ರೂಟರ್ ಸಿಗ್ನಲ್ ಚೆನ್ನಾಗಿದ್ರೂ ಮನೆಯ ಎಲ್ಲ ಕಡೆ ವೈಫೈ ಬರೋದಿಲ್ಲ. ಅದಕ್ಕೆ ಎರಡು ರೂಟರ್ ಹಾಕೋದು ಪರಿಹಾರ ಅಲ್ವೇ ಅಲ್ಲ. ಮನೆಯ ಎಲ್ಲ ಜಾಗದಲ್ಲಿ ವೈಫೈ ಸಿಗ್ನಲ್ ಬರ್ಬೇಕು ಅಂದ್ರೆ ಈ ಉಪಾಯ ಮಾಡಿ.

ಮನೆಯಲ್ಲಿ ಎಲ್ಲರೂ ಇಂಟರ್ನೆಟ್ (Internet) ಬಳಕೆ ಮಾಡೋದ್ರಿಂದ ವೈಫೈ ರೂಟರ್ ಅನಿವಾರ್ಯ ಆಗಿದೆ. ಮನೆಯಲ್ಲಿ ವೈಫೈ ರೂಟರ್ (WiFi router) ಇರುತ್ತೆ, ರೂಟರ್ ಇರೋ ಜಾಗದಲ್ಲಿ ಒಳ್ಳೆ ಸಿಗ್ನಲ್ ಕೂಡ ಸಿಗುತ್ತೆ. ಆದ್ರೆ ಮನೆಯ ಎಲ್ಲ ರೂಮ್ ಗೆ ಸಿಗ್ನಲ್ ಸರಿಯಾಗಿ ಬರೋದಿಲ್ಲ. ಇಂಟರ್ನೆಟ್ ಸ್ಲೋ ಆಗೋದ್ರಿಂದ ಸಮಸ್ಯೆ ಎದುರಾಗುತ್ತೆ. ಕೆಲವರು ಹಾಲ್ ನಲ್ಲೊಂದು, ಬೆಡ್ ರೂಮಿನಲ್ಲೊಂದು ರೂಟರ್ ಹಾಕಿಸಿಕೊಳ್ತಾರೆ. ಮನೆಯ ಎಲ್ಲ ಮೂಲೆ ಮೂಲೆಗೆ ರೂಟರ್ ಸಿಗ್ನಲ್ ಸಿಗ್ಬೇಕು ಅಂದ್ರೆ ಸುಲಭ ಉಪಾಯವೊಂದಿದೆ.

ಮನೆಯ ಎಲ್ಲ ಕಡೆ ರೂಟರ್ ಸಿಗ್ನಲ್ ಬರ್ಬೇಕು ಅಂದ್ರೆ ಏನು ಮಾಡ್ಬೇಕು?

ನಿಮ್ಮ ಮನೆಯಲ್ಲೂ ರೂಟರ್ ಸಿಗ್ನಲ್ ಸಮಸ್ಯೆ ಇದ್ರೆ ಪವರ್ಲೈನ್ ಈಥರ್ನೆಟ್ ಅಡಾಪ್ಟರ್ (power line Ethernet adapter) ಬಳಕೆ ಮಾಡಿ. ಇವುಗಳನ್ನು ವಿದ್ಯುತ್ ಸಾಕೆಟ್ಗೆ ಪ್ಲಗ್ ಮಾಡಲಾಗುತ್ತೆ. ಇದು ಮನೆಯ ವಿದ್ಯುತ್ ವೈರಿಂಗ್ ಇಂಟರ್ನೆಟ್ ರವಾನಿಸಲು ಶುರು ಮಾಡುತ್ತೆ. ಮನೆಯ ಎಲ್ಲ ಕಡೆ ಇದ್ರಿಂದ ವೈಫೈ ಸಿಗ್ನಲ್ ಸರಿಯಾಗಿ ಸಿಗುತ್ತೆ. ನಿಮ್ಮ ಮನೆ ದೊಡ್ಡದಾಗಿದ್ದರೆ ಅಥವಾ ಗೋಡೆಗಳು ದಪ್ಪವಾಗಿದ್ದರೆ, ಸಿಗ್ನಲ್ ದುರ್ಬಲವಾಗೋದು ಮಾಮೂಲಿ. ಇಂಥ ಸ್ಥಿತಿಯಲ್ಲಿ ನೀವು ಪವರ್ಲೈನ್ ಈಥರ್ನೆಟ್ ಅಡಾಪ್ಟರ್ ಹಾಕಿಸಿಕೊಳ್ಳೋದು ಉತ್ತಮ.

ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?

ಈಥರ್ನೆಟ್ ಅಡಾಪ್ಟರ್ ಹಾಕಿದ್ರೆ ಹೆಚ್ಚುವರಿ ರೂಟರ್ ಹಾಕ್ಬೇಕಾಗಿಲ್ಲ. ವೈಫೈ ಬರುವ ಸ್ಥಳಕ್ಕೆ ಬಂದು ಮೊಬೈಲ್ ಬಳಕೆ ಮಾಡ್ಬೇಕಾಗಿಲ್ಲ. ಮನೆಯ ಎಲ್ಲ ಕಡೆ ವೈಫೈ ಸಿಗ್ನಲ್ ಬರೋದ್ರಿಂದ ಎಲ್ಲಾದ್ರೂ ನೀವು ಕೆಲ್ಸ ಮಾಡ್ಬಹುದು. ಸಾಕೆಟ್ಗೆ ಪ್ಲಗ್ ಮಾಡಿದ ನಂತರ, ಈಥರ್ನೆಟ್ ಅಡಾಪ್ಟರ್ LAN ಪೋರ್ಟ್ ಆಗಿ ಕಾರ್ಯನಿರ್ವಹಿಸುತ್ತದೆ. ವೈಫೈ ರೂಟರ್ ಹಾಕಿದ ಜಾಗದಲ್ಲಿ ಒಂದು ಅಡಾಪ್ಟರ್ ಹಾಕಲಾಗುತ್ತದೆ. ಬೇರೆ ಬೇರೆ ಕಂಪನಿಗಳು ಈಥರ್ನೆಟ್ ಅಡಾಪ್ಟರ್ ಮಾರಾಟ ಮಾಡ್ತಿವೆ. ಅದ್ರ ಬೆಲೆ ಕೂಡ ಭಿನ್ನವಾಗಿದೆ. ಬೆಲೆ ಸಾಮಾನ್ಯವಾಗಿ 2,000 ರಿಂದ 4,000 ರೂಪಾಯಿಗಳ ನಡುವೆ ನಿಮಗೆ ಸಿಗಲಿದೆ.

ನೀವು ಮನೆಗೆ ಇದನ್ನು ಖರೀದಿ ಮಾಡ್ತಿದ್ದರೆ ಜೋಡಿ ಈಥರ್ನೆಟ್ ಅಡಾಪ್ಟರ್ ಖರೀದಿ ಮಾಡಿ. ಇವು ವೈರ್ಡ್ ಅಥವಾ ವೈರ್ಲೆಸ್ ಆಗಿರಬಹುದು. ಇದನ್ನು ಹೇಗೆ ಬಳಕೆ ಮಾಡ್ಬೇಕು ಎನ್ನುವ ಮಾಹಿತಿ ಅದ್ರಲ್ಲಿರುತ್ತದೆ. ನೀವು ಎರಡು ಅಡಾಪ್ಟರ್ ಕಾಣಬಹುದು. ಒಂದು ಅಡಾಪ್ಟರನ್ನು ಮುಖ್ಯ ರೂಟರ್ ಬಳಿ ಹಾಕಿ ಪವರ್ ಔಟ್ಲೆಟ್ಗೆ ಪ್ಲಗ್ ಮಾಡಿ. ಅದನ್ನು LAN ಕೇಬಲ್ ಮೂಲಕ ರೂಟರ್ ಗೆ ಕನೆಕ್ಟ್ ಮಾಡಿ. ಸಿಗ್ನಲ್ ದುರ್ಬಲವಾಗಿರುವ ಕೋಣೆಗೆ ಎರಡನೇ ಅಡಾಪ್ಟರ್ ಅನ್ನು ಕೋಣೆಯಲ್ಲಿರುವ ಪವರ್ ಔಟ್ಲೆಟ್ಗೆ ಪ್ಲಗ್ ಮಾಡಿ. ಗ್ರೀನ್ ಲೈಟ್ ಬೆಳಗಿದ ತಕ್ಷಣ ವೇಗದ ಇಂಟರ್ನೆಟ್ ನಿಮಗೆ ಲಭ್ಯವಾಗುತ್ತದೆ.

ChatGPT ಅಥವಾ Grok ಜೊತೆಗೆ ಈ 10 ರಹಸ್ಯವಾದ ಸಂಗತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!

ಪವರ್ಲೈನ್ ಈಥರ್ನೆಟ್ ಅಡಾಪ್ಟರ್ ಖರೀದಿಸುವಾಗ, ಮನೆಯ ಗಾತ್ರವನ್ನು ಪರಿಶೀಲಿಸಿ. ರೂಟರ್ ಹಾಕಿರುವ ಕೋಣೆಯಲ್ಲಿ ಮತ್ತು ಸಿಗ್ನಲ್ ದುರ್ಬಲವಾಗಿರುವ ಕೋಣೆಯಲ್ಲಿ ವಿದ್ಯುತ್ ವೈರಿಂಗ್ ಒಂದೇ ಹಂತದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ನಾವು ಯಾವುದಕ್ಕೆ ಅಡಾಪ್ಟರ್ ಬಳಸುತ್ತೀರಿ ಎಂಬುದನ್ನು ನಿರ್ಧರಿಸಿ ಖರೀದಿ ಮಾಡಿ. ಇಂಟರ್ನೆಟ್ ಬ್ರೌಸ್ ಮಾಡಲು, ಇಮೇಲ್ಗಳನ್ನು ಕಳುಹಿಸಲು ಮತ್ತು ಸಾಂದರ್ಭಿಕ ಸ್ಟ್ರೀಮಿಂಗ್ಗೆ 1000 Mbps ವರೆಗಿನ ವೇಗವು ಸಾಕಾಗುತ್ತದೆ. ನಿಯಮಿತ HD ಸ್ಟ್ರೀಮಿಂಗ್ ಅಥವಾ ಗೇಮಿಂಗ್ಗೆ ಹೆಚ್ಚಿನ ವೇಗದ ಅಗತ್ಯವಿರುತ್ತದೆ. ನೀವು ಹೆಚ್ಚುವರಿ ವೈಫೈ ಪಾಯಿಂಟ್ ಆಗಿ ವೈಫೈ ಹೊಂದಿರುವ ಪವರ್ಲೈನ್ ಅಡಾಪ್ಟರ್ ಬಳಸಬಹುದು.