ತುಮಕೂರು ತಾಲೂಕಿನಲ್ಲಿ 44 ನವಿಲುಗಳ ಅಸಹಜ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್ ಲ್ಯಾಬ್ ವರದಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ತೀವ್ರ ನಿಗಾ ವಹಿಸಿದ್ದು, ಸತ್ತ ಪಕ್ಷಿಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ತುಮಕೂರು (ಮೇ.2): ನವಿಲುಗಳ ಸರಣಿ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್‌ ಲ್ಯಾಬ್‌ ಸ್ಪಷ್ಟಪಡಿಸಿದ್ದು, ರಾಷ್ಟ್ರೀಯ ಉಚ್ಚ ಸುರಕ್ಷಾ ಪಶುರೋಗ ಸಂಸ್ಥೆ ನೀಡಿದ ಅಧಿಕೃತ ವರದಿ ಪ್ರಕಾರ ನವಿಲುಗಳ ಅಂಗಾಂಶ ಮಾದರಿಯಲ್ಲಿ ಎಚ್5ಎನ್‌1 ವೈರಸ್ ಇರುವುದು ದೃಢಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಿಂದೆ ತುಮಕೂರು ತಾಲೂಕಿನ ಸುತ್ತಮುತ್ತ 44 ನವಿಲುಗಳ ಅಸಹಜವಾಗಿ ಏಕಾಏಕಿ ಸಾವನ್ನಪ್ಪಿಪ್ಪಿದ್ದವು. ಈ ವೇಳೆ ಮೃತ ನವಿಲುಗಳಿಂದ ಅರಣ್ಯ ಇಲಾಖೆ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಲ್ಯಾಬಿಗೆ ಕಳುಹಿಸಿತ್ತು. ಈಗ ಅದರ ವರದಿ ಬಂದಿದ್ದು, ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.

ಪಶು ಸಂಗೋಪನಾ ಇಲಾಖೆ ಜಾಗ್ರತೆ:

ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ತುರ್ತುಕ್ರಮಕ್ಕೆ ಪಶು ಸಂಗೋಪನಾ ಇಲಾಖೆ ಮುಂದಾಗಿದೆ. ಈ ಭಾಗದ ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಜನರು ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.

ಸತ್ತ ಪಕ್ಷಿ ಮುಟ್ಟದಂತೆ ಮನವಿ:

ಈ ಮಧ್ಯೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗಾಗಿ ಸತ್ತ ಯಾವುದೇ ಪಕ್ಷಿಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಸಾಕು ಪ್ರಾಣಿ-ಪಕ್ಷಿಗಳ ಕುರಿತು ಯಾವುದೇ ಆದೇಶವಿಲ್ಲ. ಆದ್ದರಿಂದ ಜನರು ಆತಂಕ ಪಡಬಾರದು ಎಂದು ಶಿವಪ್ರಸಾದ್ ತಿಳಿಸಿದ್ದಾರೆ.