- Home
- News
- State
- ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿಎಂ ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ
ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ: ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿಎಂ ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ
ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಕಿತ್ತಾಟದಲ್ಲಿ, ಅಧಿಕಾರಾವಧಿ ಮುಗಿದರೂ ಮುಂದುವರೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷ ಸುರೇಶ್‌ಗೆ ಸದಸ್ಯರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ನಡಿತಿದ್ರೆ ಇಂದು ಮಂಡ್ಯದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷಗಾದಿಗಾಗಿ ಕಿತ್ತಾಟ ನಡೆದಿದ್ದು, ಮಂಡ್ಯದ ಕುರುಬರ ಸಂಘದ ಆವರಣದಲ್ಲಿ ಹೈಡ್ರಾಮಾ ನಡೆದಿದೆ.
ಇದನ್ನೂ ಓದಿ: ಬೋಟ್‌ಗೆ ಏರುವ ವೇಳೆ ಪದ್ಮಾ ನದಿಗುರುಳಿದ ಬಸ್ : 25 ಜನರ ದಾರುಣ ಸಾವು
ಕುರುಬರ ಸಂಘದ ಜಿಲ್ಲಾಧ್ಯಕ್ಷನಿಗೆ ಸದಸ್ಯರು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅವಧಿ ಮುಗಿದಿದೆ, ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟು ಹೋಗಿ ಎಂದು ಮಂಡ್ಯ ಕುರುಬರ ಸಂಘದ ಹಾಲಿ ಜಿಲ್ಲಾಧ್ಯಕ್ಷರಾಗಿರುವ ಸುರೇಶ್‌ಗೆ ಮಸಿ ಎರಚಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನನ್ನ ಯಾಕೆ ಬಿಟ್ಟೋದೆ: ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ
ಕುರುಬರ ಸಂಘದ ಹಾಲಿ ಜಿಲ್ಲಾಧ್ಯಕ್ಷರಾಗಿರುವ ಸುರೇಶ್ ಕಳೆದ ಅವಧಿಯಲ್ಲಿ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದಾರೆ. ಮಾರ್ಚ್ 6 ರಂದು ಸುರೇಶ್ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಆದರೂ ಚುನಾವಣೆ ನಡೆಸದೇ ಮತ್ತೊಂದು ಅವಧಿಗೆ ಜಿಲ್ಲಾಧ್ಯಕ್ಷರಾಗಿ ಮುಂದುವರೆಯಲು ಸುರೇಶ್ ಹಿಂಭಾಗಲಿನಿಂದ ಪ್ರಯತ್ನಿಸುತ್ತಿದ್ದಾರೆ ಎಂದು ಕುರುಬರ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಅಮ್ಮನ ಸ್ಕೂಟಿ ಮಾರಲು ಹೋಗಿ ಸಿಕ್ಕಿಬಿದ್ದ ಮಗಳು
ಇಂದು ಸಂಘದ ಕಚೇರಿಗೆ ಬಂದ ವೇಳೆ ಸದಸ್ಯರು ಕೆಲ ಪಧಾಧಿಕಾರಿಗಳಿಗೆ ಘೇರಾವ್ ಹಾಕಿದ್ದು, ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ವೇಳೆ ಜಿಲ್ಲಾಧ್ಯಕ್ಷ ಸುರೇಶ್‌ಗೆ ಕೆಲವರು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 10ನೇ ಕ್ಲಾಸ್ ಕೂಡ ಓದಿಲ್ಲ, ಆದ್ರೂ ದಂತವೈದ್ಯ: 20 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ನಕಲಿ ಡೆಂಟಿಸ್ಟ್ ಅರೆಸ್ಟ್
ಅಧಿಕಾರ ಬಿಟ್ಟು ಹೋಗಿ ಕುರುಬರ ಸಂಘದ ಜಿಲ್ಲಾಧ್ಯಕ್ಷನ ಗಾದಿಗೆ ಚುನಾವಣೆ ನಡೆಸುವಂತೆ ಸದಸ್ಯರು ಆಗ್ರಹಿಸಿದ್ದಾರೆ. ಚುನಾವಣೆ ನಡೆಸಿ ಗೆದ್ದು ಬಳಿಕ ಜಿಲ್ಲಾಧ್ಯಕ್ಷನಾಗು, ಅಲ್ಲಿವರೆಗೂ ಸಂಘಕ್ಕೆ ಬರಬೇಡಾ ಎಂದು ಕೆಲವರು ಘೇರಾವ್ ಹಾಕಿದ್ದಾರೆ. ಇದೇ ಸಮಯದಲ್ಲಿ ಕಚೇರಿ ಒಳಹೋಗಲು ಯತ್ನಿಸಿದ ಸುರೇಶ್ ಅವರನ್ನು ಕೆಲ ಸದಸ್ಯರು ಎಳೆದು ಹೊರ ತಳ್ಳಿದ್ದಾರೆ. ಬಳಿಕ ಪೊಲೀಸರ ರಕ್ಷಣೆಯಲ್ಲಿ ಕುರುಬರ ಸಂಘದ ಅಧ್ಯಕ್ಷ ಸುರೇಶ್ ತೆರಳಿದ್ದಾರೆ.
ಇದನ್ನೂ ಓದಿ: 2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

