- Home
- Life
- Travel
- Ambubachi Mela 2025: ಕಾಮಾಖ್ಯ ಮಂದಿರದಲ್ಲಿ ಅಂಬುಬಾಚಿ ಉತ್ಸವ …. ಶಕ್ತಿ ದೇವತೆಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ
Ambubachi Mela 2025: ಕಾಮಾಖ್ಯ ಮಂದಿರದಲ್ಲಿ ಅಂಬುಬಾಚಿ ಉತ್ಸವ …. ಶಕ್ತಿ ದೇವತೆಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ
ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ಧಾಮದಲ್ಲಿ ಜೂನ್ 22 ರಿಂದ ಅಂಬುಬಾಚಿ ಮೇಳ ಪ್ರಾರಂಭವಾಗಿದೆ. ಈ ಸಮಯದಲ್ಲಿ, ದೇವಾಲಯದ ಬಾಗಿಲುಗಳು 3 ದಿನಗಳವರೆಗೆ ಮುಚ್ಚಿರುತ್ತವೆ. ದೇವಿಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ ಇದಾಗಿದೆ.

ಮೂರು ದಿನಗಳ ಅಂಬುಬಾಚಿ ಉತ್ಸವವು (Ambubachi utsav) ಜೂನ್ 22, 2025 ರಿಂದ ಗುವಾಹಟಿಯ ಮಾ ಕಾಮಾಖ್ಯ ಧಾಮದಲ್ಲಿ ಪ್ರಾರಂಭವಾಗಿದೆ. ಈ ಹಬ್ಬವನ್ನು ಅಸ್ಸಾಂನ ಗುವಾಹಟಿಯಲ್ಲಿ ಮತ್ತು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಆಚರಿಸಲಾಗುತ್ತದೆ. ಫಿರೋಜಾಬಾದ್ ಜಿಲ್ಲೆಯ ಜಸ್ರಾನಾ ತಹಸಿಲ್ ಪ್ರಧಾನ ಕಚೇರಿಯಲ್ಲಿರುವ ಮಾ ಕಾಮಾಖ್ಯ ದೇವಾಲಯದಲ್ಲಿ ಅಂಬುಬಾಚಿ ಉತ್ಸವವನ್ನು ಆಚರಿಸಲಾಗುತ್ತದೆ. ಅಂಬುಬಾಚಿ ಉತ್ಸವದ ಸಮಯದಲ್ಲಿ, ಮಾ ಕಾಮಾಖ್ಯ ದೇವಾಲಯದ ಎಲ್ಲಾ ಬಾಗಿಲುಗಳನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ, ಏಕೆಂದರೆ ಕಾಮಖ್ಯ ಮಾತೆ 3 ದಿನಗಳವರೆಗೆ ಮುಟ್ಟಿನ ಸ್ಥಿತಿಯಲ್ಲಿರುತ್ತಾಳೆ.
ಫಿರೋಜಾಬಾದ್ ಜಿಲ್ಲೆಯ ಕಾಮಾಖ್ಯ ದೇವಾಲಯ
ಜಸ್ರಾನಾದಲ್ಲಿರುವ ಕಾಮಾಕ್ಯ ದೇವಿಯನ್ನು (Kamakhya Devi) ಅಕ್ಟೋಬರ್ 1984 ರಲ್ಲಿ ಸ್ಥಾಪಿಸಲಾಯಿತು, ಈ ದೇವಾಲಯವನ್ನು ಪೀಠಾಧೀಶ್ವರ ಮಹಾರಾಜ ಮಾಧವಾನಂದರು ಗೋಲೋಕಕ್ಕೆ ತೆರಳಿದ ನಂತರ ಸ್ಥಾಪಿಸಿದರು, ಈಗ ಅವರ ಶಿಷ್ಯ ಮಹೇಶ್ ಬ್ರಹ್ಮಚಾರಿ ಮಾತೆ ಕಾಮಾಕ್ಯಳ ಸೇವೆ ಮಾಡುತ್ತಿದ್ದಾರೆ. ದೇವಾಲಯದ ಮಹೇಶ್ ಬ್ರಹ್ಮಚಾರಿ ಅವರ ಪ್ರಕಾರ, ತಾಯಿಯ ವಿಗ್ರಹವನ್ನು ಸ್ಥಾಪಿಸಿದ ನಂತರ, 41 ದಿನಗಳ ಕಾಲ ನಿರಂತರವಾಗಿ ಆಕೆಯ ಪಾದಗಳಿಂದ ನೀರು ಹರಿದಿತ್ತಂತೆ, ಆರಂಭಿಕ ದಿನಗಳಲ್ಲಿ ನೀರಿನ ಪಾತ್ರೆಯನ್ನು ಹತ್ತಿರದಲ್ಲಿ ಇರಿಸಲಾಗಿತ್ತಂತೆ.
ಈ ನೀರು ಮೂರ್ತಿಯ ಒಳಗಿನಿಂದ ಹೊರಬರುತ್ತಿರಬಹುದು, ಎನ್ನುವ ಸಂಶಯದಿಂದ ಪಾತ್ರೆಗಳನ್ನು ಅಲ್ಲಿಂದ ತೆಗೆಯಲಾಯಿತು, ಆದರೆ ನೀರಿನ ಹರಿವು ಮಾತ್ರ ಕಡಿಮೆಯಾಗಿಲ್ಲ. ಇದು ತಾಯಿ ಕಾಮಾಕ್ಯ ಇಲ್ಲಿ ಸ್ಥಾಪಿತಳಾಗಿದ್ದಾಳೆ ಮತ್ತು ಅವಳು ಇಲ್ಲಿ ವಾಸಿಸುತ್ತಾಳೆ ಎಂಬುದನ್ನು ಸಾಬೀತುಪಡಿಸಿತು. ಅಂದಿನಿಂದ ಅಂಬುಬಾಚಿ ಮಹೋತ್ಸವವೂ ಇಲ್ಲಿ ಪ್ರಾರಂಭವಾಗಿದೆ. ಈ ಹಬ್ಬದ ಸಮಯದಲ್ಲಿ, ದೇವಾಲಯದ ಎಲ್ಲಾ ಬಾಗಿಲುಗಳನ್ನು ಮೂರು ದಿನಗಳವರೆಗೆ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಏಕೆಂದರೆ 3 ದಿನಗಳವರೆಗೆ ಮಾತೆಯು ತನ್ನ ವಾರ್ಷಿಕ ಮುಟ್ಟಿನ ಸ್ಥಿತಿಯಲ್ಲಿರುತ್ತಾಳೆ ಮತ್ತು 3 ದಿನಗಳ ನಂತರ ಈ ಬಾಗಿಲುಗಳನ್ನು ತೆರೆಯಲಾಗುತ್ತದೆ.
ಇದು ದೇವಿಗೆ ವಿಶ್ರಾಂತಿ ನೀಡುವ ಸಮಯ
ಅಂಬುಬಾಚಿ ಮೇಳವನ್ನು ದೇವಿಗೆ ವಿಶ್ರಾಂತಿ ನೀಡುವ ಸಮಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ದೇವಾಲಯದ ಗರ್ಭಗುಡಿಯ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ದೇವಿಯನ್ನು 3 ದಿನಗಳವರೆಗೆ ಪೂಜಿಸಲಾಗುವುದಿಲ್ಲ. ನಾಲ್ಕನೇ ದಿನ, ದೇವಿಗೆ ಶುದ್ಧೀಕರಣ ಸ್ನಾನವನ್ನು ನೀಡಲಾಗುತ್ತದೆ ಮತ್ತು ದೇವಾಲಯದ ಬಾಗಿಲುಗಳನ್ನು ತೆರೆಯಲಾಗುತ್ತದೆ.
51 ಶಕ್ತಿಪೀಠಗಳಲ್ಲಿ ಒಂದಾಗಿದೆ
ಕಾಮಾಕ್ಯ ದೇವಿಯ ದೇವಾಲಯವು ಭಾರತದಲ್ಲಿ ನೆಲೆಗೊಂಡಿರುವ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ನಂಬಿಕೆಯ ಪ್ರಕಾರ, ಸತಿ ದೇವಿಯ ಯೋನಿ ಭಾಗವು ಇಲ್ಲಿ ಬಿದ್ದಿದೆ. ಅದಕ್ಕಾಗಿಯೇ ಕಾಮಾಕ್ಯ ದೇವಾಲಯದಲ್ಲಿ ದೇವಿಯ ಯೋನಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ದೇವಿಯ ವಿಗ್ರಹವಿಲ್ಲ. ಯೋನಿಯ ಭಾಗವಾಗಿರುವ ಕಾರಣ, ದೇವಿಯ ಮುಟ್ಟನ್ನು ಇಲ್ಲಿ ಸಂಭ್ರಮಿಸಲಾಗುತ್ತೆ. ಕಾಮಾಕ್ಯ ದೇವಿಯು ವರ್ಷಕ್ಕೊಮ್ಮೆ ಋತುಮತಿಯಾಗುವ ಏಕೈಕ ದೇವಾಲಯ ಇದಾಗಿದೆ.
ಪು ಬಣ್ಣಕ್ಕೆ ತಿರುಗುವ ಬ್ರಹ್ಮಪುತ್ರ ನದಿಯ ನೀರು
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ದೇವಸ್ಥಾನದ ಹಿಂದಿರುವ ಬ್ರಹ್ಮಪುತ್ರ ನದಿಯ ನೀರು ಮೂರು ದಿನಗಳ ಕಾಲ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲಿ, ಕಾಮಾಕ್ಯ ದೇವಿಯು ಮಾಸಿಕ ಚಕ್ರದಲ್ಲಿರುತ್ತಾಳೆ. ದೇವಿಯು , ಇಡೀ ಬ್ರಹ್ಮಪುತ್ರ ನದಿಯು ಕಾಮಾಕ್ಯ ದೇವಿಯ ಹರಿಯುವ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ ಎನ್ನುವ ನಂಬಿಕೆ ಇದೆ.
ಮುಟ್ಟಿನ ಬಟ್ಟೆಯೇ ಪ್ರಸಾದ
ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ, ಇಲ್ಲಿ ದೇವಿಗೆ ಮೂರು ದಿನಗಳ ಋತು ಚಕ್ರವಾದಾಗ ದೇವಿಯ ಸುತ್ತ ಬಿಳಿ ಬಟ್ಟೆಗಳನ್ನು ಹರಡಲಾಗುತ್ತದೆ ಮತ್ತು ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚಲಾಗುತ್ತದೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ದೇವಿಯ ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಬಟ್ಟೆಯನ್ನು ಅಂಬುಬಾಚಿ ಬಟ್ಟೆ (periods clothes) ಎಂದು ಕರೆಯಲಾಗುತ್ತದೆ ಮತ್ತು ಇದನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.