Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳಗಳಿವು, 2023ರಲ್ಲಿ ಹೆಚ್ಚು ಜನರು ಭೇಟಿ ನೀಡಿದ್ದೂ ಇಲ್ಲಿಗೇ!

ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳಗಳಿವು, 2023ರಲ್ಲಿ ಹೆಚ್ಚು ಜನರು ಭೇಟಿ ನೀಡಿದ್ದೂ ಇಲ್ಲಿಗೇ!

ಪ್ರವಾಸಿ ತಾಣಗಳು ಲಿಸ್ಟ್ ಹೇಳುವಾಗ ಕರ್ನಾಟಕ ಅದೆಷ್ಟೊ ತಾಣಗಳು ಟಾಪ್ ಲಿಸ್ಟ್ ನಲ್ಲಿ ಬರುತ್ತೆ. ದೇಶದ ಮೂಲೆ ಮೂಲೆಯಿಂದ ಜನರು ಕರ್ನಾಟಕ ಸುಮ್ದಾರ ಪ್ರದೇಶಗಳನ್ನು ನೋಡಲು ಬರ್ತಾರೆ. ಈ ವರ್ಷ ಜನರು ಹೆಚ್ಚು ಭೇಟಿ ನೀಡಿದ ತಾಣಗಳು ಯಾವುವು ಗೊತ್ತಾ?   

Suvarna News | Published : Nov 29 2023, 06:02 PM
2 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
110
Asianet Image

ದಾಂಡೇಲಿ (Dandeli) : ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾಳಿ ನದಿ ತೀರದಲ್ಲಿರುವ ಸುಂದರ ತಾಣ ದಾಂಡೇಲಿ. ಈ ತಾಣವು ವಾಟರ್ ಸ್ಪೋರ್ಟ್ಸ್ (Water Sports) ಗಳಿಗೆ, ಅಡ್ವೆಂಚರ್ ಗಳಿಗೆ ಸಿಕ್ಕಾಪಟ್ಟೆ ಫೇಮಸ್. ಪ್ರತಿವರ್ಷ ತುಂಬಾನೆ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. 
 

210
Asianet Image

ಗೋಕರ್ಣ (Gokarna): ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ  (Sea Shore) ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂದು ಇದನ್ನು ಕರೆಯಲಾಗುತ್ತೆ. ಈ ಸ್ಥಳವು ಸಮುದ್ರ ತೀರಕ್ಕೆ ಹಾಗೂ ದೇಗುಲಗಳಿಂದ ತುಂಬಾನೆ ಜನಪ್ರಿಯತೆ ಪಡೆದಿದೆ. 

310
Asianet Image

ಮುರುಡೇಶ್ವರ (Murudeshwar) : ಮುರುಡೇಶ್ವರ ಎಂದ ಕೂಡಲೇ ಬೃಹತ್ ಶಿವನ ಮೂರ್ತಿ, ಎತ್ತರವಾದ ಗೋಪುರ ಮತ್ತು ಸಮುದ್ರದ ಅಲೆಗಳಿಗೆ ತಾಗಿ ನಿಂತಿರುವ ದೇವಾಲಯ ನೆನಪಾಗುತ್ತೆ. ಇದು ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವೂ ಹೌದು. ಇದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿದೆ. 

410
Asianet Image

ಉಡುಪಿ (Udupi) : ಈ ಕರಾವಳಿಯ ಜಿಲ್ಲೆ ದೇಗುಲಗಳಿಗೆ ಮತ್ತು ಸುಂದರವಾದ ಕರಾವಳಿ ತೀರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸುಂದರವಾದ ಬೀಚ್ ಗಳು, ಶ್ರೀಕೃಷ್ಣ ಮಠ ಸೇರಿ ಪ್ರಮುಖ ಇತಿಹಾಸ ಪ್ರಸಿದ್ಧ ದೇಗುಲಗಳನ್ನು ನೋಡುವುದೇ ಚೆಂದ. 

510
Asianet Image

ಜೋಗ್ ಫಾಲ್ಸ್ (Jog Falls) : ಜೋಗ್ ಫಾಲ್ಸ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಶರಾವತಿ ನದಿಯ ಮೇಲಿರುವ ಜಲಪಾತವಾಗಿದೆ. ಇಲ್ಲಿ ನಾಲ್ಕು ಕವಲುಗಳಾಗಿ ಹರಿಯುವ ರಾಜ, ರಾಣಿ, ರೋರರ್ , ರಾಕೆಟ್ ನೊಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡೋದು ಬೆಸ್ಟ್. 

610
Asianet Image

ಚಿಕ್ಕಮಗಳೂರು  (Chikamagaluru): ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣ ಚಿಕ್ಕಮಗಳೂರು. ಇದನ್ನು ಕಾಫಿ ನಾಡು ಎಂದು ಸಹ ಕರೆಯಲಾಗುತ್ತದೆ. ಇಲ್ಲಿನ ರಮಣೀಯ ಪ್ರಕೃತಿ, ಬಾಬ ಬುಡನ್ ಗಿರಿ, ಚಂದ್ರದ್ರೋಣ ಪರ್ವತ, ಮುಳ್ಳಯ್ಯನಗಿರಿ, ಮೊದಲಾದ ಪರ್ವತಗಳನ್ನು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳನ್ನು, ಕಾಫಿ ಪ್ಲಾಂಟೇಶನ್ ನ ಸೌಂದರ್ಯವನ್ನು ಎಂಜಾಯ್ ಮಾಡಬಹುದು. 

710
Asianet Image

ಕೂರ್ಗ್ (Coorg) : ದಕ್ಷಿಣದ ಕಾಶ್ಮೀರ ಎಂದೇ ಪ್ರಸಿದ್ಧವಾಗಿರುವ ಕೂರ್ಗ್ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ.. ಅಬ್ಬಿ ಫಾಲ್ಸ್, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ಮಾಂದಲ್ ಪಟ್ಟಿ, ರಾಜಾ ಸೀಟ್ ಇಲ್ಲಿನ ಪ್ರಮುಖ ಆಕರ್ಷಣೆಯ ತಾಣವಾಗಿದೆ.

810
Asianet Image

ಬಂಡೀಪುರ (Bandipura) : ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ.  ಹುಲಿ, ಆನೆ, ಚಿರತೆ ಇತ್ಯಾದಿ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
 

910
Asianet Image

ಮೈಸೂರು (Mysore): ಅರಮನೆ ನಗರಿ ಮೈಸೂರಿನಲ್ಲಿ ಕಾಲಿಟ್ಟಲ್ಲೆಲ್ಲಾ ನೀವು ಪ್ರವಾಸಿ ತಾಣಗಳನ್ನು ನೋಡಬಹುದು. ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಲಲಿತ ಮಹಲ್ ಪ್ಯಾಲೆಸ್, ಹೀಗೆ ಹಲವಾರು ಪ್ರವಾಸಿ ತಾಣಗಳು ಇಲ್ಲಿವೆ. 

1010
Asianet Image

ಹಂಪಿ (Hampi): ವಿಜಯನಗರದ ಅಳಿದು ಹೋದ ಸಾಮ್ರಾಜ್ಯದ ಶ್ರೀಮಂತಿಕೆಯನ್ನು ಸಾರುವ ಹಂಪಿಯ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬ. ಇಲ್ಲಿನ ಒಂದೊಂದು ಕಥೆಗಳನ್ನು ಕೇಳುತ್ತಿದ್ದಂತೆ ಕೃಷ್ಣದೇವರಾಯನ ಆಡಳಿತದ ವೈಭೋಗ ಹೇಗಿದ್ದಿರಬಹುದು ಅನ್ನೋದು ಕಾಣಿಸುತ್ತೆ. 

Pavna Das
About the Author
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Read More...
ಪ್ರವಾಸ
 
Recommended Stories
Top Stories