- Home
- Astrology
- Festivals
- Hindu Temple Dress Code: ದೇವಸ್ಥಾನಕ್ಕೆ ಹೋಗುವಾಗ ಸಾಂಪ್ರದಾಯಿಕ ಉಡುಗೆ ಧರಿಸಬೇಕೆನ್ನುವ ರೂಲ್ಸ್ ಯಾಕೆ?
Hindu Temple Dress Code: ದೇವಸ್ಥಾನಕ್ಕೆ ಹೋಗುವಾಗ ಸಾಂಪ್ರದಾಯಿಕ ಉಡುಗೆ ಧರಿಸಬೇಕೆನ್ನುವ ರೂಲ್ಸ್ ಯಾಕೆ?
ನಮ್ಮ ಸನಾತನ ಸಂಪ್ರದಾಯದಂತೆ ದೇವಸ್ಥಾನಗಳಿಗೆ ತೆರಳುವಾಗ ಸೀರೆ, ಧೋತಿ ಧರಿಸಿ ಹೋಗೋದು ಯಾಕೆ ಎಂದು ಗೊತ್ತಿದ್ಯಾ? ಇದು ನಿಯಮ ಅಂತ ನೀವು ಅಂದುಕೊಂಡಿರಬಹುದು. ಆದರೆ ಇದರ ಹಿಂದೆಯೂ ಇದೆ ವಿಜ್ಞಾನ.

ನಾವು ನಮ್ಮ ಸಂಪ್ರದಾಯಗಳ (Hindu traditions) ಆಳ ಅಗಲಕ್ಕೆ ಹೋದಂತೆಲ್ಲಾ, ನಮ್ಮನ್ನು ಯೋಚಿಸುವಂತೆ ಮಾಡುವ ರತ್ನಗಳು ನಮಗೆ ಸಿಗುತ್ತವೆ. ಆ ಸತ್ಯಗಳು ನಮ್ಮನ್ನು ಯೋಚನೆಗೀಡು ಮಾಡುವಂತೆ ಮಾಡುತ್ತೆ. ಇದೆಲ್ಲ ಅವರಿಗೆ ಹೇಗೆ ತಿಳಿದಿತ್ತು? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತೆ. ಈಗ ದೇವಸ್ಥಾನಗಳಿಗೆ ಹೋಗುವಾಗ ಹಿಂದೆ ಸೀರೆ ಮತ್ತು ಧೋತಿ ಅಥವಾ ಪಂಚೆ ಉಡುವ ಸಂಪ್ರದಾಯ ಇತ್ತು. ಇಂದು ಸಾಂಪ್ರದಾಯಿಕವಾಗಿರುವ ಉಡುಗೆಗೆ ಅವಕಾಶ ಇದೆ. ಇದಕ್ಕೆ ಕಾರಣ ಏನು ಅನ್ನೋದನ್ನು ನೋಡೋಣ.
ದೇವಸ್ಥಾನಗಳಿಗೆ ಸೀರೆ ಅಥವಾ ಧೋತಿ (Dhoti or saree) ಧರಿಸಿ ಹೋಗೋದು ಖಂಡಿತವಾಗಿಯೂ ನಿಯಮ ಅಲ್ಲ, ಅದರ ಹಿಂದೆ ವಿಜ್ಞಾನ ಇದೆ. ಈ ವಿಜ್ಞಾನದ ಪ್ರಕಾರ ಯಾಕೆ ಸ್ಟಿಚ್ ಮಾಡದ ಬಟ್ಟೆಗಳನ್ನು ಧರಿಸಬೇಕು ಅನ್ನೋದನ್ನು ನೋಡೋಣ.
ಏಕೆಂದರೆ ಧೋತಿ ಮತ್ತು ಅಂಗವಸ್ತ್ರ ಧರಿಸುವುದರಿಂದ ಧನಾತ್ಮಕ ಮತ್ತು ದೈವಿಕ ಶಕ್ತಿಯನ್ನು ಆಕರ್ಷಿಸಲು ಸಹಾಯವಾಗುತ್ತದೆ ಏಕೆಂದರೆ, ಧೋತಿ ಮತ್ತು ಅಂಗವಸ್ತ್ರದಲ್ಲಿ, ಯಾವುದೇ ಹೊಲಿಗೆ ಇರೋದಿಲ್ಲ, ಇದು ನಮ್ಮ ದೇಹವನ್ನು ಆವರಿಸುತ್ತೆ. ಈ ದೇಹವು ದೇವಾಲಯದ ಒಳಗೆ ಇರುವ ಸಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಧೋತಿಯು ಶುದ್ಧತೆ, ಸರಳತೆ ಮತ್ತು ಋಷಿಗಳು ಮತ್ತು ವಿದ್ವಾಂಸರ ಉಡುಪಿನೊಂದಿಗೆ ಸಂಬಂಧ ಹೊಂದಿದೆ, ಇದು ಆಧ್ಯಾತ್ಮಿಕ (spirituality) ಅಭ್ಯಾಸಗಳ ಸಂಪರ್ಕವನ್ನು ಪ್ರತಿನಿಧಿಸುತ್ತದೆ. ಸೀರೆಗಳನ್ನು ಹೆಚ್ಚಾಗಿ ಅನುಗ್ರಹ, ಘನತೆ ಮತ್ತು ಸೊಬಗಿನ ಸಂಕೇತಗಳಾಗಿ ನೋಡಲಾಗುತ್ತದೆ.
ಈ ಉಡುಪುಗಳನ್ನು ಧರಿಸುವುದರಿಂದ ಅನೇಕರಿಗೆ ಸಕಾರಾತ್ಮಕತೆ, ಗೌರವ ಮತ್ತು ಅವರ ಸಾಂಸ್ಕೃತಿಕ ಮೂಲಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತೆ. ಇದು ಸಕಾರಾತ್ಮಕ ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿರುವ ಉಡುಪುಗಳಾಗಿರುವುದರಿಂದ ಮಾನಸಿಕ ಸ್ಥಿತಿಗತಿ ಚೆನ್ನಾಗಿರುತ್ತೆ.
ಸ್ಟಿಚ್ ಮಾಡಿದ ಬಟ್ಟೆಗಳು, ಬೇರೆ ಬೇರೆಯವರ ಸ್ಪರ್ಷಗಳನ್ನು ಹೊಂದಿರುತ್ತೆ, ಇದನ್ನು ವಾಶ್ ಮಾಡೋದು ಸಹ ಕಷ್ಟ, ಆದರೆ ಸ್ಟಿಚ್ ಮಾಡದ ಬಟ್ಟೆಗಳು ಶುದ್ಧವಾಗಿರುತ್ತೆ, ಒಗೆಯೋದು ಸಹ ಸುಲಭ, ಹಾಗಾಗಿ ದೇವಸ್ಥಾನದ ಪೂಜಾರಿಗಳು ಧೋತಿ ಧರಿಸುತ್ತಾರೆ.
ಅದು ಧೋತಿಯಾಗಲಿ ಸೀರೆಯಾಗಲಿ, ಉಡಲು ಒಂದು ಸಂಪ್ರದಾಯವಿದೆ. ಅವುಗಳನ್ನು ಕ್ಲಾಕ್ ವೈಸ್ ನಮ್ಮ ದೇಹಕ್ಕೆ ಸುತ್ತಿ, ಕೊನೆಗೆ ನಮ್ಮ ಶಕ್ತಿಯ ಕೇಂದ್ರದ (center of energy) ಬಳಿ ಗಂಟು ಹಾಕಲಾಗುತ್ತದೆ. ಇದರಿಂದಾಗಿ ಪೂಜೆ, ಹೋಮ , ಹವನದ ಸಂದರ್ಭದಲ್ಲಿ ನಮ್ಮ ದೇಹ, ಮನಸು ಶಾಂತವಾಗಿರಲು ಸಾಧ್ಯವಾಗುತ್ತೆ. ಇದೆಲ್ಲವೂ ವೈದಿಕ ವಿಜ್ಞಾನದ ವಿಧಾನವಾಗಿದೆ.