ಸ್ಟೇಶನ್‌ನಲ್ಲಿ TTE ಜೊತೆ ಮಾತನಾಡಿ ಟೆಕೆಟ್ ಇಲ್ಲದೇ ಪ್ರಯಾಣಿಸಬಹುದಾ? ರೈಲು ನಿಯಮದಲ್ಲೇನಿದೆ?
ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡುವುದು ದಂಡಾರ್ಹ. ಟಿಟಿಇ ಬಳಿ ಅನುಮತಿ ಪಡೆದರೂ ದಂಡ ತೆರಬೇಕಾಗುತ್ತದೆ. ಟಿಕೆಟ್ ಇಲ್ಲದಿದ್ದರೆ ಪ್ರಯಾಣ ಶುಲ್ಕದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತದೆ.
Indian Railway TTE
ಭಾರತೀಯ ರೈಲ್ವೆಯನ್ನು ಭಾರತದ ಲೈಫ್‌ಲೈನ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಪ್ರತಿದಿನ ಕೋಟ್ಯಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ.
ನೀವು ಹೆಚ್ಚು ರೈಲು ಪ್ರಯಾಣ ಮಾಡುತ್ತಿದ್ದರೆ ಟಿಕೆಟ್ ಪರಿಶೀಲಕರ ಬಳಿ ಹೋಗುವ ಜನರು ಆಸನದ ಕುರಿತು ವಿಚಾರಿಸುತ್ತಿರುತ್ತಾರೆ. ಕೆಲವರು ವೇಟಿಂಗ್ ಟಿಕೆಟ್ ಹಿಡಿದು ಕನ್ಫರ್ನ್ ಸೀಟ್ ಸಿಗಬಹುದಾ ಎಂದು ಕೇಳುತ್ತಿರುತ್ತಾರೆ.
ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ದಂಡಾರ್ಹ. ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ್ರೆ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ನಿಲ್ದಾಣದಲ್ಲಿ ಟಿಟಿಇ ಬಳಿಯಲ್ಲಿ ಅನುಮತಿ ಪಡೆದು ಟಿಕೆಟ್ ಇಲ್ಲದೇ ಪ್ರಯಾಣಿಸಬಹುದಾ ಎಂದು ಕೇಳುತ್ತಿರುತ್ತಾರೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕೆಲವು ಸಂದರ್ಭಗಳಲ್ಲಿ ನಿಲ್ದಾಣಕ್ಕೆ ಬರೋ ವೇಳೆಗೆ ರೈಲು ಚಲಿಸಲು ಆರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಟಿಕೆಟ್ ಇಲ್ಲದೇ ರೈಲು ಹತ್ತುತ್ತಾರೆ. ಇಂತಹ ಸನ್ನಿವೇಶದಲ್ಲಿ ದಂಡ ಪಾವತಿಸಬೇಕಾ ಎಂಬುವುದು ಹಲವು ಪ್ರಯಾಣಿಕರ ಪ್ರಶ್ನೆಯಾಗಿರುತ್ತದೆ.
ಭಾರತೀಯ ರೈಲ್ವೆಯ ಸೆಕ್ಷನ್ 138ರ ಪ್ರಕಾರ, ಟಿಕೆಟ್ ರಹಿತ ಪ್ರಯಾಣಿಸಿದ್ರೆ ದಂಡ ಪಾವತಿಸಬೇಕಾಗುತ್ತದೆ. ಟಿಟಿಇ ಜೊತೆ ಮಾತನಾಡಿದ್ದರೂ ಪ್ರಯಾಣಿಕನಿಗೆ ದಂಡ ವಿಧಿಸಲಾಗುತ್ತದೆ. ನೀವು ಟಿಟಿಇ ಜೊತೆ ಮಾತನಾಡಿದ್ದರೂ ಸಹ ದಂಡವನ್ನು ಪಾವತಿಸಬೇಕಾಗುತ್ತದೆ.
ಪ್ರಯಾಣದ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಪ್ರಯಾಣವನ್ನು ಪ್ರಾರಂಭಿಸಿದ ಸ್ಥಳದಿಂದ ರೈಲು ಹೋಗುವವರೆಗೆ ಪೂರ್ಣ ಶುಲ್ಕ ಮತ್ತು ಹೆಚ್ಚುವರಿಯಾಗಿ 250 ರೂಪಾಯಿಯನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತದೆ.
ಟಿಟಿಇ ನಿಮಗೆ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ವಿಧಿಸಿದ್ರೆ ಅವರು ನೀಡಿದ ರಶೀದಿಯೊಂದಿಗೆ ಪ್ರಯಾಣ ಮುಂದುವರಿಸಬಹುದು. ಈ ಸಂದರ್ಭದಲ್ಲಿ ಟಿಟಿಇ ನಿಮಗೆ ಖಾಲಿ ಇರೋ ಸೀಟ್ ಹಂಚಿಕೆ ಮಾಡುತ್ತಾರೆ. ಒಂದು ವೇಳೆ ಟಿಟಿಇ ಸೀಟ್ ಹಂಚಿಕೆ ಮಾಡದಿದ್ದರೆ ನೀವು ಆಸನದ ಬಗ್ಗೆ ಕೇಳಬಹುದು.