MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ

ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ

ಬೆಂಗಳೂರು -ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಗೊಂಡಿದೆ. ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ 17 ಕೋಚ್‌ಗಳ ಹೊಸ ರೈಲು ಸೇವೆ ಇದಾಗಿದೆ. ರೈಲಿನ ವೇಳಾಪಟ್ಟಿ ಇಲ್ಲಿದೆ

1 Min read
Author : Chethan Kumar
Published : May 14 2026, 07:18 PM IST
Share this Photo Gallery
  • FB
  • TW
  • Linkdin
  • Whatsapp
15
ಹೊಸ ರೈಲು ಸೇವೆ
Image Credit : stockPhoto

ಹೊಸ ರೈಲು ಸೇವೆ

ಪ್ರಧಾನಿ ನರೇಂದ್ರ ಮೋದಿ ಇಂಧನ ಉಳಿತಾಯಯಕ್ಕೆ ರೈಲು, ಸಾರಿಗೆ ಬಸ್, ಮೆಟ್ರೋ ಬಳಕೆಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಹಲವರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಭಾರತೀಯ ರೈಲ್ವೇ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣ ಮುಂಬೈಗೆ ಹೊಸ ರೈಲು ಸೇವೆ ಘೋಷಿಸಿದೆ.

Add Asianetnews Kannada as a Preferred SourcegooglePreferred
25
ನಿರಾಳರಾದ ಪ್ರಯಾಣಿಕರು
Image Credit : Gemini

ನಿರಾಳರಾದ ಪ್ರಯಾಣಿಕರು

ಎಸ್ಎಂವಿಟಿ ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣ ಮುಂಬೈಗೆ ಈ ರೈಲು ಸೇವೆ ನೀಡಲಿದೆ. ವಿಶೇಷ ಅಂದರೆ ವಾರದಲಲ್ಲಿ 2 ದಿನ ರೈಲು ಸೇವೆ ಲಭ್ಯವಿದೆ. ಬೆಂಗಳೂರು ನಿಲ್ದಾಣದಿಂದ ಶನಿವಾರ ಹಾಗೂ ಮಂಗಳವಾರ ಈ ವಿಶೇಷ ರೈಲು ಲಭ್ಯವಿದೆ. ಇದರಿಂದ ಕಿಕ್ಕಿರಿದು ತುಂಬಿದ್ದ ಬೆಂಗಳೂರು ಮುಂಬೈ ರೈಲು ಪ್ರಯಾಣಿಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

Related Articles

Related image1
ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗ: ಪ್ರಯಾಣಿಕರಿಗೆ ಮಹತ್ವದ ಸುದ್ದಿ, ರೈಲು ಸೇವೆಗಳ ಪರಿಷ್ಕರಣೆ
Related image2
ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು
35
ವಿಶೇಷ ರೈಲು ರೈಲು ನಿಲುಗಡೆ
Image Credit : railways

ವಿಶೇಷ ರೈಲು ರೈಲು ನಿಲುಗಡೆ

ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಹೊರಡುವ ಈ ವಿಶೇಷ ರೈಲು ಕರ್ನಾಟಕದ ದಾವಣಗೆರೆ, ಎಸ್ಎಸ್ ಹುಬ್ಬಳಿ ಜಂಕ್ಷನ್, ಧಾರವಾಡ, ಬೆಳಗಾವಿಯಲ್ಲಿ ನಿಲುಗಡೆಯಾಗಲಿದೆ. ಇನ್ನು ಮಹಾರಾಷ್ಟ್ರದ ಮಿರಾಜ್ ಜಂಕ್ಷನ್, ಸಾಂಗ್ಲಿ, ಕರದ್, ಸತಾರ, ಲೊನಂದ್, ಪುಣೆ, ಲೊನವಾಲ, ಕರ್ಜತ್, ಕಲ್ಯಾಣ್, ಥಾಣೆ, ಲೋಕಮಾನ್ಯ ತಿಲಕ ನಿಲ್ದಾಣ ಮುಂಬೈ ತಲುಪಲಿದೆ.

45
ಸೌತ್ ವೆಸ್ಟರ್ನ ರೈಲ್ವೇ ಸೆವೆ
Image Credit : Indian railways

ಸೌತ್ ವೆಸ್ಟರ್ನ ರೈಲ್ವೇ ಸೆವೆ

ಸೌತ್ ವೆಸ್ಟರ್ನ್ ರೈಲ್ವೇ ವಿಭಾಗ ಹೊಸ ರೈಲು ಸೇವೆ ನೀಡುತ್ತಿದೆ. ಬೆಂಗಳೂರು ಮಂಬೈ ರೈಲುಗಳಲ್ಲಿ ಟಿಕೆಟ್ ಸಿಗದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಪ್ರತಿ ದಿನ ತೀವ್ರ ಸಮಸ್ಯೆಯಾಗಿ ಪರಿಣಿಮಿಸಿತ್ತು. ಇದೀಗ ಹೊಸ ರೈಲು ಸೇವೆಯಿಂದ ಪ್ರಯಾಣಿಕರು ಸುಲಭ ಪ್ರಯಾಣ ಮಾಡಬಹುದು.

55
ಹೊಸ ರೈಲು ಯೋಜನೆಗಳು
Image Credit : Social Media

ಹೊಸ ರೈಲು ಯೋಜನೆಗಳು

ಮೋದಿ ಈಗಾಗಲೇ ಸಾರ್ವಜನಿಕ ಸಾರಿಗೆ ಬಳಸಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕ ಸಾರಿಗೆ ಸಂಪರ್ಕ ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೈಸ್ಪೀಡ್ ರೈಲು, ವಂದೇ ಭಾರತ್ ಸೇರಿದಂತೆ ಹಲವು ಹೊಸ ರೈಲು ಯೋಜನೆಗಳು ಚಾಲ್ತಿಯಲ್ಲಿದೆ.

ಹೊಸ ರೈಲು ಯೋಜನೆಗಳು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತೀಯ ರೈಲ್ವೆ
ರೈಲು
ಬೆಂಗಳೂರು
ಮುಂಬೈ

Latest Videos
Recommended Stories
Recommended image1
ಕೇರಳದ ನೂತನ ಸಿಎಂ ವಿ.ಡಿ. ಸತೀಶನ್‌ಗೆ ಸಿಗಲಿದೆ ಭರ್ಜರಿ ಸಂಬಳ, ಸೌಲಭ್ಯಗಳು! ಇಲ್ಲಿದೆ ಪೂರ್ತಿ ಡೀಟೇಲ್ಸ್
Recommended image2
ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು
Recommended image3
ವಿಜಯ್-ಉದಯನಿಧಿ ಸ್ಟಾಲಿನ್ ಫ್ರೆಂಡ್​ಶಿಪ್ ಕಹಾನಿ; ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿದ್ದು ಹೇಗೆ?
Related Stories
Recommended image1
ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗ: ಪ್ರಯಾಣಿಕರಿಗೆ ಮಹತ್ವದ ಸುದ್ದಿ, ರೈಲು ಸೇವೆಗಳ ಪರಿಷ್ಕರಣೆ
Recommended image2
ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳ ರೈಲು ರದ್ದು, ಸಂಚಾರ ಬದಲು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved