ಚಾರ್ಜರ್ ನಿಮ್ ಅಪ್ಪ ಕೊಡ್ತಾನಾ? ಐಫೋನ್ vs ಆ್ಯಂಡ್ರಾಯ್ಡ್ ಚರ್ಚೆಯಲ್ಲಿ ಗೆದ್ದವರ‍್ಯಾರು?
ಆ್ಯಂಡ್ರಾಯ್ಡ್ ಫೋನ್ ಅಥವಾ ಐಫೋನ್ ಯಾವುದು ಮೇಲು? ಈ ಕುರಿತು ಚರ್ಚೆಯಲ್ಲಿ ಆ್ಯಂಡ್ರಾಯ್ಡ್ ಬಳಕೆ ಮಾಡುತ್ತಿರುವ ಅಜ್ಜಿಯ ಪ್ರಶ್ನೆಗೆ ಐಫೋನ್ ಬಳಕೆದಾರ ತಬ್ಬಿಬ್ಬಾಗಿದ್ದಾನೆ. ಅಷ್ಟಕ್ಕೂ ಈ ಚರ್ಚೆ ಹೇಗಿತ್ತು? ಇಲ್ಲಿದೆ ವಿಡಿಯೋ.
ಆ್ಯಂಡ್ರಾಯ್ಡ್ ಫೋನ್ ಹಾಗೂ ಐಪೋನ್ ಕುರಿತು ಸಾಕಷ್ಟ ವ್ಯತ್ಯಾಸಗಳಿವೆ. ಎರಡೂ ಫೋನ್‌ಗಳ ಫೀಚರ್, ತಂತ್ರಜ್ಞಾನ, ಸುರಕ್ಷತೆ ಬೇರೆ ಬೇರೆ. ಜೊತೆಗೆ ಬೆಲೆಯಲ್ಲೂ ಭಾರಿ ವ್ಯತ್ಯಸಾಗಳಿವೆ. ಹಾಗಾದರೆ ಐಫೋನ್ ಅಥವಾ ಆ್ಯಂಡ್ರಾಯ್ಡ್ ಫೋನ್ ಯಾವುದು ಮೇಲು? ಈ ಕುರಿತು ತಮಾಷೆ ಚರ್ಚೆಯೊಂದು ನಡೆದಿದೆ. ಇದು ಪ್ರತಿ ಹಳ್ಳಿ, ಗೆಳೆಯರ ಬಳಗದಲ್ಲಿ ನಡೆಯುವ ಚರ್ಚೆ. ಆದರೆ ಇಲ್ಲಿ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೆಟರ್ ಸೂರಜ್ ತನ್ನ ಅಜ್ಜಿ ಜೊತೆಗಿನ ಚರ್ಚೆ ವಿಡಿಯೋ ಭಾರಿ ವೈರಲ್ ಆಗಿದೆ. ಕ್ಯಾಮೆರಾ, ಫೀಚರ್, ಬೆಲೆ ಸೇರಿದಂತೆ ಪ್ರಮುಖ ಫೀಚರ್ ಕುರಿತು ಈ ಚರ್ಚೆ ನಡೆದಿದೆ.
ಚರ್ಚೆಯ ಆರಂಭದದಲ್ಲೇ ಸೂರಜ್, ಈ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು 100, 200ಎಂಪಿ ಕ್ಯಾಮೆರಾ ಎಂದು ಹೇಳುತ್ತೀರಿ. ಆದರೆ ಅದರ ಕ್ವಾಲಿಟಿ ಮಾತ್ರ ಕೆಟ್ಟದಾಗಿದೆ. ಐಫೋನ್‌ಗಳ ಫ್ರಂಟ ಕ್ಯಾಮೆರಾದಲ್ಲೇ ಅದಕ್ಕಿಂತ ಉತ್ತಮ ಫೋಟೋ ತೆಗೆಯಲು ಸಾಧ್ಯವಾಗುತ್ತೆ. ಐಫೋನ್ 12ಎಂಪಿ ಕ್ಯಾಮೆರಾದಲ್ಲಿ ಸಿನಿಮಾವನ್ನೇ ಶೂಟ್ ಮಾಡುತ್ತೇವೆ ಎಂದಿದ್ದಾರೆ. ಈ ಮಾತಿಗೆ ಕೌಂಟರ್ ಆಗಿ ಅಜ್ಜಿ, ನನ್ ಮೊಬೈಲ್ ನೋಡು ಒಂದು ವಾರ ಆಯ್ತು ಚಾರ್ಜ್ ಮಾಡಿ ಇನ್ನೂ 10 ಪರ್ಸೆಂಟ್ ಚಾರ್ಜ್ ಬಾಕಿ ಇದೆ. ನಿಮ್ಮ ಐಫೋನ್ 2 ಗಂಟೆ ಬಳಸಿದರೆ ಚಾರ್ಜ್ ಖಾಲಿಯಾಗಿ ಸ್ವಿಚ್ ಆಫ್ ಆಗುತ್ತೆ ಎಂದಿದ್ದಾರೆ.
ಶರ್ಮಾಜಿ ಹುಡುಗ, ವರ್ಮಾಜಿ ಹುಡುಗಿ, ಈ ಕ್ರಿಯೇಟೀವ್ ಲಗ್ನ ಪತ್ರಿಕೆ ನೋಡಿದ್ರೆ ಕಳೆದು ಹೋಗ್ತೀರ!
ಇಷ್ಟಕ್ಕೆ ಚರ್ಚೆ ಮುಗಿದಿಲ್ಲ, ಆ್ಯಂಡ್ರಾಯ್ಡ್ ಫೋನ್ ಕೇವಲ 5000 ರೂಪಾಯಿಗೂ ಸಿಗುತ್ತೆ. ಆದರೆ ಐಫೋನ್ ಹಾಗಲ್ಲ, ಅದು ಬ್ರ್ಯಾಂಡ್, 50 ಸಾವಿರ ರೂಪಾಯಿ ಕಡಿಮೆ ಐಫೋನ್ ಸಿಗುವುದಿಲ್ಲ ಎಂದಿದ್ದಾರೆ. ಆದರೆ ಅಜ್ಜಿಯ ಕೌಂಟರ್‌ಗೆ ಮತ್ತೆ ಐಫೋನ್ ಸೂರಜ್ ಮುಖಭಂಗ ಅನುಭವಿಸಿದ್ದಾನೆ. ಕಾರಣ ಬಿದ್ದು ಒಡೆದು ಹೋದರೆ ಗೊತ್ತಾಗುತ್ತೆ ಎಂದು ಅಜ್ಜಿ ತಿರುಗೇಟು ನೀಡಿದ್ದಾರೆ. ಐಫೋನ್ ಖರೀದಿ ಮಾಡಬೇಕಾದರೆ ಕಿಡ್ನಿ ಮಾರಿ ತಗೊಂಡಿದ್ದೀಯಾ, ರಿಪೇರಿ ಬಂದರೆ ಆಸ್ತಿಯನ್ನೇ ಮಾರಾಟ ಮಾಡಬೇಕಾಗುತ್ತದೆ ಎಂದು ಅಜ್ಜಿ ಹೇಳಿದ್ದಾರೆ.
ಆದರೆ ಇಷ್ಟಕ್ಕೆ ಸುಮ್ಮನೆ ಕೂರದ ಸೂರಜ್, ಐಫೋನ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿರಿ ಫೀಚರ್ ಇದೆ. ನಿಮ್ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾನೆ. ನಮ್ ಹತ್ರ ಸೀರೆನೂ ಇದೆ, ಲಂಗಾನು ಇದೆ. ಇಯರ್ ಫೋನ್ ಹಾಕಿ ಕೂತ್ಕೊಳ್ಳುವ ನೀವು ಈವಾಗ ದೊಡ್ಡದಾಗಿ ಮಾತನಾಡುತ್ತಿದ್ದಾರೆ ಎಂದು ಅಜ್ಜಿ ತಿರುಗೇಟು ನೀಡಿದ್ದಾರೆ.
ಆ್ಯಂಡ್ರಾಯ್ಡ್ ಫೋನ್‌ಗಳು ಹೊಸದು ಖರೀದಿಸಿದ 2 ಆ್ಯಪ್ ಇನ್‌ಸ್ಟಾಲ್ ಮಾಡಿದರೆ ಸಾಕು, ತಕ್ಷಣ ಹ್ಯಾಂಗ್ ಆಗುತ್ತೆ. ಈವಾಗ ಐಫೋನ್ ಕುರಿತು ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. ಆದರೆ ಇಷ್ಟಕ್ಕೆ ಅಜ್ಜಿ ಬಿಡಬೇಕಲ್ಲ, ನಿನ್ ಫಿಂಗರ್ ಫ್ರಿಂಟ್ ಎಲ್ಲಿದೆ ತೋರಿಸು ಎಂದು ಪ್ರಶ್ನಿಸಿದ್ದರೆ. ತಕ್ಷಣವೇ ಸೂರಜ್, ಫಿಂಗರ್‌ಫ್ರಿಂಟ್ ಅಂದರೆ ನಾವು ಹೆಬ್ಬಟ್ಟಲ್ಲ, ಕೇವಲ ಎಜುಕೇಟೆಡ್ ಮಾತ್ರ ಐಫೋನ್ ತಗೋತಾರೆ ಎಂದು ಉತ್ತರಿಸಿದ್ದಾನೆ.
ಐಫೋನ್ ಕುರಿತು ಒಂದರ ಮೇಲೊಂದರಂತೆ ಫೀಚರ್ , ಪ್ರಯೋಜನ ಮಾತನಾಡುತ್ತಿದ್ದ ಸೂರಜ್‌ಗೆ ಅಜ್ಜಿ ಮತ್ತೊಂದು ಗೂಗ್ಲಿ ಪ್ರಶ್ನೆ ಹಾಕಿದ್ದಾರೆ. ನೀವು ಐಫೋನ್ ಖರೀದಿ ಮಾಡಿದಾಗ ಬಾಕ್ಸ್‌ನಲ್ಲಿ ಏನೇನು ಇರುತ್ತೆ ಎಂದು ಪ್ರಶ್ನಿಸಿದ್ದರೆ. ಹೊಸ ಬಾಕ್ಸ್ ಫೋನ್ ಒಳಗೆ ಐಫೋನ್ ಇರುತ್ತೆ. ಅಷ್ಟೇ. ಚಾರ್ಜರ್ ಇರಲ್ಲ ಎಂದಿದ್ದಾರೆ. ಇದಕ್ಕೆ ಕೌಂಟರ್ ಕೊಟ್ಟ ಅಜ್ಜಿ, ಚಾರ್ಜರ್ ಯಾರು ನಿಮ್ಮ ಅಪ್ಪ ಕೊಡ್ತಾನಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಮೆಟ್ಟಿಲಿನಿಂದ ಕೆಳಕ್ಕೆ ಜಾರಿ ಬಿದ್ದ ನಟ ವಿಜಯ್ ದೇವರಕೊಂಡ, ಹಾಡು ಪ್ರಮೋಶನ್ ವೇಳೆ ಘಟನೆ!
ಇವರಿಬ್ಬರ ತಮಾಷೆಯ ವಿಡಿಯೋ ಇಲ್ಲಿಗೆ ಕೊನೆಗೊಳ್ಳುತ್ತದೆ. ಈ ರೀತಿಯ ಹಲವರು ಚರ್ಚೆ ಮಾಡಿರುತ್ತಾರೆ. ಗೆಳೆಯರ ಕಾಲೆಳೆದಿರುತ್ತಾರೆ. ಆದರೆ ಐಫೋನ್ ಹಾಗೂ ಆ್ಯಂಡ್ರಾಯ್ಡ್ ಫೋನ್ ಚರ್ಚೆಗಳು ಮಾತ್ರ ಮುಗಿಯುವುದಿಲ್ಲ. ಈ ಚರ್ಚೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಹಲವರು ಈ ವಿಡಿಯೋ ಷೇರ್ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.