ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಹೊಸ ಆಸ್ಕ್ ಮೆಟಾ ಎಐ ಎಂಬ ಶಾರ್ಟ್‌ಕಟ್; ಏನಿದರ ಲಾಭ?
ವಾಟ್ಸ್‌ಆ್ಯಪ್ 'ಆಸ್ಕ್ ಮೆಟಾ ಎಐ' ಎಂಬ ಹೊಸ ಶಾರ್ಟ್‌ಕಟ್ ಅನ್ನು ಪರೀಕ್ಷಿಸುತ್ತಿದೆ. ಈ ಸೌಲಭ್ಯವು ಬಳಕೆದಾರರಿಗೆ ಚಾಟ್‌ನಲ್ಲಿನ ನಿರ್ದಿಷ್ಟ ಸಂದೇಶಗಳ ಬಗ್ಗೆ ನೇರವಾಗಿ AI ಬಳಸಿ ಪ್ರಶ್ನೆ ಕೇಳಲು ಮತ್ತು ಸ್ಪಷ್ಟನೆ ಪಡೆಯಲು ಅನುವು ಮಾಡಿಕೊಡುತ್ತದೆ.

ಆಸ್ಕ್ ಮೆಟಾ ಎಐ ಎಂಬ ಶಾರ್ಟ್‌ಕಟ್
ಐಫೋನ್ ಬಳಕೆದಾರರಿಗೆಂದೇ ವಾಟ್ಸ್‌ಆ್ಯಪ್ ಇದೀಗ ಆಸ್ಕ್ ಮೆಟಾ ಎಐ ಎಂಬ ಶಾರ್ಟ್‌ಕಟ್ ಅನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ವಾಟ್ಸಪ್ ಬಳಕೆದಾರರು ಚಾಟ್ ನಡೆಸುತ್ತಿರುವಾಗಲೇ ಮೆಟಾ ಎಐಗೆ ನಿರ್ದಿಷ್ಟ ಮೆಸೇಜ್‌ಗಳ ಕುರಿತು ನೇರವಾಗಿ ಪ್ರಶ್ನೆಗಳನ್ನು, ಸ್ಪಷ್ಟನೆಗಳನ್ನು ಕೇಳಲು, ಫ್ಯಾಕ್ಟ್‌ಚೆಕ್ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.
ವಾಟ್ಸ್‌ಆ್ಯಪ್ ಬೆಟಾಗೆ ಟೆಸ್ಟಿಂಗ್
ಈ ಕುರಿತು ಐಒಎಸ್‌ನ 25.26.10.71ನೇ ಆವತ್ತಿಯ ವಾಟ್ಸ್‌ಆ್ಯಪ್ ಬೆಟಾಗೆ ಟೆಸ್ಟಿಂಗ್ ಕೂಡ ಆರಂಭವಾಗಿದೆ. ಐಫೋನ್ ಬಳಕೆದಾರರಲ್ಲಿ ಸದ್ಯ ಕೆಲವರಿಗಷ್ಟೇ ಈ ಹೊಸ ಸೌಲಭ್ಯ ಪ್ರಯೋಗಾರ್ಥವಾಗಿ ಲಭ್ಯವಾಗಲಿದೆ. ವಿಶೇಷವೆಂದರೆ ಎಐ ಶಾರ್ಟ್‌ಕಟ್ ಅನ್ನು ತೆರೆದ ಕೂಡಲೇ ಎಲ್ಲಾ ಮೆಸೇಜ್ ಎಐಗೆ ಹೋಗುವುದಿಲ್ಲ.
ಇದನ್ನೂ ಓದಿ: ಟೆಕ್ ದೈತ್ಯ Google ಮತ್ತು ಮೆಟಾ ಮೇಲೆ ಕಣ್ಣಿಟ್ಟ ED, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್
ಬಳಕೆದಾರರ ಖಾಸಗಿತನ
ಬಳಕೆದಾರರು ನಿರ್ದಿಷ್ಟ ಮೆಸೇಜ್ ಅನ್ನು ಆಯ್ಕೆ ಮಾಡಬೇಕು ಮತ್ತು ತಾವು ಏನು ಕೇಳಲು ಬಯಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಮೂಲಕ ಬಳಕೆದಾರರ ಖಾಸಗಿತನ ಮತ್ತು ಪ್ಲಾಟ್‌ಫಾರ್ಮ್ ಮೇಲಿನ ನಂಬಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Apple Inc : ಎಐ ತಜ್ಞರಿಗೆ ಬಹಬೇಡಿಕೆ, ಆಪಲ್ ಕಂಪನಿ ಉದ್ಯೋಗಿಗಳ ಸಂಬಳ ಎಷ್ಟು ಗೊತ್ತಾ?
ಹೇಗೆ ಕಾರ್ಯನಿರ್ವಹಣೆ?
ವಾಟ್ಸ್‌ಆ್ಯಪ್ ತೆರೆದು ಯಾವುದೇ ಸಂದೇಶದ ಮೇಲೆ ದೀರ್ಘವಾಗಿ ಪ್ರೆಸ್ ಮಾಡಿದರೆ ಮೇಲ್ಭಾಗದಲ್ಲಿ ಫಾರ್ವರ್ಡ್, ರಿಪ್ಲೈ, ಸ್ಟಾರ್, ಅಪ್ಡೇಟ್‌ನಂಥ ಆಪ್ಷನ್ ಕಾಣುತ್ತದೆ. ಇದೀಗ ಅದರ ಜತೆಗೆ ‘ಆಸ್ಕ್ ಮೆಟಾ ಎಐ’ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದನ್ನು ಆಯ್ಕೆ ಮಾಡಿದರೆ ಪ್ರತ್ಯೇಕ ಎಐ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿದ ಸಂದೇಶ ಕಾಣಸಿಗುತ್ತದೆ. ಬಳಕೆದಾರರು ಕೇಳುವ ಪ್ರಶ್ನೆಗೆ ಅನುಗುಣವಾಗಿ ಎಐ ಫಲಿತಾಂಶವನ್ನು ಪ್ರದರ್ಶಿಸುತ್ತದೆ.
ಇದನ್ನೂ ಓದಿ: ಹೆಚ್ 1B ವೀಸಾ ಆಘಾತ: ಟೆಕ್ಕಿಗಳನ್ನು ಭಾರತಕ್ಕೆ ಮರಳಲು ಸಲಹೆ ನೀಡಿದ ಜೊಹೊ ಸಂಸ್ಥಾಪಕ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
