ವ್ಯಾಟ್ಸಾಪ್ ಬಳಕೆ ಮಾಡುವಾಗ ನಿಮಗೂ ಹೀಗೆ ಆಗುತ್ತಿದೆಯಾ? ಭಾರತದಲ್ಲಿ ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ ಎಂದು ವರದಿಯಾಗಿದೆ.

ನವದೆಹಲಿ (ಸೆ.08) ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ತಾಂತ್ರಿಕ ಸಮಸ್ಯೆ ಎದುರಿಸಿದೆ. ಭಾರತದಲ್ಲಿ ವ್ಯಾಟ್ಸಾಪ್ ಕೆಲ ಸಮಸ್ಯೆ ಎದುರಿಸಿ ಡೌನ್ ಆಗಿದೆ. ಬಳಕೆದಾರರು ವ್ಯಾಟ್ಸಾಪ್ ಬಳಕೆ ಮಾಡಲು ಸಾಧ್ಯವಾಗದೇ ಪರದಾಡಿರುವುದಾಗಿ ವರದಿಯಾಗಿದೆ. ಡೌನ್‌ಡಿಟೆಕ್ಟರ್ ವರದಿ ಪ್ರಕಾರ ಭಾರತದಲ್ಲಿ ವ್ಯಾಟ್ಸಾಪ್ ಡೌನ್ ಆಗಿದೆ. ಭಾರತದಲ್ಲಿ ಶೇಕಡಾ 54ರಷ್ಟು ಮಂದಿ ವ್ಯಾಟ್ಸಾಪ್‌ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ಈ ಪೈಕಿ ಶೇಕಡಾ 22 ರಷ್ಟು ಆ್ಯಪ್ ಮೂಲಕ ಹಾಗೂ ಶೇಕಡಾ 22ರಷ್ಟು ಮಂದಿ ವೆಬ್‌ಸೈಟ್ ಮೂಲಕ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿ ಮಾಡಿದೆ.

ನಿಮಗೂ ಹೀಗೆ ಆಗುತ್ತಿದೆಯಾ?

ಭಾರತದಲ್ಲಿ ವ್ಯಾಟ್ಸಾಪ್ ಔಟ್ರೇಜ್ ಕುರಿತು ಡೌನ್‌ಡಿಟೆಕ್ಟರ್ ವರದಿ ಮಾಡಿದೆ. ಹಲವು ಬಳಕೆದಾರರು ದೂರು ನೀಡಿದ್ದಾರೆ. ವ್ಯಾಟ್ಸಾಪ್ ಡೌನ್ ವೇಳೆ ಬಳಕೆದಾರರು ಮೆಸೇಜ್ ಕಳುಹಿಸಲು ಸಾಧ್ಯವಾಗಿಲ್ಲ. ಯಾವುದೇ ಮೇಸೇಜ್ ಸ್ವೀಕರಿಸಲು ಸಾಧ್ಯವಾಗಿಲ್ಲ. ಸ್ಟೇಟಲ್ ಅಪ್ಲೋಡ್ ಮಾಡಲು ಸಾಧ್ಯವಾಗದೇ ಪರದಾಡಿದ್ದಾರೆ. ಸೆಂಡಿಂಗ್ ಫೈಲ್ಡ್ ಸೈರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಡೌನ್ ಡಿಟೆಕ್ಟರ್ ಪ್ಕರಾ 410 ಮಂದಿ ವ್ಯಾಟ್ಸಾಪ್ ಸಮಸ್ಯೆ ಕುರಿತು ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ 2.20ರಿಂದ ಬಳಕೆದಾರರು ವ್ಯಾಟ್ಸಾಪ್ ಡೌನ್ ಕುರಿತು ದೂರು ನೀಡಲು ಆರಂಭಿಸಿದ್ದಾರೆ. ಹಲವರು ಇತರ ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಎಕ್ಸ್ ಪ್ಲಾಟ್‌ಫಾರ್ಮ್ ಮೂಲಕ ಭಾರತೀಯರ ವ್ಯಾಟ್ಸಾಪ್ ಸಮಸ್ಯೆ ಬಿಚ್ಚಿಟ್ಟಿದ್ದಾರೆ.

Scroll to load tweet…

ವ್ಯಾಟ್ಸಾಪ್ ಪ್ರತಿಕ್ರಿಯೆ ಏನು?

ವ್ಯಾಟ್ಸಾಪ್ ಡೌನ್ ಕುರಿತು ಭಾರತೀಯರು ಸೋಶಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇತರ ದೇಶಗಳ ಬಳಕೆದಾರರಿಂದ ಯಾವುದೇ ದೂರುಗಳು ಬಂದಿಲ್ಲ. ಪ್ರಮುಖವಾಗಿ ಭಾರತದಲ್ಲಿ ವ್ಯಾಟ್ಸಾಪ್ ಡೌನ್ ಆಗಿದೆ ಎಂದು ವರದಿಯಾಗಿದೆ. ಈ ಕುರಿತು ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಕಣ್ಣೀರು ತರಿಸುವ ಪೋಸ್ಟ್‌ ಇದು.. 'ನಾನೇ ಆಡಿ ಬೆಳೆದ ಮನೆಗೆ ಇಂದು ನಾನೇ ನಾಲ್ಕು ದಿನದ ಅತಿಥಿ'.

ಜುಲೈನಲ್ಲೂ ಸಮಸ್ಯೆ ಎದುರಿಸಿದ್ದ ವ್ಯಾಟ್ಸಾಪ್

ಜುಲೈ ತಿಂಗಳಲ್ಲೂ ಭಾರತದಲ್ಲಿ ವ್ಯಾಟ್ಸಾಪ್ ಸಮಸ್ಯೆ ಎದುರಿಸಿತ್ತು. ಸಾವಿರಕ್ಕೂ ಅಧಿಕ ಮಂದಿ ವ್ಯಾಟ್ಸಾಪ್ ಡೌನ್ ಕುರಿತು ದೂರು ನೀಡಿದ್ದರು. ವ್ಯಾಟ್ಸಾಪ್ ಬಳೆಕದಾರರು ಆಕ್ರೋಶ ಹೊರಹಾಕುತ್ತಿದ್ದಂತೆ ಸಮಸ್ಯೆ ಪರಿಹಾರವಾಗಿತ್ತು.

ಮೆಟಾ ಮಾಲೀಕತ್ವದ ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್ ಹಲವು ಬಾರಿ ಸರ್ವರ್ ಡೌನ್ ತಾಂತ್ರಿಕ ಸಮಸ್ಯೆ ಎದುರಿಸಿದೆ. ಕಳೆದ ಬಾರಿ ಆ್ಯಪಲ್ ಐಫೋನ್‌ಗಳಲ್ಲಿ ಎದುರಾದ ಭದ್ರತಾ ಸಮಸ್ಯೆಯನ್ನು ವ್ಯಾಟ್ಸಾಪ್ ಪರಿಹರಿಸಿತ್ತು.