MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Special
  • LPG Gas ಕೊರತೆ ಅಂತ ಗಾಬರಿಯಾದ್ರಾ? ಅಸಲಿ ಸತ್ಯ ಬೇರೆ ಇದೆ! ಕರಾಳ ದಂಧೆಗೆ ಮೋಸ ಹೋಗ್ಬೇಡಿ!

LPG Gas ಕೊರತೆ ಅಂತ ಗಾಬರಿಯಾದ್ರಾ? ಅಸಲಿ ಸತ್ಯ ಬೇರೆ ಇದೆ! ಕರಾಳ ದಂಧೆಗೆ ಮೋಸ ಹೋಗ್ಬೇಡಿ!

LPG Gas ಕೊರತೆ ಆಗಲಿದೆ ಎಂದು ಒಂದಿಷ್ಟು ವಿಷಯಗಳು ಹಬ್ಬುತ್ತಿವೆ. ಎಲ್‌ಪಿಜಿ ಹೇಗೆ ಬಳಕೆ ಆಗುವುದು? ಇದಕ್ಕೆ ಕಾರಣ ಏನು? ಇಲ್ಲಿರುವ ಗೊಂದಲ ಏನು ಎಂದು ಈ ವಿಚಾರವಾಗಿ ಕೃಷ್ಣ ಭಟ್‌ ಎನ್ನುವವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

3 Min read
Author : Padmashree Bhat
Published : Mar 10 2026, 12:40 PM IST
Share this Photo Gallery
  • FB
  • TW
  • Linkdin
  • Whatsapp
18
LPG Gas ಕೊರತೆ ಎಂದು ಯಾಕೆ ಹೇಳಲಾಯ್ತು?
Image Credit : our own

LPG Gas ಕೊರತೆ ಎಂದು ಯಾಕೆ ಹೇಳಲಾಯ್ತು?

ಈ "ಎಲ್‌ಪಿಜಿ ಕೊರತೆ" ಎಂಬ ಸುದ್ದಿಯನ್ನು ಹಬ್ಬಿಸುವುದಕ್ಕೆ ಮೂಲ ಕಾರಣ ಡೊಮೆಸ್ಟಿಕ್ ಎಂಬ ಪದವನ್ನು ದುರ್ಬಳಕೆ ಮಾಡಿದ್ದು! ನಮ್ಮ ಎಲ್‌ಪಿಜಿಯನ್ನು ಎರಡು ವಿಧಾನದಲ್ಲಿ ಬಳಕೆ ಮಾಡಲಾಗುತ್ತದೆ. ಒಂದನೆಯದು ನಮಗೆಲ್ಲ ಗೊತ್ತಿರುವ ಹಾಗೆ ಅಡುಗೆ ಮಾಡುವುದಕ್ಕೆ.... ಅದು ಮನೆಯಿಂದ ಹೋಟೆಲ್‌ವರೆಗೆ ಎಲ್ಲ ಕಡೆ ಅಡುಗೆ ಮಾಡುವುದು. ಇದನ್ನು ಡೊಮೆಸ್ಟಿಕ್ ಬಳಕೆ ಎಂದು ಈ ಉದ್ಯಮದ ಭಾಷೆಯಲ್ಲಿ ಕರೆಯಲಾಗುತ್ತದೆ.

28
LPG ಇನ್ನೊಂದು ಥರ ಹೇಗೆ ಬಳಕೆ ಆಗುತ್ತೆ?
Image Credit : Getty

LPG ಇನ್ನೊಂದು ಥರ ಹೇಗೆ ಬಳಕೆ ಆಗುತ್ತೆ?

ಇನ್ನೊಂದು ಈ ಎಲ್‌ಪಿಜಿಗೆ ಮೂಲವಾದ ಪ್ರೊಪೇನ್ ಮತ್ತು ಬುಟೇನ್ ಅನ್ನು ಒಡೆದು, ಎಥಿಲೀನ್ ಹಾಗೂ ಪ್ರೊಪಿಲೀನ್ ಆಗಿ ಪರಿವರ್ತಿಸಿ ಅವುಗಳನ್ನು ಪ್ಲಾಸ್ಟಿಕ್ಸ್, ಸಿಂಥೆಟಿಕ್ ರಬ್ಬರ್ ಹಾಗೂ ಸಾಲ್ವೆಂಟ್‌ ಇತ್ಯಾದಿ ಉತ್ಪನ್ನಗಳನ್ನಾಗಿ ತಯಾರಿಕೆ ಮಾಡಲಾಗುತ್ತದೆ. ಇದು ಇಂಡಸ್ಟ್ರಿಯಲ್‌ ಬಳಕೆ.

ಮೊನ್ನೆ ಕೇಂದ್ರ ಸರ್ಕಾರ ಒಂದು ಸುತ್ತೋಲೆ ಹೊರಡಿಸಿ, ಈ ಡೊಮೆಸ್ಟಿಕ್ ಬಳಕೆಗೆ ಮಾತ್ರ ಪ್ರೊಪೇನ್ ಮತ್ತು ಬುಟೇನ್ ಸ್ಟ್ರೀಮ್‌ಗಳನ್ನು ಬಳಸಬೇಕು. ಇಂಡಸ್ಟ್ರಿಯಲ್ ಬಳಕೆಗೆ ಇದನ್ನು ಕೊಡಬಾರದು ಎಂದು ಈ ರಿಫೈನರಿಗಳಿಗೆ ಸೂಚನೆ ನೀಡಿತು.

Related Articles

Related image1
ಯುದ್ಧದಿಂದ ಎಲ್‌ಪಿಜಿ ಅಭಾವ: ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!
Related image2
ಅಡುಗೆ ಅನಿಲ ಕೊರತೆ ಭೀತಿ: ತುರ್ತು ಅಧಿಕಾರ ಬಳಸಿ LPG ಉತ್ಪಾದನೆ ಹೆಚ್ಚಿಸಲು ಕೇಂದ್ರದ ಆದೇಶ!
38
ಮನೆಗೆ ಬಳಸದ ಎಲ್ಲ ಎಲ್‌ಪಿಜಿಯನ್ನು ಕಮರ್ಷಿಯಲ್
Image Credit : Getty

ಮನೆಗೆ ಬಳಸದ ಎಲ್ಲ ಎಲ್‌ಪಿಜಿಯನ್ನು ಕಮರ್ಷಿಯಲ್

ಇಲ್ಲಿನ ಡೊಮೆಸ್ಟಿಕ್ ಎಂಬ ಪದ ಭಾರಿ ಗೊಂದಲಕ್ಕೆ ದೂಡಿತು. ಡೊಮೆಸ್ಟಿಕ್ ಎಂದರೆ ಎಲ್‌ಪಿಜಿ ಡಿಸ್ಟ್ರಿಬ್ಯೂಶನ್ ಲೆವೆಲ್‌ನಲ್ಲಿ ಬೇರೆಯದೇ ಅರ್ಥ! ಡೊಮೆಸ್ಟಿಕ್ ಮತ್ತು ಕಮರ್ಷಿಯಲ್‌ ಎಂದರೆ ಎಲ್‌ಪಿಜಿ ಡಿಸ್ಟ್ರಿಬ್ಯೂಶನ್‌ನಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಮನೆಗೆ ಬಳಸದ ಎಲ್ಲ ಎಲ್‌ಪಿಜಿಯನ್ನು ಕಮರ್ಷಿಯಲ್ ಎಂದು ಕರೆಯಲಾಗುತ್ತದೆ.

ಇದನ್ನೇ ಬೇರೆ ಅರ್ಥದಲ್ಲಿ ತಿಳಿದುಕೊಂಡು ಕಮರ್ಷಿಯಲ್ ಡಿಸ್ಟ್ರಿಬ್ಯೂಷನ್‌ಗೆ ಇನ್ನು ಎಲ್‌ಪಿಜಿ ಕೊಡುವುದಿಲ್ಲ ಎಂದು ಜನರು ವಿಪರೀತ ಪ್ರಮಾಣದಲ್ಲಿ ಎಲ್‌ಪಿಜಿ ಖರೀದಿ ಮಾಡುವುದಕ್ಕೆ ಮುಗಿಬಿದ್ದರು.

48
ಬ್ಲ್ಯಾಕ್‌ ಮಾರ್ಕೆಟ್ ಕೂಡ ಶುರು
Image Credit : google

ಬ್ಲ್ಯಾಕ್‌ ಮಾರ್ಕೆಟ್ ಕೂಡ ಶುರು

ಇದೇ ಕಾರಣಕ್ಕೆ ವಿಪರೀತ ಖರೀದಿಯೂ ನಡೆಯುತ್ತಿದೆ. ಇದನ್ನು ತಡೆಯುವುದಕ್ಕೆ ಸರ್ಕಾರ ಸಿಲಿಂಡರ್‌ ಬುಕಿಂಗ್ ಸಮಯಕ್ಕೂ ಮಿತಿ ಹೇರಿದೆ. ಅದಾಗಲೇ ಇದೇ ಊಹಾಪೋಹವನ್ನು ಬಳಸಿಕೊಂಡು ಬ್ಲ್ಯಾಕ್‌ ಮಾರ್ಕೆಟ್ ಕೂಡ ಶುರುವಾಗಿದೆ. ಅದರಲ್ಲಿ ದುಡ್ಡು ಮಾಡುವ ದಂಧೆಯೂ ಶುರುವಾಗಿದೆ ಎಂದು ಬೇರೆ ಹೇಳಬೇಕಿಲ್ಲ. 

ಈ ಎಲ್‌ಪಿಜಿ ಕೊರತೆ ಎಂಬ ಊಹಾಪೋಹ ಶುರುವಾಗಿದ್ದು ಅತಿ ಹೆಚ್ಚು ಭ್ರಷ್ಟ ಆಡಳಿತ ಇರುವ ರಾಜ್ಯಗಳಲ್ಲಿ ಎಂಬುದನ್ನು ಗಮನಿಸಿ. ಸಮಸ್ಯೆ ಆಗುವುದಾದರೆ ಎಲ್ಲ ರಾಜ್ಯಗಳಲ್ಲೂ ಸಮಾನ ಪ್ರಮಾಣದಲ್ಲಿ ಆಗಬೇಕಿತ್ತಲ್ಲ. ಆದರೆ, ಹಾಗೆ ಆಗಿಲ್ಲ. ಕೆಲವೇ ರಾಜ್ಯಗಳಲ್ಲಿ ಮಾತ್ರ ಸಮಸ್ಯೆ ಶುರುವಾಗಿದೆ. ಬೇರೆ ರಾಜ್ಯಗಳಲ್ಲಿ ಈಗಲೂ ಸಿಲಿಂಡರ್ ಸಾಮಾನ್ಯದ ಹಾಗೆ ಸಿಗುತ್ತಿದೆ.

58
ಕುತಂತ್ರ ಏನು?
Image Credit : our own

ಕುತಂತ್ರ ಏನು?

ಪಶ್ಚಿಮ ಬಂಗಾಳದಲ್ಲಿ ವಿಪರೀತ ಬುಕಿಂಗ್ ಮಾಡುತ್ತಿದ್ದಂತೆಯೇ ಕೇಂದ್ರ ಸರ್ಕಾರ ಅದನ್ನು ತಡೆಯುವುದಕ್ಕೆ ಬುಕಿಂಗ್ ಸಮಯಕ್ಕೆ ಮಿತಿ ಹೇರಿತು. ಹೀಗೆ ವಿಪರೀತ ಬುಕಿಂಗ್ ಮಾಡುವುದರಿಂದ ಕೃತಕ ಅಭಾವ ಸೃಷ್ಟಿಯಾಗಿ, ಅದರಿಂದ ಬೆಲೆ ಏರಿಕೆಯಾದರೆ ಅವರಿಗೆ ಲಾಭ.

68
ನಮ್ಮ ದೇಶದಲ್ಲಿ ಎಷ್ಟು LPG ಇದೆ?
Image Credit : X

ನಮ್ಮ ದೇಶದಲ್ಲಿ ಎಷ್ಟು LPG ಇದೆ?

ನಮ್ಮ ದೇಶದಲ್ಲಿ 20 ಕ್ಕೂ ಹೆಚ್ಚು ದಿನಗಳಿಗಾಗುವಷ್ಟು ಎಲ್‌ಪಿಜಿ ಇದೆ. ಇಡೀ ದೇಶದಲ್ಲಿ 31.3 ಮಿಲಿಯನ್ ಟನ್ ಎಲ್‌ಪಿಜಿ ಬಳಕೆಯಾಗುತ್ತದೆ. ಈ ಪೈಕಿ 12.8 ಮಿಲಿಯನ್ ಟನ್ ಎಲ್‌ಪಿಜಿಯನ್ನು ನಮ್ಮ ದೇಶದಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಆಮದು ಮಾಡಿಕೊಂಡ ಕಚ್ಚಾ ತೈಲದಿಂದ ಈ ಎಲ್‌ಪಿಜಿ ಉತ್ಪಾದನೆಯಾಗುತ್ತದೆ. ಅಂದರೆ, 40% ಉತ್ಪಾದನೆ ನಮ್ಮಲ್ಲೇ ಆಗುತ್ತಿದೆ. ಇನ್ನುಳಿದ 60% ವಿದೇಶದಿಂದ ನೇರವಾಗಿ ಎಲ್‌ಪಿಜಿಯನ್ನೇ ಆಮದು ಮಾಡಿಕೊಳ್ಳುತ್ತೇವೆ.

78
ಸುಮಾರು 14-15 ಮಿಲಿಯನ್ ಟನ್‌ ಎಲ್‌ಪಿಜಿ ಬೇಕು
Image Credit : ChatGPT

ಸುಮಾರು 14-15 ಮಿಲಿಯನ್ ಟನ್‌ ಎಲ್‌ಪಿಜಿ ಬೇಕು

ಇನ್ನು, ಇದೇ ಪ್ರೊಪೇನ್ ಮತ್ತು ಬುಟೇನ್‌ ಬಳಸಿಕೊಂಡು ಪ್ಲಾಸ್ಟಿಕ್ ಹಾಗೂ ಇತರ ಉತ್ಪನ್ನಗಳನ್ನು ಮಾಡುವುದರ ಬದಲಿಗೆ ಎಲ್‌ಪಿಜಿ ತಯಾರಿಸಿದರೆ, ಅದರಿಂದ ಮತ್ತೊಂದು 5-6 ಮಿಲಿಯನ್ ಟನ್ ಉತ್ಪಾದನೆಯಾಗುತ್ತದೆ. ಉಳಿದವನ್ನು ನಾವು ಆಮದು ಮಾಡಿಕೊಳ್ಳಲೇಬೇಕು. ಈ ಪೈಕಿ ಬಹುತೇಕ 80%+ ಗಲ್ಫ್ ದೇಶಗಳಿಂದ ಬರುತ್ತಿತ್ತು, ಈಗ ಅದು ನಿಂತುಹೋಗಿದೆ ಎಂಬುದು ಆತಂಕದ ಸಂಗತಿಯಾದರೂ ನಮಗೆ ಬೇಕಿರುವ ಸುಮಾರು 14-15 ಮಿಲಿಯನ್ ಟನ್‌ ಎಲ್‌ಪಿಜಿಯನ್ನು ಬೇರೆ ದೇಶಗಳಿಂದ ತರುವುದಕ್ಕೆ ಸರ್ಕಾರ ಏನಾದರೂ ಕೆಲಸ ಮಾಡಿಯೇ ಮಾಡುತ್ತದೆ. ಅಮೆರಿಕ, ನಾರ್ವೆ ಅಥವಾ ಅಲ್ಜೀರಿಯಾ ಕಡೆಯಿಂದ ಸ್ವಲ್ಪ ಹೆಚ್ಚು ಖರ್ಚಿನ ಬಾಬತ್ತಾದರೂ ತರುವ ವ್ಯವಸ್ಥೆಯನ್ನೋ ಮಾಡಿಯೇ ಮಾಡುತ್ತದೆ.

88
ಗಾಬರಿ ಬಿದ್ದಿ LPG ಖರೀದಿ ಮಾಡ್ಬೇಡಿ
Image Credit : X

ಗಾಬರಿ ಬಿದ್ದಿ LPG ಖರೀದಿ ಮಾಡ್ಬೇಡಿ

ನಾವು ಈಗ ಗಾಬರಿ ಬಿದ್ದು ಓಡಿ ಹೋಗಿ ಕ್ಯೂನಲ್ಲಿ ನಿಂತು ಖರೀದಿ ಮಾಡಿ, ಎಲ್ಲರನ್ನೂ ಸಮಸ್ಯೆಗೆ ದೂಡಬೇಕಿಲ್ಲ. ನೆನಪಿರಲಿ, 2014 ಕ್ಕೂ ಮೊದಲು ಯಾವ ಯುದ್ಧ ಇಲ್ಲದಿದ್ದಾಗಲೂ, ಎಲ್ಲವೂ ಸರಿ ಇದ್ದಾಗಲೂ, ಒಂದು ಸಿಲಿಂಡರ್ ಬುಕ್ ಮಾಡಿದರೆ ಅದು ಬರುವುದಕ್ಕೆ 15 ದಿನಗಳವರೆಗೆ ಬೇಕಾಗುತ್ತಿತ್ತು. 

ನಿಮಗೆ ಸಿಲಿಂಡರ್‌ ಏಜೆನ್ಸಿಯವರ ಜೊತೆಗೆ ಪರಿಚಯ ಇದ್ದರೆ ಮಾತ್ರ ಮರುದಿನವೇ ಸಿಲಿಂಡರ್ ಸಿಗುತ್ತಿತ್ತು. ಆಗ ನಾವು ಯಾರೂ ಹೋಗಿ ಗಲಾಟೆ ಮಾಡಲಿಲ್ಲ. ಏಜೆನ್ಸಿ ಎದುರು ಹೋಗಿ ಕ್ಯೂ ಹಚ್ಚಲಿಲ್ಲ, ಈ ವಿಷಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸುದ್ದಿಯೂ ಆಗಲಿಲ್ಲ. ಆದರೆ, ಈಗ ಈ ಸಂದಿಗ್ಧ ಸನ್ನಿವೇಶದಲ್ಲಿ ಎಲ್ಲ ಇದ್ದೂ ಗಾಬರಿ ಬೀಳುತ್ತಿದ್ದೇವೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸುದ್ದಿ
ಎಲ್‌ಪಿಜಿ
ಭಾರತ
ಭಾರತ ಸುದ್ದಿ
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ಮದುವೆಗೆ ಸಂಬಳ, ಆಸ್ತಿ, ಅಂದ-ಚೆಂದ ಬೇಡ; ಆ ರೀತಿ ಇದ್ರೆ ಕಾಂಟ್ಯಾಕ್ಟ್‌ ಮಾಡಿ; ಹುಡುಗಿ ಡಿಮ್ಯಾಂಡ್‌ಗೆ ದಂಗಾದ ಜನರು
Recommended image2
ತೆಲುಗುನಾಡಿನ ಸೊಸೆ ಆದ್ಮೇಲೆ ರಶ್ಮಿಕಾಗೆ ಫಿದಾ ಆದ ಕನ್ನಡಿಗರು; ಕಾರಣ ಗೊತ್ತಾದ್ರೆ 'ಹೀಗೂ ಆಗೋಯ್ತಾ' ಅನ್ನೋದು ಪಕ್ಕಾ!
Recommended image3
16ನೇ ಶತಮಾನದ ಅದ್ಭುತ ವಾಸ್ತುಶಿಲ್ಪ.. ಗೋವಾದ ಬಾಮ್ ಜೀಸಸ್ ಬೆಸಿಲಿಕಾ ಚರ್ಚ್‌ ಬಗ್ಗೆ ಗೊತ್ತಾ?
Related Stories
Recommended image1
ಯುದ್ಧದಿಂದ ಎಲ್‌ಪಿಜಿ ಅಭಾವ: ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್‌ ಅಂತ್ಯಕ್ರಿಯೆ!
Recommended image2
ಅಡುಗೆ ಅನಿಲ ಕೊರತೆ ಭೀತಿ: ತುರ್ತು ಅಧಿಕಾರ ಬಳಸಿ LPG ಉತ್ಪಾದನೆ ಹೆಚ್ಚಿಸಲು ಕೇಂದ್ರದ ಆದೇಶ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved