ಚಿಕಿತ್ಸೆಗಾಗಿ ಇರುವೆಗಳ ಅರಸಿ ಬರುವ ಕಾಗೆ: ಹಕ್ಕಿಗಳ ಸ್ವಾರಸ್ಯಕರ ವೈದ್ಯ ಲೋಕ
ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಚಿಕಿತ್ಸಾ ವಿಧಾನಗಳಿವೆ. ಕಾಗೆಗಳು ತಮ್ಮ ಆರೋಗ್ಯ ಸುಧಾರಣೆಗಾಗಿ ಇರುವೆಗಳನ್ನು ಬಳಸಿಕೊಳ್ಳುವುದು ಒಂದು ವಿಶೇಷ. ಇರುವೆಗಳ ಕಡಿತದಿಂದ ಕಾಗೆಗಳು ಹಲವು ಸಮಸ್ಯೆಯಿಂದ ಮುಕ್ತಿ ಪಡೆಯುತ್ತವೆ. ಆ ಬಗ್ಗೆ ಒಂದು ಮಾಹಿತಿ ಇಲ್ಲಿದೆ.

ಕಾಗೆಗಳ ವಿಸ್ಮಯ ಲೋಕ
ಪ್ರಕೃತಿಯೊಂದು ವಿಸ್ಮಯ ಲೋಕ ಅಲ್ಲಿ ಎಲ್ಲ ಕ್ರಿಯೆಗಳಿಗೂ ಒಂದು ಅರ್ಥವಿದೆ. ಮನುಷ್ಯ ಅದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಷ್ಟೇ, ಮನುಷ್ಯರು ಹೇಗೆ ಅನಾರೋಗ್ಯವಾದಾಗ ವೈದ್ಯರನ್ನು ಸಂಪರ್ಕಿಸುತ್ತವೆಯೋ ಹಾಗೆಯೇ ವನ್ಯಜೀವಿಗಳು ತಮಗೆ ಅಸ್ವಸ್ಥತೆ ಉಂಟಾದಾಗ ಅಥವಾ ಅನಾರೋಗ್ಯವಾದಾಗ ತಮ್ಮದೇ ರೀತಿಯಲ್ಲಿ ಔಷಧಿ ಮಾಡಿಕೊಳ್ಳುತ್ತವೆ. ಸಾಕುಪ್ರಾಣಿಗಳ ಹೊರತಾಗಿ ಮತ್ತೆಲ್ಲಾ ಪ್ರಾಣಿಗಳು ತಮ್ಮ ಅನಾರೋಗ್ಯಕ್ಕೆ ತಮ್ಮದೇ ವೈದ್ಯ ಪದ್ಧತಿಯನ್ನು ಫಾಲೋ ಮಾಡುತ್ತವೆ. ಹಾಗೆಯೇ ಇಲ್ಲಿ ಕಾಗೆಗಳು ಅನಾರೋಗ್ಯಕ್ಕೀಡಾದ ಏನು ಮಾಡುತ್ತವೆ ಎಂಬ ವಿಚಾರ ಬಹುತೇಕರಿಗೆ ತಿಳಿದಿರಲು ಸಾಧ್ಯವಿಲ್ಲ, ಈ ಬಗ್ಗೆ ಒಂದು ಪುಟ್ಟ ಮಾಹಿತಿ ಇಲ್ಲಿದೆ ನೋಡಿ...
ಕಾಗೆಗಳ ವಿಸ್ಮಯ ಲೋಕ
ಸಾಮಾನ್ಯವಾಗಿ ಮನುಷ್ಯರು ಅನಾರೋಗ್ಯಕೀಡಾದ ಹಿಂದೆಲ್ಲಾ ನಮ್ಮ ಪ್ರಕೃತಿಯಲ್ಲೇ ಸಿಗುವ ಆಯುರ್ವೇದದ ಔಷಧಿಗಳನ್ನು ಬಳಸುತ್ತಿದ್ದರು. ಇವೆಲ್ಲವೂ ಗಿಡಮೂಲಿಕೆಗಳಿಂದ ಕೂಡಿದ್ದವು. ಇವುಗಳಿಂದ ಯಾವುದೇ ಅಡ್ಡಪರಿಣಾಮಗಳಿರಲಿಲ್ಲ, ಇನ್ನು ಸ್ನಾನ ಮಾಡುವುದಕ್ಕೂ ಕೂಡ ಇಂದಿನಂತೆ ಕೆಮಿಕಲ್ ಮಿಶ್ರಿತ ಔಷಧಿಯನ್ನು ಬಳಸುತ್ತಿರಲಿಲ್ಲ, ಯಾವುದೇ ಸೋಪು ಶ್ಯಾಂಪುಗಳನ್ನು ಬಳಸುತ್ತಿರಲಿಲ್ಲ, ಅವರ ಆರೋಗ್ಯವೂ ಕೂಡ ಚೆನ್ನಾಗಿತ್ತು.
ಕಾಗೆಗಳ ವಿಸ್ಮಯ ಲೋಕ
ಅವರ ಚರ್ಮವೂ ಕೂಡ ಹೊಳೆಯುತ್ತಿತ್ತು. ಆದರೆ ಕಾಲಕ್ರಮೇಣ ಅಧುನಿಕತೆಯ ಭರದಲ್ಲಿ ಕೈಗೆ ಸಿಕ್ಕ ಸೋಪು ಶಾಂಪುಗಳನ್ನು ಜನ ಬಳಸುತ್ತಿದ್ದು, ಅದರ ಪರಿಣಾಮವನ್ನು ನೀವು ನೋಡಬಹುದು. ಆದರೆ ಪ್ರಾಣಿಗಳು ಅಧುನಿಕತೆಯ ಸೋಗಿಗೆ ಮರಳಾಗಿಲ್ಲ, ಅವುಗಳು ಅನಾರೋಗ್ಯಕ್ಕೀಡಾದ ತಮ್ಮ ಸಂಪ್ರದಾಯಿಕ ವೈದ್ಯ ಪದ್ಧತಿಯನ್ನೇ ಬಳಸುತ್ತವೆ. ಅದಕ್ಕೆ ಕಾಗೆಗಳು ಉತ್ತಮ ಉತ್ತಮ ಉದಾಹರಣೆ.
ಕಾಗೆಗಳ ವಿಸ್ಮಯ ಲೋಕ
ಮೊಸಳೆ ತನ್ನ ಹಲ್ಲುಗಳ ಸ್ವಚ್ಛಗೊಳಿಸುವುದಕ್ಕೆ ಪುಟ್ಟ ಹಕ್ಕಿಗಳನ್ನು ಹೇಗೆ ತನ್ನ ಬಾಯೊಳಗೆ ಇರಲು ಬಿಟ್ಟು ಹೇಗೆ ಹಲ್ಲನ್ನು ಸ್ವಚ್ಛಗೊಳಿಸಿಕೊಳ್ಳುವುದೋ ಹಾಗೆ ಕಾಗೆಗಳು ಅನಾರೋಗ್ಯಪೀಡಿತರಾದಾಗ ಇರುವೆಗಳ ಸಮೀಪ ಹೋಗುತ್ತವೆ. ಸಂಶೋಧನೆಯಲ್ಲಿ ಸಾಬೀತಾದಂತೆ ಕಾಗೆಗಳು ಮೊದಲೇ ಬುದ್ಧಿವಂತ ಹಕ್ಕಿಗಳು, ಎರಡು ವರ್ಷದ ಮಗುವಿನ ಬುದ್ಧಿವಂತಿಕೆ ಈ ಕಾಗೆಗೆ ಇರುವುದು ಎಂದು ಸಾಬೀತಾಗಿದೆ. ಹೀಗಿರುವಾಗ ಕಾಗೆಗಳು ತನ್ನ ಆರೋಗ್ಯಕ್ಕಾಗಿ ಇರುವೆಯ ಬಳಿ ಹೋಗುವುದು ಕೇಳುವುದಕ್ಕೂ ಒಂದು ಆಸಕ್ತಿಕರ ವಿಚಾರವಾಗಿದೆ.
ಕಾಗೆಗಳ ವಿಸ್ಮಯ ಲೋಕ
ಸಾಮಾನ್ಯವಾಗಿ ಸತ್ತು ಹೋಗಿರುವ ಕಾಗೆಗಳನ್ನು ಇರುವೆಗಳು ಮುತ್ತಿಕೊಂಡಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲಿ ಹಾಗಲ್ಲ, ಜೀವಂತ ಇರುವ ಕಾಗೆಗಳೇ ತಮ್ಮ ಆರೋಗ್ಯವನ್ನು ಸುಧಾರಿಸುವುದಕ್ಕಾಗಿ ಇರುವೆಗಳ ಗುಂಪನ್ನು ಹುಡುಕಿ ಹೋಗುತ್ತವೆ. ಇಲ್ಲಿ ಇರುವೆಗಳು ಕಾಗೆಗಳ ಮೇಲೆ ದಾಳಿ ಮಾಡುವುದಿಲ್ಲ. ಬದಲಾಗಿ ಇದು ಕಾಗೆಗಳು ತಮ್ಮ ಅನಾರೋಗ್ಯದಿಂದ ಚೇತರಿಕೆಗಾಗಿ ಮಾಡುವ ಸ್ವಯಂ ಚಿಕಿತ್ಸೆ. ಇಲ್ಲಿ ಇರುವೆಗಳ ಕಡಿತದಿಂದಾಗಿ ಕಾಗೆ ತನ್ನ ದೇಹದಲ್ಲಿರುವ ಪರಾವಲಂಬಿಗಳು, ಫಂಗಸ್(ಶೀಲಿಂದ್ರ) ಸಮಸ್ಯೆ, ಬೇಡದ ಕೆಟ್ಟ ಬ್ಯಾಕ್ಟಿರೀಯಾಗಳ ಸಮಸ್ಯೆಯಿಂದ ಚೇತರಿಸಲ್ಪಡುತ್ತವೆ. ಪಕ್ಷಿಗಳಲ್ಲಿ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ.
ಆಂಟಿಂಗ್ ಎಂದರೇನು?
ಇದನ್ನು ಆಂಟಿಂಗ್ ಎಂದು ಕರೆಯಲಾಗುತ್ತದೆ. ಇಲ್ಲಿ ಬರೀ ಕಾಗೆಗಳಲ್ಲ, ಹಕ್ಕಿಗಳು ಕೂಡ ತಮ್ಮ ರೆಕ್ಕೆಗಳನ್ನು ತೆರೆದಿಟ್ಟು ಇರುವೆಗಳು ತಮ್ಮ ಮೇಲೆಲ್ಲಾ ಓಡಾಡುವುದಕ್ಕೆ ಅನುವು ಮಾಡಿಕೊಡುತ್ತವೆ. ತಮ್ಮ ರೆಕ್ಕೆ ಹಾಗೂ ಚರ್ಮದ ಮೇಲೆ ಇರುವೆಗಳು ಓಡಾಡಿ ಕಚ್ಚುವುದರಿಂದ ಹೊರಬರುವ ರಾಸಾಯನಿಕದಿಂದ ಕಾಗೆಗಳ ಅಥವಾ ಹಕ್ಕಿಗಳ ದೇಹವು ಸ್ವಚ್ಚಗೊಳ್ಳುತ್ತದೆ. ಕಾಗೆಗಳು ಮಾತ್ರವಲ್ಲ, ಈ ನಡವಳಿಕೆಯನ್ನು ಅನೇಕ ಪಕ್ಷಿ ಪ್ರಭೇದಗಳಲ್ಲಿ ಗಮನಿಸಬಹುದು ಮತ್ತು ಇದು ಕಾಗೆಗಳಿಗೆ ಮಾತ್ರ ಸೀಮಿತವಾಗಿಲ್ಲ. ನೋಡಿದ್ರಲ್ಲ ಪ್ರಾಣಿಗಳ ಸಹಜೀವನ ಹಾಗೂ ಪರಿಸರಕ್ಕೆ ಪ್ರತಿಯೊಂದು ಹೇಗೆ ಅಗತ್ಯ ಹಾಗೂ ಅದು ಎಷ್ಟೊಂದು ಮೌಲ್ಯವನ್ನು ಹೊಂದಿದೆ ಎಂಬುದು.