ಇನ್ಮುಂದೆ ಸಲೀಸಾಗಿ ಸಿಗುತ್ತೆ ಕನ್ಫರ್ಮ್ ಟಿಕೆಟ್; ಭಾರತೀಯ ರೈಲ್ವೆಯಿಂದ ಮಹತ್ವದ ನಿರ್ಧಾರ
ರೈಲು ಟಿಕೆಟ್ ಬುಕಿಂಗ್ ಮಾಡುವ ಕುರಿತು ಭಾರತೀಯ ರೈಲ್ವೆ ಹೊಸ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಪ್ರಯಾಣಿಕರಿಗೂ ಕನ್ಫರ್ಮ್ ಟಿಕೆಟ್ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಮಹತ್ವದ ಹೆಜ್ಜೆಯನ್ನು ಭಾರತೀಯ ರೈಲ್ವೆ ಇರಿಸಿದೆ.

ರೈಲು ಪ್ರಯಾಣವು ಜನರಿಗೆ ಒಂದು ಪ್ರಮುಖ ಸಾರಿಗೆ ಮಾರ್ಗವಾಗಿದೆ. ಜನರು ಬಸ್ ಮತ್ತು ಕಾರ್‌ಗಿಂತ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಭದ್ರತೆ, ಟಿಕೆಟ್ ದರ ಹಾಗೂ ಮೂಲ ಸೌಕರ್ಯಗಳೇ ಇದಕ್ಕೆ ಪ್ರಮುಖ ಕಾರಣ. ಅದರಲ್ಲೂ ದೀರ್ಘ ಪ್ರಯಾಣಕ್ಕೆ ರೈಲು ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ದೀರ್ಘ ಪ್ರಯಾಣದ ರೈಲುಗಳಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳು ಸಿಗೋದು ತುಂಬಾನೇ ಮುಖ್ಯವಾಗುತ್ತದೆ. ಕನಿಷ್ಠ 30 ದಿನಗಳ ಮುಂಚೆಯೇ ಪ್ಲಾನ್ ಮಾಡಿದ್ರೆ ಟಿಕೆಟ್ ಕನ್ಫರ್ಮ್ ಸಿಗುವ ಸಾಧ್ಯತೆಗಳಿರುತ್ತವೆ. ಆದ್ರೆ ಕೆಲ ಮಧ್ಯವರ್ತಿಗಳು/ಏಜೆನ್ಸಿಗಳು ನಕಲಿ ಐಡಿ ಬಳಸಿ ಟಿಕೆಟ್ ಬುಕ್ ಮಾಡಿ, ಅದನ್ನು ಡಬಲ್ ದರಕ್ಕೆ ಮಾರಾಟ ಮಾಡುವ ಪ್ರಕರಣಗಳು ಸಹ ವರದಿಯಾಗುತ್ತವೆ.
ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಭಾರತೀಯ ರೈಲ್ವೆಯ ಕನ್ಫರ್ಮ್ ಟಿಕೆಟ್ ಪಡೆದು ಪ್ರಯಾಣಿಸಲು ಪುಣ್ಯ ಮಾಡರಬೇಕು. ಕೆಲವೊಮ್ಮೆ ತತ್ಕಾಲ್‌ನಲ್ಲಿಯೂ ಟಿಕೆಟ್ ಬುಕ್ ಮಾಡಲು ಸಾಧ್ಯವಾಗಲ್ಲ. ಹೆಚ್ಚು ಜನರು ಏಕಕಾಲದಲ್ಲಿ ಟಿಕೆಟ್ ಮಾಡಲು ಮುಂದಾಗೋದರಿಂದ IRCTC/Website ಓಪನ್ ಆಗದೇ ಸಮಸ್ಯೆಯುಂಟಾಗುತ್ತದೆ.
ಬ್ಲಾಕ್ ಮಾರ್ಕೆಟಿಂಗ್‌ನಲ್ಲಿ ಟಿಕೆಟ್ ಮಾರಾಟ: ಎಲ್ಲರಿಗೂ ಸಮಾನಾದ ಅವಕಾಶ ನೀಡಲು ಭಾರತೀಯ ರೈಲ್ವೇ ಟಿಕೆಟ್ ಮಾರಾಟವನ್ನು ಪರಿಶೀಲಿಸುತ್ತದೆ. ಬ್ಲಾಕ್ ಮಾರ್ಕೆಟಿಂಗ್ ನಿಲ್ಲಿಸಲು ಆರ್‌ಪಿಎಫ್‌ಗೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ.
ರೈಲ್ವೆ ಪೊಲೀಸರಿಗೆ ಮಾರ್ಗಸೂಚಿಗಳು: ಆರ್‌ಪಿಎಫ್ ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು ಮತ್ತು ಎಲ್ಲರಿಗೂ ಸುಗಮ ರೈಲ್ವೆ ಸೇವೆಗಳನ್ನು ಒದಗಿಸಬೇಕು ಎಂದು ಖಡಕ್ ಸೂಚನೆಯನ್ನು ನೀಡಲಾಗಿದೆ. ಬ್ಲಾಕ್ ಮಾರ್ಕೆಟಿಂಗ್ ನಲ್ಲಿ ಟಿಕೆಟ್ ಮಾರಾಟ ಮಾಡುವವರಿಗೆ ಜೈಲು ಸೇರಿ ಕಠಿಣ ಶಿಕ್ಷೆಯಾಗಲಿದೆ. RPF IRCTC ಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ.
AI ತಂತ್ರಜ್ಞಾನದೊಂದಿಗೆ ಕಣ್ಗಾವಲು: AI ನಕಲಿ ಟಿಕೆಟ್‌ಗಳು ಮತ್ತು ಅಪರಾಧಿಗಳನ್ನು ಗುರುತಿಸುತ್ತದೆ. ಅದೇ IP ಅಥವಾ VPN ನಿಂದ ಮಾಡಿದ ಬುಕಿಂಗ್‌ಗಳನ್ನು ತಡೆಹಿಡಿಯಲಾಗುತ್ತದೆ. ಬ್ಲಾಕ್ ಮಾರ್ಕೆಟಿಂಗ್ ನಿಯಂತ್ರಣವಾದ್ರೆ ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಸಿಗಲಿದೆ ಎಂದು ನಂಬಲಾಗಿದೆ.