ವಿಶ್ವದ ಹೊಸ ರಾಷ್ಟ್ರಗಳ ಬಗ್ಗೆ ನಿಮಗೇ ಗೊತ್ತಿರದ ಫ್ಯಾಕ್ಸ್ಟ್ ಇವು!
ನಮ್ಮ ಜಗತ್ತು ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಪ್ರಸ್ತುತ ಪ್ರಪಂಚದಲ್ಲಿ 195 ದೇಶಗಳಿವೆ, ಕೆಲವು ದೀರ್ಘ ಇತಿಹಾಸವನ್ನು ಹೊಂದಿದ್ದರೆ, ಇತರವು ಕೇವಲ ಒಂದೆರಡು ದಶಕಗಳಷ್ಟು ಹಳೆಯವು. ವಿಶ್ವ ನಕ್ಷೆಗಳಿಗೆ ಇತ್ತೀಚಿನ ಸೇರ್ಪಡೆಯಾದ ದೇಶಗಳ ಬಗ್ಗೆ ಮಾಹಿತಿ ಇಲ್ಲಿವೆ, ನೀವು ತಿಳಿದುಕೊಳ್ಳಬೇಕಾದ ಹೊಸ ದೇಶಗಳು ಯಾವುವು ನೋಡೋಣ.
ದಕ್ಷಿಣ ಸುಡಾನ್ (South Sudan) :
ತುಂಬಾ ದೀರ್ಘ ಮತ್ತು ಕಠಿಣ ಹೋರಾಟದ ಸ್ವಾತಂತ್ರ್ಯ ಚಳವಳಿ ನಂತರ ದಕ್ಷಿಣ ಸುಡಾನ್ ಜುಲೈ 9, 2011 ರಂದು ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿತು. ಆ ಮೂಲಕ ಈ ಪ್ರದೇಶದಲ್ಲಿ ದಶಕಗಳ ಅಂತರ್ಯುದ್ಧದ ಅಂತ್ಯ ಕಂಡಿತು.
ಕೊಸೊವೋ (Kosovo) :
ಕೊಸೊವೊ ಫೆಬ್ರವರಿ 17, 2008 ರಂದು ಸೆರ್ಬಿಯಾದಿಂದ ಬೇರ್ಪಡುವ ಮೂಲಕ ಸ್ವಾತಂತ್ರ್ಯವಾಯಿತು. ಈ ಘೋಷಣೆಯನ್ನು ಬಹುಪಾಲು ದೇಶಗಳು ಗುರುತಿಸಿದರೂ, ಸಾರ್ವತ್ರಿಕವಾಗಿ ಅಲ್ಲ. ಕೊಸೊವೊ ತನ್ನ ರಾಜ್ಯತ್ವವನ್ನು ಗಟ್ಟಿಗೊಳಿಸಲು ಮತ್ತು ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲು ಶ್ರಮಿಸುತ್ತಿದೆ.
ಮಾಂಟೆನೆಗ್ರೊ (Montenegro):
ಮಾಂಟೆನೆಗ್ರೊ 2006 ರಲ್ಲಿ ಸ್ವಾತಂತ್ರ್ಯ ಪಡೆಯುವ ಮೂಲಕ ಜೂನ್ 3 ರಂದು ಸಾರ್ವಭೌಮ ರಾಷ್ಟ್ರವಾಯಿತು. ಈ ಸುಂದರವಾದ ದೇಶವು ಅದ್ಭುತವಾದ ಅಡ್ರಿಯಾಟಿಕ್ ಕರಾವಳಿಗಳನ್ನು ಹೊಂದಿದ್ದು, ಯುರೋಪಿಯನ್ ಒಕ್ಕೂಟಕ್ಕೆ ಸೇರಲು ಹವಣಿಸುತ್ತಿದೆ ಈ ರಾಷ್ಟ್ರ.
ಸೆರ್ಬಿಯಾ (Serbia):
ಸೆರ್ಬಿಯಾ ಮತ್ತು ಮಾಂಟೆನೆಗ್ರೊ ರಾಜ್ಯ ಒಕ್ಕೂಟದ ವಿಭಜನೆ ನಂತರ ಜೂನ್ 5, 2006ರಂದು ಸೆರ್ಬಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಅಂದಿನಿಂದ, ದೇಶವು ಆರ್ಥಿಕ ಸುಧಾರಣೆಗಳಿಗೆ ಆದ್ಯತೆ ನೀಡುತ್ತಿದೆ. ಜೊತೆಗೆ ಯುರೋಪಿಯನ್ ಒಕ್ಕೂಟದೊಳಗೆ ತನ್ನನ್ನು ಸ್ಥಾಪಿಸಿಕೊಂಡಿದೆ.
ಪೂರ್ವ ಟಿಮೋರ್ (East Timor)
ಆಗ್ನೇಯ ಏಷ್ಯಾದ ಯುವ ರಾಷ್ಟ್ರವಾದ ಟಿಮೋರ್-ಲೆಸ್ಟೆ ಮೇ 20, 2002 ರಂದು ಸ್ವಾತಂತ್ರ್ಯ ಪಡೆಯಿತು. ಈ ಸುಂದರವಾದ ದ್ವೀಪ ರಾಷ್ಟ್ರ ವಿಶಿಷ್ಟ ಸಂಸ್ಕೃತಿ ಮತ್ತು ಅದ್ಭುತವಾದ ಪ್ರಕೃತಿ ಸೌಂದರ್ಯವನ್ನ ಹೊಂದಿದೆ.
ಪಲವು (Palau)
ಪಲವು ಅಕ್ಟೋಬರ್ 1, 1994 ರಂದು ಸ್ವಾತಂತ್ರ್ಯ ಪಡೆಯಿತು, ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್‌ಗೆ ಪ್ರವೇಶಿಸಿತು. ಈ ಮೈಕ್ರೊನೇಷಿಯನ್ ದ್ವೀಪ ರಾಷ್ಟ್ರ ಸಮುದ್ರ ಸಂರಕ್ಷಣೆಯ ಚಾಂಪಿಯನ್ ಆಗಿದೆ. ಜೊತೆಗೆ ಅದ್ಭುತವಾದ ಜಲಜೀವಿ ವೈವಿಧ್ಯಗಳನ್ನ ಹೊಂದಿರುವ ತಾಣ.
ಎರಿಟ್ರಿಯಾ (Eritrea)
ಸ್ವಯಂ-ನಿರ್ಣಯಕ್ಕಾಗಿ ಕಠಿಣ ಹೋರಾಟದ ನಂತರ ಎರಿಟ್ರಿಯಾ ಮೇ 24, 1993 ರಂದು ಇಥಿಯೋಪಿಯಾದಿಂದ ಹೊರ ಬಂದು ಸ್ವತಂತ್ರ ರಾಷ್ಟ್ರವಾಯಿತು. ಸ್ವಾತಂತ್ರ್ಯವಾದರೂ ಎರಿಟ್ರಿಯಾ ಆಡಳಿತ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸವಾಲುಗಳನ್ನು ಇಂದಿಗೂ ಎದುರಿಸುತ್ತಿದೆ.
ಜೆಕ್ ರಿಪಬ್ಲಿಕ್ (Czech Republic)
ಜನವರಿ 1, 1993 ರಂದು ಚೆಕೊಸ್ಲೊವಾಕಿಯಾದ ಶಾಂತಿಯುತ 'ವೆಲ್ವೆಟ್ ಡಿವೋರ್ಸ್ ನಿಂದ ಜನಿಸಿದ ಜೆಕ್ ರಿಪಬ್ಲಿಕ್ (ಅಥವಾ ಜೆಕಿಯಾ) ಸಾರ್ವಭೌಮ ರಾಷ್ಟ್ರವಾಯಿತು. ಇದರ ರಾಜಧಾನಿಯಾದ ಪ್ರೇಗ್ ತನ್ನ ಅದ್ಭುತ ಶಿಲ್ಪಕಲೆಗಳಿಂದಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಸ್ಲೋವಾಕಿಯಾ (Slovakia)
ಚೆಕೊಸ್ಲೊವಾಕಿಯಾದ ಮಾಜಿ ಪಾರ್ಟನರ್ ಆಗಿರುವ ಸ್ಲೋವಾಕಿಯಾ ಕೂಡ ಜನವರಿ 1, 1993 ರಂದು ಸ್ವಾತಂತ್ರ್ಯ ಘೋಷಿಸಿತು. ಇದು ಎರಡೂ ದೇಶಗಳ ಶಾಂತಿಯುತ ಪ್ರತ್ಯೇಕತೆಯನ್ನು ಸೂಚಿಸಿತು, ಸ್ಲೋವಾಕಿಯಾ ಸಾರ್ವಭೌಮ ರಾಷ್ಟ್ರವಾಗಿ ತನ್ನದೇ ಆದ ಮಾರ್ಗವನ್ನು ರೂಪಿಸಿತು.
ಕ್ರೊಯೇಷಿಯಾ (Croatia)
ಯುಗೊಸ್ಲಾವಿಯಾದ ಸಂಕೋಲೆಗಳನ್ನು ತೆಗೆದು ಹಾಕಿ ಕ್ರೊಯೇಷಿಯಾ ಜೂನ್ 25, 1991 ರಂದು ಸ್ವಾತಂತ್ರ್ಯ ಘೋಷಿಸಿತು. ಇಂದು, ಈ ರಾಷ್ಟ್ರ ಜನಪ್ರಿಯ ಪ್ರವಾಸಿ ತಾಣವಾಗಿ ಬೆಳೆದಿದೆ, ಕ್ರೊಯೇಷಿಯಾದ ರೋಮಾಂಚಕ ಸಂಸ್ಕೃತಿ ಮತ್ತು ಬೆರಗುಗೊಳಿಸುವ ಸೌಂದರ್ಯದಿಂದ ಪ್ರವಾಸಿಗರು ಈ ತಾಣಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಲೆ ಇರ್ತಾರೆ.