MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು

ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು

ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪ ಆಹಾರ ಮತ್ತು ನೀರಿಗಾಗಿ ಜಮೀನಿಗೆ ನುಗ್ಗಲು ಯತ್ನಿಸಿದ ಕರಡಿಯೊಂದು ವಿದ್ಯುತ್ ಸ್ಪರ್ಶದಿಂದ ದಾರುಣವಾಗಿ ಸಾವನ್ನಪ್ಪಿದೆ. ಈ ಘಟನೆಯಿಂದಾಗಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 Min read
Author : Anusha Kb
Published : Mar 16 2026, 10:26 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಕೊಪ್ಪಳ: ತಾಲೂಕಿನ ಇರಕಲ್ ಗಡ ಸಮೀಪದ ಕೊಡದಾಳ ಸೀಮಾದ ರೈತರ ಜಮೀನೊಂದರಲ್ಲಿ ವಿದ್ಯುತ್ ಸ್ಪರ್ಶವಾಗಿ ಕರಡಿಯೊಂದು ದಾರುಣವಾಗಿ ಸಾವನ್ನಪ್ಪಿದ ಮನಕಲಕುವ ಘಟನೆ ಇಂದು ನಸುಕಿನಲ್ಲಿ ಜರುಗಿದೆ. ಬೇಸಿಗೆ ಹಿನ್ನೆಲೆ ಆಹಾರ ಹಾಗೂ ನೀರಿಗಾಗಿ ವನ್ಯ ಜೀವಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದ್ದು, ಆಹಾರ ಮತ್ತು ನೀರಿಗಾಗಿ ಜಮೀನೊಂದಕ್ಕೆ ನುಗ್ಗಲು ಪ್ರಯತ್ನಿಸಿದಾಗ ಕರಡಿಯೊಂದು ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದೆ.

ಇದನ್ನೂ ಓದಿ: ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ: ಮನನೊಂದು ನದಿಗೆ ಹಾರಿದ ತಾಯಿ

25
Image Credit : Asianet News

ಕೊಪ್ಪಳ ತಾಲೂಕಿನ ಇರಕಲ್ ಗಡ ಸಮೀಪದ ಕೊಡದಾಳ ಸೀಮಾದ ರೈತ ಭೀಮಣ್ಣ ಎನ್ನುವವರ ಜಮೀನಿಗೆ ನುಗ್ಗಲು ಪ್ರಯತ್ನಿಸಿದ ಕರಡಿ ಜಮೀನ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮಾರ್ ಸ್ಪರ್ಶದಿಂದ ದಾರುಣವಾಗಿ ಒದ್ದಾಡಿ ಜೀವಬಿಟ್ಟಿದೆ. ಇಂದು ಬೆಳಗ್ಗೆ ಸರಿಸುಮಾರು 4 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೀದರ್, ಬೆಳಗಾವಿಯಲ್ಲಿ ಭಾರಿ ಮಳೆ: ಶಿವಮೊಗ್ಗದಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

Related Articles

Related image1
ಕೊಪ್ಪಳ ಜಾತ್ರೆಯಲ್ಲಿ ಬಾವುಟ ಸೃಷ್ಟಿಸಿದ ಬಿಕ್ಕಟ್ಟು, ದಲಿತರು-ಸವರ್ಣೀಯರ ನಡುವೆ ಗಲಾಟೆ, ಕ್ಷಣ ಮಾತ್ರದಲ್ಲಿ ಊರೇ ಸ್ಥಬ್ಧ!
Related image2
ಕೊಪ್ಪಳ: ಕೌಟುಂಬಿಕ ಕಲಹ, ಇಬ್ಬರು ಮಕ್ಕಳ ಸಮೇತ ಕೆರೆಗೆ ಹಾರಿದ ಅಮ್ಮ
35
Image Credit : Asianet News

ಕೊಡದಾಳ ಗ್ರಾಮದ ರೈತ ಭೀಮಣ್ಣ ಇಂದು ಬೆಳಗ್ಗೆ ಜಮೀನಿಗೆ ಹೋದಾಗ ಕರಡಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯ ಅಧಿಕಾರಿ ಜಡಿಯಪ್ಪ, ಕರಡಿಯ ಪಂಚನಾಮ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಯಲಬುರ್ಗಾ ತಾಲೂಕಿನ ಗುನ್ನಾಳ ಸೀಮಾದಲ್ಲಿ ಈ ಹಿಂದೆ ಕರಡಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಕರಡಿ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ ಘಟನೆ ಮರುಕಳಿಸಿದೆ

ಇದನ್ನೂ ಓದಿ: ವಿವಿ ಪ್ಯಾಟ್ ಬಗ್ಗೆ ದೂರುವ ಕಾಂಗ್ರೆಸ್‌ನಿಂದಲೇ ಸಹಕಾರಿ ಸಂಘದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ

45
Image Credit : Asianet News

ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಹಾಗೂ ವನ್ಯಜೀವಿ ಸಂರಕ್ಷಕರು ಆರೋಪಿಸಿದ್ದಾರೆ. ಇನ್ನು ಇರಕಲ್ ಗಡ ಭಾಗದಲ್ಲಿ ಕರಡಿಗಳ ಸಂತತಿ ಹೆಚ್ಚಾಗಿದ್ದು, ಕರಡಿಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ರೈತರು, ಓಡಾಡುವ ಜನರ ಮೇಲೆ ಕರಡಿಗಳು ದಾಳಿ ಮಾಡಿದ ಘಟನೆಯೂ ನಡೆದಿದೆ.

ಇದನ್ನೂ ಓದಿ: ದುಬೈ ವಿಮಾನ ನಿಲ್ದಾಣದ ಸಮೀಪ ಇರಾನ್ ಮತ್ತೆ ಡ್ರೋನ್ ದಾಳಿ, ಭಾರಿ ಬೆಂಕಿ: ವಿಮಾನಗಳ ಹಾರಾಟ ಸ್ಥಗಿತ

55
Image Credit : Asianet News

ಹೀಗಾಗಿ ಇಲ್ಲೊಂದು ಕರಡಿ ಸಂರಕ್ಷಣ ವಲಯ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಸಲ್ಲಿಸಿದರು ಕೂಡಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಕತ್ತಲಾದರೆ ಸಾಕು ಆಹಾರವನ್ನು ಅರಸಿ ಕರಡಿಗಳು ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತವೆ. ಶಾಸಕ ಜನಾರ್ಧನ ರೆಡ್ಡಿ ಅವರು ಕಾಯ್ದಿಟ್ಟ ಅರಣ್ಯದಲ್ಲಿ ಕರಡಿಧಾಮ ಮಾಡುತ್ತೇವೆ ಎಂದು ಹೇಳಿದರೂ ಈವರೆಗೆ ಯಾವುದೇ ಕ್ರಮ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕರಡಿಗಳ ಸಂರಕ್ಷಣೆ ಹಾಗೂ ರೈತರ ಬೆಳೆ ಮತ್ತು ರೈತರ ಜೀವ ಜೀವ ಉಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 

ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕೊಪ್ಪಳ
ವನ್ಯಜೀವಿ
Latest Videos
Recommended Stories
Recommended image1
ತುಮಕೂರು: ಸಹಕಾರಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಸೇರಿಸಿದ ಆರೋಪ
Recommended image2
ಗ್ಯಾಸ್‌ಗಾಗಿ ಪರದಾಡುತ್ತಿರುವವರಿಗೆ ಇಂದು ಸಿಹಿಸುದ್ದಿ?
Recommended image3
ರೆಸಾರ್ಟ್‌, ಹೋಮ್‌ ಸ್ಟೇಗಳು ಖಾಲಿ ಖಾಲಿ
Related Stories
Recommended image1
ಕೊಪ್ಪಳ ಜಾತ್ರೆಯಲ್ಲಿ ಬಾವುಟ ಸೃಷ್ಟಿಸಿದ ಬಿಕ್ಕಟ್ಟು, ದಲಿತರು-ಸವರ್ಣೀಯರ ನಡುವೆ ಗಲಾಟೆ, ಕ್ಷಣ ಮಾತ್ರದಲ್ಲಿ ಊರೇ ಸ್ಥಬ್ಧ!
Recommended image2
ಕೊಪ್ಪಳ: ಕೌಟುಂಬಿಕ ಕಲಹ, ಇಬ್ಬರು ಮಕ್ಕಳ ಸಮೇತ ಕೆರೆಗೆ ಹಾರಿದ ಅಮ್ಮ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved