MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಐವರ ಹಿನ್ನೆಲೆ ಬಹಿರಂಗ: 5 ಲಕ್ಷ ರೂ. ನಗದು, 20 ಗ್ರಾಂ ಬಂಗಾರ!

ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಐವರ ಹಿನ್ನೆಲೆ ಬಹಿರಂಗ: 5 ಲಕ್ಷ ರೂ. ನಗದು, 20 ಗ್ರಾಂ ಬಂಗಾರ!

ಬೆಂಗಳೂರು (ಅ.17): 2024 ನೇ ಸಾಲಿಗೆ   ಶ್ರೀ ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ಪರಿಶಿಷ್ಟ ವರ್ಗದ ಏಳ್ಗೆಗರ ಹಾಗೂ ವಿವಿಧ  ಕ್ಷೇತ್ರಗಳಲ್ಲಿ ಗುರುತರ  ಸೇವೆಗೈದ ಐವರು  ಸಾಧಕರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಲ್ಲ ಪ್ರಶಸ್ತಿ ವಿಜೇತರ ಹಿನ್ನೆಲೆಯನ್ನು ಇಲ್ಲಿ ಕೊಡಲಾಗಿದೆ. 

2 Min read
Author : Sathish Kumar KH
Published : Oct 17 2024, 12:13 PM IST
Share this Photo Gallery
  • FB
  • TW
  • Linkdin
  • Whatsapp
15
ಕಲಬುರ್ಗಿ ವಿಭಾಗ: ರತ್ನಮ್ಮ ಬಿ. ಸೋಗಿ

ಕಲಬುರ್ಗಿ ವಿಭಾಗ: ರತ್ನಮ್ಮ ಬಿ. ಸೋಗಿ

ವಿಜಯನಗರ ಜಿಲ್ಲೆ ಹರಪನಹಳ್ಳಿಯವರಾದ  ಇವರು ವೃತ್ತಿ ರಂಗಭೂಮಿ ಖ್ಯಾತ ಕಲಾವಿದರಾಗಿದ್ದು, ಅದರಲ್ಲೂ  ಗ್ರಾಮೀಣ ಪ್ರದೇಶದಲ್ಲಿ  ರಂಗಭೂಮಿ ಕ್ಷೇತ್ರದಲ್ಲಿ ಹೆಸರಾಂತ ಕಲಾವಿದರಾಗಿದ್ದಾರೆ. ಐತಿಹಾಸಿಕ, ಪೌರಾಣಿಕ, ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ   ಗ್ರಾಮೀಣ ಪ್ರದೇಶದಲ್ಲಿ  ರಂಗ ಭೂಮಿ ಕ್ಷೇತ್ರದ  ಉಳಿವು ಹಾಗೂ ಬೆಳವಣಿಗಾಗಿ ಅಪಾರವಾಗಿ  ಶ್ರಮಿಸಿದ್ದಾರೆ.  ಅನೇಕ ನಾಟಕಗಳಲ್ಲಿ   ಅಭಿನಯಿಸುವ ಮೂಲಕ ಸಮಾಜದ ಒಳಿತಿಗಾಗಿ ಹಾಗೂ ಅನೇಕ  ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ತಮ್ಮ ಅಭಿನಯದ ಮೂಲಕ  ಜಾಗೃತಿ ಮೂಡಿಸಿದಾರೆ.   ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿದ ಗಣನೀಯ ಕಲಾ ಸೇವೆಯನ್ನು ಗುರುತಿಸಿ ಇವರನ್ನು  ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

25
ಬೆಂಗಳೂರು ಕೇಂದ್ರ : ಕೆ. ಎಸ್. ಮೃತ್ಯುಂಜಯ

ಬೆಂಗಳೂರು ಕೇಂದ್ರ : ಕೆ. ಎಸ್. ಮೃತ್ಯುಂಜಯ

ಬೆಂಗಳೂರು ವಾಸಿಯಾದ ಕೆ.ಎಸ್. ಮೃತ್ಯುಂಜಯ ಅವರು ಪರಿಶಿಷ್ಟ ಪಂಗಡದ ಸಮುದಾಯದ  ಶೈಕ್ಷಣಿಕ, ಆರ್ಥಿಕ ಆಭಿವೃ‍ದ್ಧಿ ಹಾಗೂ  ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ  ಸರ್ಕಾರದ ಸೌಲಭ್ಯಗಳನ್ನು  ಸಮುದಾಯದವರಿಗೆ ದೊರಕಿಸಲು  ಶ್ರಮಿಸಿದ್ದಾರೆ.  ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ  ಶ್ರಮಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಅಭಿವೃ‍ದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ.  ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಕಾರ್ಯಾಗಾರ, ಶಿಭಿರ, ಚಿಂತನ-ಮಂಥನ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪ್ರತಿನಿಧಿಸುತ್ತಾರೆ. ಇವರ ಅನುಪಮ ಸೇವೆಯನ್ನು ಗುರುತಿಸಿ  ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

35
ಬೆಳಗಾವಿ ವಿಭಾಗ: ಶ್ರೀ ರಾಜಶೇಖರ ತಳವಾರ

ಬೆಳಗಾವಿ ವಿಭಾಗ: ಶ್ರೀ ರಾಜಶೇಖರ ತಳವಾರ

ಬೆಳಗಾವಿಯ ಗಾಂಧಿನಗರದವರಾದ ಇವರು ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು  ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಬುಡಕಟ್ಟು ಸಮುದಾಯವು ವಾಸಿಸುವ    ಮೂಲಭೂತ ಸೌಕರ್ಯಗಳಿಲ್ಲದ  ಗುಡ್ಡಗಾಡು ಪ್ರದೇಶಗಳ ಬಗ್ಗೆ ವಿವಿಧ  ಇಲಾಖೆಗಳ ಗಮನಕ್ಕೆ ತಂದು ಆ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ದೊರಕುವಂತೆ ಹಾಗೂ  ಬುಡಕಟ್ಟು ಸಮುದಾಯವನ್ನು  ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.  ಶಿಕ್ಷಣ ಕುರಿತು ಜಾಗೃತಿ ಮೂಡಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನಗಳು, ಶಿಬಿರ, ತರಬೇತಿಗಳನ್ನು ಆಯೋಜಿಸುವುದು. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮುಂದುರೆಯಲು ಸರ್ಕಾರದ ನೆರವು ದೊರಕಿಸುವುದು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸಲ್ಲಿಸಿರುವ  ಸಮಾಜ ಸೇವೆಯನ್ನು ಗುರುತಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

45
ಬೆಂಗಳೂರು ವಿಭಾಗ: ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ

ಬೆಂಗಳೂರು ವಿಭಾಗ: ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ

ಗಡ್ಡದಾರಹಟ್ಟಿ, ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆಯವರಾದ ಇವರು ಕಿಲಾರಿ ( ಜಾನುವಾರುಗಳ ಸಂರಕ್ಷಣೆ) ವೃತ್ತಿಯ ಮೂಲಕ ಸಮಾಜದ ಒಳಿತಿಗಾಗಿ ಸಲ್ಲಿಸಿದ್ದಾರೆ. ದೇವರ ಎತ್ತುಗಳ ರಕ್ಷಣೆ, ಜಾನುವಾರುಗಳ ಪೋಷಣೆ, ಸ್ಥಳೀಯ ಬುಡಕಟ್ಟು ಸಮುದಾಯದ ಸಂಸ್ಕೃತಿಯ ಸಂರಕ್ಷಣೆ,  ಜಾನುವಾರುಗಳ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಬುಡಕಟ್ಟು ಸಂಸ್ಕೃತಿಯ ಆಚರಣೆಯ ಮೂಲಕ  ಜಾನುವಾರುಗಳ ಸಂತತಿಯ ಸಂರಕ್ಷಣೆ ಮಾಡುತ್ತಿದ್ದಾರೆ. ಸ್ಥಳೀಯ  ಗ್ರಾಮೀಣ ಸೊಗಡ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಶ್ರೀ ಮಹರ್ಷಿ ವಾಲ್ಮೀಕಿ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

55
ಮೈಸೂರು ವಿಭಾಗ: ಡಾ. ರತ್ನಮ್ಮ ಎಸ್.

ಮೈಸೂರು ವಿಭಾಗ: ಡಾ. ರತ್ನಮ್ಮ ಎಸ್.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ  ಮದ್ದೂರು   ಹೋಬಳಿಯ ಮದ್ದೂರು ಕಾಲೋನಿಯವರಾದ  ಡಾ. ರತ್ನಮ್ಮ ಎಸ್.‌  ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದಾರೆ.  ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸಮುದಾಯದ ಮನವೊಲಿಸಿ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ  ದಾಖಲಿಸುವುದು, ಸಮುದಾಯದ  ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಸಮುದಾಯದವರಿಗೆ ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದು. ಸಮುದಾಯದ ಕಲೆ, ಕುಲ ಕಸುಬು, ಸಂಸ್ಕೃತಿಯ ಸಂರಕ್ಷಿಸುವುದು ಹಾಗೂ ಪೋಷಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.  ಇವರ   ಅನುಪಮ ಸೇವೆಯನ್ನು ಗುರುತಿಸಿ, ಇವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
ಹುದ್ದೆಗಳ ಭರ್ತಿಗೆ ಯೋಜನೆ ರೆಡಿ ಇದೆ, ಧೈರ್‍ಯವಾಗಿರಿ: ಡಿಕೆ
Recommended image2
ಒಂದೇ ವರ್ಷದಲ್ಲಿ ರನ್ಯಾಳಿಂದ 1.27 ಕ್ವಿಂಟಲ್‌ ಚಿನ್ನ ಸ್ಮಗ್ಲಿಂಗ್!
Recommended image3
ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜತೆಗೆ ಮೈತ್ರಿಗೆ ರೆಡಿ: ದೇವೇಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved