7 ತಿಂಗಳ ನಂತರ ಏಕತಾ ಪ್ರತಿಮೆ ಪ್ರವಾಸಿಗರಿಗೆ ಮುಕ್ತ..! ನಿಬಂಧನೆಗಳು ಹೀಗಿವೆ
7 ತಿಂಗಳ ನಂತರ ಪ್ರವಾಸಿಗರಿಗೆ ಮುಕ್ತವಾದ ಏಕತಾ ಪ್ರತಿಮೆ | ನಿಬಂಧನೆಗಳು ಹೀಗಿವೆ
ಗುಜರಾತ್‌ನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಏಕತಾ ಪ್ರತಿಮೆಬರೋಬ್ಬರಿ 7 ತಿಂಗಳ ನಂತರ ಪ್ರವಾಸಿಗರಿಗೆ ತೆರೆದುಕೊಂಡಿದೆ.
ಆದರೆ ಬಹಳಷ್ಟು ನಿಬಂಧನೆಗಳನ್ನು ವಿಧಿಸಲಾಗಿದ್ದು, ಒಂದು ದಿನ 2500 ಪ್ರವಾಸಿಗರಷ್ಟೇ ಭೇಟಿ ನೀಡಬಹುದಾಗಿದೆ.
ಬರೀ 500 ಪ್ರವಾಸಿಗರು ಒಂದು ಸಲ ವ್ಯೂ ಗಾಲರಿಗೆ ಭೇಟಿ ನೀಡಬಹುದಾಗಿದೆ.
ಸುಮಾರು 7 ತಿಂಗಳು ಕೊರೋನಾದಿಂದಾಗಿ ಮುಚ್ಚಲ್ಪಟ್ಟಿದ್ದ ಪ್ರವಾಸಿ ತಾಣ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದೆ.
ಪ್ರವಾಸಿಗರಿಗೆ ಟಿಕೆಟ್ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದೆ
ಎರಡು ಗಂಟೆ ಸ್ಲಾಟ್ ಪ್ರಕಾರ ಪ್ರವಾಸಿಗರು ಟಿಕೆಟ್ ಬುಕ್ ಮಾಡಿಕೊಳ್ಳಬಹುದುದಾಗಿದೆ.
ಪ್ರತಿ ಪ್ರವಾಸಿಗರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದ್ದು, ಸಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕಿದೆ.