ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ: 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾಗಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕುರಿ ಶೆಡ್‌ಗೆ ಬೆಂಕಿ
ರಾಯಚೂರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕುರಿ ದೊಡ್ಡಿಗೆ ಬೆಂಕಿ ಬಿದ್ದ ಪರಿಣಾಮ ಶೆಡ್‌ನಲ್ಲಿದ್ದ ಸುಮಾರು 700ಕ್ಕೂ ಅಧಿಕ ಕುರಿಗಳು ಬೆಂಕಿಗಾಹುತಿಯಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ.
700ಕ್ಕೂ ಅಧಿಕ ಕುರಿಗಳು ಬೆಂಕಿಗಾಹುತಿ
ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ ಕುರಿ ಶೆಡ್ ಇದಾಗಿದ್ದು, ದೊಡ್ಡದಾದ ಶೆಡ್ ಮಾಡಿ ಸುಮಾರು 700ಕ್ಕೂ ಹೆಚ್ಚು ಕುರಿಗಳನ್ನು ಸಾಕಾಣಿಕೆ ಮಾಡಿದ್ದರು.
ನಿನ್ನೆ ತಡ ರಾತ್ರಿ ಶೆಡ್‌ಗೆ ಬೆಂಕಿ
ನಿನ್ನೆ ತಡ ರಾತ್ರಿ ಶೆಡ್‌ಗೆ ಬೆಂಕಿ ಬಿದ್ದಿದ್ದು ನೋಡಿ ಇಬ್ಬರು ಕೆಲಸಗಾರರು ಬೆಂಕಿ ಬಿದ್ದಿದ್ದನ್ನು ನೋಡಿ ಶೆಡ್ ನೋಡಿಕೊಳ್ತಿದ್ದ ಇಬ್ಬರು ಕೆಲಸಗಾರರು ಜೋರಾಗಿ ಕಿರುಚಿಕೊಂಡಿದ್ದಾರೆ.
ಶೆಡ್‌ನಲ್ಲಿದ್ದ ಎಲ್ಲಾ ಕುರಿಗಳು ಸಜೀವ ದಹನ
ಅವರ ಕಿರುಚಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡುವ ವೇಳೆಗಾಗಲೇ ಇಡೀ ಕುರಿ ಶೆಡ್ ಬೆಂಕಿಗಾಹುತಿಯಾಗಿದ್ದು, ಶೆಡ್‌ನಲ್ಲಿದ್ದ ಎಲ್ಲಾ ಕುರಿಗಳು ಸಜೀವ ದಹನಗೊಂಡಿವೆ.
ಇದನ್ನೂ ಓದಿ: ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು
ಸೂಕ್ತ ಪರಿಹಾರಕ್ಕಾಗಿ ಕುರಿ ಶೆಡ್ ಮಾಲೀಕರ ಆಗ್ರಹ
ಸ್ಥಳಕ್ಕೆ ಸಿಂಧನೂರು ಸಿಂಧನೂರು ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಕುರಿ ಶೆಡ್ ಮಾಲೀಕ ಮಧುಸೂದನ್ ರೆಡ್ಡಿ ಆಗ್ರಹಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಇದನ್ನೂ ಓದಿ: ಇರಾನ್ ಯುದ್ಧದ ಮಧ್ಯೆ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

