ರಾಮ ಭಾರತದಿಂದ ಲಂಕೆಗೆ ಹೋದ ಮಾರ್ಗದಲ್ಲೇ ಹಡಗು ಸೇವೆ ಆರಂಭ!
ಭಾರತದ ತಮಿಳುನಾಡು ನಗರದಿಂದ ಶ್ರೀಲಂಕಾಕ್ಕೆ ಹಡಗು ಸವಾರಿಯನ್ನು ಪ್ರಾರಂಭಿಸಲಾಗಿದೆ. ಈ ಸೇವೆಯನ್ನು ನಾಲ್ಕು ದಶಕಗಳ ನಂತರ ಪ್ರಾರಂಭಿಸಲಾಗಿದೆ. ನೀವು ಖಂಡಿತವಾಗಿಯೂ ಇದನ್ನು ಎಂಜಾಯ್ ಮಾಡಬಹುದು.
ನೀವು ದೋಣಿಯಲ್ಲೇ ಅಥವಾ ಹಡಗಿನಲ್ಲೇ ಕುಳಿತು ವಿದೇಶಕ್ಕೆ ಹೋದರೆ ಹೇಗಿರುತ್ತದೆ? ಯೋಚನೆ ಮಾಡಿ ನೋಡಿ… ವಾವ್ ಚೆನ್ನಾಗಿರುತ್ತೆ ಅಲ್ವಾ? ಭಾರತದಿಂದ ಯಾರಾದರೂ ಹಡಗಲ್ಲಿ ಕುಳಿತು ಇಷ್ಟು ದೂರ ಹೋಗಲು ಹೇಗೆ ಸಾಧ್ಯ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬಹುದು? ಆದರೆ ಅದು ನಿಜ! ಅಕ್ಟೋಬರ್ 2023 ರ ಮೊದಲ ವಾರದಿಂದ, ಈ ಫೇರಿ ರೈಡ್ (Ferry ride service) ಸೇವೆಯನ್ನು ಪ್ರಾರಂಭಿಸಲಾಗಿದೆ. ಮತ್ತು ಇದು ತಮಿಳುನಾಡಿನಿಂದ ಭಾರತದ ಶ್ರೀಲಂಕಾದವರೆಗೆ ಈ ರೈಡ್ ಇರುತ್ತೆ.
ತಮಿಳುನಾಡಿನ ನಾಗಪಟ್ಟಿಣಂ ಮತ್ತು ಶ್ರೀಲಂಕಾದ ಕಂಕೆಸಂತುರೈ ನಡುವೆ ಫೇರಿ ರೈಡ್ ನಡೆಯಲಿದೆ. ಈ ಫೇರಿ ರೈಡಿಂಗ್ ಸೇವೆಯನ್ನು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Shipping Corporation of India) ನಿರ್ವಹಿಸುತ್ತಿದೆ. ನೀವು ಸಹ ಹಡಗಿನ ಮೂಲಕ ಶ್ರೀಲಂಕಾ (Sri Lanka) ದೇಶಕ್ಕೆ ಹೋಗಲು ಬಯಸಿದರೆ, ಮಾರ್ಗ ಯಾವುದು ಮತ್ತು ಶುಲ್ಕ ಎಷ್ಟು ಎನ್ನುವ ವಿವರ ತಿಳಿಯೋಣ.
ಪ್ರವಾಸದ ಬಗ್ಗೆ ಮಾಹಿತಿ
ಈ ಫೇರಿ ರೈಡ್ ಸೇವೆಯು ತಮಿಳುನಾಡಿನ ನಾಗಪಟ್ಟಿಣಂ ಬಂದರಿನಿಂದ ಶ್ರೀಲಂಕಾದ ಕಂಕೆಸಂತುರೈ ಬಂದರಿನವರೆಗೆ ಇರಲಿದೆ. ಸುಮಾರು 60 ನಾಟಿಕಲ್ ಮೈಲಿ ದೂರವನ್ನು ಕ್ರಮಿಸುವ ಈ ಪ್ರಯಾಣವು ಸುಮಾರು 3 ರಿಂದ 4 ಗಂಟೆಗಳ ಕಾಲ ಇರುತ್ತದೆ ಮತ್ತು ಈ ಸಮಯದಲ್ಲಿ ನೀವು ಮೋಜಿನ ಅನುಭವವನ್ನು ಪಡೆಯುತ್ತೀರಿ. ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸವು 1980 ರಲ್ಲಿ ನಿಲ್ಲಿಸಲಾಗಿತ್ತು. ಇದೀಗ 40 ದಶಕದ ನಂತರ ಈ ಬೋಟಿಂಗ್ ಸೇವೆ ಆರಂಭವಾಗಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರವಾಸೋದ್ಯಮ (tourism) ಮತ್ತು ವ್ಯಾಪಾರಕ್ಕೆ ಹೊಸ ಜೀವ ನೀಡುವುದರಿಂದ ಎರಡೂ ದೇಶಗಳ ಅಭಿವೃದ್ಧಿಗೆ ಈ ಫೇರಿ ರೈಡ್ ಸೇವೆ ಬಹಳ ಮುಖ್ಯವಾಗಿದೆ. ಈ ಹೊಸ ಸಂಪರ್ಕವು ಆರಾಮದಾಯಕ ಪ್ರಯಾಣ ಮಾತ್ರವಲ್ಲದೇ, ಇದು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಈ ದೋಣಿ ಸೇವೆಯು ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಸ್ಥಳೀಯ ವ್ಯವಹಾರವನ್ನು ಉತ್ತೇಜಿಸುತ್ತದೆ.
ಇಲ್ಲಿ ಏನೇನು ಸೌಲಭ್ಯ ಇದೆ?
ಟರ್ಮಿನಲ್ ನಲ್ಲಿರುವ ಟಿಕೆಟ್ ಕೌಂಟರ್ (ticket counter) ನಿಂದ ಕಾಯುವ ಪ್ರದೇಶ ಮತ್ತು ಆಹ್ಲಾದಕರ ಕೆಫೆಟೇರಿಯಾದವರೆಗೆ, ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲವೂ ಇಲ್ಲಿ ಲಭ್ಯವಿರುತ್ತದೆ. ನೀವು ಪ್ರಕೃತಿ, ಬೀಚ್ ಎಂಜಾಯ್ ಮಾಡುತ್ತಾ ಬೋಟ್ ರೈಡ್ ಮಾಡಬಹುದು.
ಈ ದೋಣಿ ಸವಾರಿ ಸುರಕ್ಷಿತವೇ?
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಆರಾಮದಾಯಕ ಸವಾರಿಗಾಗಿ ಎಸ್ಸಿಐ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಅವರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೈಸ್ಪೀಡ್ ಪ್ರಯಾಣಿಕರ ದೋಣಿಯನ್ನು ವ್ಯವಸ್ಥೆ ಮಾಡಿದ್ದಾರೆ, ಇದು ಹಡಗಿನಲ್ಲಿದ್ದ 150 ಪ್ರಯಾಣಿಕರಿಗೆ ಚಿಂತೆಯಿಲ್ಲದ ಪ್ರಯಾಣವನ್ನು ಒದಗಿಸುತ್ತದೆ.
ಶುಲ್ಕ ಎಷ್ಟು?
ಈಗ ನೀವು ಈ ಪ್ರಯಾಣದ ಬೆಲೆಯ ಬಗ್ಗೆ ಯೋಚಿಸುತ್ತಿರಬಹುದು, ಅಂದಾಜಿನ ಪ್ರಕಾರ, ಒನ್-ವೇ ಟಿಕೆಟ್ ಬೆಲೆ ಸುಮಾರು 50 ಯುಎಸ್ ಡಾಲರ್ (6,000-7,000 ರೂಪಾಯಿಗಳಿಗೆ ಸಮಾನ). ದೋಣಿ ಟಿಕೆಟ್ ನ ಅಂತಿಮ ಬೆಲೆಯನ್ನು ದೋಣಿ ಆಪರೇಟರ್ ನಿರ್ಧರಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಇದು ನೀವು ಆಯ್ಕೆ ಮಾಡುವ ದೋಣಿ ಸವಾರಿಯ ಪ್ರಕಾರ, ಪ್ರಯಾಣದ ವರ್ಗ ಮತ್ತು ಸಮಯ ಸೇರಿದಂತೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.