ಈ ನಿಗೂಢ ದೇವಾಲಯದಲ್ಲಿ ಶ್ರೀಕೃಷ್ಣ-ರಾಧಾ ಸ್ವತಃ ಗ್ರಾಮಕ್ಕೆ ತೆರಳಿ ಜನರ ಸಮಸ್ಯೆ ಪರಿಹರಿಸ್ತಾರಂತೆ
ಈ ವಿಶಿಷ್ಟ ಮಂದಿರದಲ್ಲಿ ಶ್ರೀ ಕೃಷ್ಣ ಮತ್ತು ರಾಧಾ ರಾಣಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ನಂಬಿಕೆಯ ಪ್ರಕಾರ, ಕೃಷ್ಣ ಮತ್ತು ರಾಧಾರಾಣಿ ಗ್ರಾಮದ ಜನರ ಸಮಸ್ಯೆಗಳನ್ನು ಕೇಳಲು ದೇವಾಲಯದಿಂದ ಹೊರಬರುತ್ತಾರೆ ಎನ್ನಲಾಗುತ್ತದೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದೆ.
ಭಾರತದ ದೇಶವನ್ನು ಆಧ್ಯಾತ್ಮಿಕ ಅಭ್ಯಾಸ ಮತ್ತು ಆಧ್ಯಾತ್ಮಿಕತೆಯ ಕೇಂದ್ರವೆಂದು (spiritual center) ಪರಿಗಣಿಸಲಾಗಿದೆ. ಇಲ್ಲಿ ಅನೇಕ ರಹಸ್ಯಗಳನ್ನು ಹೊಂದಿದ, ದೈವೀಕವಾದ ಸುಂದರ ದೇವಾಲಯವನ್ನು ಕಾಣಬಹುದು. ದೇವರ ಇರುವಿಕೆಯ ಕಾರಣದಿಂದಾಗಿ ಅನೇಕ ದೇವಾಲಯಗಳು ಇಂದಿಗೂ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇವುಗಳಲ್ಲಿ ಒಂದು ದೇವಾಲಯ ಬಿಹಾರಿ ಜು ದೇವಾಲಯ, ಇದು ತುಂಬಾ ನಿಗೂಢವಾಗಿದೆ.
ಬಿಹಾರಿ ಜು ದೇವಾಲಯವು (Bihari Ju Mandir) ಛತ್ತರ್ಪುರ್ ಜಿಲ್ಲಾ ಕೇಂದ್ರದಿಂದ 17 ಕಿ.ಮೀ ದೂರದಲ್ಲಿದೆ. ಬಿಹಾರಿ ಜು ಮಂದಿರದಲ್ಲಿ ಶ್ರೀ ಕೃಷ್ಣ ಮತ್ತು ರಾಧಾ ರಾಣಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ನಂಬಿಕೆಯ ಪ್ರಕಾರ, ಕೃಷ್ಣ ಮತ್ತು ರಾಧಾರಾಣಿ ಗ್ರಾಮದ ಜನರ ಸಮಸ್ಯೆಗಳನ್ನು ಕೇಳಲು ದೇವಾಲಯದಿಂದ ಹೊರಬರುತ್ತಾರೆ ಎನ್ನಲಾಗುತ್ತದೆ. ಇದು ಅನೇಕ ವರ್ಷಗಳಿಂದ ನಡೆಯುತ್ತಿದೆ.
ಶ್ರೀ ಕೃಷ್ಣ ಮತ್ತು ರಾಧಾ ರಾಣಿಯನ್ನು ಗ್ರಾಮಕ್ಕೆ ಕರೆತರಲಾಗುತ್ತದೆ: ಮಹಾರಾಜ್ಗಂಜ್ ಮತ್ತು ಶ್ಯಾಮರಿ ಪೂರ್ವಾ ಗ್ರಾಮಗಳ ಜನರು ವರ್ಷಕ್ಕೊಮ್ಮೆ ಬಿಹಾರಿ ಜೂ ದೇವಾಲಯಕ್ಕೆ ಡೋಲು ಬಾರಿಸುವ ಮೂಲಕ ಹೋಗುತ್ತಾರೆ ಮತ್ತು ಶ್ರೀ ಕೃಷ್ಣ ಮತ್ತು ರಾಧಾ ರಾಣಿಯನ್ನು (Shri Krishna and Radha Rani) ಪಲ್ಲಕ್ಕಿಗಳಲ್ಲಿ ಕೂರಿಸಿ ಗ್ರಾಮಕ್ಕೆ ಕರೆತರುತ್ತಾರೆ. ಭಗವಂತನ ಪಲ್ಲಕ್ಕಿ ಹೋಗುವ ದಾರಿಯಲ್ಲಿ, ಗ್ರಾಮದ ಜನರು ಶಂಖ ಮತ್ತು ಡೋಲುಗಳು ಇತ್ಯಾದಿ ವಾದ್ಯಗಳನ್ನು ನುಡಿಸುತ್ತಾರೆ.
ಪಲ್ಲಕಿಯ ಮೇಲೆ ಹೊತ್ತು ತಂದ ಶ್ರೀ ಕೃಷ್ಣ ಮತ್ತು ರಾಧಾ ರಾಣಿಯನ್ನು ಗ್ರಾಮದಲ್ಲಿ ದೊಡ್ಡ ವೇದಿಕೆಯ ಮೇಲೆ ಕೂರಿಸಲಾಗುತ್ತದೆ. ಇದರ ನಂತರ, ದೇವರು ಜನರ ತೊಂದರೆಗಳನ್ನು ಕೇಳುತ್ತಾನೆ ಎಂದು ನಂಬಲಾಗಿದೆ. ಮರುದಿನ ಬೆಳಿಗ್ಗೆ, ದೇವರ ಮೂರ್ತಿಗಳನ್ನು ಮತ್ತೆ ದೇವಾಲಯದಲ್ಲಿ ಇರಿಸಲಾಗುತ್ತದೆ.
ಈ ಅಭ್ಯಾಸವು ವರ್ಷಗಳಿಂದ ನಡೆಯುತ್ತಿದೆ: ನಂಬಿಕೆಯ ಪ್ರಕಾರ ನೂರಾರು ವರ್ಷಗಳ ಹಿಂದೆ ಮಹಾರಾಜ್ಗಂಜ್ ಮತ್ತು ಶ್ಯಾಮರಿ ಪೂರ್ವಾ ಗ್ರಾಮಗಳ ಜನರು ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಿದ್ದರಂತೆ. ಈ ಸಮಯದಲ್ಲಿ, ದೇವಾಲಯದ ಅರ್ಚಕರ ಜೊತೆಗೆ ಮಾತನಾಡಿ ಜನರು ಬಿಹಾರಿ ಜೂ ದೇವಾಲಯದಿಂದ ಶ್ರೀ ಕೃಷ್ಣ ಮತ್ತು ರಾಧಾ ರಾಣಿಯನ್ನು ತಮ್ಮ ಗ್ರಾಮಕ್ಕೆ ತರುವ ಬಗ್ಗೆ ನಿರ್ಧರಿಸಿದರು. ದೇವರೇ ಜನರ ಸಮಸ್ಯೆಗಳನ್ನು(people problem) ನೋಡುತ್ತಾನೆ ಎನ್ನುವುದು ಜನರ ನಂಬಿಕೆಯಾಗಿತ್ತು. ಹಳ್ಳಿಗರು ಅದನ್ನೇ ಮಾಡಿದರು. ಅಂದಿನಿಂದ, ಈ ಅಭ್ಯಾಸವು ನಡೆಯುತ್ತಿದೆ.
ಸಮಸ್ಯೆಗಳೆಲ್ಲಾ ದೂರ: ಜನರ ನಂಬಿಕೆಯ ಪ್ರಕಾರ ಯಾವಾಗಿನಿಂದ ದೇವರನ್ನು ಊರಿಗೆ ಕರೆದು ತಂದು ಸಮಸ್ಯೆಗಳನ್ನು ದೇವರ ಎದುರು ಹೇಳುವ ಪದ್ಧತಿ ಆರಂಭವಾಯಿತೋ, ಅಂದಿನಿಂದ ಜನರ ಕಷ್ಟ ಕಡಿಮೆಯಾಗುತ್ತಾ ಬಂತಂತೆ. ಹಾಗಾಗಿ ಜನರು ಇಂದಿಗೂ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ದೇವಾಲಯವನ್ನು ತಲುಪುವುದು ಹೇಗೆ?: ನೀವು ಬಿಹಾರಿ ಜೂ ದೇವಾಲಯಕ್ಕೆ ಭೇಟಿ ನೀಡಲು ಬಯಸಿದರೆ, ರಸ್ತೆಯ ಮೂಲಕ ಹೋಗಬಹುದು. ಇದಲ್ಲದೆ, ಇಂದೋರ್ ವಿಮಾನ ನಿಲ್ದಾಣ (Airport) ಮತ್ತು ಖಜುರಾಹೊ ವಿಮಾನ ನಿಲ್ದಾಣವೂ ಇದೆ, ಇದರ ಮೂಲಕ ನೀವು ಸುಲಭವಾಗಿ ದೇವಾಲಯವನ್ನು ತಲುಪಬಹುದು.