- Home
- Life
- Travel
- Kottiyoor Shiva Temple: ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಕೇರಳದ ಶಿವ ದೇಗುಲದ ರೋಚಕ ಇತಿಹಾಸ ತಿಳಿಯಿರಿ
Kottiyoor Shiva Temple: ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಕೇರಳದ ಶಿವ ದೇಗುಲದ ರೋಚಕ ಇತಿಹಾಸ ತಿಳಿಯಿರಿ
ಕೊಟ್ಟಿಯೂರು ಪ್ರಾಚೀನ ಶಿವ ದೇವಾಲಯವು ದಕ್ಷಿಣ ಭಾರತದಲ್ಲಿ ವಿಶೇಷ ಮನ್ನಣೆಯನ್ನು ಹೊಂದಿರುವ ದೇವಾಲಯವಾಗಿದೆ. ಈ ದೇವಾಲಯದ ಮಹತ್ವವೇನು, ಇಲ್ಲಿನ ರೋಚಕ ಇತಿಹಾಸ ಏನು ತಿಳಿಯೋಣ.
- FB
- TW
- Linkdin
Follow Us
)
ದಕ್ಷಿಣ ಭಾರತದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇಲ್ಲಿ ಅನೇಕ ಶಿವ ದೇವಾಲಯಗಳಿವೆ, ಅವುಗಳಲ್ಲಿ ಒಂದು ಕೇರಳದಲ್ಲಿರುವ ಕೊಟ್ಟಿಯೂರಿನ ಶಿವ ದೇವಾಲಯ. ಇಲ್ಲಿನ ಅಕ್ಕರೆ ಕೊಟ್ಟಿಯೂರು (Akkare Kottiyoor) ಪ್ರಾಚೀನ ಶಿವ ದೇವಾಲಯವು ಹಿಂದೂ ಪುರಾಣಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಮತ್ತು ಅದರ ವಿಶಿಷ್ಟ ಧಾರ್ಮಿಕ ಆಚರಣೆಗಳು ಮತ್ತು ಹಬ್ಬಗಳಿಗೆ ಹೆಸರುವಾಸಿಯಾಗಿದೆ.
ಈ ದೇವಾಲಯದ ದೊಡ್ಡ ವಿಶೇಷತೆಯೆಂದರೆ ಅದರ ವಾರ್ಷಿಕ ಉತ್ಸವ, ಇದನ್ನು ವೈಶಾಖಮೋತ್ಸವ ಎಂದು ಕರೆಯಲಾಗುತ್ತದೆ. ಅಕ್ಕರೆ ಕೊಟ್ಟಿಯೂರು ಶಿವ ದೇವಾಲಯದ ಇತಿಹಾಸ, ಮಹತ್ವ ಮತ್ತು ಇತಿಹಾಸವನ್ನು ತಿಳಿದುಕೊಳ್ಳೋಣ.
ಕೊಟ್ಟಿಯೂರು ದೇವಸ್ಥಾನದ ಇತಿಹಾಸ
ಕೊಟ್ಟಿಯೂರು ದೇವಸ್ಥಾನದ ಇತಿಹಾಸವು ಮಾತಾ ಸತಿಯ ಕಥೆಯೊಂದಿಗೆ ಸಂಬಂಧ ಹೊಂದಿದೆ. ಈ ಪೌರಾಣಿಕ ಕಥೆಯ ಪ್ರಕಾರ, ಒಮ್ಮೆ ಮಾತಾ ಸತಿಯ ತಂದೆ ಪ್ರಜಾಪತಿ ದಕ್ಷನು (Daksha) ಯಾಗವನ್ನು ಆಯೋಜಿಸಿದಾಗ, ಅವನು ಶಿವನನ್ನು ಯಜ್ಞಕ್ಕೆ ಆಹ್ವಾನಿಸಲಿಲ್ಲ. ಆ ಯಾಗವನ್ನು ಕುಟ್ಟಿಯೂರು ದೇವಸ್ಥಾನದ ಪ್ರದೇಶದಲ್ಲಿಯೇ ಆಯೋಜಿಸಲಾಗಿತ್ತು ಎನ್ನಲಾಗಿದೆ.
ದೇವಾಲಯದ 'ಕೊಟ್ಟಿಯೂರು' ಎಂಬ ಹೆಸರು 'ಕತ್ತಿ-ಯೂರ್' ನಿಂದ ವಿಕಸನಗೊಂಡಿದೆ, ಇದು ಪುರಳಿಮಲೆಯ ಕಟ್ಟನ್ ರಾಜವಂಶದೊಂದಿಗೆ ಸಂಬಂಧ ಹೊಂದಿದೆ. ಈ ದೇವಾಲಯದ ಶಿವಲಿಂಗವು ಸ್ವಯಂಭು (ನೆಲದೊಳಗಿನಿಂದ ಸ್ವಯಂ ಪ್ರಕಟವಾಗಿದೆ) ಲಿಂಗವಾಗಿದೆ. ಇದನ್ನು ನದಿ ಕಲ್ಲುಗಳಿಂದ ಮಾಡಿದ ಎತ್ತರದ ವೇದಿಕೆಯ ಮೇಲೆ ಸ್ಥಾಪಿಸಲಾಗಿದೆ.
ಅಕ್ಕರೆ ಮತ್ತು ಇಕ್ಕರೆ ಕೊಟ್ಟಿಯೂರು ದೇವಾಲಯಗಳು
ಬಾವಲಿ ನದಿಯ ದಡದಲ್ಲಿ ಅಕ್ಕರೆ ಕೊಟ್ಟಿಯೂರು ಮತ್ತು ಇಕ್ಕರೆ ಕೊಟ್ಟಿಯೂರು (Ikkare Kottiyoor)ದೇವಾಲಯ ಎಂಬ ಎರಡು ದೇವಾಲಯಗಳಿವೆ. ಅಕ್ಕರೆ ಕೊಟ್ಟಿಯೂರು ಶಿವನ ದೇವಾಲಯವಾಗಿದ್ದು, ದೇವಾಲಯದ ವಾರ್ಷಿಕ ವೈಶಾಖ ಮಹೋತ್ಸವ ನಡೆಯುವಾಗ ವರ್ಷದಲ್ಲಿ 28 ದಿನಗಳು ಮಾತ್ರ ತೆರೆದಿರುತ್ತದೆ. ಈ ವರ್ಷವೂ ವೈಶಾಖ ಮಹೋತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸಿದ್ದರು.
ಈ ವರ್ಷವೂ ವೈಶಾಖ ಮಹೋತ್ಸವವು ಸಂಭ್ರಮದಿಂದ ನಡೆಯುತ್ತಿದ್ದು. ಜೂನ್ 8ನೇ ತಾರೀಕಿನಂದು ಆರಂಭವಾಗಿತ್ತು, ಇದು ಜುಲೈ 4ರವರೆಗೂ ನಡೆಯಲಿದೆ. ಕೆಲವು ದಿನಗಳಲ್ಲಿ ಇಲ್ಲಿ ಮಹಿಳೆಯರಿಗೆ ಪ್ರವೇಶ ಇರೋದಿಲ್ಲ.
ಕೊಟ್ಟಿಯೂರು ದೇವಸ್ಥಾನದಲ್ಲಿ ವೈಶಾಖಮೋತ್ಸವವನ್ನು ಹೇಗೆ ನಡೆಸಲಾಗುತ್ತದೆ?
ಕೊಟ್ಟಿಯೂರು ದೇವಸ್ಥಾನದಲ್ಲಿ 28 ದಿನಗಳ ಕಾಲ ನಡೆಯುವ ವೈಶಾಖಮೋತ್ಸವವು (Vaishakotsava) ದೇವರಿಗೆ ತುಪ್ಪದಿಂದ ಸ್ನಾನ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಇದನ್ನು ನೆಯ್ಯಟ್ಟಂ ಎಂದು ಕರೆಯಲಾಗುತ್ತದೆ.
ವೈಶಾಖಮೋತ್ಸವವು ದೇವರಿಗೆ ತೆಂಗಿನ ನೀರಿನಿಂದ ಸ್ನಾನ ಮಾಡುವುದರೊಂದಿಗೆ ಕೊನೆಗೊಳ್ಳುತ್ತದೆ. ಈ ಆಚರಣೆಯನ್ನು ಎಲೆನೀರತ್ತಂ ಎಂದು ಕರೆಯಲಾಗುತ್ತದೆ.
ಕೊಟ್ಟಿಯೂರು ದೇವಸ್ಥಾನಗಳ ನವೀಕರಣವನ್ನು ಆದಿ ಗುರು ಶಂಕರಾಚಾರ್ಯರ ಕಾಲದಲ್ಲಿ ಮಾಡಲಾಯಿತು. ಕೊಟ್ಟಿಯೂರು ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಉತ್ಸವವಾದ ವೈಶಾಖಮೋತ್ಸವದ ನಿಯಮಗಳನ್ನು ಸಹ ಶಂಕರಾಚಾರ್ಯರು ಮಾಡಿದ್ದಾರೆ ಎಂದು ಹೇಳಲಾಗುತ್ತದೆ.