ ಬೆತ್ತಲಾಗಿಯೋ ಜನ ವಾಸಿಸುತ್ತಿದ್ದರಂತೆ. ಇದನ್ನು ನೀವೂ ಕೇಳಿರಬಹುದು ಅಲ್ವಾ? ಈಗ್ಲೂ ಜನ ಬಟ್ಟೆ ಇಲ್ಲದೇ ಓಡಾಡಿದ್ರೆ ಹೇಗಿರಬಹುದು. ಹೌದು, ಬ್ರಿಟನ್ ನಲ್ಲೊಂದು ತಾಣವಿದೆ. ಅಲ್ಲಿನ ಜನಸಂಖ್ಯೆಯ 14% ರಷ್ಟು ಜನರು ಬಟ್ಟೆಗಳಿಲ್ಲದೆ ಬದುಕಲು ಬಯಸುತ್ತಾರೆ, ಮಾರುಕಟ್ಟೆಯಿಂದ ರೆಸ್ಟೋರೆಂಟ್ ವರೆಗೆ, ಎಲ್ಲಾ ಕಡೆ ಬೆತ್ತಲಾಗಿ ಓಡಾಡ್ತಾರೆ.
ಜನರು ಜೀವನದಲ್ಲಿ ಮರ್ಯಾದೆಯಿಂದ ಬದುಕಲು, ತಮ್ಮ ಮಾನ ಮುಚ್ಚಲು ಬಟ್ಟೆಗಳನ್ನು ಧರಿಸುತ್ತಾರೆ ಅಲ್ವಾ?, ಆದರೆ ಬ್ರಿಟನ್ನಿನ ಜನರು ವಿಭಿನ್ನ 'ಹವ್ಯಾಸ' ಹೊಂದಿದ್ದಾರೆ. ಅದರ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಹೀಗೂ ಜನವಾಸಿಸ್ತಾರಾ ಎಂದು ನಿಮಗೆ ಅನಿಸದೇ ಇರದು. ಅಂದ್ರೆ ಅಲ್ಲಿ ಒಂದು ಜನ ಸಮೂಹ ಬೆತ್ತಲಾಗಿ ವಾಸಿಸಲು ಇಷ್ಟ ಪಡ್ತಾರೆ.
ಒಂದು ಸಮೀಕ್ಷೆಯ ಪ್ರಕಾರ, ಒಟ್ಟು ಜನಸಂಖ್ಯೆಯ 14% ಬ್ರಿಟನ್ನರು ತಮ್ಮನ್ನು ತಾವು ನಗ್ನರಾಗಿ ಬದುಕಲು ಇಷ್ಟ ಪಡ್ತಾರೆ. ಅಂದರೆ, ಬಟ್ಟೆಗಳಿಲ್ಲದೆ ಬದುಕುವುದು ನಿಜವಾದ ಜೀವನ ಎಂದು ಅವರು ಭಾವಿಸುತ್ತಾರೆ. ಯುಕೆಯ ಪ್ರಮುಖ ಮಾಧ್ಯಮ ಸಂಸ್ಥೆ ಇಂಡಿಪೆಂಡೆಂಟ್ ಈ ಬಗ್ಗೆ ಒಂದು ವರದಿ ಪ್ರಕಟಿಸಿದೆ. ಈ ಚಿತ್ರಗಳು ಇಂಗ್ಲೆಂಡಿನ ಈಸ್ಟ್ ಮಿಡ್ ಲ್ಯಾಂಡ್ಸ್ ನ ಲಿಂಕನ್ ಷೈರ್ ಎಂಬ ಕೌಂಟಿಯಿಂದ ಬಂದಿವೆ.
ಲಿಂಕನ್ ಷೈರ್ ನ ಪೂರ್ವಕ್ಕೆ ಉತ್ತರ ಸಮುದ್ರದ ಉದ್ದವಾದ ಕಡಲತೀರವಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಪುರುಷರು ಇಲ್ಲಿ ಬೆತ್ತಲೆಯಾಗಿ ತಿರುಗಾಡುವುದನ್ನು ಕಾಣಬಹುದು. ಸೈಕ್ಲಿಂಗ್ ನಿಂದ ಹಿಡಿದು ತಿನ್ನುವುದು ಮತ್ತು ತಿರುಗಾಡೋದು; ಕ್ರೀಡೆಗಳು, ತೋಟಗಾರಿಕೆ, ಹೀಗೆ ಎಲ್ಲಾ ಕಡೆ ಜನ ಬಟ್ಟೆ ಇಲ್ಲದೆ ಓಡಾಡಲು ಇಷ್ಟ ಪಡ್ತಾರೆ.
ಬ್ರಿಟನ್ ನಲ್ಲಿ ಇದ್ದಕ್ಕಿದ್ದಂತೆ ಇಂತಹ ನಗ್ನತೆಯು (nudity) ಏಕೆ ಟ್ರೆಂಡ್ ಆಗಲು ಪ್ರಾರಂಭಿಸಿದೆ ಎಂದು ಕಂಡುಹಿಡಿಯಲು ಕೆಲವು ದಿನಗಳ ಹಿಂದೆ ಒಂದು ಸಮೀಕ್ಷೆ ನಡೆಸಲಾಯಿತು. ಜಾಗತಿಕ ಮಾರುಕಟ್ಟೆ ಸಂಶೋಧನೆ ಮತ್ತು ಸಾರ್ವಜನಿಕ ಅಭಿಪ್ರಾಯ ತಜ್ಞ ಇಪ್ಸೊಸ್ ಅವರು ಒಂದು ಸಮೀಕ್ಷೆ ನಡೆಸಿದರು. ಇದರಲ್ಲಿ ಬ್ರಿಟನ್ನಿನ 14% ಜನರು ತಮ್ಮನ್ನು ನಗ್ನತಾವಾದಿಗಳೆಂದು ಬಿಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಸಾಮಾನ್ಯವಾಗೊ ಅಂದಾಜು 6.75 ಮಿಲಿಯನ್ ಜನರು (ಸುಮಾರು 7 ರಲ್ಲಿ 1) ಈಜು, ಸನ್ ಬಾತ್ (sunbath) ಮಾಡೋವಾಗ ಅಥವಾ ಅಂತಹ ಇತರ ಚಟುವಟಿಕೆಗಳನ್ನು ಆನಂದಿಸುವಾಗ ಬಟ್ಟೆ ತೆಗೆಯಲು ಬಯಸುತ್ತಾರೆ. ಆದರೆ ಇಲ್ಲಿನ ಜನರು ಬೆತ್ತಲಾಗಿ ದಿನನಿತ್ಯದ ಎಲ್ಲಾ ಕೆಲಸಗಳನ್ನು ಮಾಡಲು ಇಷ್ಟಪಡ್ತಾರೆ. 1975 ರಲ್ಲಿ ಇಪ್ಸೊಸ್ ಕಂಪನಿಯನ್ನು ಸ್ಥಾಪಿಸಲಾಯಿತು. ಇದರ ಪ್ರಧಾನ ಕಚೇರಿ ಫ್ರಾನ್ಸ್ ನ ಪ್ಯಾರಿಸ್ ನಲ್ಲಿದೆ.
ಬ್ರಿಟನ್ ನಲ್ಲಿ ನ್ಯೂಡಿಸ್ಟ್ ಗಳಿಗೆ (nudist) ಸಾಕಷ್ಟು ವಿವಿಧ ಮನರಂಜನಾ ಕೇಂದ್ರಗಳಿವೆ.. ಯುಕೆಯ ಅತಿದೊಡ್ಡ ನಗ್ನತಾ ರೆಸಾರ್ಟ್, ಕೆಂಟ್ನಲ್ಲಿರುವ ನ್ಯಾಚುರಲಿಸ್ಟ್ ಫೌಂಡೇಶನ್. ಇಲ್ಲಿ ಜನರು ನಗ್ನರಾಗಿಯೇ ರೆಸ್ಟೋರೆಂಟ್ ಗೆ ಬಂದು ಎಂಜಾಯ್ ಮಾಡ್ತಾರೆ. ಲಿಂಕನ್ ಶೈರ್ ನಲ್ಲಿ ನಗ್ನ ಯೋಗ ಸೆಷನ್ ಗಳು, ಬುಕ್ ಕ್ಲಬ್ ಗಳು, ಬೈಕ್ ಸವಾರಿಗಳು ಮತ್ತು ನ್ಯೂಡಿಸ್ಟ್ ಗಳಿಗಾಗಿ ಡಿನ್ನರ್-ಡಿಸ್ಕೋಸ್ ಎಲ್ಲವನ್ನೂ ಆನ್ ಲೈನ್ ನಲ್ಲಿ ಸುಲಭವಾಗಿ ಕಾಯ್ದಿರಿಸಬಹುದು. ಈ ತಾಣಗಳಲ್ಲಿ ಜನರು ನ್ಯೂಡಿಟಿಯನ್ನು ಸಂಪೂರ್ಣವಾಗಿ ಎಂಜಾಯ್ ಮಾಡ್ತಾರೆ.
ಬ್ರಿಟಿಷ್ ನ್ಯಾಚುರಿಸಂ ಆಯೋಜಿಸಿದ ವಾರ್ಷಿಕ ನ್ಯೂಡ್ ಫೆಸ್ಟ್ (nude fest) ವೀಕೆಂಡ್ ಈ ಬೇಸಿಗೆಯಲ್ಲಿ ದಾಖಲೆಯ 700 ಜನರನ್ನು ಆಕರ್ಷಿಸಿತು. ಏಳ್ನೂರಕ್ಕೂ ಅಧಿಕ ಜನರು ಈ ಫೆಸ್ಟ್ ನಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ಆದರೆ ಕಳೆದ ದಶಕದಲ್ಲಿ ಈ ಸಂಖ್ಯೆ 300 ಕ್ಕಿಂತ ಹೆಚ್ಚಾಗಿರಲಿಲ್ಲ. ಅಂದರೆ, ಇತ್ತೀಚಿನ ದಿನಗಳಲ್ಲಿ ನಗ್ನ ಜನರ ಸಂಖ್ಯೆ ಹೆಚ್ಚುತ್ತಿದೆ.
ನೇಕೆಡ್ ಲಿಂಕನ್ಶೈರ್ನ ಸ್ಥಾಪಕ ಕ್ರಿಸ್ ಪೆಟ್ಚೆ ಹೇಳುವಂತೆ, ನಿಮ್ಮ ಬಟ್ಟೆಗಳನ್ನು ತೆಗೆದು ಹಾಕೋದ್ರಿಂದ, ನಿಮ್ಮ ಮತ್ತು ಇತರರ ನಡುವಿನ ಪ್ರತ್ಯೇಕತೆಯ ಪದರವನ್ನು ನೀವು ತೆಗೆದುಹಾಕುತ್ತೀರಿ. ನೀವು ಬೆತ್ತಲೆಯಾಗಿರುವಾಗ, ನಿಮ್ಮ ಬಗ್ಗೆ ಯಾರೂ ಪೂರ್ವಗ್ರಹಪೀಡಿತರಾಗಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.