ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡದೇ ಪ್ರಯಾಣದ ದಿನಾಂಕ ಬದಲಿಸೋದು ಹೇಗೆ?
ರೈಲು ಟಿಕೆಟ್ ಮರುಯೋಜನೆ: ನೀವು ಬುಕ್ ಮಾಡಿದ ರೈಲು ಟಿಕೆಟ್ ಅನ್ನು ರದ್ದುಗೊಳಿಸದೆಯೇ ಬೇರೆ ದಿನಾಂಕಕ್ಕೆ ಬದಲಾಯಿಸಬಹುದು. ಅದು ಹೇಗೆ ಅಂತ ನೋಡೋಣ ಬನ್ನಿ.
ದಿನಾಲು ಲಕ್ಷಾಂತರ ಪ್ರಯಾಣಿಕರಿಗೆ ಆಸರೆಯಾಗಿರೋದು ಭಾರತೀಯ ರೈಲ್ವೆ. ಈಗಾಗಲೇ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವ ರೈಲ್ವೆ, ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದು ಮಾಡದೆಯೇ ಬೇರೆ ದಿನಾಂಕಕ್ಕೆ ಬದಲಾಯಿಸಿಕೊಳ್ಳುವ ಸೌಲಭ್ಯವನ್ನೂ ನೀಡುತ್ತಿದೆ. ಆದರೆ ಈ ವಿಷಯ ಗೊತ್ತಿಲ್ಲದೇ ಹಲವು ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡುತ್ತಾರೆ. ನಂತರ ಹೊಸ ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ.
ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿ ಉತ್ಸಾಹದಿಂದ ಟಿಕೆಟ್ ಬುಕ್ ಮಾಡಿರ್ತೀರಿ. ಆದ್ರೆ, ಪ್ರಯಾಣದ ದಿನಾಂಕ ಹತ್ತಿರ ಬರುತ್ತಿದ್ದಂತೆ, ಅನಿರೀಕ್ಷಿತ ಸಂದರ್ಭಗಳು ಎದುರಾಗಿ ನಿಮ್ಮ ಯೋಜನೆಗಳು ಬದಲಾಗುತ್ತವೆ. ಅಂತಹ ಸಂದರ್ಭಗಳಲ್ಲಿ, ಟಿಕೆಟ್ ರದ್ದು ಮಾಡೋದು ಕಷ್ಟವಾಗುತ್ತದೆ. ಆದ್ರೆ ಟಿಕೆಟ್ ಕ್ಯಾನ್ಸಲ್ ಮಾಡದೇ ಪ್ರಯಾಣದ ದಿನಾಂಕವನ್ನು ಬದಲಿಸಬಹುದು.
ರೈಲು ಟಿಕೆಟ್ ರದ್ದತಿ
ನಿಮ್ಮ ಇಷ್ಟದ ದಿನಾಂಕಕ್ಕೆ ಬುಕ್ ಮಾಡಿದ ಟಿಕೆಟ್ ಅನ್ನು ಬದಲಾಯಿಸಿಕೊಳ್ಳಬಹುದು. ಜನರ ಈ ಹೊರೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ಒಂದು ಪರಿಹಾರ ಕಂಡುಕೊಂಡಿದೆ. ರದ್ದು ಮಾಡುವ ಅಗತ್ಯವಿಲ್ಲದೆ ನಿಮ್ಮ ಟಿಕೆಟ್‌ನ ಪ್ರಯಾಣದ ದಿನಾಂಕವನ್ನು ಬದಲಾಯಿಸಲು ಈಗ ನಿಮಗೆ ಅವಕಾಶವಿದೆ. ರೈಲು ಹೊರಡುವ ಸುಮಾರು 48 ಗಂಟೆಗಳ ಮೊದಲು ಮುಂಗಡ ಬುಕಿಂಗ್ ಕೌಂಟರ್‌ನಲ್ಲಿ ಖಚಿತಪಡಿಸಿದ ಟಿಕೆಟ್ ಅನ್ನು ಸಲ್ಲಿಸಿದರೆ ಸಾಕು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೂ, ಆ ಟಿಕೆಟ್ ಪ್ರತಿಯೊಂದಿಗೆ ನೀವು ರೈಲು ನಿಲ್ದಾಣದಲ್ಲಿರುವ ಕೌಂಟರ್‌ಗೆ ಹೋಗಬೇಕು.
ಟಿಕೆಟ್ ಮರುಯೋಜನೆ
ಸಾಮಾನ್ಯವಾಗಿ ನಿಮ್ಮ ರೈಲು ಹೊರಡುವ 48 ಗಂಟೆಗಳ ಮೊದಲು ಈ ಬದಲಾವಣೆಯನ್ನು ಮಾಡಬಹುದು. ಸರ್ಕಾರಿ ನೌಕರರಾಗಿದ್ದರೆ, ರೈಲು ಹೊರಡುವ 24 ಗಂಟೆಗಳ ಮೊದಲು ಕೂಡ ತಮ್ಮ ಪ್ರಯಾಣದ ದಿನಾಂಕವನ್ನು ಬದಲಾಯಿಸಿಕೊಳ್ಳಬಹುದು ಎಂಬ ಮಾಹಿತಿ ಇದೆ. ಆದರೆ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೂ, ರೈಲು ನಿಲ್ದಾಣದಲ್ಲಿರುವ ಟಿಕೆಟ್ ಕೌಂಟರ್‌ಗಳಿಗೆ ನೇರವಾಗಿ ಹೋಗಿ ಮಾತ್ರ ಈ ಬದಲಾವಣೆಯನ್ನು ಮಾಡಬಹುದು.
ರೈಲು ನಿಲ್ದಾಣದ ಕೌಂಟರ್‌ಗಳಿಗೆ ಹೋಗಿಯೇ ನಿಮ್ಮ ಪ್ರಯಾಣದ ದಿನಾಂಕವನ್ನು ಬದಲಿಸಿಕೊಳ್ಳಬಹುದು. ಇದರಿಂದ ಪದೇ ಪದೇ ಟಿಕೆಟ್ ಬುಕ್ ಮಾಡುವ ಹೊರೆಯನ್ನು ಭಾರತೀಯ ರೈಲ್ವೆ ಮಾಡಿದೆ. ನೀವು ಬುಕ್ ಮಾಡಿದ ವರ್ಗಕ್ಕಿಂತ ಉನ್ನತ ವರ್ಗದ ಟಿಕೆಟ್ ಆಯ್ಕೆ ಮಾಡಿದರೆ, ಶುಲ್ಕದಲ್ಲಿ ಬದಲಾವಣೆ ಇರುತ್ತದೆ.