ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರೈಲಿನಲ್ಲಿ ಪ್ರಯಾಣಿಸುವ ಭಕ್ತರ ಗಮನಕ್ಕೆ
ರಾಜ್ಯದ ವಿವಿಧೆಡೆಯ ಭಕ್ತರು ಸಾಮಾನ್ಯವಾಗಿ ಬೆಂಗಳೂರಿನಿಂದ ರೈಲಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುತ್ತಾರೆ. ಅಂಥವರಿಗೆ ಪ್ರಮುಖ ಮಾಹಿತಿಯೊಂದಿದೆ.
ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಾವಿರಾರು ಮಂದಿ ಆಗಮಿಸುತ್ತಾರೆ. ಅದರಲ್ಲೂ ರಾಜ್ಯದ ವಿವಿಧೆಡೆಯ ಭಕ್ತರು ಸಾಮಾನ್ಯವಾಗಿ ಬೆಂಗಳೂರಿನಿಂದ ರೈಲಿನಲ್ಲಿ ಇಲ್ಲಿಗೆ ತೆರಳುತ್ತಾರೆ. ಅಂಥವರಿಗೆ ಪ್ರಮುಖ ಮಾಹಿತಿಯೊಂದಿದೆ.
ಜುಲೈ 17ರಿಂದ ಅನ್ವಯವಾಗುವಂತೆ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ರೈಲು ಸಂಖ್ಯೆ 16540 ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
ಈ ರೈಲು ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಯಡಿಯೂರು, ಕುಣಿಗಲ್, ನೆಲಮಂಗಲ ಚಿಕ್ಕಬಣಾವರ ಮೂಲಕ ಸಂಚಾರ ನಡೆಸುತ್ತದೆ. ಪ್ರಮುಖವಾಗಿ ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಿದೆ.
ಸದ್ಯದ ವೇಳಾಪಟ್ಟಿಗಿಂತ ರೈಲು ಎರಡೂ ಕಾಲು ಗಂಟೆ ಮುಂಚೆಯೇ ಮಂಗಳೂರಿನಿಂದ ಆರಂಭವಾಗಲಿದೆ. ಅಂತೆಯೇ, ಮಾರ್ಗದ ನಿಲ್ದಾಣಗಳಲ್ಲಿ ಸದ್ಯದ ಸಮಯಕ್ಕಿಂತ ಎರಡು ಗಂಟೆ ಮುಂಚೆಯೇ ಸಂಚರಿಸಲಿದೆ. ವೇಳಾಪಟ್ಟಿ ವಿವರ ಇಲ್ಲಿದೆ.
ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಹೊಸ ವೇಳಾಪಟ್ಟಿ ಹೀಗಿದೆ. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಸಂಜೆ 4.30ಕ್ಕೆ ಯಶವಂತಪುರವನ್ನು ತಲುಪಲಿದೆ.
ರೈಲು ಬೆಳಗ್ಗೆ 7ಗಂಟೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಬಂಟ್ವಾಳ (7.33 ರಿಂದ 7.35), ಕಬಕ ಪುತ್ತೂರು (8.20 ರಿಂದ 8.22), ಸುಬ್ರಮಣ್ಯ ರೋಡ್ (9 ರಿಂದ 9.10)ಕ್ಕೆ ಆಗಮಿಸಲಿದೆ ಎಂದು ಪ್ರಕಟಣೆ ಹೇಳಿದೆ. ಸುಬ್ರಹ್ಮಣ್ಯ ರೋಡ್‌ನಿಂದ ಹೊರಡುವ ರೈಲು ಸಕಲೇಶಪುರ (11.30 ರಿಂದ 11.40), ಹಾಸನ (12.40 ರಿಂದ 12.45), ಚನ್ನರಾಯಪಟ್ಟಣ (1.10 ರಿಂದ 1.11), ಶವಣಬೆಳಗೊಳ (1.22 ರಿಂದ 1.23), ಬಿ. ಜಿ. ನಗರ (1.47 ರಿಂದ 1.48) ತಲುಪಲಿದೆ.
ಯಡಿಯೂರು (2.01 ರಿಂದ 2.02), ಕುಣಿಗಲ್ (2.18 ರಿಂದ 2.19), ನೆಲಮಂಗಲ (3 ರಿಂದ 3.01), ಚಿಕ್ಕಬಣಾವರ (3.44 ರಿಂದ 3.45)ಕ್ಕೆ ತಲುಪಲಿದೆ. ಯಶವಂತಪುರ ನಿಲ್ದಾಣಕ್ಕೆ 4.30ಕ್ಕೆ ಆಗಮಿಸಲಿದೆ. ರೈಲಿನ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಈ ರೈಲು ಸೇವೆಯ ಉಪಯೋಗ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.