Asianet Suvarna News Asianet Suvarna News

ನಿಮ್ಮ ಫೋನ್ ಚಾರ್ಜರ್‌ ಒರಿಜಿನಲ್ಲಾ, ಡೂಪ್ಲಿಕೇಟಾ? ಚೆಕ್‌ ಮಾಡ್ಕೊಳ್ಳಿ!

ಮೊಬೈಲ್‌ ಜೊತೆ ಬರುವ ಚಾರ್ಜರ್ ಕಳೆದು ಹೋಗಿ ಹೊಸ ಚಾರ್ಜರ್ ಕೊಳ್ಳುವಾಗ ಮೋಸ ಹೋಗೋದೆ ಹೆಚ್ಚು. ಸೋ ಒರಿಜಿನಲ್ ಚಾರ್ಜರ್ ಯಾವ್ದು ಅಂತ ಕಂಡು ಹಿಡಿಯೋದು ಹೇಗೆ ಗೊತ್ತಾ?

 

check your mobile phone charger original or duplicate for your safety bni
Author
First Published Aug 9, 2024, 6:53 PM IST | Last Updated Aug 9, 2024, 6:53 PM IST

ಮೊಬೈಲ್‌ ಜೊತೆ ಬಂದ ಚಾರ್ಜರ್‌ (Mobile Charger) ಎಷ್ಟೋ ಸಲ ಮಿಸ್‌ ಪ್ಲೇಸ್ ಆಗಿರುತ್ತೆ. ಕೆಲವೊಮ್ಮೆ ಒಂದು ಚಾರ್ಜರನ್ನೇ ಮನೆಯವರಲ್ಲೇ ತಮ್ಮ ಫೋನಿಗೆ ಬಳಸ್ತಾರೆ. ಮತ್ತೂ ಕೆಲವೊಮ್ಮೆ ಕೈಜಾರಿ ಬಿದ್ದೋ, ಕಳೆದುಕೊಂಡೇ ಕೈತಪ್ಪಿ ಹೋಗಿರುತ್ತೆ. ಮೊಬೈಲ್ ಚಾರ್ಜರ್ ಮಿಸ್ ಆದ್ರೆ ಹೊಸತನ್ನು ಖರೀದಿಸೋದು ಅನಿವಾರ್ಯ. ಹೀಗಿದ್ದಾಗ ಎಷ್ಟೋ ಸಲ ಅಂಗಡಿಯವ್ರು ಒರಿಜಿನಲ್ ಚಾರ್ಜರ್ ಅಂತ ಕೊಟ್ಟಿದ್ದು ಕೆಲವೇ ದಿನಕ್ಕೆ ಮುರಿದು, ಸರಿಯಾಗಿ ಚಾರ್ಜ್ ಆಗದೇ, ಮತ್ತೇನೋ ಆಗಿ ಚೆನ್ನಾಗಿ ಕೈ ಕೊಡುತ್ತೆ. ಹೀಗಿರುವಾಗ ಒರಿಜಿನಲ್ ಚಾರ್ಜರ್ ಹುಡುಕೋದು ಹೇಗೆ ಅನ್ನೋದು ಎಲ್ಲರ ತಲೆಯಲ್ಲಿರುವ ಮಿಲಿಯನ್ ಡಾಲರ್ ಪ್ರಶ್ನೆ. 

ಇನ್ನೂ ಕೆಲವೊಮ್ಮೆ ಮೂಲ ಕಂಪನಿಯ ಚಾರ್ಜರ್‌ಗಳು ದುಬಾರಿಯಾಗಿರುವ ಕಾರಣ ಅನೇಕರು ಕಡಿಮೆ ವೆಚ್ಚದ ಟ್ರಾವೆಲಿಂಗ್ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಆದರೆ ಇವುಗಳಿಂದ ನಿಮ್ಮ ಸ್ಮಾರ್ಟ್​ಫೋನ್ ಹಾಳಾಗುವ ಅಪಾಯ ಇರುತ್ತದೆ. ಈ ಚಾರ್ಜರ್​ಗಳಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಆದರೆ, ಮಾರುಕಟ್ಟೆಯಲ್ಲಿ ಡ್ಯೂಪ್ಲಿಕೇಟ್ ಚಾರ್ಜರ್​ಗಳ ಸಂಖ್ಯೆ ಹೆಚ್ಚುತ್ತಿವೆ. ಹಾಗಾಗಿ ನೀವು ಬಳಸುತ್ತಿರುವ ಚಾರ್ಜರ್ ಒರಿಜಿನಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬಹುದು. ಚಾರ್ಜರ್‌ನ ಹಿಂಭಾಗದಲ್ಲಿ ಡಬಲ್ ಸ್ಕ್ವೇರ್ ಚಿಹ್ನೆ ಇದ್ದರೆ, ಮೊಬೈಲ್ ಚಾರ್ಜರ್‌ನ ಒಳಗೆ ಬಳಸುವ ವೈರಿಂಗ್ ಡಬಲ್ ಇನ್ಸುಲೇಟ್ ಆಗಿದೆ ಎಂದು ಅರ್ಥ. ಈ ಚಾರ್ಜರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಕಡಿಮೆ. ಹಾಗಾಗಿ ಈ ಚಾರ್ಜರ್ ಅನ್ನು ಬಳಸುವುದು ಸುರಕ್ಷಿತವಾಗಿದೆ. ಚಾರ್ಜರ್‌ನಲ್ಲಿ V ಅಕ್ಷರ ಇದ್ದರೆ, ಅದು ಚಾರ್ಜರ್‌ನ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದರರ್ಥ ಚಾರ್ಜರ್ ಐದು ಮಾನದಂಡಗಳನ್ನು ಪೂರೈಸುತ್ತದೆ. ಈ ಸಂಖ್ಯೆಯು ಚಾರ್ಜರ್‌ಗಳ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಚಾರ್ಜರ್‌ನಲ್ಲಿ ಮನೆಯ ಚಿಹ್ನೆ ಕಾಣಿಸಿಕೊಂಡರೆ, ಚಾರ್ಜರ್ ವೈಯಕ್ತಿಕ ಬಳಕೆಗೆ ಮಾತ್ರ ಎಂದು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಈ ಚಾರ್ಜರ್ ಅನ್ನು ಹೆಚ್ಚಿನ ವೋಲ್ಟೇಜ್ ಪ್ರದೇಶಗಳಲ್ಲಿ ಬಳಸಬಾರದು. ಹೀಗೆ ಮಾಡುವುದರಿಂದ ಫೋನ್ ಹಾಳಾಗಬಹುದು.
ಚಾರ್ಜರ್‌ಗಳ ಮೇಲೆ 8 ಚಿಹ್ನೆಯನ್ನು ಬರೆದಿರುವುದನ್ನು ನೀವು ಗಮನಿಸಬಹುದು. ಇದರರ್ಥ ನಿಮ್ಮ ಚಾರ್ಜರ್ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತದೆ. ನಿಮ್ಮ ಚಾರ್ಜರ್ ಅನ್ನು ಉತ್ತಮ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ಇದು ಗುಣಮಟ್ಟದ ಚಾರ್ಜರ್ ಆಗಿದೆ.

ಕೆಲವು ಚಾರ್ಜರ್‌ಗಳು ಕ್ರಾಸ್ ಡಸ್ಟ್ ಬಿನ್ ಚಿಹ್ನೆಗಳನ್ನು ಸಹ ಹೊಂದಿವೆ. ಅಂದರೆ ಈ ಚಾರ್ಜರ್ ಹಾಳಾಗಿದ್ದರೆ ಡಸ್ಟ್ ಬಿನ್​ಗೆ ಎಸೆಯಬಾರದು. ಇದು ಮರುಬಳಕೆ ಚಾರ್ಜರ್ ಆಗಿದೆ.

ಬಳಕೆದಾರರೇ ಎಚ್ಚರ, ಹಾಡು ಕೇಳುತ್ತಿದ್ದಾಗೆ ಹೆಡ್‌ಫೋನ್ ಸ್ಫೋಟಗೊಂಡು ವ್ಯಕ್ತಿ ಗಂಭೀರ!

ನಕಲಿ ಚಾರ್ಜರ್‌ಗಳು ಸಾಮಾನ್ಯವಾಗಿ ಮೂಲ ಚಾರ್ಜರ್‌ಗಿಂತ ಸ್ವಲ್ಪ ವಿಭಿನ್ನ ವಿನ್ಯಾಸವನ್ನು ಹೊಂದಿರಬಹುದು. ಆದ್ದರಿಂದ, ನೀವು ಚಾರ್ಜರ್ ಅನ್ನು ಖರೀದಿಸುವಾಗ, ಫೋನ್‌ನ ಮೂಲ ಚಾರ್ಜರ್‌ನ ವಿನ್ಯಾಸವು ನೀವು ಖರೀದಿಸುವ ಚಾರ್ಜರ್‌ನಂತೆಯೇ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು. ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವನ್ನು ನೋಡಿದರೆ ಅದು ನಕಲಿ ಚಾರ್ಜರ್ ಆಗಿರಬಹುದು. 

ಸ್ಯಾಮ್‌ಸಂಗ್‌, ಒನ್‌ಪ್ಲಸ್‌ನಂಥಾ ಒರಿಜಿನಲ್ ಚಾರ್ಜರ್‌ಗಳನ್ನು ಸೂಕ್ಷ್ಮವಾಗಿ ನೋಡಿದರೆ ಅದರ ಹೋಲ್ಡರ್‌ನ ವಿನ್ಯಾಸ, ಸಿಂಬಲ್‌ಗಳ ಜಾಗ, ಅದರ ಫಾಂಟ್‌ ಅಳತೆ ಇತ್ಯಾದಿಗಳನ್ನು ತಪ್ಪದೇ ಚೆಕ್‌ ಮಾಡಿ. 

ದುಡ್ಡುಳಿಸೋಣ ಅಂತ ಕಡಿಮೆ ಬೆಲೆಯ ಡುಪ್ಲಿಕೇಟ್ ಚಾರ್ಜರ್ ಖರೀದಿಸಿ ಕೆಲವೇ ದಿನಗಳಲ್ಲಿ ಡಸ್ಟ್‌ಬಿನ್‌ಗೆ ಎಸೆಯೋ ಬದಲು ಕೊಂಚ ದುಬಾರಿಯಾದರೂ ಒರಿಜಿನಲ್ ಚಾರ್ಜರ್ ಖರೀದಿಸುವುದೇ ಉತ್ತಮ. ಹೀಗಾಗಿ ಚಾರ್ಜರ್ ಖರೀದಿ ಬಗ್ಗೆಯೂ ಸ್ವಲ್ಪ ಜಾಗ್ರತೆ ಇರಲಿ.

ಮೊಟ್ಟ ಮೊದಲ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ನಥಿಂಗ್ ಇಯರ್ ಬಡ್ಸ್ ಬಿಡುಗಡೆ!
 

Latest Videos
Follow Us:
Download App:
  • android
  • ios