ಅಸಲಿ-ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಪತ್ತೆ ಮಾಡೋದು ಹೇಗೆ? ಇಲ್ಲಿದೆ ಸರಳ ಉಪಾಯಗಳು
ನಕಲಿ ಮೊಬೈಲ್ ಚಾರ್ಜರ್‌ಗಳು ನಿಮ್ಮ ದುಬಾರಿ ಫೋನ್‌ಗಳಿಗೆ ಹಾನಿಯುಂಟುಮಾಡುವುದಲ್ಲದೆ, ಸ್ಫೋಟದಂತಹ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಈ ಲೇಖನದಲ್ಲಿ ಅಸಲಿ ಮತ್ತು ನಕಲಿ ಚಾರ್ಜರ್‌ಗಳನ್ನು ಗುರುತಿಸುವುದು ಹೇಗೆಂದು ವಿವರಿಸಲಾಗಿದೆ.

ಮೊಬೈಲ್ ಚಾರ್ಜರ್
ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಳ್ಳುತ್ತಿದ್ದಂತೆ ಜನರು ಮೊಬೈಲ್ ತೆಗೆದುಕೊಳ್ಳುತ್ತಾರೆ. ಕೆಲಸಕ್ಕೆ ಹೋಗುವ ಮುನ್ನ ಮತ್ತು ಕೆಲಸದಿಂದ ಬರುತ್ತಿದ್ದಂತೆ ಮೊಬೈಲ್ ಚಾರ್ಜರ್ ಹಾಕಿಕೊಳ್ಳುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಹಲವು ಬಗೆಯ ಚಾರ್ಜರ್‌ಗಳು ಸಿಗುತ್ತವೆ. ಆದ್ರೆ ಇವುಗಳಲ್ಲಿ ಕೆಲವೊಂದು ನಕಲಿ ಚಾರ್ಜರ್‌ಗಳು ಇರುತ್ತವೆ. ಇಂತಹ ಚಾರ್ಜರ್‌ಗಳಿಂದ ನಿಮ್ಮ ಬ್ರ್ಯಾಂಡೆಡ್ ದುಬಾರಿ ಬೆಲೆಯ ಮೊಬೈಲ್‌ಗಳು ಹಾಳಾಗುತ್ತವೆ.
ಮೊಬೈಲ್ ಅಥವಾ ಚಾರ್ಜರ್ ಹೆಚ್ಚು ಬಿಸಿ ಆಗ್ತಿದೆಯಾ?
ಸಾಮಾನ್ಯವಾಗಿ ಚಾರ್ಜ್ ಮಾಡುವಾಗ ಮೊಬೈಲ್ ಅಥವಾ ಚಾರ್ಜರ್ ಕೊಂಚ ಬಿಸಿಯಾಗುತ್ತದೆ. ಆದ್ರೆ ಈ ಎರಡೂ ಡಿವೈಸ್‌ಗಳು ಅತ್ಯಧಿಕವಾಗಿ ಬಿಸಿಯಾಗುತ್ತಿದ್ರೆ ನಿರ್ಲಕ್ಷ್ಯ ಮಾಡಬಾರದು. ಕಡಿಮೆ ಗುಣಮಟ್ಟದ ನಕಲಿ ಚಾರ್ಜರ್‌ಗಳು ದುರ್ಬಲ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದರಿಂದ ಚಾರ್ಜರ್ ಜೊತೆ ನಿಮ್ಮ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಚಾರ್ಜರ್ ಖರೀದಿಸುವಾಗ BSI, ISI ಸೇರಿದಂತೆ ಸುರಕ್ಷತಾ ಪ್ರಮಾಣೀಕರಗಳನ್ನು ಪರಿಶೀಲಿಸಿ.
ಚಾರ್ಜರ್‌ನಲ್ಲಿರುವ ಸೂಚನೆಗಳನ್ನು ಓದಿ
ಚಾರ್ಜರ್ ಖರೀದಿಸುವಾಗ ಇನ್‌ಪುಟ್-ಔಟ್‌ಪುಟ್ ರೇಟಿಂಗ್, ಮಾದರಿ ಸಂಖ್ಯೆ, ಕಂಪನಿಯ ಹೆಸರು ಮತ್ತು ಪ್ರಮಾಣೀಕರಣ ಗುರುತುಗಳನ್ನು ಸರಿಯಾಗಿ ಚೆಕ್ ಮಾಡ್ಕೊಳ್ಳಿ. ಅಸಲಿ ಚಾರ್ಜರ್‌ಗಳು ಈ ರೀತಿಯ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತವೆ. ಆದ್ರೆ ನಕಲಿ ಚಾರ್ಜರ್‌ಗಳು ಅಪೂರ್ಣ ಮಾಹಿತಿಯನ್ನು ಹೊಂದಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ. ಇದು ನಕಲಿ ಸಂಕೇತವಾಗಿದೆ.
ಕಂಪನಿಯ ಅಧಿಕೃತ ವೆಬ್‌ಸೈಟ್
ನೀವು ಖರೀದಿಸಬೇಕಿರುವ ಚಾರ್ಜರ್‌ನ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಕಂಪನಿಗಳು ತಮ್ಮ ಚಾರ್ಜರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಗುರುತಿನ ಚಿಹ್ನೆಯನ್ನು ನೀಡಿರುತ್ತದೆ. ನೀವು ಖರೀದಿಸಿರುವ ಚಾರ್ಜರ್‌ನಲ್ಲಿರುವ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿ ಇರದಿದ್ರೆ ಅದು ನಕಲಿ ಎಂದು ಪರಿಗಣಿಸಬೇಕು.
ಕಡಿಮೆ ಬೆಲೆಯ ಚಾರ್ಜರ್‌ಗಳು
ತುಂಬಾ ಕಡಿಮೆ ಬೆಲೆಗೆ ಚಾರ್ಜರ್‌ಗಳನ್ನು ಖರೀದಿಸುವಾಗ ತುಂಬಾನೇ ಎಚ್ಚರಿಕೆಯಿಂದಿರಬೇಕು. ಗ್ರಾಹಕರನ್ನು ಆಕರ್ಷಿಸಲು ಅನೇಕ ಬಾರಿ ನಕಲಿ ಚಾರ್ಜರ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳು ಮೂಲ ಚಾರ್ಜರ್‌ಗಳಂತೆ ಕಾಣಿಸಿದ್ರೂ, ಗುಣಮಟ್ಟ ಕಳಪೆಯಾಗಿರುತ್ತದೆ. ಬೆಲೆಯ ಸತ್ಯಾಸತ್ಯತೆ ತಿಳಿಯಲು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಚಾರ್ಜಿಂಗ್ ವೇಗ
ನಿಮ್ಮ ಸ್ಮಾರ್ಟ್‌ಫೋನ್ ಅತಿವೇಗವಾಗಿ ಅಥವಾ ಅತಿ ನಿಧಾನವಾಗಿ ಚಾರ್ಜ್ ಅಗುತ್ತಿದ್ರೆ ನೀವು ಬಳಕೆ ಮಾಡುತ್ತಿರೋದು ನಕಲಿ ಚಾರ್ಜರ್ ಎಂದು ಪರಿಗಣಿಸಬಹುದು. ನಕಲಿ ಚಾರ್ಜರ್ ಕಂಪನಿಗಳು ಹೇಳಿಕೊಂಡ ಔಟ್‌ಫುಟ್ ನೀಡಲು ವಿಫಲವಾಗೋದರಿಂದ ಚಾರ್ಜಿಂಗ್ ವೇಗದಲ್ಲಿ ಗಮನಾರ್ಹ ವ್ಯತ್ಯಾಸವಿರುತ್ತದೆ.
ಇದನ್ನೂ ಓದಿ: ಮೊಬೈಲ್ ಚಾರ್ಜರ್ ಯಾವಾಗಲೂ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಏಕಿರುತ್ತೆ?, ಶೇ.90 ರಷ್ಟು ಜನರಿಗೆ ಈ ಕಾರಣವೇ ಗೊತ್ತಿಲ್ಲ
ನಕಲಿ ಚಾರ್ಜರ್ ಡೇಂಜರ್ ಯಾಕೆ?
ನಕಲಿ ಚಾರ್ಜರ್‌ಗಳ ಮೊಬೈಲ್‌ನ ಚಾರ್ಜಿಂಗ್ ವೇಗಕ್ಕೆ ಪರಿಣಾಮಕಾರಿಯಾಗಿ ಹಾನಿಯನ್ನುಂಟು ಮಾಡುತ್ತದೆ. ಹಾಗೆಯೇ ಸ್ಮಾರ್ಟ್‌ಫೋನ್ ಬ್ಯಾಟರಿಗಳಿಗೂ ನಕಲಿ ಚಾರ್ಜರ್‌ಗಳು ಹಾನಿಯನ್ನುಂಟು ಮಾಡಿ ಕ್ಷಮತೆಯನ್ನು ಕ್ಷೀಣಿಸುತ್ತವೆ.
ನಕಲಿ ಚಾರ್ಜರ್‌ಗಳಿಂದ ಮೊಬೈಲ್ ಅತಿ ಬಿಸಿಯಾಗಿ ಸ್ಪೋಟವಾಗುವ ಸಾಧ್ಯತೆ ಇರುತ್ತೆ. ನಕಲಿ ಚಾರ್ಜರ್ ಸ್ಪೋಟದಿಂದ ಶಾರ್ಟ್ ಸರ್ಕ್ಯೂಟ್ ನಂತಹ ಅಪಾಯಗಳಿರುತ್ತವೆ. ಹಲವು ಸಂದರ್ಭಗಳಲ್ಲಿ ಇಂತಹ ಚಾರ್ಜರ್‌ಗಳಿಂದ ಬೆಂಕಿ ಅನಾಹುತದ ಅಪಾಯವಿರುತ್ತದೆ
ಇದನ್ನೂ ಓದಿ: ನಿಮ್ಮ ಫೋನ್ ಚಾರ್ಜರ್ ಒರಿಜಿನಲ್ಲಾ, ಡೂಪ್ಲಿಕೇಟಾ? ಚೆಕ್ ಮಾಡ್ಕೊಳ್ಳಿ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

