ಭೂಮಿ ಮೇಲಿನ ಪಾತಾಳ ಲೋಕ ನೋಡಿದ್ದೀರಾ? ಇಲ್ಲಿ 100ಕ್ಕೂ ಅಧಿಕ ಜನ ವಾಸಿಸ್ತಾರೆ!
ಆ ಊರಲ್ಲೊಂದು ದೊಡ್ಡ ಗುಹೆಯಲ್ಲಿ, ಆ ಗುಹೆಯೊಳಗೆ ಪಾತಾಳ ಲೋಕವೇ ಇದೆ. ಆದರೆ ವಿಚಿತ್ರ ಅಂದ್ರೆ ಆ ಪಾತಾಳ ಲೋಕದೊಳಗೆ ಜನರು ಮನೆಕಟ್ಟಿಕೊಂಡು ವಾಸ ಮಾಡ್ತಿದ್ದಾರೆ. ಈ ಗುಹೆಯೊಳಗಿನ ಪಾತಾಳ ಲೋಕದಲ್ಲಿ ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿಂದ ಶಾಲೆಯವರೆಗೆ ಎಲ್ಲವೂ ಇದೆ. ಆದರೆ ಈ ಸ್ಥಳ ಎಲ್ಲಿದೆ? ನಿಮಗೆ ತಿಳಿದಿದೆಯೇ, ನಿಮಗೆ ಗೊತ್ತಿಲ್ಲದಿದ್ದರೆ, ಮುಂದೆ ಓದಿ...

ಭೂಮಿಯ ಮೇಲೆ ಪಾತಾಳ ಲೋಕ ಎಲ್ಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಸ್ವರ್ಗವು ಆಕಾಶದಲ್ಲಿದೆ, ನಂತರ ಪಾತಾಳ ಲೋಕವು ನೆಲದ ಕೆಳಗೆ ಇದೆ ಎಂಬ ಪರಿಕಲ್ಪನೆ ಮಾತ್ರ ಎಲ್ಲರಿಗೂ ಇದೆ. ಆದರೆ ಇಂದು ನಾವು ಭೂಮಿಯ ಮೇಲಿನ ಪರ್ವತ ಗುಹೆಯೊಳಗೆ (cave) ಇರುವ ಪಾತಾಳ ಲೋಕದ ಬಗ್ಗೆ ನಿಮಗೆ ಹೇಳಲಿದ್ದೇವೆ. ಈ ಪಾತಾಳದಾಲ್ಲಿ ಜನರು ಕೂಡ ವಾಸವಿದ್ದಾರೆ.
ಅದು ಗುಹೆಯೊಳಗಿನ ಪಾತಾಳ ಲೋಕ, 100 ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ, ಆದರೆ ಅವರು ಜೀವನವನ್ನು ನಡೆಸಲು ಮಾತ್ರ ತುಂಬಾನೆ ತೊಂದರೆ ಅನುಭವಿಸುತ್ತಿದ್ದಾರೆ. ಇವರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಆದರೂ ಹಲವು ವರ್ಷಗಳಿಂದ ಜನರು ಈ ಪಾತಾಳ ಲೋಕದಲ್ಲಿ ವಾಸ ಮಾಡ್ತಿದ್ದಾರೆ. ಈ ಜಾಗವನ್ನು ನೋಡಲು ದೇಶ ವಿದೇಶದಿಂದ ಜನರು ಕೂಡ ಬರ್ತಿದ್ದಾರೆ, ಹಾಗಿದ್ರೆ ಆ ಜಾಗ ಯಾವುದು?
ಈ ದೂರದ ಹಳ್ಳಿಯ ಜನರು ಮಾರುಕಟ್ಟೆಗೆ ಹೋಗೋದಕ್ಕೆ ಬರೋಬ್ಬರಿ 15 ಕಿಲೋಮೀಟರ್ ನಡೆಯಬೇಕು, ಆದರೆ ಮಕ್ಕಳಿಗೆ ಅಧ್ಯಯನ ಮಾಡಲು ಸ್ಥಳ ಮತ್ತು ಬ್ಯಾಸ್ಕೆಟ್ ಬಾಲ್ ಕೋರ್ಟ್ ಸಹ ಈ ಗುಹೆಯಲ್ಲಿ ಇದೆ. ಪಾತಾಳದಲ್ಲಿರುವ ಈ ಹಳ್ಳಿ ಎಲ್ಲಿದೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬಹುದು ಅಲ್ವಾ?
ಈ ಗ್ರಾಮದ ಹೆಸರು ಝೊಂಗ್ಡಾಂಗ್ (zhongdong), ಇದು ಚೀನಾದ ಗುಯಿಝೌ ಪ್ರಾಂತ್ಯದಲ್ಲಿದೆ. ಗುಹೆಯೊಳಗಿನ ಪಾತಾಳ ಲೋಕದಲ್ಲಿರುವ ಈ ಗ್ರಾಮದ ಜನರು ಶತಮಾನಗಳಿಂದ ಈ ಗುಹೆಯಲ್ಲಿ ವಾಸಿಸುತ್ತಿದ್ದಾರೆ. ಈ ಗುಹೆಯು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಅನೇಕ ಕಷ್ಟಗಳನ್ನು ಎದುರಿಸಿ ಸಹ ಇಂದಿಗೂ ಅದೇ ಗುಹೆಯಲ್ಲಿ ವಾಸಿಸುತ್ತಾರೆ ಜನ.
ಗುಹೆಯಲ್ಲಿ ವಾಸಿಸುವುದು ಚೀನಾದ ನಾಗರಿಕತೆಯ ಭಾಗವಲ್ಲ ಎಂದು ಹೇಳಿ 2008 ರಲ್ಲಿ ಚೀನಾ ಸರ್ಕಾರವು ಇಲ್ಲಿನ ಶಾಲೆಯನ್ನು ಮುಚ್ಚಿಸಿತು. ಹೀಗಾಗಿ, ಮಕ್ಕಳು ಈಗ ಹಳ್ಳಿಯಿಂದ ದೂರದಲ್ಲಿರುವ ಮತ್ತೊಂದು ಶಾಲೆಗೆ ಹೋಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ.
ಆರಂಭದಲ್ಲಿ, ಈ ಗ್ರಾಮದಲ್ಲಿ ಸರಿಯಾದ ರಸ್ತೆಗಳು ಇರಲಿಲ್ಲ ಅಥವಾ ಮನರಂಜನೆಯ ಯಾವುದೇ ಸಂಪನ್ಮೂಲಗಳು ಇರಲಿಲ್ಲ. ಆದರೆ ಈ ಗ್ರಾಮವು ಮಾಧ್ಯಮಗಳಲ್ಲಿ ಚರ್ಚಿಸಲ್ಪಟ್ಟ ಕೂಡಲೇ, ಸರ್ಕಾರವು ಇಲ್ಲಿನ ಅಭಿವೃದ್ಧಿಗೆ ಗಮನ ಹರಿಸಿತು. ಈಗ ರಸ್ತೆ, ಅಭಿವೃದ್ಧಿ ಕಂಡಿದೆ.
ಒಂದೆಡೆ, ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ, ಮತ್ತೊಂದೆಡೆ, ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಈ ಗ್ರಾಮದಲ್ಲಿ ರಸ್ತೆಯನ್ನು ಸಹ ನಿರ್ಮಿಸಲಾಯಿತು. ಇದು ಮಾತ್ರವಲ್ಲ, ಅನೇಕ ಜನರು ಈ ಹಳ್ಳಿಯನ್ನು ತೊರೆದರು, ಆದರೆ ಅನೇಕ ಜನರು ಇನ್ನೂ ಈ ಗುಹೆಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿನ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ದೂರದ ಊರಿಗೂ ಹೋಗುತ್ತಾರೆ. ಜೊತೆಗೆ ಈ ಮಕ್ಕಳು ಪ್ರತಿ ವಾರ ತಮ್ಮ ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಕುಟುಂಬಗಳನ್ನು ಸಮಯ ಕಳೆಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.