ಈ ಪ್ರಾಣಿಗಳು ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗೋಲ್ಲ, ಯಾವವು ಅವು?
ಕೆಲವೊಂದು ಪ್ರಾಣಿಗಳು ಭಾರತದಲ್ಲಿ ಮಾತ್ರ ಕಂಡು ಬರುತ್ತೆ ಅನ್ನೋದು ಗೊತ್ತಾ? ಹಾಗಿದ್ರೆ ಭಾರತದಲ್ಲಿ ಇರುವಂತಹ ಆ ವಿಶಿಷ್ಟ ಪ್ರಾಣಿಗಳ ಬಗ್ಗೆ ತಿಳಿಯೋಣ.
ನಮ್ಮ ದೇಶದಲ್ಲಿ ಜೀವ ವೈವಿಧ್ಯಗಳಿಗೆ ಕಡಿಮೆ ಏನು ಇಲ್ಲ. ಆದರೆ ಭಾರತದಲ್ಲಿ ಮಾತ್ರ ಕಂಡು ಬರುವಂತಹ ಕೆಲವೊಂದು ಪ್ರಾಣಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ಬನ್ನಿ ಅವುಗಳ ಬಗ್ಗೆ ತಿಳಿಯೋಣ.
ಬಂಗಾಲ ಹುಲಿ (Bengal Tiger)
ಇದು ಭಾರತದ ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ಒರಿಸ್ಸಾ ಮತ್ತು ತಮಿಳುನಾಡಿನಲ್ಲಿ ಮಾತ್ರ ಕಂಡು ಬರುತ್ತೆ. ಭಾರತವು ಹುಲಿಗಳ ಪ್ರಮುಖ ವಾಸಸ್ಥಾನವಾಗಿದೆ. ಇದು ನಮ್ಮ ರಾಷ್ಟ್ರೀಯ ಪ್ರಾಣಿಯೂ ಹೌದು. ಇದು ದೇಶದ ದಟ್ಟವಾದ ಕಾಡುಗಳು ಮತ್ತು ಹಸಿರು ಹುಲ್ಲಿನ ಪ್ರದೇಶಗಳಲ್ಲಿ ತಿರುಗಾಡುತ್ತಿರುತ್ತದೆ.
ಭಾರತೀಯ ಖಡ್ಗಮೃಗ (Indian Rhinoceros )
ಒಂದು ಕೊಂಬನ್ನು ಹೊಂದಿರುವಂತಹ ಭಾತರ ಖಡ್ಗಮೃಗಗಳು ಹೆಚ್ಚಾಗಿ ಈಶಾನ್ಯ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಅಸ್ಸಾಂನಲ್ಲಿ ಕಂಡು ಬರುವಂತಹ ಪ್ರಾಣಿಯಾಗಿದೆ. ಇವುಗಳು ಸಹ ಹೆಚ್ಚಾಗಿ ಹಸಿರು ಜಾಗಗಳಲ್ಲಿ ಕಂಡು ಬರುತ್ತೆ.
ನೀಲಗಿರಿ ಥಾರ್ (Nilgiri Tahr)
ಇವುಗಳು ಹೆಚ್ಚಾಗಿ ಕೇರಳ, ತಮಿಳುನಾಡಿನಲ್ಲಿ ಕಂಡು ಬರುತ್ತೆ. ಪರ್ವತ ಮೇಕೆಗಳು ಅಂದರೆ ಮೌಂಟೇನ್ ಗೋಟ್ ಗುಂಪಿಗೆ ಸೇರುವಂಥಹ ಈ ಪ್ರಾಣಿಗಳು ಪಶ್ಚಿಮ ಬೆಟ್ಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತೆ.
ಗಂಗ್ಯಾಟಿಕ್ ಡಾಲ್ಫಿನ್ (Gangetic Dolphin)
ಗಂಗಾ ಮತ್ತು ಬ್ರಹ್ಮಪುತ್ರಾ ನದಿಯಲ್ಲಿ ಕಂಡು ಬರುವಂತಹ ದಾಲ್ಫಿನ್ ಇದಾಗಿದೆ. ಉದ್ದವಾದ ಮೂಗನ್ನು ಹೊಂದಿರುವ ಈ ಡಾಲ್ಫಿನ್ ಭಾರತದ ಜೀವವೈವಿಧ್ಯತೆಯ ಒಂದು ಸುಂದರ ಜೀವ.
ಸಾಂಘೈ (Sangai)
ಈ ಪ್ರಾಣಿ ಹೆಚ್ಚಾಗಿ ಮಣಿಪುರದಲ್ಲಿ ಕಂಡು ಬರುತ್ತೆ. ಈ ಕೊಂಬಿನ ಜಿಂಕೆಯಂತಹ ಪ್ರಾಣಿ ಹೆಚ್ಚಾಗಿ ಮಣಿಪುರದ ಲೋಕ್ ಟಕ್ ಸರೋವರ ಬಳಿ ಕಂಡು ಬರುತ್ತವೆ. ಇದು ಪ್ರಪಂಚದ ಅತ್ಯಂತ ವಿಶಿಷ್ಟವಾದ ಜಿಂಕೆಯ ಜಾತಿ.
ಸಿಂಹ ಬಾಲದ ಮಕಾಕು (Lion Tailed Macaque)
ಈ ಜಾತಿಯ ಮಂಗಳು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಮಾತ್ರ ಕಾಣ ಸಿಗುತ್ತವೆ. ಈ ಮಂಗಳ ಪ್ರಮುಖ ಆಕರ್ಷಣೆ ಅಂದ್ರೆ ಅವುಗಳ ಸಿಲ್ವರ್ ಬಣ್ಣದ ಗಡ್ಡ. ಇವು ಅಳಿವಿನಂಚಿನಲ್ಲಿರುವ ಮಂಗಗಳ ಜಾತಿಗಳಾಗಿವೆ.
ದೈತ್ಯ ಅಳಿಲು (Indian Giant Squirrel)
ಇವು ಹೆಚ್ಚಾಗಿ ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು ಮತ್ತು ಸತ್ಪುರ ರೇಂಜ್ ಗಳಲ್ಲಿ ಕಂಡು ಬರುತ್ತವೆ. ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ (South India) ಇವುಗಳನ್ನು ಕಾಣಬಹುದು. ಇವುಗಳು ತಮ್ಮ ವೈಬ್ರೆಂಟ್ ಕಲರ್ ಮತ್ತು ಉದ್ದನೆಯ ಬಾಲದಿಂದಾಗಿ ಜನಪ್ರಿಯತೆ ಪಡೆದಿವೆ.