MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • Pre Wedding Shoot ಮಾಡಲು ಪ್ಲ್ಯಾನ್ ಮಾಡಿದ್ದೀರಾ? ಈ ತಾಣಗಳು ಬೆಸ್ಟ್

Pre Wedding Shoot ಮಾಡಲು ಪ್ಲ್ಯಾನ್ ಮಾಡಿದ್ದೀರಾ? ಈ ತಾಣಗಳು ಬೆಸ್ಟ್

Best Pre Wedding Shoot Locations: ಇತ್ತೀಚಿನ ದಿನಗಳಲ್ಲಿ, ಮದುವೆಗೆ ಮುಂಚಿತವಾಗಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಗಳ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಇದರಲ್ಲಿ ಕಪಲ್ಸ್ ಮದುವೆಗೆ ಮೊದಲು ಸುಂದರವಾದ ಫೋಟೋಶೂಟ್ ಮಾಡುತ್ತಾರೆ. ಹೀಗಿರೋವಾಗ, ನಿಮ್ಮ ಫೋಟೋಶೂಟ್ ಸ್ಥಳದ ಬಗ್ಗೆ ನೀವು ಗೊಂದಲಕ್ಕೊಳಗಾಗಿದ್ದರೆ, ನೀವು ನಿಮ್ಮ ಪ್ರೀ-ವೆಡ್ಡಿಂಗ್ ಫೋಟೋಗ್ರಫಿ ಮಾಡಬಹುದಾದ ಭಾರತದ ಅತ್ಯಂತ ಸುಂದರ ಸ್ಥಳಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.

3 Min read
Suvarna News
Published : Nov 27 2022, 11:45 AM IST
Share this Photo Gallery
  • FB
  • TW
  • Linkdin
  • Whatsapp
110

ಪ್ರತಿಯೊಂದು ಮದುವೆಯ ಆಚರಣೆಯು ತುಂಬಾ ಚೆನ್ನಾಗಿರುತ್ತೆ. ಆದರೆ ಮದುವೆಗೆ ಮುಂಚಿನ ಸಮಯವು ಪ್ರತಿ ದಂಪತಿಗಳಿಗೆ ತುಂಬಾ ವಿಶೇಷವಾಗಿದೆ. ಈ ಸಮಯದಲ್ಲಿ ಅವರು ಪರಸ್ಪರರನ್ನು ಅರಿತುಕೊಳ್ಳುತ್ತಾರೆ. ಅನೇಕ ಕಪಲ್ಸ್ ಮದುವೆಗೆ ಮೊದಲು ತಮ್ಮ ಪ್ರೀ-ವೆಡ್ಡಿಂಗ್ ಫೋಟೋಶೂಟ್ (Pre wedding Photoshoot) ಸಹ ಮಾಡುತ್ತಾರೆ. ಇದರಲ್ಲಿ, ಕಪಲ್ಸ್ ಸುಂದರವಾದ ಸ್ಥಳಗಳಿಗೆ ಹೋಗುತ್ತಾರೆ ಮತ್ತು ಫೋಟೋಗಳು, ವೀಡಿಯೊಗಳು ಮತ್ತು ಫಿಲಂ ಸಹ ಮಾಡಿಸುತ್ತಾರೆ. ಇದು ಅವರ ಪ್ರೀತಿಯ ಸಂಕೇತವಾಗಿದೆ, ಇದನ್ನು ಅವರು ಯಾವಾಗಲೂ ತಮ್ಮೊಂದಿಗೆ ಇರಿಸಲು ಬಯಸುತ್ತಾರೆ, ಅದಕ್ಕಾಗಿಯ್ ಅವರು ಪ್ರೀ-ವೆಡ್ಡಿಂಗ್ ಫೋಟೋಗ್ರಫಿಗಾಗಿ ಅತ್ಯುತ್ತಮ ಡೆಸ್ಟಿನೇಶನ್ ಹುಡುಕುತ್ತಾರೆ. ನೀವು ಇದೇ ಹುಡುಕಾಟದಲ್ಲಿದ್ರೆ ಇಲ್ಲಿದೆ ಸುಂದರ ತಾಣಗಳ ಬಗ್ಗೆ ಒಂದಿಷ್ಟು ಮಾಹಿತಿ.

210

ಕಾಶ್ಮೀರದ ಕಣಿವೆಗಳು (Kashmir Valley): ಕಾಶ್ಮೀರ ಕಣಿವೆಯ ಆಹ್ಲಾದಕರ ಹವಾಮಾನವು ದೇಶಾದ್ಯಂತದ ಯುವ ಜೋಡಿಗಳನ್ನು ವಿವಾಹಪೂರ್ವ ನೆನಪುಗಳನ್ನು ಮೆಲುಕು ಹಾಕಲು ಆಕರ್ಷಿಸುತ್ತಿದೆ. ತಮ್ಮ ಮದುವೆಗೆ ಮುಂಚಿತವಾಗಿ ಪ್ರೀ-ವೆಡ್ಡಿಂಗ್ ಚಿತ್ರೀಕರಣಕ್ಕಾಗಿ ಸಾವಿರಾರು ಜನರು ಇಲ್ಲಿಗೆ ಬರುತ್ತಿದ್ದಾರೆ. ಮೊಘಲ್ ಕಾಲದಲ್ಲಿ ನಿರ್ಮಿಸಲಾದ ನಿಶಾತ್ ಮತ್ತು ಶಾಲಿಮಾರ್ ಉದ್ಯಾನಗಳು ಫೋಟೋ ಶೂಟ್ ಗೆ ಸೂಕ್ತವಾಗಿದೆ.

310

ಪನ್ನಾ ಮೀನಾ ಕಾ ಕುಂಡ್, ಜೈಪುರ (Panna, Meena ka Kund, Jaipur):  ನೀವು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಲೊಕೇಶನ್ ಹುಡುಕುತ್ತಿದ್ದರೆ ಜೈಪುರ ನಗರಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಇಲ್ಲಿನ ಪನ್ನಾ ಮೀನಾ ಕಾ ಕುಂಡ್ ನ ಪ್ರಾಚೀನ ಮೆಟ್ಟಿಲು ಬಾವಿ ಸಂಕೀರ್ಣವು ಪ್ರೀ ವೆಡ್ಡಿಂಗ್ ಶೂಟ್ ಗೆ ಬಹಳ ಟ್ರೆಂಡಿಂಗ್ ತಾಣವಾಗಿದೆ. 

410

ತಾಜ್ ಮಹಲ್ ಆಗ್ರಾ (Taj Mahal Agra): ಪ್ರೀ-ವೆಡ್ಡಿಂಗ್ ಶೂಟ್ ಗಾಗಿ ಪ್ರೀತಿಯ ಅತಿದೊಡ್ಡ ಸಂಕೇತವನ್ನು ನಾವು ಹೇಗೆ ಮರೆಯಲು ಸಾಧ್ಯ? ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಪ್ರಣಯದಲ್ಲಿ ನಂಬಿಕೆಯಿಡುವ ರೊಮ್ಯಾಂಟಿಕ್ ಕಪಲ್ ಗಳಿಗೆ ಪ್ರಿ ವೆಡ್ಡಿಂಗ್ ಶೂಟ್ ಗೆ ಇದು ಅದ್ಭುತ ತಾಣವಾಗಿದೆ.
 

510

ಕುಮಾರಕೋಮ್, ಕೇರಳ (Kumarakom, Kerala): ಕೇರಳದ ಕುಮಾರಕೋಮ್ ಪ್ರೀ-ವೆಡ್ಡಿಂಗ್ ಶೂಟಿಂಗ್ ಗಳಿಗೆ ರೋಮ್ಯಾಂಟಿಕ್ ಸ್ಥಳವಾಗಿದೆ. ಕುಮಾರಕೋಮ್ ನ ಹಿನ್ನೀರಿನಲ್ಲಿ ಮುಳುಗುವ ಸೂರ್ಯನ ನಡುವೆ ಹೌಸ್ ಬೋಟ್ ನಲ್ಲಿ ಸಂಗಾತಿಯೊಂದಿಗಿನ ನಿಮ್ಮ ಚಿತ್ರಗಳು ಎಂದೆಂದಿಗೂ ಸುಂದರವಾಗುತ್ತವೆ. ಕುಮಾರಕೋಮ್ ಹಲವಾರು ಸರೋವರ ರೆಸಾರ್ಟ್ ಗಳನ್ನು ಹೊಂದಿದೆ, ಅಲ್ಲಿ ನೀವು ಆರಾಮವಾಗಿ ಶೂಟ್ ಮಾಡಬಹುದು. 

610

ನ್ಯಾಷನಲ್ ರೈಲ್ ಮ್ಯೂಸಿಯಂ, ದೆಹಲಿ (Natianal Trail Museum Delhi): ನೀವು ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಳ ಬಗ್ಗೆ ಯೋಚಿಸಿದಾಗ, ಮೆಟ್ರೋ ನಗರಗಳು ನಿಮ್ಮ ಮನಸ್ಸಿನಲ್ಲಿ ಮೊದಲ ಆಯ್ಕೆ ಆಗಿರೋದಿಲ್ಲ. ಆದಾಗ್ಯೂ, ದೆಹಲಿಯ ರಾಷ್ಟ್ರೀಯ ರೈಲು ವಸ್ತುಸಂಗ್ರಹಾಲಯವು ಪ್ರೀ-ವೆಡ್ಡಿಂಗ್ ಚಿತ್ರೀಕರಣಕ್ಕೆ ಸೂಕ್ತವಾಗಿದೆ. ನೀವು ಅದನ್ನು ಕಿ ಮತ್ತು ಕಾ ಚಿತ್ರದಲ್ಲೂ ನೋಡಿರಬಹುದು. ಪ್ರಕೃತಿಯ ಸೌಂದರ್ಯದ ನಡುವೆ, ಹೆರಿಟೇಜ್ ರೈಲುಗಳ ಆಕರ್ಷಣೆಯು ನಿಮ್ಮ ಪ್ರೀ ವೆಡ್ಡೀಂಗ್ ಫೋಟೋ ಶೂಟ್ ಗೆ ಉತ್ತಮ ಆಯ್ಕೆಯಾಗಿದೆ. ನೀವು ಕ್ಲಾಸಿ ಮತ್ತು ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸಿದರೆ, ಚಿತ್ರಗಳು ವಿಂಟೇಜ್ ಮತ್ತು ರಾಯಲ್ ಬ್ರಿಟಿಷ್ ಯುಗದಂತೆ ಕಾಣುತ್ತವೆ.

710

ಪಾಂಡಿಚೇರಿಯಲ್ಲಿನ ಫ್ರೆಂಚ್ ಕಾಲನಿ (Pondicherry French Colony): ಪಾಂಡಿಚೇರಿಯ ಫ್ರೆಂಚ್ ಕಾಲನಿಯ ವಾಸ್ತುಶಿಲ್ಪ, ಸುಂದರವಾದ ಬಣ್ಣಬಣ್ಣದ ಕಟ್ಟಡಗಳು ಮತ್ತು ಬಂಗಾಳಕೊಲ್ಲಿಯ ಹಿನ್ನೆಲೆ ಸೇರಿ ಒಮ್ದು ಅದ್ಭುತ ಲೋಕ ಸೃಷ್ಟಿಸುತ್ತೆ. ಇಲ್ಲಿ ಫೋಟೋಗ್ರಾಫಿ ಕೂಡ ಅಷ್ಟೇ ಸಖತ್ತಾಗಿ ಬರೋದ್ರಲ್ಲಿ ಸಂಶಯವಿಲ್ಲ. ನೀವು ಪ್ರೀ-ವೆಡ್ಡಿಂಗ್ ಫೋಟೋಗ್ರಫಿ ಪ್ಲ್ಯಾನ್ ಮಾಡಿದ್ದರೆ ಖಂಡಿತವಾಗಿಯೂ ಇದನ್ನು ನಿಮ್ಮ ಲಿಸ್ಟ್ ಗೆ ಸೇರಿಸಬಹುದು.

810

ಇನ್ನೂ ಕರ್ನಾಟಕದಲ್ಲೇ ನೀವು ಫೋಟೋ ಶೂಟ್ ಮಾಡಿಸಲು ಬಯಸಿದ್ರೆ ಒಂದಕ್ಕಿಂತ ಒಂದು ಅದ್ಭುತ ತಾಣಗಳು ಇಲ್ಲಿವೆ…. 

ಬೆಂಗಳೂರು ಅರಮನೆ (Banaglore Palace): ಬೆಂಗಳೂರು ಅರಮನೆಯು ಆಕರ್ಷಕವಾದ ತಾಣವಾಗಿದೆ. ಕರ್ನಾಟಕದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಗಳಿಗೆ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಉದ್ಯಾನಗಳು ಸುಂದರವಾಗಿರುವುದರಿಂದ ಮತ್ತು ಒಳಾಂಗಣಗಳು ರಾಯಲ್ ಆಗಿರುವುದರಿಂದ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಗಾಗಿ ಇದು ಬೆಂಗಳೂರಿನ ಪ್ರಮುಖ ಸ್ಥಳವಾಗಿದೆ. 

910

ನಂದಿ ಹಿಲ್ಸ್ (Nandi Hills): ಬೆಂಗಳೂರಿನಲ್ಲಿ ನಿಮ್ಮ  ಪ್ರೀ-ವೆಡ್ಡಿಂಗ್ ಫೋಟೋಗ್ರಫಿಗಾಗಿ ಸುಂದರವಾದ ಸ್ಥಳ ಹುಡುಕುತ್ತಿದ್ದರೆ, ನಂದಿ ಬೆಟ್ಟ ಉತ್ತಮ ಆಯ್ಕೆಯಾಗಿದೆ. ನಂದಿ ಬೆಟ್ಟದ ಗುಹೆಗಳು ಮತ್ತು ಆಕರ್ಷಕ ಟಿಪ್ಪುವಿನ ಕೋಟೆಯಂತಹ ಹಿನ್ನೆಲೆಯಲ್ಲಿ ಹಸಿರು ಸಿರಿಗಳು ಫೋಟೋಗ್ರಾಫಿಗೆ ಅತ್ಯುತ್ತಮವಾಗಿದೆ. ನಿಮ್ಮ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಗೆ ಉತ್ತಮ ಲೈಟಿಂಗ್ ಬೇಕು ಎನಿಸಿದರೆ ಮುಂಜಾನೆ ಫೋಟೋಗ್ರಾಫಿ ಮಾಡಿ. 

1010

ಇದಲ್ಲದೆ ನೀವು ಅದ್ಭುತ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಗಾಗಿ ಈ ಹಳೆಕಾಲದ ಪಾಳು ಬಿದ್ದ ಕಟ್ಟಡಗಳನ್ನು ಸಹ ಆಯ್ಕೆ ಮಾಡಬಹುದು. ಅಷ್ಟೇ ಅಲ್ಲ ಹೂವಿನ ಮಾರುಕಟ್ಟೆ, ಜಾತ್ರೆ, ಬೀಚ್ ಹೀಗೆ ವಿಭಿನ್ನ ಜಾಗಗಳಲ್ಲಿ ಸುಂದರವಾದ ಫೋಟೋ ಶೂಟ್ ಮಾಡಿಸಿಕೊಂಡು, ನಿಮ್ಮ ಸುಂದರ ನೆನಪಿನ ಖಜಾನೆಯಲ್ಲಿ ಕೂಡಿಡಬಹುದು. 

About the Author

SN
Suvarna News
ಮದುವೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved