ರೈಲು ಪ್ರಯಾಣಕ್ಕೆ ತತ್ಕಾಲ್ ಟಿಕೆಟ್ ಬುಕಿಂಗ್ ಕನ್ಫರ್ಮ್ ಆಗಬೇಕಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಭಾರತದ ಜನರ ಸಂಚಾರಕ್ಕೆ ಜೀವನಾಡಿ ಆಗಿರುವ ರೈಲು ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಮಾಡುವುದೇ ದೊಡ್ಡ ಸಾಹಸವಾಗಿದೆ. ಅದರಲ್ಲೂ ತುರ್ತು ರೈಲು ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವೇ ಇಲ್ಲ ಎನ್ನುವವರಿಗೆ ತತ್ಕಾಲ್ ಟಿಕೆಟ್ ಬುಕಿಂಗ್ ಆಶಾದಾಯಕವಾಗಿದೆ. ಆದರೆ, ತತ್ಕಾಲ್‌ನಲ್ಲೂ ಟಿಕೆಟ್ ಬುಕಿಂಗ್ ಫೇಲ್ ಆಗುತ್ತದೆ ಎನ್ನುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕ ನಿಮ್ಮ ಸೀಟ್ ಕನ್ಫರ್ಮ್ ಮಾಡಿಕೊಳ್ಳಬಹುದು.
IRCTC ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಈ ಟಿಪ್ಸ್ ಬಳಸಿ:
ಇತರರಿಗಿಂತ ವೇಗವಾಗಿ ಬುಕ್ ಮಾಡಿ: ಐಆರ್‌ಸಿಟಿಸಿಯ (IRCTC) ವಿಶೇಷ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬೇಕಾದರೆ ನೀವು ಇತರೆ ಟಿಕೆಟ್ ಬುಕಿಂಗ್ ಮಾಡುವವರಿಗಿಂತ ಹೆಚ್ಚು ವೇಗವಾಗಿ ಬುಕಿಂಗ್ ಮಾಬೇಕು. ಇದಕ್ಕಾಗಿ ತತ್ಕಾಲ್ ವೆಬ್‌ಸೈಟ್ ಓಪನ್ ಮಾಡುವುದು, ಸ್ಪೀಡ್ ಆಗಿ ಮಾಹಿತಿ ಭರ್ತಿ ಮಾಡುವುದು, ಪೇಮೆಂಟ್ ಮಾಡುವುದನ್ನು ವೇಗವಾಗಿ ಮಾಡಿದಲ್ಲಿ ಮಾತ್ರ ನಿಮಗೆ ಟಿಕೆಟ್ ಬುಕಿಂಗ್ ಆಗುತ್ತದೆ ರೈಲು ಟಿಕೆಟ್ ಅನ್ನು (ತತ್ಕಾಲ್ ರೈಲು ಟಿಕೆಟ್ ಅನ್ನು ದೃಢೀಕರಿಸಿ) ಇತರರಿಗಿಂತ ವೇಗವಾಗಿ ಬುಕ್ ಮಾಡಬಹುದು.
ಟಿಕೆಟ್ ಬುಕಿಂಗ್‌ಗೆ ಬಹು ಸಾಧನಗಳನ್ನು ಬಳಸಿ: ರೈಲ್ವೆ ಇಲಾಖೆಯ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಹಲವಾರು ವಿಧಾನಗಳನ್ನು ಪ್ರಯತ್ನಿಸಬೇಕು. ಇದರಿಂದ ನಿಮ್ಮ ದೃಢೀಕೃತ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿಭಿನ್ನ ಲಾಗಿನ್ ಐಡಿಗಳೊಂದಿಗೆ ಒಂದೇ ಸಮಯದಲ್ಲಿ ವಿವಿಧ ಬ್ರೌಸರ್‌ಗಳು ಅಥವಾ ಕಂಪ್ಯೂಟರ್ ಹಾಗೂ ಮೊಬೈಲ್‌ಗಳಲ್ಲಿ ನೀವು ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ಕನಿಷ್ಠ ಒಂದು ಖಾತೆಯಿಂದ ಬುಕ್ ಮಾಡಿದ ಕನ್ಫರ್ಮ್ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಪ್ರಯಾಣಿಕರ ವಿವರಗಳನ್ನು ಸಿದ್ಧವಾಗಿಡಿ: ಇನ್ನು ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭಿಸುವ ಮುನ್ನ ಪ್ರಯಾಣಿಕರ ಹೆಸರು, ವಯಸ್ಸು, ಆಧಾರ್ ಕಾರ್ಡ್ ನಂಬರ್ ಸೇರುದಂತೆ ಇತ್ಯಾದಿ ವಿವರಗಳನ್ನು ಮುಂಚಿತವಾಗಿ ಬರೆದಿಟ್ಟುಕೊಳ್ಳಿ. ಇದರಿಂದ ಬುಕಿಂಗ್ ಮಾಡುವಾಗ ಹೆಚ್ಚು ವೇಗವಾಗಿ ಭರ್ತಿ ಮಾಡಬಹುದು.
ಇಂಟರ್ನೆಟ್ ಸಂಪರ್ಕ ಪರಿಶೀಲಿಸಿ: ತತ್ಕಾಲ್ ಟಿಕೆಟ್ ಬುಕಿಂಗ್ ಎಂದರೆ ಇದೀಗ ತ್ವರಿತ ಬುಕಿಂಗ್ ಎನ್ನುವಂತಾಗಿದೆ. ಆದ್ದರಿಂದ ನೀವು ಸ್ವಲ್ಪ ಸಮಯದಲ್ಲಿ ಟಿಕೆಟ್ ಬುಕ್ ಮಾಡಲು ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ ಹೊಂದಿರುವುದು ಬಹಳ ಮುಖ್ಯ. ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು, ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯವಿರುವ ಸ್ಥಳದಲ್ಲಿ ಇದ್ದುಕೊಂಡು ಲಾಗಿನ್ ಆಗಬೇಕು.
ಪಾವತಿ ಆಯ್ಕೆಗಳು ಸುಲಭವಾಗಿರಲಿ: ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆ ವೇಗವಾಗಿ ಮಾಡಬೇಕಾದ್ದರಿಂದ ನೀವವು ಎಷ್ಟು ಬೇಗ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸುತ್ತೀರೋ, ಅಷ್ಟೇ ಕನ್ಫರ್ಮ್ ಆಗಿ ಟಿಕೆಟ್ ಪಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ, IRCTCಯಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ, ಪಾವತಿ ಪ್ರಕ್ರಿಯೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ವೇಗವಾಗಿ ಪಾವತಿ ಮಾಡಲು ಅನುಕೂಲ ಆಗುವಂತೆ ಮೊಬೈಲ್ ವ್ಯಾಲೆಟ್, ನೆಟ್ ಬ್ಯಾಂಕಿಂಗ್ ಮತ್ತು UPI ವಿಧಾನವನ್ನು ಬಳಸಬೇಕು. ಇದರಿಂದ ಸಮಯ ಉಳಿತಾಯವಾಗುತ್ತದೆ. ನೀವು ಬಯಸಿದರೆ IRCTC ವಾಲೆಟ್ ಬಳಸಿಯೂ ಸುಲಭ ಮತ್ತು ವೇಗವಾಗಿ ಟಿಕೆಟ್ ಬುಕಿಂಗ್‌ಗೆ ಪಾವತಿ ಮಾಡಬಹುದು.
train ticket
ಬುಕಿಂಗ್ ಏಜೆಂಟ್ ಸಹಾಯ: ನೀವು ಸ್ವಂತವಾಗಿ ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದಾದರೆ ಅಥವಾ ರೈಲ್ವೆ ಇಲಾಖೆಯ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಪರಿಣಿತವರಿಲ್ಲವೆಂದರೆ ಹಾಗೂ ತಂತ್ರಜ್ಞಾನದ ಮಾಹಿತಿಯಲ್ಲಿ ಅಪೂರ್ಣರಾಗಿದ್ದರೆ ನೀವು ಬುಕಿಂಗ್ ಏಜೆಂಟ್ ಸಹಾಯದ ಮೂಲಕ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬಹುದು. ಇದಕ್ಕಾಗಿ ನೀವು ಸರಿಯಾದ ಸಮಯದಲ್ಲಿ 10 ಗಂಟೆಯಿಂದ ಎಸಿ ಬೋಗಿ ಹಾಗೂ 11 ಗಂಟೆಯಿಂದ 12 ಗಂಟೆವರೆಗೆ ಸ್ಲೀಪರ್ ಬೋಗಿಯ ಟಿಕೆಟ್ ಬುಕಿಂಗ್ ಮಾಡುವ ಏಜೆಂಟ್‌ಗಳನ್ನು ಸಂಪರ್ಕಿಸಬೇಕಾಗುತ್ತದೆ.
ವಾರಾಂತ್ಯದ ದಿನಗಳನ್ನು ಬದಲಿಸಬಹುದೇ ಆಲೋಚಿಸಿ: ಇನ್ನು ನಿಮಗೆ ಪ್ರಯಾಣಕ್ಕೆ ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೆ ನಿಮ್ಮ ಪ್ರಯಾಣದ ದಿನಾಂಕಗಳನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ. ಏಕೆಂದರೆ ವಾರಾಂತ್ಯಕ್ಕೆ ಹೋಲಿಸಿದರೆ ವಾರದ ದಿನಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿದರೆ ನಿಮಗೆ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಹೆಚ್ಚಿನ ಜನರು ತಮ್ಮ ರಜಾದಿನಗಳನ್ನು ಬಳಸಿಕೊಳ್ಳಲು ವಾರಾಂತ್ಯದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಹೀಗಾಗಿ, ತತ್ಕಾಲ್ ಟಿಕೆಟ್ ಸಿಗುವುದು ಕಷ್ಟವಾಗುತ್ತದೆ.
ಸ್ಲಾಟ್ ಓಪನ್‌ಗೂ 2 ನಿಮಿಷ ಮುನ್ನ ಲಾಗಿನ್ ಮಾಡಿ: ತತ್ಕಾಲ್ ಟಕೆಟ್ ಬುಕಿಂಗ್ ಮಾಡುವ ವಿಧಾನಗಳಲ್ಲಿ ನೀವು ನಾಳೆ ಪ್ರಯಾಣ ಮಾಡಬೇಕೆಂದರೆ ಒಂದು ದಿನ ಮುಂಚಿತವಾಗಿ ಅಥವಾ ಪ್ರಯಾಣದ ಹಿಂದಿನ ದಿನ ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ಎಸಿ ಕೋಚ್‌ಗಾಗಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬಹುದು. ಆದ್ದರಿಂದ ನೀವು 10 ಗಂಟೆಯ ನಂತರ ಲಾಗಿನ್ ಆಗುವುದರ ಬದಲಾಗಿ ಎರಡು ನಿಮಿಷ ಮುಂಚಿತವಾಗಿ 9:58ಕ್ಕೆ ಲಾಗಿನ್ ಮಾಡಿ.
ಸ್ಲಾಟ್ ಓಪನ್‌ಗೂ 2 ನಿಮಿಷ ಮುನ್ನ ಲಾಗಿನ್ ಮಾಡಿ:
ಇನ್ನು ನಾನ್ ಎಸಿ ಸ್ಲೀಪರ್ ಕೋಚ್‌ನ ಸೀಟಿಗಾಗಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವುದಕ್ಕೆ 11 ಗಂಟೆಗೆ ಸ್ಲಾಟ್ ಓಪನ್ ಆಗುತ್ತದೆ. ಆದ್ದರಿಂದ ಇಲ್ಲಿಯೂ ಕೂಡ ಎರಡು ನಿಮಿಷ ಮುಂಚಿತವಾಗಿ ಅಂದರೆ 10:58ಕ್ಕೆ ಲಾಗಿನ್ ಮಾಡಿ. ನೀವು ಟಿಕೆಟ್ ಬುಕಿಂಗ್ ಆರಂಭಕ್ಕೂ 2-3 ನಿಮಿಷಗಳ ಮೊದಲು ನೀವು ಲಾಗಿನ್ ಮಾಡಲು ಪ್ರಯತ್ನಿಸಬೇಕು. ಆಗ ನಿಮಗೆ ಸರ್ವರ್ ಬ್ಯೂಸಿ ಆಗುವ ಸಮಸ್ಯೆ ಕಾಡುವುದಿಲ್ಲ.