ರೈಲಿನಲ್ಲಿ ತುಪ್ಪ ತೆಗೆದುಕೊಂಡು ಹೋಗಬಹುದಾ? ನಿಯಮಗಳೇನು?
ರೈಲ್ವೆ ನಿಯಮದ ಪ್ರಕಾರ, ಬೇಗನೆ ಬೆಂಕಿ ಹತ್ತಿಕೊಳ್ಳುವ ವಸ್ತುಗಳನ್ನ ರೈಲಿನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಅದರಲ್ಲೂ ಗ್ಯಾಸ್ ಸಿಲಿಂಡರ್, ಪಟಾಕಿ ತರಹದ ವಸ್ತುಗಳಿಗೆ ನಿಷೇಧ ಇದೆ. ಆದ್ರೆ ತುಪ್ಪ ತಗೊಂಡ್ ಹೋಗ್ಬಹುದಾ?
ರೈಲಿನಲ್ಲಿ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗುವವರ ಮೇಲೆ ರೈಲ್ವೆ ಕಾಯ್ದೆ 1989ರ 67, 164, 165 ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ₹1,000 ದಂಡ ಮತ್ತು ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ತೆಗೆದುಕೊಂಡು ಹೋಗುವ ವಸ್ತುಗಳ ಪ್ರಮಾಣ ಮತ್ತು ಸ್ವರೂಪವನ್ನ ಅವಲಂಬಿಸಿ ಶಿಕ್ಷೆ ಹೆಚ್ಚಾಗಬಹುದು.
ಪ್ರಯಾಣಿಕರು ರೈಲಿನಲ್ಲಿ ಇಡೀ ಬೋಗಿಯನ್ನ ಬಾಡಿಗೆಗೆ ಪಡೆಯುವಾಗ ಮತ್ತು ಪ್ರವಾಸಕ್ಕೆ ರೈಲು ಬೋಗಿಗಳನ್ನು ಬಾಡಿಗೆಗೆ ಪಡೆಯುವಾಗ ಬೆಂಕಿ ಹತ್ತಿಕೊಳ್ಳುವ ವಸ್ತುಗಳನ್ನು ತಗೊಂಡ್ ಹೋಗಲ್ಲ ಅಂತ ಲಿಖಿತ ಒಪ್ಪಂದ ಪಡೆಯಲಾಗುತ್ತದೆ. ಐಆರ್‌ಸಿಟಿಸಿ ಯಾತ್ರಾ ರೈಲುಗಳಲ್ಲಿ ಪ್ರಯಾಣಿಕರು ತರುವ ವಸ್ತುಗಳನ್ನು ರೈಲ್ವೆ ಭದ್ರತಾ ತಂಡ ಪರಿಶೀಲಿಸುತ್ತದೆ.
ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್, ಪಟಾಕಿ, ಸೀಮೆಎಣ್ಣೆ, ಪೆಟ್ರೋಲ್, ಡೀಸೆಲ್, ವೆಲ್ಡಿಂಗ್ ಉಪಕರಣಗಳು,ಒಣ ಹುಲ್ಲು ಮತ್ತು ಒಣಗಿದ ಎಲೆಗಳು, ಕಸದ ಕಾಗದ, ಸತ್ತ ಕೋಳಿ, ಆಸಿಡ್ ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಬಾರದು. ತಗೊಂಡ್ ಹೋದ್ರೆ ಶಿಕ್ಷಾರ್ಹ ಅಪರಾಧ.
ಕೆಲವು ವಸ್ತುಗಳನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ತೆಗೆದುಕೊಂಡು ಹೋಗಲು ರೈಲ್ವೆ ಅನುಮತಿಸುತ್ತದೆ. ಪ್ರಯಾಣಿಕರು ರೈಲಿನಲ್ಲಿ ತುಪ್ಪವನ್ನು ತೆಗೆದುಕೊಂಡು ಹೋಗಬಹುದು. ಆದರೆ 20 ಕೆಜಿವರೆಗೆ ಮಾತ್ರ. ಅದೂ ಸೋರಿಕೆಯಾಗದಂತೆ ಬಿಗಿಯಾಗಿ ಮುಚ್ಚಿದ ಡಬ್ಬದಲ್ಲಿ ಪ್ಯಾಕ್ ಮಾಡಿರಬೇಕು.
ರದ್ದಾದ ರೈಲುಗಳು
ತುಪ್ಪವನ್ನು ಅನುಮತಿಸಿದ ಮಿತಿಗಿಂತ ಹೆಚ್ಚು ತೆಗೆದುಕೊಂಡು ಹೋದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ, ರೈಲಿನಲ್ಲಿ ಪ್ರಯಾಣಿಸುವವರು ಬೆಂಕಿ ಹತ್ತಿಕೊಳ್ಳುವ ವಸ್ತುಗಳನ್ನು ತೆಗೆದುಕೊಂಡು ಹೋಗದೆ ಸಹಕರಿಸಬೇಕು. ರೈಲ್ವೆ ಇಲಾಖೆಯ ನಿಯಮಗಳಿಗೆ ಬದ್ಧವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳನ್ನು ರೈಲು ಪ್ರಯಾಣದ ಸಮಯದಲ್ಲಿ ತೆಗೆದುಕೊಂಡು ಹೋಗಬಾರದು.